ಯಾಕೋ, ಹಾಗೆಯೇ ಕನ್ನಡದ ಗಾದೆಗಳನ್ನೂ ಮರೀತಿದೀವ ಅನ್ನಿಸ್ತಿದೆ. ನಮ್ಮ ತಾಯಿಯವರು, ತುಂಬಾ ಗಾದೆಗಳನ್ನು ಬಳಸ್ತಾ ಇದ್ರು. ಆಮೇಲಾಮೇಲೆ ಯಾಕೋ ಅವರೂ ಕಮ್ಮಿ ಮಾಡಿದ್ರು. ನಾನು ಸಣ್ಣವನಿದ್ದಾಗ, ಅವರು ಒಂದು ಅಪರೂಪದ ಗಾದೆ ಬಳಿಸ್ತಿದ್ರು. ಹೆಚ್ಚಿನವರು ಅದನ್ನ ಬಳಿಸಿದ್ದು ಅಷ್ಟಾಗಿ ನಾನು ಕೇಳಿಲ್ಲ.

– ” ಸೂಜಿನ ಹತ್ರ ಇಟ್ಕೋಬೇಕು, ಕತ್ರೀನ ದೂರ ಇಡ್ಬೇಕು “. ಆಗ ಅದರ ಅರ್ಥ ಕೇಳಿದ್ದೆ, ಅದಕ್ಕೆ ಅವರು, ಸೂಜಿ ಹೊಲಿಯುತ್ತೆ, ಕತ್ರಿ ಕತ್ತರಿಸುತ್ತೆ ಅಂದಿದ್ರು. ಆಗ ನನಗೆ ಅರ್ಥವಾಗಿದ್ದು ಅದರ ಕಾರ್ಯತಂತ್ರಕ್ಕೆ ಮೀಸಲಾಗಿತ್ತು, ಒಳ ಅರ್ಥವಾಗಿರಲಿಲ್ಲ.
ಈಗ ನೋಡಿದ್ರೆ, ಎಷ್ಟು ಅರ್ಥಗರ್ಭಿತ ವಾಗಿದೆ ಅನ್ನಿಸುತ್ತೆ.
ನಮ್ಮ ಸ್ನೇಹ, ಸಂಬಂಧಗಳನ್ನ ಕೆಲವು ಮಿತ್ರರೂ, ಬಂಧುಗಳು ಪೋಷಿಸುವವರೂ, ಒಗ್ಗೂಡಿಸುವವರೂ ಇರುತ್ತಾರಲ್ಲವೇ?. ಅವರನ್ನು ಸೂಜಿಗೆ ಹೋಲಿಸಿ, ಹತ್ತಿರ ಇಟ್ಟುಕೊಳ್ಳಬೇಕೆಂದು ಮಾರ್ಮಿಕವಾಗಿ ಹೇಳಲಾಗಿದೆ.
ಹಾಗೆಯೇ ಕೆಲವರು, ಏನೋ ದ್ವೇಷ, ಅಸೂಯೆ ಗಳಿಂದ ಪ್ರೇರಿತರಾಗಿ ಚಾಡಿ ಹೇಳುವಿಕೆ ಅಥವಾ ಇಲ್ಲ ಸಲ್ಲದ್ದನ್ನು ಹೇಳಿ, ನಮ್ಮ ಮನಸ್ಸನ್ನು ಕೆಡಿಸಿ ಸಂಬಂಧಗಳನ್ನ ಕಡೆದು ಕೊಳ್ಳುವಂತೆಯೋ, ಬಿರುಕು ಬಿಡುವಂತೆಯೋ ಮಾಡಿ ಮೋಜು ನೋಡುವವರೂ ಇರುತ್ತಾರಲ್ಲವೇ? ಇವರನ್ನು, ಮಾರ್ಮಿಕವಾಗಿ ಕತ್ರಿಗೆ ಹೋಲಿಸಿ ಹತ್ತಿರ ಇಟ್ಟುಕೊಳ್ಳಬಾರದೆಂದು ಹೇಳಲಾಗಿದೆ.
ಈಗ, ಈ ಗಾದೆ/ನುಡಿಗಟ್ಟು ಮಾಯವಾಗಿ, ಅವನು ಕತ್ರಿ, ಅವನು ಕತ್ರಿ ಕೆಲಸ ಮಾಡ್ತಾನೆ ಎನ್ನುವಲ್ಲಿಗೆ ಸೀಮಿತಗೊಂಡಿದೆ ಅನ್ನಿಸುತ್ತೆ.
ಹೀಗೆಯೇ, ಆಗೊಮ್ಮೆ ಇಗೊಮ್ಮೆಯಾದರೂ ನಮ್ಮ ಕನ್ನಡದ ಗಾದೆಗಳನ್ನ ಜ್ಞಾಪಿಸಿಕೊಳ್ಳುತ್ತಿರೋಣ. ಆಗ ಅದರ ಅರ್ಥ ಕೇಳಿದ್ದೆ, ಅದಕ್ಕೆ ಅವರು, ಸೂಜಿ ಹೊಲಿಯುತ್ತೆ, ಕತ್ರಿ ಕತ್ತರಿಸುತ್ತೆ ಅಂದಿದ್ರು. ಆಗ ನನಗೆ ಅರ್ಥವಾಗಿದ್ದು ಅದರ ಕಾರ್ಯತಂತ್ರಕ್ಕೆ ಮೀಸಲಾಗಿತ್ತು, ಒಳ ಅರ್ಥವಾಗಿರಲಿಲ್ಲ.
ಈಗ ನೋಡಿದ್ರೆ, ಎಷ್ಟು ಅರ್ಥಗರ್ಭಿತ ವಾಗಿದೆ ಅನ್ನಿಸುತ್ತೆ.
ನಮ್ಮ ಸ್ನೇಹ, ಸಂಬಂಧಗಳನ್ನ ಕೆಲವು ಮಿತ್ರರೂ, ಬಂಧುಗಳು ಪೋಷಿಸುವವರೂ, ಒಗ್ಗೂಡಿಸುವವರೂ ಇರುತ್ತಾರಲ್ಲವೇ?. ಅವರನ್ನು ಸೂಜಿಗೆ ಹೋಲಿಸಿ, ಹತ್ತಿರ ಇಟ್ಟುಕೊಳ್ಳಬೇಕೆಂದು ಮಾರ್ಮಿಕವಾಗಿ ಹೇಳಲಾಗಿದೆ.
ಹಾಗೆಯೇ ಕೆಲವರು, ಏನೋ ದ್ವೇಷ, ಅಸೂಯೆ ಗಳಿಂದ ಪ್ರೇರಿತರಾಗಿ ಚಾಡಿ ಹೇಳುವಿಕೆ ಅಥವಾ ಇಲ್ಲ ಸಲ್ಲದ್ದನ್ನು ಹೇಳಿ, ನಮ್ಮ ಮನಸ್ಸನ್ನು ಕೆಡಿಸಿ ಸಂಬಂಧಗಳನ್ನ ಕಡೆದು ಕೊಳ್ಳುವಂತೆಯೋ, ಬಿರುಕು ಬಿಡುವಂತೆಯೋ ಮಾಡಿ ಮೋಜು ನೋಡುವವರೂ ಇರುತ್ತಾರಲ್ಲವೇ? ಇವರನ್ನು, ಮಾರ್ಮಿಕವಾಗಿ ಕತ್ರಿಗೆ ಹೋಲಿಸಿ ಹತ್ತಿರ ಇಟ್ಟುಕೊಳ್ಳಬಾರದೆಂದು ಹೇಳಲಾಗಿದೆ.
ಈಗ, ಈ ಗಾದೆ/ನುಡಿಗಟ್ಟು ಮಾಯವಾಗಿ, ಅವನು ಕತ್ರಿ, ಅವನು ಕತ್ರಿ ಕೆಲಸ ಮಾಡ್ತಾನೆ ಎನ್ನುವಲ್ಲಿಗೆ ಸೀಮಿತಗೊಂಡಿದೆ ಅನ್ನಿಸುತ್ತೆ.
ಹೀಗೆಯೇ, ಆಗೊಮ್ಮೆ ಇಗೊಮ್ಮೆಯಾದರೂ ನಮ್ಮ ಕನ್ನಡದ ಗಾದೆಗಳನ್ನ ಜ್ಞಾಪಿಸಿಕೊಳ್ಳುತ್ತಿರೋಣ.
I blog often and I seriously thank you for your content. Your article has truly peaked my interest. I will book mark your website and keep checking for new details about once per week. I opted in for your RSS feed too.
LikeLike