Who Is To Be Blamed (Author: RamaMurthy)

Preface: I would like to say a few words before I post the article written by my Uncle (ಚಿಕ್ಕಪ್ಪ), RamaMurthy. He is one of the key contributors to my blog. In this article, he has touched upon the challenges of elderly care through his Mother’s viewpoint.

What really surprised and impressed me when I read his article is the attitude that his Mother, who is two generations before mine, had about parents & children relationship. She looked at the situation objectively and gave her perspective. You get to see this in the article below.

Nowadays, people, by default tend to put the blame on children and make a sweeping statement that the children are ungrateful when they cannot care for the parents / elders for whatever reason. Before assigning the blame, analyze that particular situation / people involved. Be objective. Help meaningfully if you can. Don’t be a gossip-monger.

Following article is in Kannada. Google Translate is there for interested non-Kannadiga readers.


ಅವತ್ತು, ನಮ್ಮ ಸ್ನೇಹಿತ ಚಿದಂಬರನ ಮನೆಯಲ್ಲಿ, ಕಾಫಿ, ಕುರುಕ್ಲು ಕೊಡ್ತಾ, ಅವರ ತಾಯಿ,

ನಿಮ್ ಸುಬ್ಬ‌ಣ್ಣೋರ‌ನ್ನ‌ ವೃದ್ಧಾಶ್ರಮಕ್ಕೆ ಸೇರ್ಸಿದಾರಂತೆ.
ಅವ್ರಿಗೂ ತುಂಬಾ ವ‌ಯ‌ಸ್ಸಾಗಿದೆ, ಊರು ಹೋಗು ಅಂತಿದೆ, ಕಾಡು ಬಾ ಅಂತಿದೆಈಗ್ಯಾಕೇ ಈ ಬುದ್ಧಿ ಬಂತು ಅವ‌ರ‌ ಮ‌ಕ್ಳಿಗೆ ಅಂತ ಶುರು ಮಾಡಿದ್ರು.

ನಮ್ಮ ಅಮ್ಮ, ಏ, ನೀನು ಏನೇನೋ ಕೆಟ್ದಾಗ್ ಹೇಳ್ಬೇಡ‌. ನೋಡು, ಗಂಡ‌, ಹೆಂಡ್ತಿ ಇಬ್ರು ಕೆಲ್ಸಕ್ಕೆ ಹೋಗ್ತಾರೆ, ಮಕ್ಕಳೆಲ್ಲಾ ದೊಡ್ಡೋರಾಗಿದಾರೆ, ಸ್ಕೂಲು, ಕಾಲೇಜು ಅಂತ ಹೋಗ್ತಾರೆ. ಇವ್ರನ್ನ ನೋಡ್ಕೊಳೋಕೆ ಮನೇಲಿ ಯಾರಿರ್ತಾರೆ ಹೇಳು?.

ನಮ್ಮ ಸುಬ್ಬಣ್ಣನ ಕಥೆ ಸ್ವಲ್ಪ ಹೇಳ್ತೀನಿ ಕೇಳು. ಅವ್ನು, ಯಾರ ಮಾತೂ ಕೇಳಲ್ಲ. ತಾನೇ ಸರಿ, ತಾನ್ಮಾಡಿದ್ದೆಲ್ಲಾ ಸರಿ ಅನ್ನೋ ಸ್ವಭಾವ. ಎಲ್ಲರಮೇಲೂ ದಬ್ಬಾಳಿಕೆ. ವಯಸ್ಸು 81 ಆಗಿ 82 ಕ್ಕೆ ಬಂತು. ಹೋದವರ್ಷ 80 ವರ್ಷದ ಶಾಂತಿಗೆ ಕರ್ದಿದ್ರು, ಹೋಗಿದ್ದೆ. ತೋರಣ ಕಟ್ಟಿದ್ ಸರಿಯಾಗಿಲ್ಲ ಅಂತ stool ತಗೊಂಡ್ ಬಂದು ಹತ್ತೇ ಬಿಟ್ರು. ಮಗ ಓಡ್ಬಂದು, ನಾನು ಸರಿ ಮಾಡ್ತೀನಿ ಬಿಡಿ ಅಂದ. ನಿಂಗೆಲ್ಬರುತ್ತೆ, ನಂಗೊತ್ತಿಲ್ವಾ ಅಂದ್ರು. ಬಿದ್ರೆ ಗಿದ್ರೆ ಕಷ್ಟ ಅಂತ stool ಹಿಡ್ಕೊಳೋಕೆ ಹೋದ್ರೆ, ಸ್ಟೂಲೂ ಗಟ್ಟಿಯಾಗಿದೆ ನಾನೂ ಗಟ್ಟಿಯಾಗಿದೀನಿ, ನಿಂಕೆಲ್ಸ ನೀನ್ ನೋಡ್ಕೋ ಹೋಗು ಅಂದ್ರು. ಮಗ ಏನಾರ ಮಾಡ್ಕೊಳಿ ಅಂತ ಹೋದ. ಇವ್ರು ಎಡಗಡೆ ಸ್ವಲ್ಪ ಸೊಟ್ಟಗಿದ್ದದ್ದನ್ನ ಬಲಗಡೆ ಸೊಟ್ಟ ಮಾಡಿ ಸರಿ ಇದೆ ಅಂತ ಹೇಳಿ ಇಳಿದ್ರು. ಮತ್ತೆ ಸರಿಗಿಲ್ಲ ಅಂದ್ರೆ, ಬೈತಾರೋ, ಮತ್ತೆ ಹತ್ತಾರೋ ಅಂತ ನಾವೆಲ್ಲಾ ಒಳೊಳ್ಗೆ ಮುಸಿ ಮುಸಿ ನಗ್ತಾ, ಸರಿ ಇದೆ ಸರಿ ಇದೆ ಅಂತ ಒಳಗ್ ಹೋದ್ವಿ. ಇಂಥಾ ಜಾಯ್ಮಾನದವನು – ನಮ್ಮ ಸುಬ್ಬು. ಹೆಂಡ್ತಿ ಮಾತಂತೂ ಲೆಕ್ಕಕ್ಕೆ ಇಲ್ಲ.
ಮನೇಲಿ ಸುಮ್ನಿರೋದೇ ಇಲ್ಲ. ಏನಾರ ರಿಪೇರಿ ಅದು ಇದು ಅಂತ , ಎಲ್ಲಾ ತನಗೆ ಗೊತ್ತಿದೇ ಅಂತ ಮಾಡಕ್ಹೋಗಿ, ಏನಾರ ಪೆಟ್ ಮಾಡ್ಕೋತಿರ್ತಾನೆ. ಹೇಳಿದ್ರೆ ಕೇಳಲ್ಲಾ.

ಹೀಗಿರುವಾಗ, ನೀನೇ, ಹೇಳು, ಮನೇಲಿ ಇಬ್ರೇ ಇರ್ತಾರೆ, ಏನಾರು ಆದ್ರೆ?. ಅದಕ್ಕೆ ಹಾಗೆ ಮಾಡಿದಾರೆ . ಮಗ, ಸೊಸೆ ಎಲ್ಲಾರೂ ತುಂಬಾನೇ ಒಳ್ಳೆಯವ್ರು, ಒಳ್ಳೇ ಗುಣ ಕಣೇ. ಮೊಮ್ಮಕ್ಳoತು ಕೇಳ್ಬೇಡ ಅಷ್ಟು ಚೆನ್ನಾಗಿದಾರೆ. ಮಗ, ಇನ್ನು 3ರೋ 4ಕೋ ವರ್ಷ ಕ್ಕೆ retire ಆಗ್ತೀನಿ. ಆಮೇಲೆ ಮನೇಗೇ ಕರ್ಕೊಂಡ್ ಬರ್ತೀನಿ ಅಂತಿದ್ದ.

ಈಗ್ಲಾದ್ರೂ ಗೊತ್ತಾಯ್ತಾ ? ಯಾಕೆ ಸೇರ್ಸಿದಾರೆ ಅಂತ. ಶನಿವಾರ, ಭಾನುವಾರ ಮನೇಗೆ ಕರ್ಕೊಂಡ್ಬರ್ತಾರೆ. ಮತ್ತೆ ಸೋಮವಾರ ಬಿಟ್ಬರ್ತಾರೆ ಅವರೂ, ಅಲ್ಲಿಗೆ ಹೊಂದ್ಕೊಂಡಿದಾರೆ. ನಂಗೇನೂ ಇದ್ರಲ್ಲಿ ತಪ್ಪು ಕಾಣಿಸ್ತಿಲ್ಲವ್ವ. ಅವ್ರೇ, ಒಂದೊಂದ್ಸಲ, ಈ ವಾರ ನಮ್ಮ ಆಶ್ರಮದಲ್ಲಿ, ಉಪನ್ಯಾಸ ಇದೆ, ನಾವು ಬರೋಲ್ಲ, ನೀವೂ ಬೇಕಾದ್ರೆ, ಉಪನ್ಯಾಸ ಕೇಳೋದಾದ್ರೆ, ಬನ್ನಿ ಅಂತಿರ್ತಾರಂತೆ. ವೃದ್ಧಾಶ್ರಮನೂ ಚೆನ್ನಾಗಿದೆಯಂತೆ. ಚೆನ್ನಾಗಿ, ನೋಡಿಕೋತಾರೆ ಅಂತ ಕಾಣ್ಸುತ್ತೆ.

ಆದ್ರೆ, ನಂಗೆ, ನಮ್ ಸುಬ್ಬು ಹೆಂಡ್ತಿ ಗೌರಮ್ಮನ್ ನೆನಸ್ಕೊಂಡ್ರೆ ಅಯ್ಯೋ ಅನ್ಸುತ್ತೆ ಕಣೆ. ತುಂಬಾ ಸಾಧು. ಎಷ್ಟು ಬೇಕೋ ಅಷ್ಟು ಮಾತ್ರ ಮಾತು. ಅಡಿಗೆ, ಊಟ, ತಿಂಡಿ, ಮಕ್ಕಳು-ಮೊಮ್ಮಕ್ಕಳ, ಬಂದು ಹೋಗುವವರ್ನ ಸುಧಾರಿಸ್ತಾ ಆದರಿಸ್ತಾ, ಪುರಾಣ-ಪುಣ್ಯ ಕಥೆ ಅಂತಾ ದಿನವೆಲ್ಲಾ ದುಡಿತಾ ಇದ್ದೋರು, ಆ ವೃದ್ಧಾಶ್ರಮದಲ್ಲಿ ಹೇಗಿರ್ತಾರೋ ಏನ್ಕಥೆಯೋ?. ಅಲ್ಲಿ ಮಾಡೋಕೇನ್ ಕೆಲಸ ಇರತ್ತೆ ಹೇಳು. ನಮ್ ಸುಬ್ಬು ಅಲ್ಲೂ ಅವ್ರ ಮೇಲೆ ಜೋರ್ಮಾಡ್ಕೊಂಡ್ ಇರ್ತಾನೆ ಅನ್ಸುತ್ತೆ.

ಅದ್ಸರಿ, ನಿಮ್ ಸುಬ್ಬು
ಒಪ್ಕೊಂಡ್ನೇನೇ ವೃದ್ಧಾಶ್ರಮಕ್ಕೆ ಹೋಗೋಕೆ?.

ನಮಗೇನು, ಕಾಡ್ನಲ್ ಬಿಟ್ ಬಂದ್ರೂ ಆರಾಮಾಗಿರ್ತೀವಿ. ಇದೇನ್ಮಹಾ. ಇದೂ ಒಂಥರಾ change, ಹೇಗಿರುತ್ತೆ ನೋಡೋಣ ಅಂತ ಹೊರಟೇ ಬಿಟ್ರಂತೆ ಕಣೆ. ಇಷ್ಟ್ ಹೇಳಿದ್ಮೇಲೆ ನಮ್ ಗೌರಮ್ಮನ್ ಯಾರ್ ಕೇಳ್ತಾರೆ? ಇಬ್ಬರೂ ಹೋಗಿದಾರೆ.

ಈಗ್ಲಾದ್ರೂ ಅರ್ಥ ವಾಯ್ತಾ?

ವೃದ್ಧಾಶ್ರಮ ಅಂದ್ರೆ ಅದೇನು Jail ಲಾ. ಅದಕ್ಕೆ, ಅದನ್ನ ವೃದ್ಧಾಲಯ ಅನ್ನಲ್ಲ, ವೃದ್ಧಾಶ್ರಮ ಅನ್ನೋದು. ಗೌರವ ಪೂಜ್ಯ ಭಾವನೆ ನಮ್ಮಲ್ಲಿ ಬರ್ಬೇಕು ಗೊತ್ತಾ. ಅಂದರು.

ಏನೋ , ನಂಗೆ ಹಂಗೆ ಅನ್ನಿಸ್ತು ಕಣೇ , ಹಾಗೆ ಹೇಳ್ದೆ. ನಮಗೂ, ವಯಸ್ಸಾಗ್ತಾ ಬಂತಲ್ವಾ?. ಮನಸ್ಸು, ಸುಮ್ನಿರುತ್ತಾ ಹೇಳು, ಏನೇನೋ, ಯೋಚ್ನೆ ಮಾಡುತ್ತೆ ಅಲ್ವಾ. ನಾವೂ, ವಾನಪ್ರಸ್ಥಾಶ್ರಮಕ್ಕೆ ಅಲ್ಲಲ್ಲ, ವೃದ್ಧಾಶ್ರಮಕ್ಕೆ ಸೇರ್ಕೊ ಬೇಕಾಗಿ ಬಂದ್ರೆ, ಇಬ್ರು ಒಂದೇ ಆಶ್ರಮಕ್ಕೆ ಸೇರ್ಕೊಳೋಣ ಕಣೆ, ಒಟ್ಟಿಗೇ enjoy ಮಾಡ್ಬಹುದು.

ಹೌದವ್ವಾ, ನೀನು, ದಿವಸಾ, ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಉಪನಿಷದ್ ಅಂತ ಉಪದೇಷ, ಉಪನ್ಯಾಸ ಕೊಡ್ತಾ ಕೂತ್ಕೋತೀಯ ನಾನೇನ್ಮಾಡ್ಲಿ ಹೇಳು?.

ಯಾಕೇ ಹಾಗಂತೀಯ. ನೀನು, ಸೌoದರ್ಯಲಹರೀ, ಶಿವಾನಂದ ಲಹರೀ, ಲಲಿತಾ ಸಹಸ್ರ ನಾಮ, ವಿಷ್ಣು ಸಹಸ್ರನಾಮ ಎಲ್ಲಾ ಬಾಯಿ ಪಾಠ ಆಗಿದ್ಯಲ್ಲಾ, ನೀನೂ ಹೇಳ್ಕೊಡು. ಬೇಡಾ ಅಂತಾರ್ಯೇ ?.

ಆಯ್ತು, ಹಿಗ್ಮಾಡೋಣ, ನಾನು, ವಾಚಿಸ್ತಾ ಹೋಗ್ತೀನಿ, ನೀನು ವ್ಯಾಖ್ಯಾನಿಸ್ತಾ ಹೋಗು. ಇಬ್ರೂ stage ಮೇಲೆ ಕೂತ್ಕೊಬಹುದು – ಅಂತ ನಕ್ರು.

ಸರಿ, ಈಗ್ಲೇ ಯಾಕೀ ಯೋಚ್ನೆ ಮಾಡ್ಬೇಕು? ಸಧ್ಯ, ವ‌ಯ‌ಸ್ಸಾದ್ರೂ ನಾವು ಆರೋಗ್ಯ‌ವಾಗೇ ಇದೀವ‌ಲ್ವ‌. ನಂಗೇನೋ, ಕಾಲು ನೋವು, ಜಾಸ್ತಿ ಓಡಾಡೋಕಾಗ‌ಲ್ಲ‌. ಅದ‌ಕ್ಕೇ, ನಮ್ಮನೇಗೆ, ನೀನೇ ಬಾ ಅನ್ನೋದು. ನೀನೇ ಪುಣ್ಯ‌ವಂತೆ ಕಣೆ ಪದ್ಮ, ಕೈ ಕಾಲು ಗ‌ಟ್ಟಿಯಾಗಿದೆ. ಬಿಡ್ಬೀಸಾಗಿ ಓಡಾಡ್ತೀಯ‌. ಏನ್ಮಾಡ್ಲಿ, ನಾನು ಆ ಪುಣ್ಯ‌ ಪ‌ಡ್ಕೊಂಡ್ ಬಂದಿಲ್ವೇ?

ಅವ್ರ ಮಾತುಕತೆ ಅಲ್ಲಿಗೆ ನಿಲ್ಲುತ್ತೇನೋ ಅನ್ಕೋತಿದ್ವಿ, ಚಿದಂಬರನ ಅಮ್ಮ, ನೋಡು, ಮಾತು ಎಲ್ಲಿಂದೆಲ್ಲಿಗೋ ಹೋಯ್ತು, ‘ ಕಥೇಗ್ ಕಾಲಿಲ್ಲ ‘ ಅಂತಾರೆ, ನಮ್ಮ ಹರಟೆಗೂ ಕಾಲಿಲ್ಲ ಆಲ್ವಾ? ಅಂದ್ರು.

ನೀನೇ, ಶುರು ಮಾಡಿದ್ದು, ಮತ್ತೆ ನೀನೇ ಹೀಗ್ಹೇಳ್ತಿದೀಯಾ. ‘ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ ‘ ‍ ಅಂದ್ಯಲಾ ಅಲ್ಲಿಂದ ಶುರು ಆಯ್ತು ನೋಡು ನಮ್ಮ ಹರಿಕಥೆ.
ಇದನ್ನ, ಪೂರ ಹಾಸ್ಗೆ ಹಿಡಿದು, ನೋಡಲು ಬಂದ ಬಂಧು – ಮಿತ್ರರ ಹತ್ರ ಸ್ವಗತದಂತೆ ಅವರೇ ಹೇಳ್ಕೊಳೋ ಮಾತಿದು. ಅಥವಾ ತುಂಬಾ ವಯಸ್ಸಾದವರು, ಯಾವ್ದಾದ್ರೂ ವಿಷಯದ ಬಗ್ಗೆ ಕೇಳ್ಡಾಗ, ಅಯ್ಯೋ, ನಾನ್ಯಾಕಪ್ಪ ಈ ವಿಷ್ಯಕ್ಕೆ ತಲೆ ಹಾಕ್ಲಿ, ನನಗೂ ವಯಸ್ಸಾಯ್ತು ‘ ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ ‘ ಅಂತಾರೆ. ನೀನು ಎಲ್ಲೆಲ್ಲಿಗೋ, ಸೇರ್ಸಿದ್ರೆ ನಾನ್ತಾನೇ ಏನ್ ಹೇಳ್ಲಿ ಮತ್ತೆ. ನಮ್ಮ ಸುಬ್ಬು ಅಂಥಾ ಚೆನ್ನಾಗಿದಾನೆ. ಗಂಡ ಹೆಂಡ್ತಿ ಇಬ್ರು ಅರೋಗ್ಯ ಎಷ್ಟು ಚೆನ್ನಾಗಿಟ್ಕೊಂಡಿದಾರೆ ಗೊತ್ತಾ?

ಅವ್ರಿಗೂ, ಆ ಗಾದೆ ವಯಸ್ಸಾಗಿದೆ ಆಲ್ವಾ, ಅದಕ್ಕೇ ಹೇಳ್ದೆ. ಅದ್ಸರಿ, ಅಲ್ವೇ ಪದ್ಮ, ನೀನು ಕಾಡು ಅಂದ್ರೆ ಯಾಕೆ ಏನೇನೋ ಅರ್ಥ ಕಲ್ಪಿಸ್ಕೊ ಬೇಕು? ಕಾಡು ಅಂದ್ರೆ ವನ, ವನವಾಸ, ವಾನಪ್ರಸ್ಥಾಶ್ರಮ ಅಂತೆಲ್ಲಾ ಅನ್ಕೋ ಬೇಕಪ್ಪಾ. ಅದ್ಬಿಟ್ಟು, ಬೇರೆ ಅರ್ಥ ಕಲ್ಪಿಸ್ಕೋ ಬಾರ್ದು.

ಸರಿ ಸರೀ, ಅರ್ಥವಾಯ್ತು, ವಾನಪ್ರಸ್ಥಾಶ್ರಮದ ಬಗ್ಗೆ ಹರಿಕಥೆ ಶುರುಮಾಡ್ಕೊಳೋಕೆ ಪೀಠಿಕೆ ಹಾಕ್ತಾ ಇದೀಯ ಅಲ್ವ. ಶುರು ಮಾಡ್ಕೋ, ಆದ್ರೆ, ಇನ್ನೊಂದ್ಸಲ ಕಾಫಿ ಕೊಟ್ಟು, ಶುರುಮಾಡ್ಕೋ ಅಂದ್ರು.

ವಾನಪ್ರಸ್ಥಾಶ್ರಮದ ಅವರ ಕಥೆ ಆಮೇಲೆ ಹೇಳ್ತೀನಿ. ಏನೋ ಕೇಳ್ತಾರೆ ಅಂತ ಅದನ್ನೂ ಇಲ್ಲಿ ಉದ್ದುದ್ದಕ್ಕೆ ಹೇಳ್ತಾ ಹೋದ್ರೆ ಚೆನ್ನಾಗಿರಲ್ಲ ಅಲ್ವಾ? 😊


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s