Good Old Rhymes (Author: RamaMurthy)

In the following article, my Uncle writes about good old Kannada Rhymes. These Rhymes are so meaningful and fun at the same time.

YouTube link to the rhyme mentioned in the below article:

Ajjana Kolidu Nannaya Kudure Kannada Rhyme Link

ನಮ್ಮ ಮೊಮ್ಮಗನ ಜೊತೆ ಅವರ ಶಾಲೆ (Preschool ) ಯಲ್ಲಿ function ಇತ್ತು. ಎಲ್ಲಾ ಮಕ್ಕಳ ಅಜ್ಜಿ ಅಜ್ಜಂದಿರು ಭಾಗಿಯಾಗಿದ್ದರು. ನಾನು, ರತ್ನ ಮತ್ತು ಅವನ ಮೈಸೂರಿನ ಅಜ್ಜ, ಅಜ್ಜಿ ಭಾಗವಹಿಸಿದ್ದೆವು.

Function ತುಂಬಾ ಚೆನ್ನಾಗಿತ್ತು. ನಮಗೆ ಮಾತಾಡಲು, ನಮ್ಮ ಅನಿಸಿಕೆಗಳು, ನೆನಪುಗಳನ್ನು ಹಂಚಿಕೊಳ್ಳುವ ಅವಕಾಶವಿತ್ತು. ನನಗ್ಯಾಕೋ ಏನೂ ಹೇಳಲು ತೋಚಲೇಯಿಲ್ಲ. ನನಗೆ stage fear ಏನೂ ಇಲ್ಲ. ನನ್ನ ಸೇವಾವಧಿಯಲ್ಲಿ, Safety committee ಯ member ಆಗಿ, O A ಯ EC member ಆಗಿ ಸಾಕಷ್ಟು ಭಾಷಣ ಬಿಗಿದು ಅಭ್ಯಾಸವಿದೆ.

ಹಾಗೇ ಮನೆಗೆ ಬಂದಮೇಲೆ, ನನ್ನ ಬಾಲ್ಯದ ನೆನಪುಗಳು ಹಾದು ಹೋದವು. ನಾನು, ಸಣ್ಣವನಿದ್ದಾಗ ಇನ್ನು School ಗೆ ಸೇರಿರಲಿಲ್ಲ. ನಮ್ಮ ಅಜ್ಜಿಯ (ತಂದೆಯವರ ತಾಯಿ) ಯ ಜೊತೆ ನರಸಿಂಹರಾಜಪುರ ಕ್ಕೆ ಹೋಗಿದ್ದೆ. ಏನೋ function ಇತ್ತು. ನನ್ನ ಜೊತೆಗೆ ನಾಲ್ಕಾರು ಸಮವಯಸ್ಕರೂ ಅಲ್ಲಿದ್ದರು. ಮಾರನೇ ದಿನ ಸಂಜೆ ಹೀಗೇ ನಾವೆಲ್ಲಾ ಆಟವಾಡ್ತಿದ್ದೆವು. ಆ ಸಮಯಕ್ಕೆ ಒಬ್ಬ ಅಜ್ಜನವರು ಬಂದರು. ಅವರ ಕೈಯಲ್ಲಿ ಒಂದು walking stick ಇತ್ತು. ಬಂದವರೇ, ಅದನ್ನು ಒಂದು ಮೂಲೆಯಲ್ಲಿಟ್ಟು ಕೈ ಕಾಲು ತೊಳೆಯಲು ಹೋದರು. ನಾವು ಅವರ walking stick ತೆಗೆದುಕೊಂಡು, ನಾಕೂ ಹುಡುಗರು, ಕುದುರೆ ಆಟ ಶುರು ಮಾಡಿ ಬಿಟ್ಟೆವು. ಆಟದಲ್ಲೇ ಮಗ್ನರಾಗಿದ್ದಾಗ ಅವರು ಅಲ್ಲಿಗೇ ಬಂದುಬಿಟ್ಟರು. ನಮಗೋ ಭಯ ಶುರುವಾಯ್ತು. ಬೈತಾರೋ, ಹೊಡಿತಾರೋ ಅನ್ನಿಸ್ತಿತ್ತು. ಅಳುವೇ ಬರುವುದರಲ್ಲಿತ್ತು. ಅಷ್ಟರಲ್ಲಿ ಅವರು –

ಅಜ್ಜನ ಕೋಲಿದು ನನ್ನಯ ಕುದುರೆ, ಕಾಲಿಲ್ಲದೆಯೇ ಓಡುವ ಕುದುರೆ, ಕೂಳಿಲ್ಲದೆಯೇ ಬದುಕುವ ಕುದುರೆ . . . . . ಅಂತ ಹಾಡು ಹೇಳುತ್ತಾ, ನಮ್ಮ ಜೊತೆಗೇ ಅವರೂ ಕುಣಿದು ಕುಪ್ಪಳಿಸಿದರು. ನಮ್ಮನ್ನು ಎತ್ತಿ ಕುಣಿಸಿದರು, ಆಡಿಸಿದರು. ನಮ್ಮ ಭಯವೆಲ್ಲಾ ದೂರವಾಗಿ ಇನ್ನಷ್ಟು ಮತ್ತಷ್ಟು ಕುಣಿದೆವು. ಅವರು ಯಾರೋ ಗೊತ್ತಿಲ್ಲ, ಅಜ್ಜ, ಅಜ್ಜ ಅಂತ ಅಲ್ಲಿರುವವರೆಗೂ ಅವರ ಜೊತೆ ಸುತ್ತಾಡಿದ್ದು, ಅವರ ಜೊತೆ ತೋಟ ಕಾಡು ಅಂತೆಲ್ಲ ಸುತ್ತಾಡಿದ್ದು ಇನ್ನೂ ಹಸಿರಾಗೇ ಇದೆ.

ಈ ಹಾಡನ್ನ ಈಗಿನ ಮಕ್ಕಳು ಎಷ್ಟು ಕೇಳಿದ್ದಾರೋ, ಆಟವಾಡಿದ್ದಾರೋ ಗೊತ್ತಿಲ್ಲ. ಈ ಪದ್ಯ ನಮಗೆ ಒಂದನೇ ತರಗತಿಯಲ್ಲೋ , ಎರಡನೇ ತರಗತಿಯಲ್ಲೋ ಪಠ್ಯಪುಸ್ತಕದಲ್ಲೂ ಇತ್ತು.

ಇದನ್ನೇ, ಅಲ್ಲಿ function ನಲ್ಲಿ ಹಂಚಿಕೊಳ್ಳಬಹುದಾಗಿತ್ತಲ್ಲವೇ ಅಂತ ಅನ್ನಿಸ್ತು.

2 thoughts on “Good Old Rhymes (Author: RamaMurthy)

  1. Woah! I’m really enjoying the template/theme of this blog. It’s simple, yet effective. A lot of times it’s very difficult to get that “perfect balance” between superb usability and visual appearance. I must say you have done a superb job with this. Also, the blog loads very fast for me on Chrome. Excellent Blog!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s