Ant Virus 😊 (Author: RamaMurthy)


ಮನ್ನೇ ದಿನ, function ನಲ್ಲಿ, ಕೆಲವರು ನೀವು ಯಾಕೋ ಬರೆಯೋದು ನಿಲ್ಸಿಬಿಟ್ಟಿದೀರಲ್ಲ ಬರೀತಾ ಇರಿ, ನಮಗೆ ಇಷ್ಟವಾಗುತ್ತೆ ನೀವು ಬರೆಯೋದು ಅಂತ ಕೆಲವರು ಹೇಳಿದ್ರು. ಅಬ್ಬಾ, ನಾನು ಬರೆಯೋದನ್ನ ಓದುವವರೂ ಇದ್ದಾರಲ್ಲ ಅಂತ ಸ್ವಲ್ಪ ಖುಷಿಯಾಯ್ತು.

ಏನಾದರೂ ಬರೆಯೋಣ ಅಂತ ಕೂತ್ಕೊಂಡ್ರೆ ಯಾಕೋ ಹಳೆಯ ಒಂದು ಘಟನೆ ನೆನಪಿಗೆ ಬರಕ್ಕೆ ಶುರುವಾಗ್ತಿದೆ. ಅದು ಯಾಕೋ ಬೇರೆ ಏನನ್ನೂ ಬರೆಯಲು ಬಿಡ್ತಿಲ್ಲ. ಅದನ್ನೇ ಮೊದಲು ಹೇಳಿ ಬಿಡ್ತೀನಿ. ನನಗೆ ಮೊದಲಿಂದಲೂ ದಿನ ನಿತ್ಯದ ಸಂಗತಿಗಳಲ್ಲಿ, office meeting ಗಳಲ್ಲಿ ಹಾಸು ಹೊಕ್ಕಾದ, ಘಟನೆಗಳು, ಸಂಗತಿಗಳನ್ನ ಟಿಪ್ಪಣಿ ಮಾಡಿಟ್ಟುಕೊಳ್ಳುವುದು ಮತ್ತು ಅದನ್ನ ಕಾಲಾವಕಾಶ ಸಿಕ್ಕಾಗ ಅದಕ್ಕೆ ಒಂದು ಲೇಖನದ ರೂಪು ರೇಷೆ ಕೊಡುವುದು ಒಂದು ಅಭ್ಯಾಸ.

Service ನಲ್ಲಿದ್ದಾಗ ಕಾಲಾವಕಾಶ ಸಿಕ್ತಾನೇ ಇರ್ಲಿಲ್ಲ. ಆದ್ರೂ, ಅಂತೂ ಇಂತೂ ಸ್ವಲ್ಪ ಬರಿತಾನು ಇದ್ದೆ. ಆಗೆಲ್ಲಾ, whatsap, blog ಗಳು ಇರ್ಲಿಲ್ವಲ್ಲ, ನಮ್ಮ ಕಾಲದಲ್ಲಿ ಪುಸ್ತಕದಲ್ಲಿ, ಹಾಳೆಗಳಲ್ಲಿ ಬರೆದಿಟ್ಟುಕೊಳ್ತಾ ಇದ್ವಿ. ನಿವೃತ್ತಿಯ ನಂತರ, ನಾನು ಒಂದು Desktop Computer ತಗೊಂಡಿದ್ದೆ. ಆಗೆಲ್ಲಾ laptop ಇನ್ನೂ ಅಷ್ಟಾಗಿ ಚಾಲ್ತಿಯಲ್ಲಿರಲಿಲ್ಲ. ನನಗೆ ಏನನ್ನಿಸ್ತೋ, ಇವನ್ನೆಲ್ಲಾ ಹಾಗೂ ಟಿಪ್ಪಣಿ ಗಳನ್ನ, Desk top Compuer ಗೆ ಪೋಣಿಸಿ ಖುಷಿ ಪಟ್ಟಿದ್ದೆ. ನಿಧಾನವಾಗಿ, ಸಮಯ ಸಿಕ್ಕಾಗೆಲ್ಲಾ, ಟಿಪ್ಪಣಿಗಳನ್ನೆಲ್ಲಾ ಓದಿ, ಲೇಖನ ವನ್ನಾಗಿ ಮಾಡ್ತಿದ್ದೆ.

ಹೀಗೇ ಒಂದು ಆರು ತಿಂಗಳು ಮಗಳ ಮನೆಗೆ London ಗೆ ಹೋಗಿ ಬಂದು, ಒಂದು ದಿನ, Computer ಮುಂದೆ ಕುತ್ಕೊಂಡು, on ಮಾಡ್ದೆ, on ಆಗ್ಲೇ ಇಲ್ಲ. ಏನು ಮಾಡುವುದು ಗೊತ್ತಾಗ್ಲಿಲ್ಲ. ತಂತ್ರಜ್ಞರ (technicians) ಮೊರೆ ಹೊಕ್ಕೆ. ತಂತ್ರಜ್ಞರು (technicians) ಎಲ್ಲಾ ನೋಡಿ, Computer ಬಿಚ್ಚಿ ನೋಡ್ಬೇಕು ಅಂದ್ರು. ನೋಡೀಪ್ಪ ಪರ್ವಾಗಿಲ್ಲ ಅಂದೇ. ನೋಡುವಾಗ ANT VIRUS ಬಂದಿತ್ತು. ನೀವೆಲ್ಲಾ Antivirus ಕೇಳಿರಬಹುದು. ಇದು ಯಾವ ANT VIRUS ಗೊತ್ತಾ ? ನನ್ನ Desktop Computer ಇರುವೆಗಳ ಗೂಡಾಗಿ ಬಿಟ್ಟಿತ್ತು. ಒಳಗೆಲ್ಲಾ ಮೊಟ್ಟೆ ಮರಿಗಳದ್ದೇ ಸಾಮ್ರಾಜ್ಯ!!! ಅವರು ಎಲ್ಲವನ್ನೂ clean ಮಾಡಿ, Hard Disc ಹಾಳಾಗಿದೆ. recovery ನೂ ಸಾಧ್ಯವಿಲ್ಲ ಅಂತ ತಂತ್ರಜ್ಞರು (technicians) ಅಭಿಪ್ರಾಯ ವ್ಯಕ್ತಪಡಿಸಿದರು. ಹೊಸ Hrd. Disc ಹಾಕಿ ಸರೀನೂ ಮಾಡಿಕೊಟ್ರು, ಸರೀನೂ ಆಯ್ತು.

ಆದ್ರೆ, ನನ್ನ ಲೇಖನಗಳು, ಟಿಪ್ಪಣಿಗಳ ಗತಿ – ಅಯ್ಯೋ ಅನ್ನಿಸ್ತು. ಇನ್ನು ನನ್ನ ಪುಸ್ತಕ, ಬರೆದಿಟ್ಟುಕೊಂಡಿದ್ದ ಹಾಳೆಗಳು ಇವನ್ನೆಲ್ಲಾ ನನ್ನ ತಮ್ಮನ ಮನೆಯ ಅಟ್ಟದ ಮೇಲೆ ಸೇರಿಸಿದ್ದೆ. ಅಲ್ಲಿ ಹೋಗಿ ನೋಡಿದ್ರೆ, ಅದು ಗೆದ್ದಲುಗಳ ಆಹಾರವಾಗಿತ್ತು. ನನಗೆ ಹೇಗಾಗಿರಬೇಡ. ನನ್ನ ಸೇವಾವಧಿಯಲ್ಲೆಲ್ಲಾ ಓದಿದ್ದು, ಕೇಳಿದ್ದು ಟಿಪ್ಪಣಿ ಮಾಡಿಟ್ಟುಕೊಂಡಿದ್ದು, ಸೇವಾ ನಿವೃತ್ತಿಯ ನಂತರ ಲೇಖನಗಳನ್ನಾಗಿ ಪರಿವರ್ತಿಸ ಬೇಕೆಂಬ ನನ್ನ ಆಸೆ ಮೊಟಕಾಯಿತು. ಹಾಗಾಗಿ, ಯಾವಾಗಲಾದರೂ ಏನಾದರೂ ಬರೆಯ ಬೇಕೆನಿಸಿದರೆ, ಜ್ಞಾಪಕಕ್ಕೆ ಬಂದದ್ದು, ನನಗೆ ತೋಚಿದ್ದು ಬರೆಯುತ್ತೇನೆ. ನನ್ನ ಬರವಣಿಗೆಯಲ್ಲಿ,
ಏನೇನೋ ಇರುತ್ತವೆ ಅವೆಲ್ಲಾ ಎಲ್ಲರಿಗೂ ಬೇಕಾಗಿರುವುದಿಲ್ಲ ಅನ್ನೋ ಭಾವನೆ ನನಗೆ ಬಂದು ಬಿಡುತ್ತದೆ. ಬರೆದಿದ್ದನ್ನು ನನ್ನ ಸ್ನೇಹಿತರಿಗೆ ಮಾತ್ರ ಕಳಿಸುತ್ತೇನೆ. ಅದೊಂದು ನಮ್ಮ ಚರ್ಚೆಗೆ ಆಹಾರ ಅಷ್ಟೇ. ಸಾಕಷ್ಟು ಚರ್ಚೆ ನಡೆಸುತ್ತೇವೆ. ಬೇರೆ ಯಾರಿಗೂ ಹೇಳಲು, ತೋರಿಸಲು ಹೋಗುವುದಿಲ್ಲ ಈಗಂತೂ ಯಾಕೋ ಬರವಣಿಗೆ ಸ್ಥಗಿತ ಗೊಂಡಿದೆ – ಬರೆಯ ಬೇಕನಿಸುತ್ತೆ, ಆದರೂ ಬರೆಯಲು ಆಗುತ್ತಿಲ್ಲ. ನನ್ನ ಸ್ನೇಹಿತರೂ ಯಾಕೆ ಏನೂ ಬರೆಯುತ್ತಿಲ್ಲ. ನಮ್ಮ ಚರ್ಚೆ ನಿನಗೆ ಹಿಡಿಸುತ್ತಿಲ್ವಾ ಅಂತಾನೂ ಕೇಳ್ತಾರೆ. ಹೌದು, ನಿಲ್ಲಿಸಬಾರ್ದು, ಸಮಯ ಸಿಕ್ಕಾಗೆಲ್ಲಾ ನಾನು ಏನಾದ್ರೂ ಬರೀತಾ ಇರಬೇಕು ಅಂದುಕೊಂಡಿದ್ದೀನಿ. ನೀವೂ ಏನಾದ್ರೂ ಬರೀತಾ ಇರಿ. ಮತ್ತೆ ನೋಡೋಣ…😊

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s