What is Hurting the Growth of Kannada Language (Author: RamaMurthy)

Preface:

Kannada is the official language of the state of Karnataka, India and also one of the classical languages given the rich literary works.

Despite that, it is not widely used that too in Karnataka!! We, Kannadigas tend to blame others for not learning it when they come to work or live in Karnataka.

But, are we really doing our part in promoting our Mother-tongue Kannada? There is a tendency to start speaking in outsider’s language instead of encouraging outsiders to learn Kannada. May be it is due to the over-accommodating nature or the urge to show-off one’s familiarity with other languages.

In either case, it is hurting the growth of the language. If we don’t respect and cultivate our own language, who will?

Being conversant in many languages including English is definitely an asset and is a necessity given the fact that we live in a Global Village. But that shouldn’t stop us from nurturing our language and culture.

In the following article, the author Sr. RamaMurthy talks about one of his experiences wherein a non-Kannadiga person knew more about Kannada (was fluent in it too) and a Kannadiga didn’t seem to value his own language / culture.

*****************************

ನಾಲ್ಕಾರು ವರ್ಷಗಳ ಹಿಂದೆ, ಚೆನ್ನೈಗೆ ಏನೋ ಕೆಲಸದನಿಮಿತ್ತ ಹೋಗಿ, ಚೆನ್ನೈನಿಂದ ವಾಪಸ್ ಟ್ರೈನ್ನಲ್ಲಿ ಬರ್ತಾಯಿದ್ದೆ. ಮಧ್ಯಾಹ್ನದ ಸುಡು ಬಿಸಿಲು. ಕಾದಿರಿಸಿದ ಆಸನಗಳು, ಆದರೂ ಕೆಲವರು ಗಡಿಬಿಡಿಯಲ್ಲಿ, ಕೆಲವರು ನಿಧಾನವಾಗಿ ಆಸೀನರಾಗುತ್ತಿದ್ದರು.

ಇರಲಿ, ಹಾಗೇ ನನ್ನ ಪಕ್ಕದಲ್ಲಿ (ಅಂದ್ರೆ ಪಕ್ಕದ ಆ ಬದಿಯಲ್ಲಿ) ಇಬ್ಬರು ಯುವಕರು ಕುಳಿತಿದ್ದರು. ಒಬ್ಬನ ಕೈಯಲ್ಲಿ Hindu English Paper ಇತ್ತಾದ್ದರಿಂದ ನಮ್ಮ ಬೆಂಗಳೂರಿನ ಹುಡುಗ ಅನ್ಕೊಂಡೆ ಮತ್ತೊಬ್ಬನ ಕೈಯಲ್ಲಿ Tamil magazines ಯಾವುದೇ ಇರಲಿಲ್ಲವಾದರೂ ಚೆನ್ನೈನವನೇ ಇರಬಹುದು ಅನ್ಕೋತಿದ್ದೆ. ಸ್ವಲ್ಪ ಹೊತ್ತಿಗೆ ಹಾಗೇ ನಿದ್ದೆಗೆ ಜಾರಿದೆ. ನನಗೆ ಯಾವಾಗಲೂ ಹಾಗೆ, ಬಸ್, ರೈಲು ಗಾಡಿಗಳಲ್ಲಿ ಬೇಗ ಹಾಗೂ ಚೆನ್ನಾಗಿಯೇ ನಿದ್ದೆ ಬಂದು ಬಿಡುತ್ತದೆ, ಸ್ವಲ್ಪ ಹೊತ್ತಿಗೆ ಇಬ್ಬರೂ ಮಾತಿಗೆ ಶುರು ಮಾಡಿದ್ರು.

ನಿದ್ದೆಯ ಮಂಪರಿನಲ್ಲಿ ಯುವಕರ ಮಾತುಕತೆ ಸ್ವಲ್ಪ ಸ್ವಲ್ಪ ಕಿವಿಮೇಲೆ ಬೀಳ್ತಿತ್ತು. ನಮ್ಮ ಕನ್ನಡದ ಕಲಿ ಅಂತ ಕಾಣ್ಸುತ್ತೆ . . . . . ಯೂ ಆರ್ ಫ್ರಮ್ ? ಗುನುಗಿತು. ಐ ಆಮ್ ಫ್ರಮ್ ಚೆನ್ನೈ. ಸೋ ಯೂ ಪ್ಲೀಸ್. . . . ? ಐ ಆಮ್ ಫ್ರಮ್ ಬ್ಯಾಂಗಳೂರ್ , ಬೆಂಗಳೂರು ಅನ್ನೋದಕ್ಕೆ ಏನ್ ಧಾಡಿ ಅಂತ ಮನಸ್ನಲ್ಲೇ ಅಂದ್ಕೊಂಡೆ.

ಹಾಗಿದ್ರೆ ನಿಮಗೆ ಕನ್ನಡ ಬರುತ್ತೆ ಅಂತಾಯ್ತು.

ಯಸ್, ಯಸ್ ಮೈ ಮದರ್ ಟಂಗ್ ಈಸ್ ಕನ್ನಡ ಅಂತ ದೇಶೀ ಬ್ಯಾಂಗಳೂರ್ ಕನ್ನಡದಲ್ಲಿ ಗುನಿಗಿತು. . . . ಮತ್ತೆ . . . . ಹೋವ್ ಈಸ್ ದಟ್ ಯೂ ನೋ ಕನ್ನಡ ಅಂತು.

ನಮ್ಮ ತಂದೆಯವರಿಗೆ ಬೆಂಗಳೂರಿಗೆ ಟ್ರಾನ್ಸ್ ಫ಼ಾರ್ ಆಗಿತ್ತು. ನಾವು 5 ವರ್ಷ ಬೆಂಗಳೂರಿನಲ್ಲೇ ಇದ್ವಿ. ನಾನು ಇಂಜಿನೀರಿಂಗ್ ಓದಿದ್ದು ಬೆಂಗಳೂರಿನಲ್ಲೇ. ಆ ಸಮಯದಲ್ಲಿ ನಾನು, ನನ್ನ ತಂಗಿ, ನಮ್ಮ ತಾಯಿ ಚೆನ್ನಾಗೇ ಕನ್ನಡ ಕಲಿತೆವು. ನಮ್ಮ ತಂದೆಗೆ ಅರ್ಥವಾಗುತ್ತೆ. ನಮ್ಮ ತಾಯಿ ಇಂಗ್ಲಿಷ್, ತಮಿಳ್ ಪತ್ರಿಕೆ ಗಳ ಜೊತೆ ಕನ್ನಡ ಪತ್ರಿಕೆಗಳನ್ನೂ ಹಾಕಿಸ್ಕೊಳ್ತಾ ಇದ್ರು. ಸುಧಾ, ತರಂಗ ಅಂತ ಎಲ್ಲಾ ವಾರ, ಮಾಸಿಕಗಳನ್ನೂ ಅವರೇ ತರ್ತಾ ಇದ್ರು. ಈಗಲೂ ಚೆನ್ನೈನಲ್ಲಿ ಯಾವುದೇ ಕನ್ನಡ ವಾರಪತ್ರಿಕೆ, ಮಾಸಪತ್ರಿಕೆ ಕಂಡರೂ ಹಿಡ್ಕೊಂಡ್ ಬರ್ತಾರೆ. ನೋಡಿ ಈ ವಾರದ ಸುಧಾ ಸಿಕ್ತು ಅಂತ ತಂದಿದ್ರು ನಾನು ಎತ್ಕೊಂಡ್ ಬಂದಿದೀನಿ.

ನಮ್ಮ ಬ್ಯಾಂಗಳೂರ್, ಐ ಆಲ್ಸೋ ಕ್ಯಾನ್ ಸ್ಪೀಕ್, ರೀಡ್, ರೈಟ್ ಹಿಂದಿ, ತಮಿಳ್, ತೆಲುಗು ಇನ್ ಅಡಿಷನ್ ಟು ಇಂಗ್ಲಿಷ್ ಅಂತೂ. ಅಯ್ಯೋ ರಾಮ್ನೇ ಇನ್ ಅಡಿಷನ್ ಟು ಕನ್ನಡ ಅನ್ನುತ್ತೆ ಅನ್ಕೊಂಡ್ರೆ ಇಂಗ್ಲಿಷ್ ಅಂತಿದ್ಯಲ್ಲಾ ಅಂತ ಮನಸ್ನಲ್ಲೇ ಅನ್ಕೊಂಡೆ.

ಚೆನ್ನೈ, ನೀವ್ ಬಿಡೀಪ್ಪಾ ಪಂಚಭಾಷಾ ಪ್ರವೀಣರು ಹಾಗಾದ್ರೆ ಅಂತೂ. ಬ್ಯಾಂಗಳೂರ್ . . . . ಹ್ಹಿ ಹ್ಹೀ ಅಂತ ನಗ್ತು.

ಅಂದ ಹಾಗೆ ತಾವು ಚೆನ್ನೈಗೆ ಬಂದ್ ಉದ್ದೇಶ? – ಚೆನ್ನೈ ಕೇಳ್ತು.

ಯೂ ನೋ, . . . . ಆನ್ ಸಮ್ ಪ್ರಾಜೆಕ್ಟ್ ವರ್ಕ್ ಫ಼ಾರ್ ಎ ಶಾರ್ಟ್ ಪೀರಿಯಡ್ ಫ಼ಾರ್ ಎಬೌಟ್ 3 ಮಂತ್ಸ್. ಮೈ ಫ್ಯಾಮಿಲಿ ಈಸ್ ಇನ್ ಬ್ಯಾಂಗಳೂರ್ ಓನ್ಲಿ. ಚಿಲ್ರನ್ ಆರ್ ಸ್ಟುಡೀಯಿಂಗ್ ಯೂ ನೋ, . . . . ಮೈ ಮದರ್ ಅಂಡ್ ವೈಫ್ ವಿಲ್ ಟೇಕ್ ಕೇರ್ ಆಫ್ ದೆಮ್. ಅನದರ್ 15 ಡೇಸ್. ಐ ವಿಲ್ ಗೋ ಬ್ಯಾಕ್ ಟು ಮೈ ಪ್ಲೇಸ್ .

ನಮ್ಮ ಕನ್ನಡದ ಕಲಿ ಇನ್ನೂ ಏನೇನೋ ಉಲಿಯುತ್ತಿತ್ತು. ನನಗೋ ನಿದ್ದೆ ಮಂಪರು. ಅವರ ಗುನುಗುನು ಕೇಳಿಸ್ತಾ ಇತ್ತು ಹಾಗೆ ನಿದ್ದೆಗೆ ಜಾರಿದೆ. ನನ್ನ ಮನಸ್ಸು ಏನೇನೋ ಯೋಚಿಸ್ತಿತ್ತು. ಬೆಂಗಳೂರಿ ಇಂಗ್ಲಿಷ್ ಮಾತಾಡುತ್ತೆ, ಚೆನ್ನೈ ಕನ್ನಡ ಮಾತಾಡುತ್ತೆ. ಹಾಗೇ ಎಷ್ಟು ಹೊತ್ತು ನಿದ್ದೆ ಮಾಡಿದ್ನೋ ಗೊತ್ತಿಲ್ಲ. ಮಧ್ಯದಲ್ಲಿ ಎಚ್ಚರವಾಯ್ತು. ಕಾಫಿ . . . ಕಾಫಿ ಅಂತಾ ಹುಡುಗ ಕೂಗ್ತಾ ಇದ್ದ.

ನಮ್ಮ ಬೆಂಗಳೂರಿ ಲೆಟ್ ಅಸ್ ಹ್ಯಾವ್ ಸಮ್ ಕಾಫೀ ಯಾರ್ ಅಂತು.

ಚೆನ್ನೈ – ಬೇಡ ಸರ್, ಅಮ್ಮ ಪ್ಲಾಸ್ಕ್ನಲ್ಲಿ ಕಾಫಿ ಹಾಕ್ಕೊಟ್ಟಿದಾರೆ. ಇಬ್ಬರಿಗೂ ಆಗುತ್ತೆ. ನಮ್ಮಮ್ಮ ಮೈಸೂರ್ ಕಡೆ ತರಹಾನೇ ತುಂಬಾನೇ ಚೆನ್ನಾಗಿ ಕಾಫಿ ಮಾಡ್ತಾರೆ. ರುಚಿ ನೋಡಿ ಅಂತು.

ನಮ್ಮ ಬೆಂಗಳೂರಿ ಓಕೇ ಓಕೇ. . . . ಐ ಹ್ಯಾವ್ ಸಮ್ ಬಿಸ್ಕತ್ಸ್, ವಿ ಕ್ಯಾನ್ ಹ್ಯಾವ್ ವಿತ್ ಕಾಫಿ ಅಂತು.

ಚೆನ್ನೈ, ಬೇಡ, ನಮ್ಮಮ್ಮ ಜೊತೆಗೆ ಕೋಡುಬಳೇನು ಕೊಟ್ಟಿದಾರೆ. ನಿಮ್ಮ ಸುಬ್ಬಮ್ಮನ ಅಂಗಡಿ ಕೋಡುಬಳೆಗಿಂತಾನು ಚೆನ್ನಾಗಿ ಮಾಡ್ತಾರೆ. ಬೆಂಗಳೂರಿನಲ್ಲಿದ್ದಾಗ ಪಕ್ಕದ ಮನೆಯವರು ಒಬ್ಬರು ತಿಪಟೂರಿನ ಕಡೆಯವರು ಇದ್ರೂ, ಅವರ ಹತ್ರ ಕೇಳಿ ಮಾಡೋದನ್ನ ಕಲಿತ್ಕೊಂಡಿದ್ದು ಅಂತ ಹೇಳ್ತಿರ್ತಾರೆ.

ನಮ್ಮ ಬೆಂಗಳೂರಿ ಆಯ್ತು ಅಂತು. . . . ಮತ್ತೆ ಕೋಡುಬಳೆ ಈಸ್ ವೆರಿ ನೈಸ್ ಯಾರ್. ಮೈ ಮದರ್ ಪ್ರಿಪೇರ್ಸ್ ವೆರಿ ನೈಸ್ ನಿಪ್ಪಟ್ಟು ಅಂತ ಹೇಳ್ತು.

ಚೆನ್ನೈ – ನಮ್ಮಮ್ಮ ಮದ್ದೂರ್ ವಡೇನೂ ತುಂಬಾ ಚೆನ್ನಾಗಿ ಮಾಡ್ತಾರೆ ಅಂತ ಸೇರಿಸ್ತು. ಇನ್ನೂ ಏನೇನೋ ಅಮ್ಮಂದಿರ ಗುಣಗಾನ ಮಾಡಿಕೊಳ್ತಿದ್ರು.

ಚೆನ್ನೈ ಹುಡುಗ ಆ ಬದಿಯಲ್ಲಿ ಕುಳಿತಿದ್ದನಾದ್ದರಿಂದ, ನನಗೆ ಅವರು ಕಾಫಿ ಬೇಕಾ ಅಂತ ಕೇಳುವ ಅವಕಾಶ ಬರ್ಲಿಲ್ಲ. ನಾನು ಕಾಫಿ ಮಾರುವ ಹುಡುಗ ಬಿಸಿ ಬಿಸಿ ಅಂತ ಹೇಳಿ ಕೊಟ್ಟ ತಣ್ಣನೆ ಕಾಫಿ ಕುಡಿದೆ.

ಕಾಫಿ ನಂತರ ಮಾತಿಗೆ ಸ್ವಲ್ಪ ವಿರಾಮ.

ಬೆಂಗಳೂರಿ ಕೈಗೆ ಇಂಡಿಯಾ ಟುಡೇ ಬಂತು, ಚೆನ್ನೈ ಕೈಯಲ್ಲಿ ಸುಧಾ ಬಂತು, ದಿನ ತಂತಿ, ಕಲ್ಕಿನೂ ಇತ್ತು, ನಾನು ಕಸ್ತೂರಿ ಹಿಡ್ಕೊಂಡ್ ನಿದ್ದೆ ಮಾಡ್ದೆ.

ಎಚ್ಚರವಾದಾಗ ಬೆಂಗಳೂರು ಬಂದಿತ್ತು. ಎಲ್ಲರು ಗಡಿಬಿಡಿ ಯಿಂದ ಇಳೀತಾ ಇದ್ರೂ. ಆಗಲೇ ಬೆಂಗಳೂರಿ ಮತ್ತು ಚೆನ್ನೈ ಕೈ ಕೈ ಹಿಡ್ಕೊಂಡ್ ಇಳಿದು ಹೋಗ್ತಾ ಇದ್ರೂ. ಇಳಿಯುವಾಗ ಬೆಂಗಳೂರಿನ ಮಾತಾಡಿಸ್ತಿನಿ ಅನ್ಕೊಂಡಿದ್ದೆ ಆಗ್ಲೇ ಇಲ್ಲ.

ನಾನು ಸಾವಕಾಶವಾಗಿ ಇಳಿದು, ಒಬ್ನೇ ಇದ್ದದ್ರಿಂದ ಆಟೋ ಯಾಕೆ ಅಂತ ಬಸ್ ಹಿಡಿದು ನಿಂತ್ಕೊಂಡ್, ಹಿಡ್ಕೊಂಡ್ ಮನೆ ಸೇರಿದೆ.

ನಿಂತ್ಕೊಂಡ್, ಹಿಡ್ಕೊಂಡ್ ಯಾಕೆ ಹೋದ್ರಿ ಅಂದ್ರ ಬಸ್ ನಲ್ಲಿ ಸೀಟ್ ಎಲ್ಲಿ ಸಿಗುತ್ತೆ. ಹಿರಿಯನಾಗರೀಕರಿಗೆ ಮೀಸಲಿರುತ್ತೆ ಅಂದ್ರಾ? ಅಯ್ಯೋ! ನೀವು ಬಸ್ ನಲ್ಲಿ ಓಡಾಡಿಲ್ಲ ಅನ್ಸುತ್ತೆ. ಅವುಗಳಲ್ಲಿ, ಹುಡುಗರು, ಕೆಲಸಕ್ಕೆ ಹೋಗುವವರು ಕೂತಿರ್ತಾರೆ. ಸೌಜನ್ಯಕ್ಕೂ ಕೂತ್ಕೋಳಿ ಅಂತ ಹೇಳಲ್ಲ. ಒಂದೇ ಒಂದ್ಸಲ ತುಂಬಾ ಹಿಂದೆ, ಇದು ಹಿರಿಯ ನಾಗರಿಕರ ಸೀಟು ಬಿಟ್ಕೊಡಪ್ಪ ಅಂತ ಒಬ್ಬನ್ನ ಕೇಳಿದ್ದೆ. ಆತ ನನಗೆ ದಬಾಯಿಸಿ, ನಾವು ದಿವಸಾ ಓಡಾಡೋವ್ರು, ನಮ್ಮ ಕಷ್ಟ ನಿಮಗೇನ್ ಗೋತಾಗುತ್ತೆ ನಿಮಗೇನ್ ಮಹಾ ವಯಸ್ಸಾಗಿರೋದು ಅಂದ. ಬಸ್ ಕಂಡಕ್ಟರ್ ಮುಖ ನೋಡ್ದೆ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡ್ ಹೋಗಿ ಸಾರ್ ಅಂದ, ಅವತ್ತಿಂದ ಇವತ್ತಿನವರೆಗೂ ಅಡ್ಜಸ್ಟ್ ಮಾಡ್ಕೊಂಡ್ ಬಸ್ನಲ್ಲಿ ನಿಂತ್ಕೊಂಡ್, ಹಿಡ್ಕೊಂಡ್ ಹೋಗೋ ಅಭ್ಯಾಸ ಮಾಡ್ಕೊಂಡಿದೀನಿ.

ಬರ್ಲಾ, ಮತ್ತೆ ಮತ್ತೆ ಹೀಗೇ ಸಿಗ್ತಿರೋಣ…

*****************************

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s