Retired Life with Family or Old Age Home? (Author: RamaMurthy)

Preface:
An Ashrama (āśrama) in Hinduism is one of four age-based life stages discussed in ancient and medieval era Indian texts. The four asramas are listed below. The Ashramas system is one facet of the Dharma concept in Hinduism.

 • The First Ashrama – “Brahmacharya” or the Student Stage
 • The Second Ashrama – “Grihastha” or the Householder Stage
 • The Third Ashrama – “Vanaprastha” or the Retirement / Hermit Stage
 • The Fourth Ashrama – “Sannyasa” or the Wandering Ascetic Stage

Typically, by the time one generation enters the third Ashrama, their next generation would have entered the second stage.

Ideally, the folks in Vanaprastha stage would take on an advisory role guiding / helping their kids / grandkids when needed.

In reality, some sort of misunderstandings crop up; they tend to compare how they did something when were younger with what the current generation is doing, try to enforce their thoughts, and overanalyze things, which make living together a challenge.

Some elders who value their independence too much, who want their kids to help out only when asked, and have my way or the highway attitude prefer to live on their own / in Old Age Home / Assisted Living Senior Citizens Home.

In some other cases, elders have no other option as all their kids are living abroad for better career opportunities.

In the article below, the author explains beautifully how his Mother viewed retired life, how to live harmoniously with the younger generation, and why Old Age home is a better option for some people.

ವಾನಪ್ರಸ್ಥಾಶ್ರಮ : (vs ವೃದ್ಧಾಶ್ರಮ)

ವಾನಪ್ರಸ್ಥಾಶ್ರಮದ ಬಗ್ಗೆ ಹರಿಕಥೆ ಶುರುಮಾಡ್ಕೊಳೋಕೆ ಪೀಠಿಕೆ ಹಾಕ್ತಾ ಇದ್ದೆ ಅಲ್ವ. ಕಾಫಿ ಕುಡ್ದಾಯ್ತಲ್ಲಾ ಶುರು ಮಾಡ್ಕೋ ಅಂದ್ರು ನಮ್ಮಮ್ಮ –

ನೋಡೇ ಪದ್ಮ, ಹಿಂದಿನಕಾಲದಲ್ಲಿ ವಯಸ್ಸು ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ನಾಲ್ಕು ಹಂತಗಳ ನಾಲ್ಕು ಅವಧಿಗಳ ವಯಸ್ಸು ಆಧಾರಿತ ಒಂದು ಆಶ್ರಮ ವ್ಯವಸ್ಥೆ ಮಾಡಿದ್ರು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಪ್ರತಿ ಹಂತದ ಆದರ್ಶ ಈಡೇರಿದಮೇಲೆ, ಮುಂದಿನ ಹಂತಕ್ಕೆ ಮುಂಬಡ್ತಿ ಪಡೀತಾ ಹೋಗ್ಬೇಕು. ಇದು ಒಂದು ವ್ಯವಸ್ಥೆ ಯಾಗಿ ರೂಪು ಗೊಂಡಿತ್ತು.

ಚಿದಂಬರ – ಇದಕ್ಕೆಲ್ಲಾ ವಯೋ ನಿರ್ಮಿತಿ ಹೇಳಿಲ್ವಾ ಅಂದ.

ಇದೆ, ಹೇಳಿದಾರೆ. ಕಾಲಕ್ರಮೇಣ, ಇದೂ change ಅಗ್ತಾ ಹೋಗಿದೆ ಅನ್ಸುತ್ತೆ.

ಬ್ರಹ್ಮಚರ್ಯ – ( 24 ವರ್ಷದವರೆಗೆ) ಇದು ಜೀವನದ ವಿಧ್ಯಾರ್ಥಿ ಹಂತವನ್ನು ಪ್ರತಿನಿಧಿಸ್ತಿತ್ತು.

ಗೃಹಸ್ಥಾಶ್ರಮ (24ರಿಂದ 48 ವರ್ಷ) ಈ ಹಂತವು ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಮುಖ್ಯ ಕರ್ತವ್ಯಗಳ ಬಗ್ಗೆ ಕೇಂದ್ರಿತವಾಗಿತ್ತು.

ವನಪ್ರ ಸ್ಥಾಶ್ರಮ ( ವಾನಪ್ರಸ್ಥ ) -(48 ರಿಂದ 72 ವರ್ಷ) ಇದು ನಿವೃತ್ತಿ ಹಂತ, ಮುಂದಿನ ಪೀಳಿಗೆಗೆ ಜವಾಬ್ದಾರಿಗಳನ್ನು ಹಸ್ತಾಂತರಿಸಿ, ಸಂಸಾರ ಜೀವನದಿಂದ ವಿಮುಖರಾಗಿ,
ಶಾಂತಿ – ನೆಮ್ಮದಿ ಕಂಡ್ಕೊಳ್ಳುವ ಉದ್ದೇಶದಿಂದ ಪತಿ ಪತ್ನಿಯರು, ಏಕಾಂತ ಸ್ಥಳವನ್ನು ಯಾವುದಾದರೂ ಕಾಡಿನಲ್ಲಿ ಕಂಡುಕೊಂಡು, ಆಶ್ರಮ ವಾಸಿಗಳಾಗ್ತಾ ಇದ್ರು.

ಹಿಂದೆಲ್ಲಾ ಊರು ದಾಟಿದ್ರೆ ಕಾಡು ಇರ್ತಿತ್ತು. ವಾನಪ್ರಸ್ಥಾಶ್ರಮದಲ್ಲಿ, ಸಂಸಾರ ಬಂಧನದಿಂದ ಬಿಡುಗಡೆ ಹೊಂದಿದ್ರೂ, ಬಂದವರಿಗೆ, ತಮ್ಮ ಸಮಸ್ಯೆಗಳನ್ನ ಹೇಳಿಕೊಂಡವರಿಗೆ ಸೂಕ್ತ ಸಲಹೆ ಮಾರ್ಗದರ್ಶನ ಕೊಡ್ತಿದ್ರು. ನ್ಯಾಯ ಅನ್ಯಾಯಗಳಬಗ್ಗೆ ತಿಳುವಳಿಕೆ ಕೊಡ್ತಿದ್ರು. ಧಾರ್ಮಿಕತೆ ಬಗ್ಗೆ ಸಲಹೆ ಸೂತ್ರಗಳನ್ನು ತಿಳಿಸ್ತಿದ್ರು. ಒಂದು ತರಹ Counselorಆಗಿ, (ಸಲಹೆಗಾರರಾಗಿ) ಸುಖ, ಶಾಂತಿ ಕಂಡ್ಕೋತಿದ್ರು.

ಸನ್ಯಾಸಾಶ್ರಮ – ( 72ವರ್ಷಾನಂತರ ) ಈ ಹಂತದಲ್ಲಿ ಎಲ್ಲಾ ಆಸೆಗಳನ್ನು ಬಿಟ್ಟು ಮೋಕ್ಷ,ಶಾಂತಿಯುತವಾದ ಜೀವನ ಮತ್ತು ಆಧ್ಯಾತ್ಮಿಕತೆಯೆಡೆಗೆ ಮನಸ್ಸು ತಿರುಗುತ್ತಿತ್ತು. ಸನ್ಯಾಸತ್ವ ಅಂದ್ರೆ ಇಲ್ಲಿ ಪತಿಪತ್ನಿಯರ ಸಂಬಂಧದಿಂದ ವಿಮುಖರಾಗಿ,
ಪತಿಪತ್ನಿಯರು ಪೂರಕವಾಗಿ, ತಪಸ್ಸನ್ನೋ , ಆಧ್ಯಾತ್ಮ ಚಿಂತನೆಯನ್ನೋ ಮಾಡುತ್ತಾ, ಮುಂದಿನ ಆಯಸ್ಸನ್ನು ಸವೆಸುತ್ತಿದ್ದರು.

ಈ ನಾಲ್ಕು ಹಂತಗಳನ್ನು ಯಶಸ್ವಿಯಾಗಿ ನಿರ್ವಹಿಸಿದರೆ ಮಾತ್ರ ಆತನ ಜೀವನ ಸಾರ್ಥಕ ಅನ್ನುವ ನಂಬಿಕೆ ಇತ್ತು. ಆಶ್ರಮಗಳು – ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಸಾಧನೆಗಳಿಗೆ ಪೂರಕವಾಗಿತ್ತು ಅನ್ಸುತ್ತೆ.

ಹಿಂದಿನಕಾಲದಲ್ಲಿ ರಾಜರುಗಳು, ವಯಸ್ಸಾದ ಮೇಲೆ, ಅಂದ್ರೆ ತನ್ನ ಕುಟುಂಬದ, ಕರ್ತವ್ಯಗಳನ್ನು ನಿರ್ವಹಿಸಿಯಾಗಿದೆ, ಮಕ್ಕಳು ಮುಂದೆ ನಿರ್ವಹಿಸಿಕೊಂಡು ಹೋಗಬಲ್ಲವರಾಗಿದ್ದಾರೆ ಅನ್ನುವುದು ಢ ಮನವರಿಕೆಯಾದ ನಂತರ ಮಕ್ಕಳಿಗೆ ಹಸ್ತಾಂತರಿಸಿ, ವನವಾಸಿಗಳಾಗಿ, ಆಶ್ರಮ ವಾಸಿಗಳಾಗಿ ಮೋಕ್ಷ ಸಾಧನೆಗೆ ಮುಂದಿನ ಆಯುಷ್ಯವನ್ನು ಮುಡುಪಾಗಿಡ್ತಿದ್ರು.

ಅಷ್ಟರಲ್ಲಿ ಚಿದಂಬರ, ಅಮ್ಮಾ, ನೀವು ತಪ್ಪು ಹೇಳ್ತಿದೀರಾ. ಪುರಾಣಕಾಲದ ರಾಜರು ಅಂತ ಸೇರ್ಸಿ. ಚರಿತ್ರೆನಲ್ಲಿ ಓದಿಲ್ವ, ಮಗ ಅಪ್ಪನ್ನೇ ಸಾಯ್ಸಿ, ರಾಜ್ಯನ ಕಿತ್ಗೊಂಡ, ತಮ್ಮ ಅಣ್ಣನ್ನ ಕೊಂದು ರಾಜ್ಯನ ಕಿತ್ಗೊಂಡ ಅಂತೆಲ್ಲಾ.

ಎಲ್ಲಾರೂ ಹಾಗೇ ನಿರ್ಲಿಲ್ಲ, ಎಲ್ಲೋ ಕೆಲವರಿರಬಹುದು. ಆಯ್ತು, ಈ ಆಶ್ರಮ ವ್ಯವಸ್ಥೆ (sytem) ಚೆನ್ನಾಗಿತ್ತು ಅಂತ ಒಪ್ಕೋಬಹುದಲ್ವಾ ಅಂದ್ರು.

ಪದ್ಮಾ, ಈಗ, ನಾವು ಗೃಹಸ್ಥಾಶ್ರಮದ ಹಂತ ದಾಟಿದೀವಿ ಅಲ್ವೇನೆ. ವಾನಪ್ರಸ್ಥಾಶ್ರಮದ ಹಂತದಲ್ಲಿದೀವಿ ಅನ್ಬಹುದು ಅಲ್ವಾ.

ಈಗ, ಕಾಡೇ ಇಲ್ಲ ಅಂದ್ಮೇಲೆ ನಾವೇನ್ಮಾಡೋದು?.

ವೃದ್ಧಾಶ್ರಮಕ್ಕೆ ನಾವಾಗೇ ಹೋಗ್ತಿವಿ ಅಂದ್ರೆ ಚೆನ್ನವೇನೋ ಅನ್ಸುತ್ತೆ ಅಲ್ವೇನೆ. ಮಕ್ಕಳಿಗೆ ಹೇಳಲು ಮಾಡಲು ಮುಜುಗರ ತಪ್ಸಿದ ಹಾಗಾಗುತ್ತೆ. ನೀ ಹೇಳ್ದಹಾಗೇ ಅಲ್ಲಿ ನಮ್ಮ ಸಮವಯಸ್ಕರೂ, ಮನೋ ಧರ್ಮದವರೂ ಇರ್ತಾರಲ್ವಾ?. ಮೋಕ್ಷ ಸಾಧನೆ ಅಂತ ಅಲ್ದಿದ್ರೂ, ಶಾಂತಿ – ನೆಮ್ಮದಿ ಕಂಡ್ಕೊ ಬಹದು ಅನ್ಸುತ್ತೆ. ಮಕ್ಕಳಿಗೂ ಕಿರಿಕಿರಿ ತಪ್ಪುತ್ತೆ ಆಲ್ವಾ ಅಂದ್ರು.

ಅಷ್ಟರಲ್ಲಿ ಚಿದಂಬರ, ಅಮ್ಮಾ, ನೀವು ತಪ್ಪು ತಿಳ್ಕೊಂಡಿದೀರ. ಎಲ್ಲಾ ವೃದ್ಧಾಶ್ರಮಗಳೂ ನೀವು ತಿಳ್ಕೊಂಡಿರೋ ಹಾಗಿಲ್ಲ.
ವೃದ್ಧಾಶ್ರಮ, ವೃದ್ಧಾಶ್ರಮವಾಗಿಲ್ಲ. ದುಡ್ಡಿದ್ದವರಾಶ್ರಮ ಆಗಿದೆ. ದುಡ್ಡಿಗೆ ತಕ್ಕ ಸೌಲಭ್ಯ, ಸೇವೆ, ವಸತಿ, ಊಟ, ಉಪಚಾರ ಎಲ್ಲಾ ಸಿಗುತ್ತೆ. ಅದು, ಒಂಥರಾ private school ಇದ್ದಹಾಗೆ. Dnation ಇಲ್ಲ ಅಂತಾರೆ. seat ಕೊಡಲ್ಲ, ಬೇಕೇಬೇಕು ಅಂದ್ರೆ building fund ಅಂತಾನೋ ಏನೋ ಒಂದು ಹೇಳಿ ದುಡ್ನ ಕಿತ್ಕೋತಾರೆ. ಹಾಗೇ ಇದು.

ಅದ್ಸರಿ, ನಿಮ್ಗ್ಯಾಕೆ ಈಗ ಇದು ಮನಸ್ಸಿಗೆ ಬಂತು. ನಾವು ಸರಿಯಾಗಿ ನಿಮ್ಮನ್ನ ನೋಡ್ಕೊತಿಲ್ವೇ?. ಮನಸ್ಸಿಗೆ ಬೇಜಾರು ಆಗೋಹಾಗೆ ಏನಾದ್ರೂ ನಡ್ದಿದ್ಯಾ ಅಂದ.

ಛೇ , ಬಿಡ್ತು ಅನ್ನು. ಹಾಗೇನೂ ಇಲ್ವೋ. ನೀನು ಇದನ್ನೇ ಮನಸ್ಸಿಗೆ ಹಚ್ಕೋ ಬೇಡ, ಹೇಳಿದೀನಿ. ಪದ್ಮ, ವೃದ್ಧಾಶ್ರಮದ ಬಗ್ಗೆ ಹೇಳ್ತಿದ್ಳಲ್ವಾ, ಮನ್ಸು ಹಾಗೆ ಯೋಚಿಸ್ತಿತ್ತು. ನಮಗೂ ವಯಸ್ಸಾಗಿ, ಖಾಯಿಲೆ ಕಸಾಲೆ ಅಂತ ಹಾಸ್ಗೆ ಹಿಡಿದು ನಿಮಗೂ ತೊಂದ್ರೆ ಆದ್ರೆ ಅಂತ ಏನೇನೋ ಮನಸ್ಸಿಗೆ ಬಂತು.

ನೋಡಿ, ಖಾಯಿಲೆ ಕಸಾಲೆ ಅಂತ ಹಾಸ್ಗೆ ಹಿಡಿದ್ರೆ, ವೃದ್ಧಾಶ್ರಮದವರು treatment ಕೊಡುಸ್ತಾರೆ, nursing ಮಾಡ್ತಾರೆ ಅನ್ಕೊಂಡ್ರಾ. ಫೋನ್ ಮಾಡಿ ಮನೇಗ್ ಕರ್ಕೊಂಡ್ಹೋಗಿ ಅಂತಾರೆ ಇಲ್ವೇ, extra payment ಮಾಡಿ ಅನ್ಬಹುದು. ಆಗ ಮಕ್ಳಿಗೆ ಯೋಚ್ನೆ ತಪ್ಪುತ್ಯೆ?. ಚೆನ್ನಾಗಿರೋವರ್ಗು
ವೃದ್ಧಾಶ್ರಮ ಆಮೇಲೆ ಮನೆನೇ ಆಶ್ರಮ ಅಂದ.

ನಮ್ಮಮ್ಮ, ನೋಡು, ಹಾಗೂ ಬೇಡ, ಹೀಗೂ ಬೇಡ. ಮನೇಲೆ ಆಶ್ರಮ ಕಂಡ್ಕೊಂಡ್ರಾಯ್ತು.

ಅದ್ಹೇಗಾಗುತ್ಯೇ ಪದ್ಮ. ಮನೇಲಿ, ಅದ್ಹೇಗೇ ಅಶ್ರಮದ ತರಹ ಇರೋದೂ. ನಂಗಂತೂ ನಿನ್ಮಾತು ಅರ್ಥ ಆಗ್ತಿಲ್ಲ.

ನೋಡು, ಆಶ್ರಮದಲ್ಲಿ, ಏನೋ ಒಂದು ನಿಯಮ, ಶಿಸ್ತು, ಕಟ್ಟಳೆ ಅಂತ ಇರುತ್ತಲ್ವಾ ಅದನ್ನೇ ಮನೇಲೂ ಅಡವಳಿಸಿಕೊಳ್ಳೋದಪ್ಪಾ. ಎಲ್ಲಾ ವಿಷಯಕ್ಕೂ ಮೂಗು ತೂರಿಸ್ದೇ, ನಮ್ಮಪಾಡಿಗೆ ನಾವಿರ್ಬೇಕಪ್ಪ. ನಮ್ಮ ಕೈಲಾದ ಕೆಲಸ ಬೊಗಸೆ ಅಂತ ಮಾಡ್ಕೊಂಡ್, ದೇವ್ರು ದಿಂಡ್ರು, ಪೂಜೆ, ಧ್ಯಾನ ಅಂತ; ಮೊಮ್ಮಕ್ಕಳ ಜೊತೆ ಆಟ ಪಾಠ ಅಂತ; ನೆಂಟ್ರು ಇಷ್ಟ್ರು ಅಂತ ಬಂದು ಹೋಗುವವರ ಜೊತೆ ನಗುನಗ್ತಾ ಮಾತಾಡ್ಕೊಂಡು; ಸಂಜೆ ದೇವಸ್ಥಾನ, ಹರಿಕಥೆಯೋ , ಪ್ರವಚನವೋ ಏನೋ ಒಂದು ಏನೂ ಇಲ್ದೆ ಇದ್ರೆ TV ಇದ್ಯಲ್ಲ ನೋಡ್ತಾ ಕುತ್ಕೋ ಬಹುದಲ್ವಾ. ಆಶ್ರಮ ದಲ್ಲೂ ಇದನ್ನೇ ತಾನೇ ಮಾಡ್ತೀವಿ. ಮನೇಲಿರೋ ಸ್ವಾತಂತ್ರ್ಯ ಅಲ್ಲಿರುತ್ತೋ ಇಲ್ವೋ, ನಾ ಕಾಣೆ, ಅಂದ್ರು.

ಅದ್ಸರಿ, ಹಾಗೇ ಮಾಡಬಹುದು ಅಂತಿಟ್ಕೋ. ಗಂಡುಸ್ರು ಕಥೆ ಹೇಳೇ. ಅವ್ರು ಹೇಗೇ time ಕಳ್ಯೋದು. ಅವ್ರೇನು ದೇವ್ರು ದಿಂಡ್ರು, ಪೂಜೆ, ಧ್ಯಾನ ಮಾಡ್ತಾರಾ, ಮೊಮ್ಮಕ್ಳು ಜೊತೆನೂ ಜಗಳ ಶುರು ಮಾಡ್ಕೋತಾರೆ. ದೇವಸ್ಥಾನಕ್ಕೆ ಹೋಗೋಣ ಅಂದ್ರೆ, ನೀನ್ಬೇಕಾದ್ರೆ ಹೋಗು, ನಾನು parkಗೆ ಹೋಗ್ತೀನಿ ಅಂತಾರೆ. ಇನ್ನು, TV ವಿಷ್ಯಕ್ಕೆ ಬಂದ್ರೆ, ಯಾವ್ channel ಹಾಕು, ಅದ್ಬೇಡ ಇದ್ಹಾಕು, ಅದ್ಹಾಕು ಅಂತ ಯಾವದನ್ನೂ ಅವರೂ ನೋಡಲ್ಲ ನಮಗೂ ನೋಡಕ್ಕೆ ಬಿಡಲ್ಲ.

ಅಯ್ಯೋ, ನೀನ್ ಒಳ್ಳೆ, ಬೆಳೆಗ್ಗೆ, ಸಾಯಂಕಾಲ ಎರಡು ಹೊತ್ತೂ
parkಗೆ ಹೋಗ್ಲಿ ಬಿಡು. ಆದ್ರೆ, ಸ್ವಲ್ಪ ಪೂಜೆ ಪುನಸ್ಕಾರ , ಧ್ಯಾನ, ಯೋಗ ಅಂತಾನೂ ಆಳ್ವಡಿಸ್ಕೊ ಬೇಕು. ಅದ್ಬಿಟ್ಟು, ನಮ್ಮ ಸುಬ್ಬು ತರ, ತಾನೇ ಸರಿ, ತಾನ್ಮಾಡಿದ್ದೆಲ್ಲಾ ಸರಿ, ತನ್ಗೆ ಎಲ್ಲಾ ಗೊತ್ತಿದೆ, ಎಲ್ಲಾ ತಾನು ಹೇಳ್ದಾಗೆ ಆಗ್ಬೇಕು ಅನ್ನೋದು, ಎಲ್ಲರಮೇಲೂ ದಬ್ಬಾಳಿಕೆ. ಇವನ್ನೆಲ್ಲಾ ಬಿಡ್ಬೇಕು. ಮಕ್ಳೂ ದೊಡ್ಡೋರಾಗಿದಾರೆ, ಅವರೂ ಹೆಗ್ಬೇಕೋ ಹಾಗಿರ್ಲಿ ಅಂತ ಬಿಡ್ಬೇಕಪ್ಪಾ. ಏನೋ, ಎಲ್ಲೋ ತಪ್ಪು ಅಂತ ಕಾಣ್ಸಿದ್ರೆ, ಹಾಗಲ್ಲ, ಹಿಗ್ಮಾಡ್ಬಾಹುದಿತ್ತು ಅಂತ, ತಮಗೆ ಸರಿ ಅನಿಸಿದ್ದನ್ನ ಹೇಳ್ಬೇಕು. ಅದ್ಬಿಟ್ಟು ಎಲ್ಲಾ ವಿಷಯಕ್ಕೂ ಮೂಗು ತೂರುಸ್ಕೊಂಡ್ಹೋಗ್ಬಾರ್ದು. ಹೀಗೇ ಅವ್ರದ್ದೇ ಧಾಟಿನಲ್ಲಿ, ಏನೇನೋ ಹೇಳ್ಕೊತಾನೆ ಇದ್ರು.

ನಾವೆಲ್ಲಾ ನಗ್ತಿದ್ವಿ. ನಗ್ಬೇಡ್ರೋ, ನಿಮ್ಗೆ ಏನನ್ಸುತ್ತೆ ಹೇಳ್ರೋ ಅಂದ್ರು.

ಚಿದಂಬರ, ನಮ್ಗೆಲ್ಲಾ ಪದ್ಮಮ್ಮ ಹೇಳ್ತಿರೋದು ಸರಿ ಅನ್ಸುತ್ತೆ ಅಲ್ವೇನ್ರೋ ಅಂದ. ನಾವೆಲ್ಲಾ ಹೌದು ಹೌದು ಅಂದ್ವಿ. ಮತ್ತೆ, ಚಿದಂಬರ ನಿಮಗೆ ವೃದ್ಧಾಶ್ರಮದ ಹುಚ್ಚು ಬಿಡ್ತಲ್ವಾ ಅಷ್ಟು ಸಾಕು ಅಂದ. ನೀವ್ಗಳೇ ಹೇಳ್ಕೊಂಡಹಾಗೆ ಎಲ್ಲಾರೂ, ಹೀಗೇ ಹೊಂದ್ಕೊಂಡ್ಹೋದ್ರೆ problem ಬರೋದೇ ಇಲ್ಲ.
ವೃದ್ಧಾಶ್ರಮಗಳನ್ನೆಲ್ಲಾ ಮುಚ್ಚಿ ಬಿಡಬಹುದು ಅಂದ.

ಅದು ಹಾಗಲ್ವೋ, ಎಲ್ರು ಒಂದೇ ತರಹ ಇರ್ತಾರ್ಯೇ?. ಪದ್ಮ ಹೇಳ್ದಹಾಗೇ, ಸೇರ್ಸಕ್ಕೂ, ಸೇರಿಸದೇ ಇರೊಕ್ಕು ಕಾರಣ ಇರುತ್ತೆ. ಸುಮ್ಸುಮ್ನೆ, comments ಮಾಡಬಾರ್ದು.
ವೃದ್ಧಾಶ್ರಮ ಅಂದ್ರೆ, ನಮ್ಮಲ್ಲಿ ಗೌರವ ಪೂಜ್ಯ ಭಾವನೆ ಬರ್ಬೇಕು ಅಂತ ಹೇಳ್ತಾ ಅವತ್ತಿನ ಕಟ್ಟೆ ಪುರಾಣಕ್ಕೆ ಮುಕ್ತಾಯ ಹಾಡಿದ್ರು.

‌- – =oOo= – –

6 thoughts on “Retired Life with Family or Old Age Home? (Author: RamaMurthy)

 1. There are some attention-grabbing closing dates in this article but I don’t know if I see all of them heart to heart. There is some validity however I’ll take maintain opinion until I look into it further. Good article , thanks and we would like more! Added to FeedBurner as properly

  Like

  1. Thank you, Chris Ryon for reading the article and providing encouraging input. Sure, we will try to do our best in publishing meaningful and helpful article.

   I do understand where your coming from w.r.t. closing dates; those are the ideal age groups for each stage of our life. In the current world, the boundaries have blurred for various good / not-so-good reasons.
   If I use my own life as an example, I should have completed all my education by now; but I am still pursuing my Masters degree while trying to juggle my duties of a householder and a working professional. Good thing here is that I still have an option to study my favorite subjects and the not-so-good aspect is that multi-tasking gets too taxing sometimes.

   In some other cases (e.g., marriage / becoming a parent, which is second stage, ‘Householder’ in our lives), putting things off could potentially mean more challenges such as people finding it difficult to live with another person as both have a very-set mindset already.
   As per neuroscience, neural plasticity is higher between adolescence and early adulthood and hence it is easier to adapt during the phase. So, completing education and householder duties within a reasonable timeline could mean higher-rate of success.

   Thanks again.

   Like

 2. With havin so much written content do you ever run into any issues of plagorism or copyright infringement? My site has a lot of exclusive content I’ve either written myself or outsourced but it looks like a lot of it is popping it up all over the web without my agreement. Do you know any techniques to help prevent content from being ripped off? I’d truly appreciate it.

  Like

  1. Hi Aileen Fredlund, Greetings! Yeah, plagiarism is quite a challenge to deal with. Unless you have IP / Copyright for your work, it is hard to enforce strict rules for content protection. You could consider adding a NOTE / DISCLAIMER at the end of every article that states that ‘the Content is based on you / your team’s original ideals, which cannot be replicated without written consent from you / your team; if not followed, strict measures would be taken against such offences.’

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s