Birthday Resolution!! (Author: RamaMurthy)

We all have heard of New Year resolutions. Many jokes float around on this very topic around that time as not many people manage to stick to their resolution. If you are one of those who has made the resolution and achieved it, hats off to you.

How about Birthday Resolutions?

My Uncle and one of the key contributors to my blog site, respected Mr. Rama Murthy celebrated his birthday recently. The article that he wrote while thanking the people who wished him was so touching. It made me ponder about the birthday resolution topic he had mentioned in that article, which is given below and it is in my mother-tongue, Kannada.

I hadn’t thought about it! I felt it indeed is a very good idea to make a resolution on our birthday: we grow a year older (hopefully wiser too 😊) and we want to see a better version of ourselves with each passing year.

One key thing we need to pay attention is our health. Health is not just a disease-free state, but is about maintaining a balanced state in terms of physical, mental, emotional, social and spiritual aspects.

When we talk about resolution, one thing that comes to almost everyone’s mind is ‘Get Fit’. Yes, being physically fit will address / prevent many illnesses. But, having a balanced, fit mind is equally important.

In Sanskrit, we say, ‘Adhi Vyadhi‘; ‘Adhi’ means illness related to the mind e.g., stress, depression, anxiety etc and ‘Vyadhi’ means physical illnesses that impact our body. Illnesses tend to have their root in our mind and then spread to our body. If we can take care of both mind and body, we can keep many diseases at bay or at least keep those in a manageable level.

My Uncle’s article (in my Mother tongue, Kannada) is below. His birthday resolution for 2018 is ‘While interacting with others, focus on Fact Finding, not Fault Finding‘. 👌👍

‘ The most effective way of overcoming the tendency to find faults in others is that whenever our mind looks at the flaws in someone, we should immediately try to look for good things in that person and learn from them. Everyone has some unique abilities, and we can learn something good from everyone ‘. When we focus on the faults and bad things only of others, our own mind becomes evil. And when we look for good things in them, our own mind becomes more wise, and pure.

Birthday resolution, anyone?

*************************************

Author: Mr. Rama Murthy

ನನ್ನ ಹುಟ್ಟುಹಬ್ಬ ಕ್ಕೆ ಶುಭ‌ಕೋರಿದ‌ ಎಲ್ಲ‌ರಿಗೂ ಅಭಿನಂದನೆಗಳು.

ಇವತ್ತು ಮೊದಲಿಗೆ ನನ್ನ 71ನೇ ವರ್ಷದ ಹುಟ್ಟು ಹಬ್ಬಕ್ಕೆ ಫೋನ್ ಮಾಡಿ ಶುಭಾಷಯ ಕೋರಿದವನು ಚಂಗಪ್ಪ -ನಾಕೊಪ್ಪಲು (ಕೊಡಗು) ನಿಂದ. ಹಲೋ . . ಹೇಗಿದೀಯ. ಯು.ಕೆ. ಯಿಂದ ಯಾವಾಗ್ ಬಂದೆ. ಮಗಳು, ಅಳಿಯ, ಮೊಮ್ಮಕ್ಕಳು ಎಲ್ಲಾ ಚನ್ನಾಗಿದಾರ ಅಂತೆಲ್ಲಾ ವಿಚಾರಿಸಿ, ಮೊದಲಿಗೆ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಕ್ಕೆ ಮತ್ತು 2nd innings ಗೆ enter ಆಗಿದ್ದಕ್ಕೆ ಶುಭಾಷಯಗಳು ಅಂದ.

ನಾನೂ ಥ್ಯಾಂಕ್ಸ್ ಹೇಳಿ, ಅವರ ಯೋಗಕ್ಷೇಮ ವಿಚಾರಿಸಿ, ನಾವು ಬಂದು ವರ್ಷವೇ ಆಯಿತು. ಬಂದಮೇಲೆ ಸಾಕಷ್ಟು ಸಲ ಫೋನ್ ಮಾಡಿದೀನಿ. ಮರೆವು ಜಾಸ್ತಿ ಆಗ್ತಿದ್ಯಾ ಅಂತ ಹೇಳ್ತಾ ಮಯಾವಾಗ ಕೆನಡಾದಿದ ಬರ್ತಾನೆ, ಎರಡನೇ ಮಗನ ಡೆಂಟಲ್ ಕ್ಲಿನಿಕ್ ಹೇಗೆ ನಡೀತಿದೆ ಅಂತೆಲ್ಲಾ ವಿಚಾರ್ಸಿಯಾಯ್ತು.
ಆದ್ಸರಿ, ನಾನು, ಹೋದವರ್ಷಾನೇ 2nd innings ಗೆ enter ಆಗಿ ಆಯ್ತಲ್ಲಾ, ಹೋದ ವರ್ಷ, ನೀನು ಶುಭಾಶಯ ಹೇಳ್ತಾ ಇದನ್ನೇ ಹೇಳಿದ್ದೆ ಮರ್ತೇ ಹೋಯ್ತಾ ಅಂದೇ. ಹೌದಲ್ವಾ,ಮರ್ತಿದ್ದೆ, ಮರೆವು ಜಾಸ್ತಿ ಆಗ್ತಿದೇ ಕಣೋ any way ಹೇಗ್ ನಡೀತಿದೆ ಜೀವನದ 2nd innings ಅಂದ.
ನಡೀತಿದ್ಯಾಪ್ಪಾ, ಸಧ್ಯಕ್ಕಂತೂ ಏನೂ ತೊಂದ್ರೆ ಕಾಣಿಸ್ತಿಲ್ಲ. ನಿಂದು ಅಂದೇ.
ನಂದ್ಯಾಕೆ ಕೇಳ್ತಿಯಾ. ಹಿಂದಿನ ಹಾಗೆ, boundary, sixer ಗಳೇನೂ ಆಗಲ್ಲ. ಬರೀ singles ನಲ್ಲೇ score ಮಾಡ್ಕೊಂಡ್ ಹೋಗ್ತಿದೀನಿ. ಕಾಲ್ನೋವು, ಜಾಸ್ತಿ ಆಗ್ಬಿಟ್ಟಿದೆ ಆಟ ಅಂದ್ಮೇಲೆ ಸ್ಪಿನ್, ಬೌನ್ಸರ್ ಎಲ್ಲಾ ಹಾಕೋರು ಇರ್ತಾರಲ್ವಾ. ಹೇಗೋ, ಕಟ್ ಕೊಟ್ಕೊಂಡು ಕ್ರೀಸ್ ನಲ್ಲಿದೀನಿ, ನೀನೇಪರ್ವಾಗಿಲ್ಲ‌ ಅಂದ.

ನಾವು ವೃತ್ತಿ ಯಲ್ಲಿ ಸಹೋದ್ಯೋಗಿಗಳು ಹಾಗೂಸ್ನೇಹಿತರು . ವೃತ್ತಿಯಲ್ಲಿದ್ದಾಗ, ಹೀಗೇ, ನಿವೃತ್ತಿ ಹೊಂದುವವರನ್ನೆಲ್ಲಾ, ಅವನು ಇನ್ನೇನು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗ್ತಿದಾನಪ್ಪಾ ಅಂತಿದ್ವಿ. ನ‌ಮ್ಮ‌ ಲೆಕ್ಕದಲ್ಲಿ, ಜೀವನ ಯಾತ್ರೆಯಲ್ಲಿ 60 ವರ್ಷ ದಾಟಿದರೆ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಎಂತಲೂ, 70 ವರ್ಷ ವಾದರೆ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆದ ಅಂತಲೂ ಮಾತಾಡಿಕೊಳ್ತಿದ್ವಿ. ಅಲ್ದೇ ಆಗೆಲ್ಲ ಕ್ರಿಕೆಟ್ನಲ್ಲಿ T20 ಬಂದ ಹೊಸದು. ಆಗ್ಯಾರೋ T10ನೂ ಬರುತ್ತೇನೋ ಅಂತ ಮಾತಾಡ್ಕೊಳ್ತಿದ್ರು.
ನಮ್ಮಲ್ಲಿನ ಹಿರಿಯರೊಬ್ಬರು, ನಮ್ಮ ಜೀವನಾನು ಅಷ್ಟೇ, 60ವರ್ಷದವರೆಗೆ test match ಇದ್ದಹಾಗೆ, ಆಮೇಲೆ 60 ರಿಂದ 70 ವರ್ಷ T10ನ‌ -1st innings,70ರಿಂದ 80 ವರ್ಷ – 2nd innings ಹೀಗೇ 3rd, 4th,5th ಅಂತಲೂ ಹೇಳ್ತಿದ್ರು. ಹೌದು,ನಾನೀಗ ಜೀವನದಾಟದಲ್ಲಿ 2nd innings ನಲ್ಲಿದೀನಿ.

70ಆದಮೇಲೆ 71 ಆಗುತ್ತೆ, ಆಮೇಲೆ 72 ಆಗುತ್ತೆ ಆಲ್ವಾ? ಇದರಲ್ಲಿ ಏನೂ ವಿಶೇಷವಿಲ್ಲ. ಆದರೆ, ಇದನ್ನು ನಮ್ಮ ವಿಕಸನ, ವಿಕಸನಶೀಲ, ಎಂದು ಏನು ಹೇಳುತ್ತೇವೋ ಅದರ ಒಂದೊಂದು ಹಂತ ಮತ್ತು ಇದು ನಮಗೆ ಪ್ರಕೃತಿದತ್ತ ಸ್ವಾಭಾವಿಕ ಕೊಡುಗೆ, ಉಡುಗೊರೆಯೆಂದು ಭಾವಿಸಬೇಕಲ್ಲವೇ? ನಾವು ವಿಕಸಿತಗೊಳ್ಳುತ್ತಾ ಹೋಗಬೇಕು ಮತ್ತು ಇದು ನಮ್ಮ ವ್ಯಕ್ತಿತ್ವದ ಮೌಲ್ಯಮಾಪನ ಮಾಡಿಕೊಳ್ಳುವ ಒಂದು ಸುಸಂದರ್ಭವೆಂದು ನನ್ನ ಅನಿಸಿಕೆ.
ಭದ್ರಾವತಿಯಲ್ಲಿ, ನಮ್ಮ ಸ್ನೇಹಿತರೊಬ್ಬರ 60ನೇ ವರ್ಷದ ಶಾಂತಿಗೆ ಬಂದಿದ್ದ ಹಿರಿಯರೊಬ್ಬರು ಆ ಸಂದರ್ಭದಲ್ಲಿ ತಿಳಿಹೇಳಿದ ಒಂದು ಹಿತನುಡಿ ಜ್ಞಾಪಕಕ್ಕೆ ಬರ್ತಿದೆ. 60ವರ್ಷ ಆಯಿತು Retire ಆಗಿದ್ದೀರ. ಇನ್ನು ಮುಂದೆ ಶಾಂತಿ, ನೆಮ್ಮದಿ ಮುಖ್ಯ. ನಿಮ್ಮಈ 61ನೇ ವರ್ಷದಿಂದ, ಪ್ರತಿ ವರ್ಷವೂ, ನಿಮ್ಮಲ್ಲಿರಬಹುದಾದ ಒಂದೊಂದು ದೋಷವನ್ನೋ, ತಪ್ಪುಗಳನ್ನೋ ಬಿಡುತ್ತ,ತಿದ್ದುಕೊಳ್ಳುತ್ತಾ, ನಿಮ್ಮಲ್ಲಿ ಇಲ್ಲದೇ ಇರಬಹುದಾದ ಒಂದೊಂದು ಒಳ್ಳೆಯ ಗುಣ, ನಡುವಳಿಕೆ, ತಿಳುವಳಿಕೆಯನ್ನೋ ಅಳವಡಿಸಿಕೊಳ್ಳುತ್ತಾ ಬಂದಿರಾದರೆ, ನೀವು ನಿಮ್ಮ 70ನೇ ವರ್ಷದ ಹುಟ್ಟುಹಬ್ಬದ ಸಮಯಕ್ಕೆ, ಒಬ್ಬ ಪರಿಪಕ್ವ ಮನುಷ್ಯರಾಗಿರುತ್ತೀರ. ಆರೋಗ್ಯವಂತರಾಗಿ, ಶಾಂತಿ, ನೆಮ್ಮದಿಯನ್ನು ಕಂಡುಕೊಂಡಿರುತ್ತೀರ.

ಅಲ್ಲಿ, ಎಲ್ಲರೂ ತಲೆಯಲ್ಲಾಡಿಸಿದೆವು. ಯಾರು ಯಾರು ಎಷ್ಟೆಷ್ಟು ಅಳವಡಿಸಿಕೊಂಡಿದ್ದೇವೋ ಗೊತ್ತಿಲ್ಲ. ನಾನಂತೂ ಪ್ರಯತ್ನ ಪಟ್ಟಿದ್ದೇನೆ, ಸೋತೂ ಇದ್ದೇನೆ, ಗೆದ್ದೂ ಇದ್ದೇನೆ. ನನ್ನ ಈ ವರ್ಷದ ಸಂಕಲ್ಪ ‘‌ Fact finding – not fault finding` ಅಂದು ಕೊಂಡಿದ್ದೇನೆ.

ಇರಲಿ, ಈ ಸಂದರ್ಭದಲ್ಲಿ ನನ್ನ ಜೀವನಾನುಭವದ ಕೆಲವು ಮಾತುಗಳನ್ನು ಹೇಳೋಣವೆನಿಸುತ್ತಿದೆ.

ಜೀವನದಲ್ಲಿ, ಏರಿಳಿತಗಳು ಬರುವುದು ಸಾಮಾನ್ಯ,ಹಾಗೂ ಸ್ವಾಭಾವಿಕ. ನಮ್ಮ ಜೀವನದಲ್ಲಿ, ಆರ್ಥಿಕವಾಗಿಯೋ, ಮಾನಸಿಕವಾಗಿಯೋ ಕಷ್ಟ, ಸುಖ ಅನ್ನುವುದು ಬರಬಹುದಾದರೆ, ಇವುಗಳನ್ನು ನಾವೂ ಅನುಭವಿಸಿದ್ದೇವೆ. ಇವನ್ನು ಜೀವನ ಪಥದಲ್ಲಿ ಸಾಗುವಾಗ ಬರಬಹುದಾದ humps, ups & downs ಎಂದು ಭಾವಿಸುತ್ತಾ ಸಾಗಿದ್ದೇವೆ.
ಕಷ್ಟ, ಸುಖ, ದುಃಖ ಅನ್ನುವುದು ಒಂದು ಭ್ರಮೆ.ಅದು ಇರುವುದಾದರೆ, ಅದು ಎಲ್ಲರಿಗೂ ಬರಬಹುದು ಮತ್ತು ಅದು ಕೆಲವರಿಗೆ ಜಾಸ್ತಿ ಕೆಲವರಿಗೆಕಮ್ಮಿ ಇರಬಹುದು. ಅದು ನಮಗೆ ಸೀಮಿತವಾಗಿರಬೇಕು ಮತ್ತು ಅದನ್ನು ನಾವೇ ಲೆಕ್ಕ ಹಾಕಿಕೊಳ್ಳ ಬೇಕಷ್ಟೇ. ಅದನ್ನು ನಾನು, ಕಷ್ಟ, ಸುಖ, ದುಃಖ ಅನ್ನದೇ, ಅವುಗಳು ನಮ್ಮ ಜೀವನ ಕ್ರಮ ದಲ್ಲಿ ಬರಬಹುದಾದ ಬದಲಾವಣೆಗಳು ಅಥವಾ ಅಡೆತಡೆಗಳು ಅಷ್ಟೇ ಎಂದುಕೊಳ್ಳುತ್ತಾ ಯಾವುದನ್ನೂ ಅತಿಯಾಗಿ ಮನಸ್ಸಿಗೆಹಚ್ಚಿಕೊಳ್ಳದೆ, ಆಗಲೂ ಈಗಲೂ ಮುನ್ನಡೆಯುತ್ತಾ ಬಂದಿದ್ದೇವೆ. ಆಸೆಗೊಂದು ಮಿತಿ, ಇರುವುದರಲ್ಲಿ ತೃಪ್ತಿ, ಸಂತೃಪ್ತಿ ಕಂಡುಕೊಂಡಿದ್ದೇವೆ.
ಬ‌ದುಕಿನ‌ ವಾಸ್ತ‌ವಿಕ ಅರಿವು ನಮಗಿರಬೇಕು. ಎಲ್ಲ‌ರ‌ ವ್ಯ‌ಕ್ತಿತ್ವ‌ವೂ ವಿಭಿನ್ನ‌. ಪ್ರತಿಯೊಬ್ಬರ ಮನಸ್ಸೂ ಭಿನ್ನ ಭಿ‌ನ್ವ‌ವಾಗಿ ಯೋಚಿಸುತ್ತ‌ದೆಯ‌ಲ್ಲ‌ವೇ? ನಾವೇ ಸ‌ರಿ ನಾವು ಯೊಚಿಸಿದಂತೆಯೇ ಪ್ರ‌ತಿಯೊಬ್ಬ‌ರೂ ಯೋಚಿಸ‌ಬೇಕು ಮ‌ತ್ತು ನ‌ಡೆದುಕೊಳ್ಳ‌ಬೇಕು ಎಂಬುದು ಎಷ್ಟು ಸ‌ರಿ. ನ‌ಮ್ಮ‌ ಮ‌ನ‌ಸ್ಸು ಮಾತ್ರ‌ ಹಾಗೆಯೇ ಯೋಚಿಸುತ್ತಿರುತ್ತ‌ದೆ. ನಾನೇ ಸ‌ರಿ ಎಂಬ‌ ಅನಿಸಿಕೆ ಜಾಗೃತವಾಗಿರುತ್ತದೆ. ಮ‌ತ್ತೆಲ್ಲ‌ರ‌ ಭಾವ‌ನೆ ಅನಿಸಿಕೆಗ‌ಳು ನ‌ಮ‌‌ಗೆ ಪೂರ‌ಕ‌ವಾಗಿ ಕಾಣಿಸುವುದೇ ಇಲ್ಲ‌. ಇಲ್ಲೇ ನ‌ಮ್ಮ‌ ನ‌ಮ್ಮ‌ಲ್ಲಿ ಭಿನ್ನಾಭಿಪ್ರಾಯ‌ ಶುರುವಾಗುವುದು. ಎಂಬುದೂ ನ‌ನ್ನ‌ ಒಂದು ಅನಿಸಿಕೆ. ಸ್ವ‌ಲ್ಪ‌ ಹೊಂದಾಣಿಕೆ ಈ ನಿಟ್ಟಿನ‌ಲ್ಲಿ ಅವ‌ಷ್ಯ‌ಕ‌ ವೆನಿಸುತ್ತ‌ದೆ. ಎಲ್ಲ‌ರ‌ಲ್ಲೂ ಭಾವ‌ನಾತ್ಮ‌ಕ‌ ಸಂಬಂಧ‌ವ‌ನ್ನು ಮೈಗೂಡಿಸಿಕೊಳ್ಳುವ‌ ಅವ‌ಷ್ಯ‌ಕ‌ತೆ ಕಂಡು ಬ‌ರುತ್ತ‌ದೆ.

‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೊಂಯ್ತು’ ಅನ್ನುವ ಒಂದು ಗಾದೆಯನ್ನು ನಮ್ಮಮ್ಮ ಆಗೀಗ ಹೇಳುತ್ತಿದ್ದರು. ಹೌದು, ನಾವೇನಾದರೂ ಮಾತಾಡಿದ್ದನ್ನು ಹಿಂತೆಗೆದು ಕೊಳ್ಳಲು ಸಾಧ್ಯವಿದೆಯೇ?. sorry, ಕ್ಷಮಿಸಿ ಎಂದು ಹೇಳಬಹುದಾದರೂ, ಅಳಿಸಿ ಹಾಕಲು ಸಾಧ್ಯವಿಲ್ಲ ಅಲ್ಲವೇ?.
ಮಾತು ಮ‌ನ‌ಸ್ಸ‌ನ್ನೂ, ಸಂಬಂಧ‌‌ವ‌ನ್ನು ಒಡೆಯ‌ಲೂ ಬ‌ಹುದು, ಕೂಡಿಸ‌ಲೂ ಬ‌ಹುದು ಎಂಬುದು ನಮ್ಮ ಮನದಲ್ಲಿ ಯಾವಾಗಲೂ ಇರುವುದು ಸೂಕ್ತ.

ನಮ್ಮ ಜೀವನ ಕ್ರಮದಲ್ಲಿ ತಪ್ಪೇ ಮಾಡಿಲ್ಲವೇ?. ಮಾಡಿರಬಹುದು. ತಪ್ಪು ಮಾಡೇ ಇಲ್ಲ ಅನ್ನುವವರಿಗೆ ಮೊದಲು ನಮ್ಮ ನಮಸ್ಕಾರಗಳು. ತಪ್ಪು ಮಾಡಿದ್ದೇವೆ ಅಂದರೆ ಕೆಲವುಸಲ, ಕೆಲವು ಸಂದರ್ಭಗಳು ಸುಳ್ಳನ್ನೂ ಹೇಳಿಸುತ್ತೆ, ತಪ್ಪನ್ನೂ ಮಾಡಿಸುತ್ತೆ. ತಪ್ಪು ಯಾಕಾಗಿರಬಹುದು, ಯಾಕೆ ಮಾಡಿರಬಹುದು ಎನ್ನುವ ವಿವೇಚನೆ ನಮ್ಮಲ್ಲಿ ಜಾಗೃತವಾಗಿರಬೇಕು. ತಪ್ಪು ಮಾಡಿದ್ದಾರೆ ಅಂತ ಖಂಡಿಸುತ್ತಾ, ಅವರ ಮನ ನೋಯಿಸುವ ಬದಲು, ಅವರನ್ನೇ ಈ ತಪ್ಪು ನಿನ್ನಿಂದೇಕಾಯಿತು ಅಂತ ಕೇಳಿದೆವಾದರೆ ಅವರು ವಾಸ್ತವಾಂಶವನ್ನು ತಿಳಿಸಿಯಾರು. ಹಾಗೆಯೇ, ಬೇರೆಯವರು ತಪ್ಪು ಮಾಡಿದಾರೆ ಅಂತ ನಮಗೆ ಅನಿಸಿದಾಗ, ನಾವೂ ಈ ತರಹದ ತಪ್ಪು ಮಾಡಿರಬಹುದೇ ಎಂಬ ಅವಲೋಕನ ಮಾಡಿಕೊಳ್ಳುವುದು ಒಂದು ಒಳ್ಳೆಯ ನಡವಳಿಕೆ.
Fact finding not fault finding . . . . ಅಂತ ಒಂದು ಸೂತ್ರವಿದೆ.
Busines management, industry ಗಳಲ್ಲಿ ಇದನ್ನು ಎಲ್ಲರೂ ಓದಿಕೊಂಡಿರಬಹುದು. ಇದು ನಮ್ಮ ಜೀವನಕ್ರಮದಲ್ಲೂ ಅಳವಡಿಸಿಕೊಳ್ಳಬಹುದಾದ ಸೂತ್ರ ಎನ್ನಬಹುದು.

ಒಬ್ಬ ಮಹನೀಯರು ಈ ರೀತಿ ಹೇಳಿದ್ದಾರೆ –
‘ The most effective way of overcoming the tendency to find faults in others is that whenever our mind looks at the flaws in someone, we should immediately try to look for good things in that person and learn from them. Everyone has some unique abilities, and we can learn something good from everyone ‘. When we focus on the faults and bad things only of others, our own mind becomes evil. And when we look for good things in them, our own mind becomes more wise, and pure.

ನಾವು, ನಮ್ಮ ಸಂಧ್ಯಾಕಾಲದಲ್ಲಿದ್ದೇವೆ ಎಂಬುದು ನಮ್ಮ ಮನದಲ್ಲಿದೆ. ನಮಗೆ ಸರಿ ಅನಿಸಿದ, ಸೂಕ್ತ ವೆನಿಸಿದ ದಾರಿಯಲ್ಲಿ ಸಾಗುತ್ತಿದ್ದೇವೆ. ನಮಗೆಸರಿ ಅನಿಸಿದ್ದು, ಬೇರೆಯವರಿಗೆ ತಪ್ಪು, ಬೇರೆಯವರ ಸರಿ ನಮಗೆ ತಪ್ಪಾಗಿಯೂ ಕಾಣಬಹುದು ಅನ್ನುವುದನ್ನೂ ಮನಗೊಂಡಿದ್ದೇವೆ. .

ಎಲ್ಲ‌ರ‌ಲ್ಲೂ ಅವಿನಾಭ‌ವ‌ ಸಂಬಂಧ‌ ಮೈಗೂಡಿಸಿಕೊ‍ಡು, ಎಲ್ಲರಲ್ಲೂ ಒಳ್ಳೆಯತನವನ್ನು ಕಾಣುತ್ತಾ ನ‌ಮ್ಮ‌ ಜೀವ‌ನ‌ ಪ‌ಯ‌ಣ‌ವ‌ನ್ನು ಮುಂದುವ‌ರಿಸಿಕೊಂಡು ಹೋದ‌ರೆ ಬ‌ದುಕು ಸುಂದ‌ರ‌ವಾಗಿ ಕಾಣುತ್ತ‌ದೆಯ‌ಲ್ಲ‌ವೇ? ನಾನೇ ಸ‌ರಿ ಎಂದು ಹೇಳ‌ಲು ಹೊರ‌ಟಿಲ್ಲ‌ ಎಲ್ಲ‌ವೂ ನ‌ನ್ನ‌ ಅನಿಸಿಕೆಗ‌ಳು, ಸಿಹಿ ಕ‌ಹಿ ನೆನ‌ಪುಗ‌ಳು.

ಛಾoದೋಗ್ಯ ಉಪನಿಷದ್ ಬಗ್ಗೆ ಓದಿದ ಒಂದು ಲೇಖನ ಜ್ಞಾಪಕಕ್ಕೆ ಬರುತ್ತಿದೆ. – ಇದು ನಮ್ಮ ಬದುಕು ಹೇಗಿರಬೇಕು, ಪೂರ್ಣವಾಗಿ ಬದುಕಿ ಬಾಳುವ ಕ್ರಮವನ್ನೂ, ಹುಮ್ಮಸ್ಸನ್ನೂ ತಿಳಿಸುತ್ತದೆ. ನಮ್ಮ ಜೀವನ ಚಕ್ರವನ್ನು ಒಟ್ಟು 116 ವರ್ಷಕ್ಕೆ ಸೀಮಿತಗೊಳಿಸಿ, ನಮ್ಮ ಬದುಕು ಬಾಳ್ವೆಯೇ ಒಂದು ಯಜ್ಞ – ಎಂದು ಹೇಳುತ್ತಾ ಜೀವನ ಚಕ್ರವನ್ನು ವಿಭಾಗಿಸುತ್ತಾ ವಿವರಿಸುತ್ತಾ ಹೋಗುತ್ತದೆ.

ಮೊದಲ 24ವರ್ಷಗಳನ್ನು ಪ್ರಾತಃ ಸವನ (ಸವನ = ಯಜ್ಞ) ವೆಂದು ಗುರಿತಿಸಲಾಗಿದೆ. ಗಾಯಿತ್ರೀ ಮಂತ್ರದಲ್ಲಿ ಬರುವ 24ಅಕ್ಷರಗಳ ದ್ಯೋತಕವಾಗಿ, ಈ ಅವಧಿಯನ್ನು ‘ಗಾಯಿತ್ರೀ’ ಎಂದೂ ಕರೆಯಲ್ಪಡುತ್ತದೆ.
ಇನ್ನು, ಎರಡನೇ ಹಂತದ 44ವರ್ಷ (ಅಂದರೆ 24 ನೇವರ್ಷದಿಂದ 68ವರ್ಷದ ಅವಧಿ) , ಇದನ್ನು ಮಾಧ್ಯಂದಿನ ಸವನ ಎಂದು ಹೆಸರಿಸಲಾಗಿದೆ. ಇದನ್ನು ‘ತ್ರೈಷ್ಟುಭ’ ಎಂದೂ, ಇದು ತ್ರಿಷ್ಟುಪ್ ಛಂದಸ್ಸಿನ 44ಅಕ್ಷರಗಳನ್ನು ಪ್ರತಿನಿಧಿಸುತ್ತದೆ ಎಂದೂ ಹೇಳುತ್ತಾರೆ. ಇದು, ನಮ್ಮ ಬದುಕಿನ ಮಧ್ಯ ಭಾಗವೆನ್ನ ಬಹುದೇನೋ

ಮುಂದಿನದು, ತೃತೀಯ ಸವನ. ಇದನ್ನು ‘ಜಾಗತ’ ಎಂದೂ ಕರೆಯಲಾಗಿದೆ. ಜಗತೀ ಛಂದಸ್ಸಿನಲ್ಲಿ 48 ಅಕ್ಷರಗಳಿರುವುದಾಗಿ, ಅದರ ದ್ಯೋತಕವಾಗಿ ಇದನ್ನು ‘ಜಾಗತ’ ಎಂದೂ ಇದರ, ಪೂರ್ಣಾವಧಿ 48ವರ್ಷ ಎಂದು ಹೇಳಿದೆ. ಪೂರ್ಣಾಯುಷ್ಯ ಎಂದರೆ ( 24 + 44 + 48) ಒಟ್ಟು116 ವರ್ಷಗಳನ್ನು ಪೂರ್ಣಗೊಳಿಸುವುದು. ಈ ಅವಧಿ ನಮ್ಮ ಬಾಳಿನ ಮುಸ್ಸಂಜೆ ಎನ್ನಬಹುದು.

ಈ ಮೂರೂ ಅವಧಿಗಳಲ್ಲಿ, ನಮ್ಮ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು ಕ್ರಮ ವಾಗಿ ವಸು ರೂಪ, ರುದ್ರ ರೂಪ, ಆದಿತ್ಯ ( ಪೂಷನ್ ) ರೂಪ ದಲ್ಲಿದ್ದು ನಮ್ಮ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ನಿರ್ವಹಿಸುತ್ತಿರತ್ತಾರೆ. ನಮ್ಮ ಬಾಳಯಜ್ಞದ ಪ್ರತಿಹಂತದಲ್ಲೂ, ನಮ್ಮ ಮನೋಸಂಕಲ್ಪದ ಜೊತೆಗೆ ಆಯಾ ಅಧಿದೇವತೆಗಳಿಗೆ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾ, ನಮ್ಮನ್ನು ಪೂರ್ಣಾವಧಿ, ಪೂರ್ಣಾಯುಷ್ಯವನ್ನು ಪೂರ್ಣಗೊಳಿಸಲು ಸಜ್ಜುಗೊಳಿಸಿ, ನೆರವಾಗಿ ಎಂದು ಕೇಳಿಕೊಳ್ಳಬೇಕು ಎಂದು ಹೇಳುತ್ತಾರೆ.

ಹೌದು, ನಾನೀಗ ನನ್ನ ಬಾಳ ಯಜ್ಞದಲ್ಲಿ, ತೃತೀಯ ಸವನ (ಜಾಗತ) ದ ಪ್ರಥಮ ಹಂತದಲ್ಲಿದ್ದೇನೆ. ನನ್ನ ದ್ವಿತೀಯ ಸವನ ( ‘ತ್ರೈಷ್ಟುಭ’) ವನ್ನು ಪೂರೈಸಲು ರುದ್ರಾದಿ ದೇವತೆಗಳು ಸಹಕರಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ, ತೃತೀಯ ಸವನ (ಜಾಗತ) ದ ಅಧಿದೇವತೆಗಳಾದ ಆದಿತ್ಯಾದಿ ( ಪೂಷನ್ ) ದೇವತೆಗಳು ನನ್ನನ್ನು ಎಲ್ಲಿಯವರೆಗೆ ಸಜ್ಜುಗೊಳಿಸಿದ್ದಾರೆ, ನೆರವಾಗುತ್ತಾರೋ ಗೊತ್ತಿಲ್ಲ. ನಾನಂತೂ ಅವರ ಪ್ರಾರ್ಥನೆಯಲ್ಲಿರುತ್ತೇನೆ.
ಎಲ್ಲರಲ್ಲೂ ಒಳ್ಳೆಯತನವನ್ನು ಕಾಣುತ್ತಾ ನ‌ನ್ನ ಜೀವ‌ನ‌ ಪ‌ಯ‌ಣ‌ವ‌ನ್ನು ಮುಂದುವ‌ರಿಸಿಕೊಂಡು ಹೋಗುತ್ತಾ ಇರುತ್ತೇನೆ.

ಈ ಅವಧಿಯಲ್ಲಿ, ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರ್ಯಾರ ಮನ ನೋಯಿಸಿದ್ದೇನೋ ಗೊತ್ತಿಲ್ಲ,
ಮನ ನೋಯಿಸಿದ್ದರೆ ಕ್ಷಮಿಸಿ ಎಂದು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ.

ಸಂತೋಷಃ ಪರಮಂ ಸೌಖ್ಯo ಸಂತೋಷಃ ಪರಮಾಮೃತಮ್ ।
ಸಂತೋಷಃ ಪರಮಂ ಪಥ್ಯo ಸಂತೋಷಃ ಪರಮಂ ಹಿತಂ॥

ಎಂದು ಹೇಳುತ್ತಾ, ಎಲ್ಲ‌ರಿಗೂ ಮ‌ತ್ತೊಮ್ಮೆ ಧ‌ನ್ಯ‌ವಾದ‌ಗ‌ಳು . . . .

ರಾಮಮೂರ್ತಿ
೧೪-೩- ೨೦೧೮

*************************************

One thought on “Birthday Resolution!! (Author: RamaMurthy)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s