Nobody is Perfect, Everybody has Issues (Author: RamaMurthy)

ಹಾಗೆಯೇ, ನಮ್ಮ ಅಮ್ಮ, ನಮ್ಮ ಸ್ನೇಹಿತ ಚಿದಂಬರನ ಮನೆಯಲ್ಲಿ, ಹರಟೆ ಹೊಡಿಯುವಾಗ, ಹೇಳ್ತಿದ್ದ ಮತ್ತೊಂದು ಗಾದೆ ಜ್ಞಾಪಕಕ್ಕೆ ಬರ್ತಿದೆ.

ಎಲ್ಲಾರಮನೆ ದೋಸೇನೂ ತೂತೆ ‘, ಹಾಗೆಯೇ ಇದನ್ನ ಹೀಗೂ ಬಳಸ್ತಾರೆ. ‘ಎಲ್ಲಾರಮನೆ ದೋಸೇನೂ ತೂತೆ ಆದ್ರೆ ನಮ್ಮನೆ ಕಾವ್ಲಿನೆ – ತೂತು ‘. ಅವರವರ ಮನೆಯ problem ಹಾಗೂ ಅದರ Intensity ಯ ಮೇಲೆ ನಿರ್ಧಾರವಾಗುತ್ತೆ.
ಮೊದಲು ಅವರ ಸಂಭಾಷಣೆ ಕಡೆ ಗಮನ ಕೊಡೋಣ.

ಯಾರ ಮನೇದೋ, ಅತ್ತೇ ಸೊಸೆ, ಅಪ್ಪ ಮಗನ ಮುನಿಸೋ, intercast marraiage ಜೋ ಏನೋ ಒಂದು. ಸಂಭಾಷಣೆ ಜೋರಾಗಿತ್ತು. . . . .

“ನೋಡೇ ಪದ್ಮ, ಎಲ್ಲಾರಮನೆ ದೋಸೇನೂ ತೂತೆ” ಅಂತಿದ್ರು.

ನಮ್ಮಮ್ಮ,

“ಯಾಕೆ ಹಂಗಂತೀಯ, ನಿಮ್ಮನೆ ದೋಸೆ ಹಿಟ್ಟಿಗೆ ಸ್ವಲ್ಪ ಮೈದಾ ಹಿಟ್ಟು ಬೆರೆಸಿ ನೋಡು, ನಿಮ್ಮನೆ ದೋಸೆಲು ತೂತಿರೋಲ್ಲ” ಅಂದ್ರು.

“ಅದು ಹಾಗಲ್ವೇ ಪದ್ಮ. . .” ಅಂತ ಏನೋ ಹೇಳಲು ಹೋದ್ರು.

“ಹಾಗೂ ಅಲ್ಲ ಹೀಗೂ ಅಲ್ಲ. ನಮ್ಮನೆ ದೋಸೆ ತೂತು, ಅವರ್ಮನೇ ದೋಸೆಲ್ ಎಷ್ಟು ತೂತಿದೆ ಅಂತ ಏಣ್ಸೋಕ್ ಹೋಗ್ಬಾರ್ದು ಕ‌ಣೆ. ಅರ್ಥ ಮಾಡಿಕೊಳ್ಳುವವರಿಗೆ ಇದು ಅರ್ಥ್ವಾಗುತ್ತೆ. ನಮ್ಮನೆ, ನಾವು ಚೆನ್ನಾಗಿದೀವಿ ಅಂತ‌, ಬೇರೆಯ‌ವ‌ರ‌ನ್ನ‌ ಅಡಿಕೊಳ್ಳೋದೋ ಮಾಡ್ಬಾರ್ದು, ನಾಳೆ ನ‌ಮ್ಮ‌ನೇಲೂ ಹೀಗೇ ಎನಾರೂ ಆದ್ರೆ, ಆಗ್ಬ‌ರ್ದೂ ಅಂತೇನಿಲ್ವ‌ಲ್ಲ‌. ಹಾಗೇನೆ, ನ‌ಮ್ಮ‌ ಮ‌ನೇಲಿ, ಏನೋ ಎಡ‌ವ‌ಟ್ಟಾಗಿದ್ರೆ, ಏನೋ ಸ್ವ‌ಲ್ಪ‌ ಹೊಂದಾಣಿಕೆ ಇಲ್ದೇ ಮ‌ನ‌ಸಿಗೆ ಬೇಜಾ‌ರಾಗಿದ್ರೆ ಬೇರೆಯ‌ವ‌ರ‌ ಮ‌ನೇಕ‌ಡೆ ನೋಡ್ತಾ ಅವ‌ರ‌ ಮ‌ನೇಲೂ, ಈತ‌ರಃ ಏನಾದ್ರೂ ಆಗಿದ್ಯಾ ಅಂತ‌ ನೋಡಿ ಮ‌ನ‌ಸ್ಸ‌ಮಾಧಾನ‌ಪ‌ಟ್ಕೊಳೋ ಬ‌ದ್ಲು, ನಾವೇ ಸ‌ರೀ ಮಾಡ್ಕೊಳೋದ‌ನ್ನ‌, ಹೊಂದ್ಕೊಂಡ್ ಹೋಗೋದ‌ನ್ನ‌ ಕ‌ಲ್ತ್ಕೋ ಬೇಕು. ಬೇರೇಯ‌ವ್ರ‌ ಮ‌ನೇಲೂ ಹೀಗೇ ಆಗಿದೆ, ಪ‌ರ್ವಾಗಿಲ್ಲಾ ಅಂತ‌ ಸ‌ಮಾಧಾನ‌ ಪ‌ಟ್ಕೋತೀಯ‌ ನೀನೇ ಯೋಚ್ನೇ ಮಾಡು. ಏನ್ಸಿಗತ್ತೆ ಹೇಳು ಅದ್ರಿಂದ. ಮ‌ನ‌ಶ್ಶಾಂತಿ ಕ‌ಳೆದುಕೋತೀವಿ ಅಷ್ಟೇಯಾ. ಇರೋ ಅಷ್ಟು ದಿನ, ಆದಷ್ಟೂ ನೆಮ್ಮದಿಯಿಂದ ಇರೋದನ್ನ ಕಲ್ತ್ಕೋ ಬೇಕು , ಎಲ್ಲದರಲ್ಲು ಸಂತೃಪ್ತಿ ಕಂಡ್ಕೋ ಬೇಕು.”

ಹೀಗೇ ಏನೇನೋ ಉಪದೇಶಾಮೃತ ನಡೀತಿತ್ತು. ಇದು ಮುಗಿಯೋದಿಲ್ವೇನೋ ಅನ್ಕೋತಿದ್ವಿ ಅಷ್ಟರಲ್ಲಿ ನಮ್ಮ ಚಿದಂಬರನ ತಾಯಿ,

“ಹೌದು ಕಣೇ, ಅದೂ ಸರೀನೇ. ನಾವು ಒಂದೊಂದ್ಸಲ ಸಿಟ್ಟಿನ ಕೈಗೆ ಬಾಯಿ ಕೋಟಿಬಿಡ್ತೀವಿ ಹಾಗಾಗಿ ಈ ಎಡವಟ್ಟುಗಳು ಆಗೋದು ಅಂತ ಹೇಳಿ, ಕೋಪ, ತಾಪ, ಶೋಕ, ದುಃಖ ಇವುಗಳೇ ಇವುಗಳಿಗೆಲ್ಲಾ ಕಾರಣ.”

ಅಂತಾ ಹೇಳ್ತಾ, ರಾಮಾಯಣದ ಕೌಸಲ್ಯೆಯು ಉದ್ಗರಿಸಿದ, ಒಂದು ಶ್ಲೋಕವನ್ನು ಹೇಳಿ ಮುಗ್ಸಿದ್ರು.

ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಮ್ |
ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಕೋಸಮೋ ರಿಪುಃ ||

( ರಿಪುಃ = ಶತ್ರು)

ಈ ಶ್ಲೋಕವನ್ನ ಯಾಕೆ ಇಲ್ಲಿ ಹೇಳಿದ್ರೋ ಗೊತ್ತಿಲ್ಲ. ಆದ್ರು ಚೆನ್ನಾಗಿದೆ ಅಲ್ವೇ ಅಂತ ಸೇರ್ಸಿದೀನಿ. ಇದನ್ನ, ಕೌಸಲ್ಯೆಯು ದಶರಥನಿಗೆ, ದಶರಥನು ರಾಮನನ್ನು ವನವಾಸಕ್ಕೆ ಕಳಿಸುವ ನಿರ್ಧಾರ ಕೈಗೊಂಡಾಗ ಹೇಳಿದ್ದು ಅಂದುಕೊಂಡಿದೀನಿ.
— = oOo = —

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s