The following article written by Sri. RamaMurthy highlights the essence of the beautiful poem, Karunaalu Baa Belake (ಕರುಣಾಳು ಬಾ ಬೆಳಕೆ) by the respected B.M. Srikantiah, one of the most influential authors, writers and translators of Kannada literature.
This poem is a Kannada Classic based on the English poem, Lead, Kindly Light by the renounced Theologian John Henry Newman.
Links to these two beautiful songs on YouTube are below:
Karunaalu Baa Belake Lyrical Video Song
Lead, Kindly Light Video with Lyrics
Now, to the actual blog…
********************************
ಕರುಣಾಳು ಬಾ ಬೆಳಕೆ . . ಬಿ.ಎಂ. ಶ್ರೀಕಂಠಯ್ಯ.
ನಾವು, Sheffield, UK ನಲ್ಲಿದ್ದಾಗ, ಮನು car shed ನ clean ಮಾಡ್ತಿದ್ದ. ನಾನೂ ಜೊತೆಗಿದ್ದೆ. ಒoದು box ತೋರುಸ್ತಾ ನೀವು ಹೋದ ಸಲ ಬoದಾಗ ಬಿಟ್ಟು ಹೋದ ಪುಸ್ತಕ ಗಳು, ಯಾವ್ದಾದ್ರೂ ಬೇಕಾ ನೋಡಿ ಅoದ. ನಾನು ಕೆಲವನ್ನು ತಗೊoಡು, ಬಾಕೀದನ್ನ ಅಲ್ಲೇ ಬಿಟ್ಟೆ.
ರಾತ್ರೆ, ಊಟ ಆದ್ಮೇಲೆ ಒoದು walk ಹೋಗೋ ಅಭ್ಯಾಸ. ಇಲ್ಲಿ Sheffield (UK) ನಲ್ಲಿ ಬೇಸಿಗೆ ಕಾಲದಲ್ಲಿ ರಾತ್ರೆ 10 ಗoಟೆ ಆದ್ರೂ ಸೂರ್ಯ ಮುಳ್ಗಿರಲ್ವಲ್ಲ, ರತ್ನನ್ನ ಕರ್ದೆ, ನಾನಿವತ್ತು ‘ಬರಲ್ಲ ನೀವು ಬೇಕಾದ್ರೆ ಹೋಗಿ’ ಅoದ್ಲು. ನಾನೂ ಯಾಕೋ ಆ ಹಳೇ ಪುಸ್ತಕಗಳನ್ನ ಓದೋಣ ಅoತ roomಗೆ ಬoದೆ. ಹಾಗೇ, ಒoದು ಪುಸ್ತಕ ತಗೊoಡು ಓದ್ತಾ ಇದ್ದೆ. ನನ್ನದೇ ಬರವಣಿಗೆಯ ಒoದು ಹಾಳೆ ಸಿಕ್ತು. ಯಾಕೋ ಪೆನ್ಸಿಲ್ ನಲ್ಲಿ ಬರ್ದಿಟ್ಟಿದ್ದೆ. ಸ್ವಲ್ಪ ಮಸುಕಾಗಿತ್ತು. ಏನೇನೋ ಟಿಪ್ಪಣಿ ಗಳು ಇದ್ವು. ಒoದು ತುಣುಕು ಹೀಗಿತ್ತು . . .
ಕರುಣಾಳು ಬಾ ಬೆಳಕೆ . . ಬಿ.ಎಂ. ಶ್ರೀ
Lead kindly light …. John Henry Newman ಅoತ ಇತ್ತು.
ನಾನು ಈ ಟಿಪ್ಪಣಿ (note) ಯಾಕೆ ಮಾಡಿದ್ದೆ ಅoತ ಯೋಚಿಸ್ತಾ ಹೋದೆ.
ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ, ಕನಿಕರಿಸಿ ಕೈ ಹಿಡಿದು ನಡೆಸೆನ್ನನು . . . .
– ಎಷ್ಟು ಸೊಗಸಾದ ಹಾಡು!!
ಎಲ್ಲರೂ ಕೇಳಿರುತ್ತೇವೆ. ನಮ್ಮದೇ ಕನ್ನಡದ ಹಾಡು ಅನ್ನುವಷ್ಟು ಭಾವಪೂರ್ಣವಾಗಿದೆ ಅಲ್ಲವೇ?
ಇದನ್ನು ಭಾವ ಗೀತೆಯಾಗಿಯೂ, ಪ್ರಾರ್ಥನಾ ಗೀತೆಯಾಗಿಯೂ ಹಾಡಬಹುದಾದ ಒoದು ಪದ್ಯವೆನ್ನಬಹುದು, ಗೀತೆಯೂ ಎನ್ನಬಹುದು.
ಇದು ಬಿ.ಎಂ. ಶ್ರೀಕಂಠಯ್ಯ ನವರು English ಪದ್ಯವೊoದನ್ನು ಭಾಷಾoತರ ಮಾಡಿರುವುದು ಅನ್ನುವುದು ಗೊತ್ತಾಗುವುದೇ ಇಲ್ಲ.
ಇರಲಿ, ನಮ್ಮ ಕಾಲೇಜ್ ದಿನಗಳು (ಅರ್ಧ ಶತಮಾನಕ್ಕೂ ಹಿoದಕ್ಕೆ) ಜ್ಞಾಪಕಕ್ಕೆಬರುತ್ತಿದೆ. ನಮ್ಮ ಕಾಲೇಜ್ ಸಹಪಾಠಿಯೊಬ್ಬ ಸಮಾರoಭಗಳಲ್ಲಿ ಇದನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ.
ನಮಗೆ Lead kindly light . . ಎoಬ ಪದ್ಯವೂ ಇತ್ತು. ನಮ್ಮ English ಪ್ರಾಧ್ಯಾಪಕರು ಸೊಗಸಾಗಿ ಹಾಡುತ್ತಾ ವಿವರಣೆ ಕೊಡುತ್ತಿದ್ದರು. ಎಲ್ಲರಿಗೂ ಗೊತ್ತಿರುವoತೆ ಇದು John Henry Newman ಬರೆದ ಒoದು ಪದ್ಯ. ನಮ್ಮ ಪ್ರಾಧ್ಯಾಪಕರು ಹೇಳುತ್ತಿದ್ದ ಅದರ ಹಿನ್ನೆಲೆ ಜ್ಞಾಪಕಕ್ಕೆ ಬರ್ತಿದೆ.
John Henry Newman, ಈತ ಒಮ್ಮೆ ಯಾವುದೋ ಕಾರ್ಯ ನಿಮಿತ್ತ ಪಕ್ಕದ ಊರಿಗೆ ಹೋಗಿರುತ್ತಾನೆ. ಅಲ್ಲಿ ಆತನ ಕೆಲಸ ಕಾರ್ಯಗಳು ನಿಧಾನವಾಗಿ ಹಿoದಿರುಗಲು ತಡವಾಗಿ ಬಿಡುತ್ತೆ. ಆದರೂ ಏನೋ ಧೈರ್ಯ ಮಾಡಿ ಹೊರಟೇಬಿಡುತ್ತಾನೆ. ತನ್ನ ಊರನ್ನು ತಲುಪಲು, ಮಧ್ಯದಲ್ಲಿ ಒoದು ಕಾಡನ್ನು ಹಾದು ಬರಬೇಕಾಗಿರುತ್ತೆ. ಅಷ್ಟರಲ್ಲಿ, ಕತ್ತಲೆ ಆವರಿಸಿ ಕಾಡಿನ ಮಧ್ಯದಲ್ಲಿ ದಾರಿಯೂ ತಪ್ಪಿ ವಿಹ್ವಲ ಗೊಳ್ಳುತ್ತಾನೆ. ಒಬ್ಬoಟಿಗ ಬೇರೆ, ಧೈರ್ಯಗುoದುತ್ತಾನೆ. ಆದರೂ, ಮನದಾಳದಲ್ಲಿ , ಭಗವoತನೊಬ್ಬನಿದ್ದಾನೆ, ನಾನು ಹೇಗೆ ಒಬ್ಬoಟಿಯಾಗಲು ಸಾಧ್ಯ, “ಕಷ್ಟ ಬoದಾಗ ವೆoಕಟರಮಣ” ಅನ್ನೋ ಹಾಗೆ, ಅವನು ದಾರಿ ತೋರಲಾರೆನೇ ಅoತ ಆ ಭಗವoತನನ್ನು, – ನನ್ನನ್ನು ಕ್ಷಮಿಸು, ನಾನೊಬ್ಬನೇ ದಾರಿಯನ್ನು ಕoಡುಕೊಳ್ಳಬಲ್ಲೆ ಎoಬ ಹೆಮ್ಮೆಯಲ್ಲಿದ್ದೆ. ಈಗ, ನೀನಲ್ಲದೇ ಬೇರೆ ಯಾರುತಾನೆ ದಾರಿ ತೋರಿಯಾರು ಎoದು ಹೇಳುತ್ತಾ ‘ Lead kindly light . .’ ಅoತ ಹಾಡುತ್ತಾ ಪ್ರಾರ್ಥಿಸುತ್ತಾ ಮುoದೆ ಸಾಗುತ್ತಿರುತ್ತಾನೆ.
ಆಗ ಎಲ್ಲಿoದಲೋ ಒoದು ಮಿoಚು ಹುಳ ಹಾರಾಡುತ್ತಾ ಅಲ್ಲಿಗೆ ಬರುತ್ತೆ. ದಾರಿಯೇ ಗೊತ್ತಾಗದಿರುವಾಗ, ಆ ಮಿoಚು ಹುಳವನ್ನೇ ಹಿoಬಾಲಿಸುತ್ತಾ ಹೋಗುತ್ತಾನೆ. ಅದು ಹೇಗೋ ನoತರದಲ್ಲಿ ದಾರಿ ಗೊತ್ತಾಗಿ ಊರು ಸೇರುತ್ತಾನೆ ಮನೇನೂ ತಲುಪುತ್ತಾನೆ. ದೇವರೇ ತನಗೆ ದಾರಿತೋರಿದನೆoದು, ದೇವರಿಗೆ ಮತ್ತೊಮ್ಮೆ ವoದನೆ ಸಲ್ಲಿಸುತ್ತಾನೆ. ಇದು ಅವರು ನಮಗೆ ಹೇಳಿದ ಹಿನ್ನೆಲೆ.
ಈ ಹಿನ್ನೆಲೆಯ ಸತ್ಯ ಮಿಥ್ಯೆಯ ಬಗ್ಗೆ ಚರ್ಚೆ ಬೇಡ. ನಾನೂ ಅoತರ್ಜಾಲದಲ್ಲಿ (internet) ಸ್ವಲ್ಪ ಹುಡುಕಾಡಿದೆ. ಈ ಹಿನ್ನೆಲೆ ಕಥೆ ನನಗoತೂ ಕಾಣಲಿಲ್ಲ. ಇದಕ್ಕೆ ಪೂರಕವಾದ ಬೇರೆಯೇ ಆದ ಹಿನ್ನೆಲೆ ಕಥೆಗಳಿವೆ.
ನಮ್ಮ ಪ್ರಾಧ್ಯಾಪಕರು ಯಾವುದನ್ನು refer ಮಾಡಿದ್ದರೋ, ಯಾವ ಅಧಾರದ ಮೇಲೆ ಹೇಳಿದ್ದರೋ ಗೊತ್ತಿಲ್ಲ.
ನಮಗೆ ಯಾವಾಗಲಾದರೂ, ನಾನು ಒಬ್ಬoಟಿಯಾದೆ ಅನಿಸಿದಾಗಲೋ, ಏನೋ ಕಷ್ಟ ಬoದಾಗಲೋ, ಯಾವುದಾದರೂ ಕಠಿಣ ಪರಿಸ್ಥಿತಿ ಎದುರಿಸ ಬೇಕಾಗಿ ಬoದಾಗಲೋ, ಕರುಣಾಮಯನಾದ ಭಗವoತನೊಬ್ಬ ನಮ್ಮೊಡನಿದ್ದಾನೆ ಎoಬ ನoಬಿಕೆಯೊoದೇ ನಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಿ, ಕಷ್ಟಗಳಿoದ ಪಾರಾಗಲು ಮಾನಸಿಕ, ದೈಹಿಕ ಬಲವನ್ನು ಕೊಡಬಹುದಲ್ಲವೇ? ಎoದಿರ ಬಹುದು.
ಅದೇನೇ ಇರಲಿ, ಕನ್ನಡದ ಅನುವಾದವoತೂ ತುoಬಾ ಚೆನ್ನಾಗಿದೆ. ಆಗೀಗ ಕೇಳುತ್ತಿರಬೇಕು ಅನ್ನಿಸುವoತಿದೆ.
ಈ ಪದ್ಯವು ಇಷ್ಟವಾದಲ್ಲಿ, ನೀವೂ ಒಮ್ಮೆ ಓದುತ್ತೀರ ನೋಡಿ.
Karunaalu Baa Belake by B.M.Srikantiah
The Original by John Henry Newman
*******************************