Significance of MahaShivaraathri (Author: RamaMurthy)

ಓಂ ನಮಃ ಶಿವಾಯ ಶಿವಾಯ ನಮಃ ಓಂ

ಓಂ ತತ್ಪುರುಷಾಯವಿದ್ಮಹೇ ಮಹಾದೇವಾಯ ಧೀಮಹಿ ತನ್ನೋರುದ್ರಃ ಪ್ರಚೋದಯಾತ್

– ನಮ್ಮ ಪ್ರಮುಖ ಹಬ್ಬಗಳ ಆಚರಣೆಯಲ್ಲಿ ಮಾಘ ಮಾಸ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಗೂ ತುಂಬಾ ಪ್ರಾಮುಖ್ಯತೆ ಕೊಡಲಾಗಿದೆ.

ನಮ್ಮಲ್ಲಿ 12 ಸಂಕ್ರಮಣಗಳನ್ನು ಹೇಳುವಂತೆ, 12 ಶಿವರಾತ್ರಿಗಳನ್ನೂ ಹೇಳಲಾಗಿದೆ. ಪ್ರತೀ ತಿಂಗಳ ಕೃಷ್ಣಪಕ್ಷ ಚತುರ್ದಶಿಯನ್ನು ಮಾಸ ಶಿವರಾತ್ರಿ ಯೆಂದು ಆಚರಿಸಲಾಗುತ್ತದೆ. ಪಂಚಾಂಗದಲ್ಲಿ ಇದನ್ನು ನಾವು ಗಮನಿಸಬಹುದು. ಇದು ಹೆಚ್ಚಿನವರ ಮನೆಯಲ್ಲಿ ಆಚರಣೆಯಲ್ಲಿ ಬಿಟ್ಟು ಹೋಗಿರುವುದಾದರೂ, ಕೆಲವರು ಇದನ್ನು ಇನ್ನೂ ಆಚರಣೆಯಲ್ಲಿಟ್ಟುಕೊಂಡಿರುವುದು ಕಂಡು ಬರುತ್ತದೆ. ಆ ದಿನ ದಂದು ಸಂಜೆ ಯಾವುದಾದರೂ ಈಶ್ವರ ದೇವಸ್ಥಾನಕ್ಕೆ ಹೋಗಿ ಬರುವ ಒಂದು ರೂಢಿಯೂ ಕಂಡು ಬರುತ್ತದೆ. ಯಾವುದೇ ಈಶ್ವರ ದೇವಸ್ಥಾನಕ್ಕೆ ಹೋದರೂ ಆಯಾ ತಿಂಗಳ – “ಮಾಸ ಶಿವರಾತ್ರಿ”ಯ ದಿನವನ್ನು ನಮೂದಿಸಿರುವುದನ್ನು ಗಮನಿಸಬಹುದು.
ಭದ್ರಾವತಿಯಲ್ಲಿ ನನಗೆ ನೆನಪಿರುವಂತೆ, ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ತಿಂಗಳು ಸಂಜೆ/ರಾತ್ರಿ “ಮಾಸ ಶಿವರಾತ್ರಿ” ಯ ಹೆಸರಲ್ಲಿ ಶತ ರುದ್ರಾಭಿಷೇಕ ಪೂರ್ವಕ ಎಲ್ಲರೂ ಸೇರಿ ಆಚರಿಸಲಾಗುತ್ತಿತ್ತು. ಅದು ಯಾಕೋ ನಂತರದಲ್ಲಿ, ರಾಮೇಶ್ವರ ದೇವಸ್ಥಾನ (ನ್ಯೂ ಟೌನ್ ) ದಲ್ಲಿ ಸಾಮೂಹಿಕವಾಗಿ ಆಚರಣೆ ಮಾಡುವ ಪದ್ಧತಿ ಯಾಗಿ ಪರಿವರ್ತಿತಗೊಂಡು ಅದು ಇನ್ನೂ ನಡೆದುಕೊಂಡು ಬಂದಿದೆ.

ಪಂಚಾಂಗದಲ್ಲಿ 12 ಶಿವರಾತ್ರಿಗಳನ್ನು ಹೇಳಲಾಗಿದೆಯಾದರೂ, ಮಾಘ ಮಾಸ ಕೃಷ್ಣಪಕ್ಷ ಚತುರ್ದಶಿ ಯನ್ನು “ಮಹಾ ಶಿವರಾತ್ರಿ” ಯೆಂದು ಆಚರಿಸಲಾಗುತ್ತದೆ. ಮಹಾ ಶಿವರಾತ್ರಿ ಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.

ಪೌರಾಣಿಕ ಹಿನ್ನೆಲೆ, ಕಥೆ , ನಂಬಿಕೆಗಳು ಹಲವಾರು. ಮಹಾ ಶಿವರಾತ್ರಿಯ ಬಗ್ಗೆ ಕೆಲವಾರು ಪುರಾಣಗಳಲ್ಲೂ, ಮಹಾಭಾರತದ ಭೀಷ್ಮರು ಶರಶಯ್ಯೆಯಲ್ಲಿ ಉದ್ಘರಿಸಿದ ಚಿತ್ರಭಾನುವಿನ ಕಥೆಯು ಒಳಗೊಂಡಂತೆ ಕೆಲವು ಕಥೆಗಳನ್ನು ಈ ಸಂದರ್ಭದಲ್ಲಿ ಮೆಲಕು ಹಾಕ ಬಹುದಾಗಿದೆ.

೧. ಶಿವ ಪಾರ್ವತಿ ಕಲ್ಯಾಣ
೨. ಸಮುದ್ರ ಮಥನ
೩. ಶಿವಲಿಂಗ / ಬ್ರಹ್ಮ ವಿಷ್ಣು – ಗರ್ವಭಂಗ
೪. ಲುಬ್ಢಕನ ಕಥೆ.
೫. ಗಂಗಾವತರಣ ಅಥವಾ ಭಗೀರಥನ ಕಥೆ
೬. ಸ್ವಯಂ ಈಶ್ವರನೇ ಪಾರ್ವತಿಗೆ ಹೇಳಿದನೆಂದು ಹೇಳಲಾಗುವ ಶಿವರಾತ್ರಿ ಆಚರಣೆ.

ಈ ಕಥೆ ಗಳಲ್ಲಿ ಕೆಲವು ಮಾಘ ಮಾಸ ಕೃಷ್ಣಪಕ್ಷ ಚತುರ್ದಶಿಯಂದೇ ಸಂಭವಿಸಿದ್ದೆಂದೂ ಕೆಲವು ಪೂರಕ ಕಥೆ ಗಳೆಂದು ಪರಿಗಣಿಸಲಾಗುತ್ತದೆ. ಯಾವ ಕಥೆ ನಮಗೆ ಆಧಾರ ಇತ್ಯಾದಿ ಜಿಜ್ಞಾಸೆ ಬೇಡ. ಕಥೆ ಕಥೆಯಾಗಿಯೇ ಇರಲಿ. ಭಕ್ತಿಗೆ ಪ್ರಾಧಾನ್ಯತೆಯಿರಲಿ. ನಮ್ಮ ಮನೆಯಲ್ಲಿ ಹೇಗೆ ಆಚರಣೆಯಲ್ಲಿದೆಯೋ ಹಾಗೇ ನಡೆದು ಕೊಳ್ಳೋಣ,ಆಚರಿಸೋಣ. ನಾನು, ಕಥೆಯನ್ನು ಹೇಳಲು ಹೊರಟಿಲ್ಲ. ಎಲ್ಲರಿಗೂ ಗೊತ್ತೇ ಇರುತ್ತದೆ. ನನ್ನ ಅನಿಸಿಕೆ, ಮಾತ್ರ ಹೇಳ್ತಿದೀನಿ ಅಷ್ಟೇ.

ಜಾಗರಣೆಯ ಬಗ್ಗೆ, ಸಮುದ್ರ ಮಥನ, ಲುಬ್ಢಕನ ಕಥೆ, ಚಿತ್ರಭಾನುವಿನ ಕಥೆ ಪೂರಕವಾಗಿದೆ ಅನ್ನಿಸುತ್ತದೆ.
ಸಮುದ್ರ ಮಥನ ದಲ್ಲಿ, ಹಾಲಾಹಲ ವಿಷವೂ ಹೊರಹೊಮ್ಮಿತೆಂದೂ, ಅದನ್ನು ಈಶ್ವರನು ಸೇವಿಸಿದನೆಂದೂ ಆ ಸಂದರ್ಭದಲ್ಲಿ ಪಾರ್ವತಿಯು ಬಂದು ಅದು ಹೊಟ್ಟೆಗೆ ಸೇರದಂತೆ ಕತ್ತಿನಲ್ಲೇ ನಿಲ್ಲುವಂತೆ ತಡೆ ಹಿಡಿದಳೆಂದು ಕಥೆ.

ಆದರೆ ಯಾವುದೇ ವಿಷ ಪ್ರಾಶನ ಪ್ರಕರಣದಲ್ಲಿ ವ್ಯಕ್ತಿಯು ನಿದ್ರಿಸಬಾರದು, ನಿದ್ರೆಗೊಳಗಾಗಬಾರದು ಎಂದು ಚಿಕಿತ್ಸಾ ವಿಧಾನ ದಲ್ಲಿ ಹೇಳುತ್ತಾರೆ. ಹಾಗಾಗಿ ಆ ದಿನ ರಾತ್ರಿ ಶಿವನನ್ನು ನಿದ್ರೆಗೆ ಜಾರದಂತೆ ಸ್ತುತಿಸುತ್ತಾ, ದೇವಾದಿ ದೇವತೆ ಗಳೆಲ್ಲರೂ ಸೇರಿದಂತೆ ಉಪವಾಸವಿದ್ದು ಜಾಗರಣೆ ಮಾಡಿದರೆಂದು ಹೇಳಲಾಗುತ್ತದೆ. ಆ ಹಾಲಾಹಲದಿಂದ ವಿಶ್ವವನ್ನೇ ರಕ್ಷಿಸಿದ ಶಿವನನ್ನು ಸ್ತುತಿಸುತ್ತಾ, ಉಪವಾಸ ವ್ರತಾದಿಗಳನ್ನು ಆಚರಿಸುತ್ತಾ ಶಿವನಿಗೆ ಕೃತಜ್ಞರಾಗಿರುವ ಸಂಕೇತವೇ ಮಹಾ ಶಿವರಾತ್ರಿಯೆಂದು ಪರಿಗಣಿಸಲಾಗುತ್ತದೆ.

ಲುಬ್ಢಕನ ಕಥೆ, ಚಿತ್ರಭಾನುವಿನ ಕಥೆಯೂ ಜಾಗರಣೆಗೆ ಪ್ರಾಮುಖ್ಯತೆಯನ್ನು ತೋರಿಸುತ್ತಾ ಬಿಲ್ವ ಪತ್ರೆಯ ಶ್ರೇಷ್ಠತೆಯನ್ನು ಹೇಳುತ್ತದೆ.

ಹೀಗೇ ಎಲ್ಲವನ್ನೂ ನೆನಪಿಸಿ ಕೊಳ್ಳುತ್ತಾ, ಆ ಮಹಾ ಮಹಿಮ ಶಿವನನ್ನು ಸ್ತುತಿಸುತ್ತಾ, ಆ ಮಹಾ ಮಹಿಮ ಮಹಾ ಶಿವನ ಅನುಗ್ರಹವು ಎಲ್ಲರಿಗೂ ದೊರೆಯಲಿ ಎಂದು ಆಶಿಸುತ್ತಾ, ಎಲ್ಲರಿಗೂ ಶುಭ ಕೋರೋಣ.

ಶುಭಾಶಯಗಳು…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s