Pursuit of Happiness

Even though happiness is one of the innate qualities of every soul born on Earth, it gets masked by various layers of wrong notions we acquire as we age and gets lost! And we are on a perpetual quest for it!!

The following blog written by Sri. RamaMurthy is on this very topic, which is inspired by his experiences in life and the book, You Can be Happy no Matter what by the American author, psychotherapist, and motivational speaker Richard Carlson.


ನಂದೊಂದು ಅಭ್ಯಾಸ. ಏನಾದರೂ ಓದ್ತಾ ಇರ್ತೀನಿ. ನನಗೆ ಚೆನ್ನಾಗಿದೆ ಅನ್ಸಿದ್ದನ್ನ ಟಿಪ್ಪಣಿ ಮಾಡಿಟ್ಕೊಳೋದು, ಆಮೇಲೆ ಯಾವಾಗಲಾದ್ರೂ ಅದನ್ನ ಓದಿ ಏನಾದ್ರು ಬರೀತೀನಿ ಅನ್ಕೊಳೋದು. ಆದ್ರೆ, ಏನಾದರೂ ಬರೀ ಬೇಕು ಅನ್ಸಿದಾಗ ಅದು ಸಿಕ್ಕಲ್ಲ. ಸಿಕ್ಕಾಗ ಬರಿಯೋ ಮನಸ್ಸಿರೋಲ್ಲ.

ಅವತ್ತು ಹೇಳಿದ್ನಲ್ಲ, Sheffield, UK ನಲ್ಲಿ ಕೆಲವು ಹಳೆಯ ಪುಸ್ತಕಗಳ ಜೊತೆ ನಾನು ಮಾಡಿಟ್ಟುಕೊಂಡಿದ್ದ ನನ್ನ ಕೈ ಬರಹದ ಹಾಳೆಗಳು ಸಿಕ್ತು ಅಂತ, ಆ ಕಡತದಲ್ಲಿ ಮತ್ತೊಂದು ಹಾಳೆ ಎತ್ಕೊಂಡೆ.ಮಾಸ‌ಲಾಗಿ ಓದೊದೆ ಕ‌ಷ್ಟ‌ ಅನ್ನೋ ಹಾಗಿತ್ತು. ಒಕ್ಕ‌ಣೆ ಹೀಗಿತ್ತು ‍- You can be happy no matter what. by Richard Carlson ಅಂತ ಮತ್ತೆ ಕೆಲವು ಟಿಪ್ಪಣಿಗಳು ಇದ್ವು.

ಇವನ್ನೆಲ್ಲಾ ಮತ್ತೆ ಭದ್ರಾವತಿಗೋ, ಬೆಂಗಳೂರಿಗೋ ತಗೊಂಡು ಹೋಗೋದ್ಬೇಡ, ಸ್ವಲ್ಪ note ಮಾಡ್ಕೊಳೋಣ ಅಂತ ಕೈಗೆ ತಗೊಂಡೆ.

ಇದೊoದು Richard Carlson ಎoಬ‌ ಆoಗ್ಲ‌ ಲೇಖ‌ಕ‌ ಬ‌ರೆದಿರೋ ಪುಸ್ತ‌ಕ‌. ನ‌ನ್ನ‌ ಅನಿಸಿಕೆಯ‌ಲ್ಲಿ ಇದೊoದು ಅತ್ಯುತ್ತ‌ಮ‌ ಪುಸ್ತ‌ಕ‌. ಕ‌ನ್ನ‌ಡಾನುವಾದ‌ ಯಾರಾದ‌ರೂ ಮಾಡಿದಾರೇನೋ ಗೊತ್ತಿಲ್ಲ‌. ಮಾಡಿದ್ರೆ, ಸಿಕ್ರೆ ಖ‌oಡಿತಾ ಓದಿ ಅಥವಾ ಆ ಪುಸ್ತಕಾನೇ ಓದಿ.

ನ‌ಮ್ಮ‌ ಜೀವ‌ನ‌ ಕ್ರ‌ಮ‌ದ‌ಲ್ಲಿ, ಏನೆಲ್ಲಾ ಬ‌ದ‌ಲಾವ‌ಣೆಗ‌ಳು, ಸ‌ನ್ನಿವೇಶ‌ಗ‌ಳು ಬ‌oದ‌ರೂ, ಸುಖ‌, ಶಾoತಿ, ನೆಮ್ಮ‌ದಿ, ತೃಪ್ತಿ ಹೇಗೆ ಕ‌oಡುಕೊಳ್ಳ‌ಬ‌ಹುದು ಎoಬುದ‌ನ್ನು 5 ಭಾಗ‌ಗ‌ಳ‌ಲ್ಲಿ ವಿವ‌ರಿಸ‌ಲಾಗಿದೆ.

ನಾನೂ ಹಿoದೆ ಯಾವಾಗ‌ಲೋ ಓದಿದ್ದು. Sheffield Libraryಯಿಂದ ಅಂತ ನೆನಪು. ಎಲ್ಲವೂ ಜ್ಞಾಪಕಕ್ಕೆ ಬರ್ತಿಲ್ಲ. ಜ್ಞಾಪಕಶಕ್ತಿ ಕಮ್ಮಿ ಆಗ್ತಿದೆ ಅನ್ಸುತ್ತೆ. ಪುಸ್ತಕ ಓದಿ note ಮಾಡಿದ್ನೋ, ಇನ್ಯಾವುದರಿಂದಲಾದ್ರೂ copy ಮಾಡಿಟ್ಟಿದ್ನೋ ಗೊತ್ತಿಲ್ಲ. ಹೌದು ಪುಸ್ತಕ ಅಂತೂ ನನಗೆ ತುಂಬಾ ಹಿಡಿಸಿತ್ತು. ನ‌ನ್ನ‌ ಟಿಪ್ಪ‌ಣಿಯ‌ಲ್ಲಿ ಸಿಕ್ಕ‌ಷ್ಟ‌ನ್ನು ಇಲ್ಲಿ ಹೇಳ್ತಿದೀನಿ. ಪೂರಾ ಪುಸ್ತಕ ಓದುವಾಗ‌, ನ‌ಮ್ಮ‌ ಪುರಾಣ‌ ಕ‌ಥೆಗ‌ಳು, ಸುಭಾಷಿತ‌ಗ‌ಳೂ ಜ್ಞಾಪ‌ಕ‌ಕ್ಕೆ ಬ‌ರ‌ಬ‌ಹುದು. ಕೆಲ‌ವು ಸಾಲುಗ‌ಳು, ಇವುಗ‌ಳ‌ ಅನುವಾದ‌ ವೇನೋ ಅನ್ನಿಸ‌ಲೂ ಬ‌ಹುದು. ಮತ್ತೆ ಓದೋಣ ಅಂತ ಮೊಮ್ಮಗ, ಮೊಮ್ಮಗಳ ಜೊತೆ Sheffield ಲೈಬ್ರರಿಗೆ ಹೋದೆ. ಹುಡುಕಾಡ್ದೇ ಸಿಕ್ಲಿಲ್ಲ. ಯಾರೋ ತಗೊಂಡ್ಹೋಗಿರ್ಬೇಕು. ಇನ್ನೊಂದು ದಿವ್ಸ ನೋಡೋಣ ಅನ್ಕೊಂಡೆ, ಸುಮ್ನಾದೆ. ಮೊಮ್ಮಗ, ಮೊಮ್ಮಗಳು ಅವ್ರ ಪುಸ್ತಕ select ಮಾಡ್ಕೊಂಡಾಗಿತ್ತು. ಅವರಜೊತೆ ಮನೆಗೆ ಹೊರಟೆ. ಆಮೇಲ್ಯಾಕೋ ಸಮಯ ಕೂಡಿಬರಲೇಇಲ್ಲ.

ನ‌ನ್ನ‌ ಟಿಪ್ಪ‌ಣಿಯ‌ಲ್ಲಿ ಸಿಕ್ಕ‌ಷ್ಟ‌ನ್ನು ಬರ್ದಿಟ್ಟೆ. ಪುಸ್ತಕ ಓದ್ತಾ ಇದ್ರೆ, ನ‌ಮ್ಮ‌ ವ‌ಯೋಮಾನ‌ದ‌ವ‌ರಿಗೆ ಇದು ತುoಬಾ ಚೆನ್ನಾಗಿ ಅರ್ಥ‌ವಾಗುತ್ತೆ. ರೇಡಿಯೋ ನೇ ಇಲ್ಲ‌ದ‌ ಕಾಲ‌ದಿoದ‌, smart phone, TV, Internet ಎಲ್ಲಾ ನೋಡ್ತಿದೀವಿ. Smart phone ಎoಬ‌ ಮಾಯಾ ದ‌ರ್ಪ‌ಣ‌ ಎಲ್ಲ‌ರ‌ ಕೈಯ‌ಲ್ಲೂ ಇದೆ. ಅoಗೈಯ‌ಲ್ಲೇ ವಿಶ್ವ‌ವ‌ನ್ನೇ ನೋಡುವ‌, ಸುದ್ದಿ ಸ‌oಗ್ರ‌ಹಿಸುವ‌ ಚಾತುರ್ಯ‌ವಿದೆ. ಆದ‌ರೆ, ಆಗಿನ‌ ನೆಮ್ಮ‌ದಿ, ಶಾoತಿ ಇದೆಯಾ ಅoದ್ರೆ ಖ‌oಡಿತಾ ಇಲ್ಲಾ ಅoತೀವಿ. ನಾವು ಬೈಸಿಕ‌ಲ್ಲೇ ಹೊಂದಿರದ , ಬೈಸಿಕ‌ಲ್ ನ‌ಮ್ಮ‌ ದುಡಿಮೆಯ‌ಲ್ಲಿ ಕೊoಡಾಗ‌ ಖುಶಿ ಪ‌ಟ್ಟ‌ಷ್ಟು, ಈಗ‌ ಕಾರು ಕೊoಡಾಗ‌ಲೂ ದೊರೆಯುತ್ತಿಲ್ಲ‌ವೇನೋ ಅನ್ನಿಸುತ್ತೆ.

ಇನ್ನು ಕಾಲ‌, ಸ‌ಮ‌ಯ‌ ಅoತ‌ ಹೇಳ‌ ಹೊರ‌ಟ‌ರೆ, ನ‌ಮ‌ಗೆ ನ‌ಮ್ಮ‌ ಎಲ್ಲ‌ ಕೆಲ‌ಸ‌ಕ್ಕೂ ಸ‌ಮ‌ಯ‌ ವಿತ್ತು. ಸ‌ಮ‌ಯ‌, ಕಾಲ‌ ನಿಧಾನ‌ವಾಗಿ ಚ‌ಲಿಸುತ್ತಿದೆ ಅನ್ನುವ‌oತಿತ್ತು. ಈಗ‌ಲಾದ‌ರೋ ಕಾಲ‌ ಓಡಿ ಹೋಗ್ತಿದೆಯೇನೋ ಅನ್ನಿಸುವ‌oತಿದೆ ಅಲ್ಲ‌ವೇ?. ಹೌದು, ಆದ‌ರೂ ಬ‌ದ‌ಲಾವ‌ಣೆಗೆ ನಾವೂ ಹೊoದುಕೊoಡು ಹೋಗುತ್ತಿದ್ದೇವೆ ಅಲ್ಲ‌ವೇ?.

ಆದ‌ರೆ ಜೀವ‌ನ‌ಕ್ರ‌ಮ‌ ಹೇಗೇ ಇರ‌ಲಿ, ಏನೇ ಬ‌ದ‌ಲಾವ‌ಣೆ ಬ‌ರ‌ಲಿ, ಜೀವ‌ನ‌ದ‌ಲ್ಲಿ ಸುಖ‌, ಶಾoತಿ, ನೆಮ್ಮ‌ದಿ ಕ‌oಡುಕೊಳ್ಳುವ‌ ಅವ‌ಶ್ಯ‌ಕ‌ತೆಯ‌oತೂ ಇದೆಯ‌ಲ್ಲ‌ವೇ?. ಸ್ವ‌ಲ್ಪ‌ ಶಿಸ್ತು, ಸ‌oಯ‌ಮ‌ ವ‌ನ್ನು ರೂಢಿಸಿಕೊಳ್ಳುವ‌ ಸ‌oಕ‌ಲ್ಪ‌ ಎಲ್ಲ‌ರ‌ಲ್ಲೂ ಬ‌ರ‌ಬೇಕಿದೆ. ಆ ಪುಸ್ತಕ ಓದ್ತಾ ಇದ್ರೆ ಗೊತ್ತಾಗುತ್ತೆ.

  • ಆ ಪುಸ್ತ‌ಕ‌ದ‌ ಕೆಲ‌ವು ತುಣುಕುಗ‌ಳ‌ನ್ನು (ನಾನು ಬರ್ದಿಟ್ಟುಕೊಂಡಿದ್ದು ) ನೋಡೋಣ‌.

Happiness ! It is something that all of us want, but that few of us ever achieve”. ( – many never achieve)

Happiness is characterized by feelings of gratitude, inner peace, satisfaction and affection for ourselves and others.

. . Contentment is the foundation to a fulfilling life. . . . . without contentment, life can be BATTLEGROUND , where we are too busy struggling with problems to enjoy life’s beauty.

. . ನಮ್ಮ ಜೀವನ ಕ್ರಮದಲ್ಲಿ ಸಮಸ್ಯೆಗಳು ಎದುರಾಗುವುದೇ ಇಲ್ಲವೇ ?

ಅವನ ಉತ್ತರ ನೋಡಿ.

Your problems are “real” and significant, but once you learn how to be contented, problems won’t stop you from enjoying your life.

. . . . Our own understanding and thinking is a voluntary function, fluctuates from moment to moment and from day to day. These variances are called moods.

. . . . your mind essentially serves in 2 ways. It is a storage vault for information and past experience and also a transmitter for wisdom and common sense.

. . . . our minds are very powerful tools that can work FOR US or AGAINST US at any given moment.

ಇನ್ನೂ, ಏನೇನೋ, ಗೀಚಿದೀನಿ, ಸ್ಪಷ್ಟವಾಗಿಲ್ಲ. ಅಷ್ಟರಲ್ಲಾಗ್ಲೇ, ರತ್ನ ಬಂದು, ‘ಏನ್ರೀ ಇದು ಒಂದು ಪುಸ್ತಕ ಚೆನ್ನಾಗಿದೆ ಅಂತ ಹೇಳೋಕೆ ಏನೆಲ್ಲಾ ಬರೀತಿದೀರ. ರಾತ್ರಿ 11 ಆಗ್ತಾ ಬಂತು. ಬೆಳಿಗ್ಗೆ 5 ಗಂಟೆ ಗೆ ಸೂರ್ಯ ಕಣ್ಣು ಚುಚ್ತಿದಾನೆ ಅಂತ ಎದ್ಕೂತ್ಕೋತೀರ. ಕಾದಂಬರಿ ಬರೀತಿದೀರ ಹೇಗೆ?’ ಅಂತ ಶುರು ಮಾಡಿದಳು. ಹೌದಲ್ವಾ ಅಂತ ನಾನೂ ಮಲಗುವ ತಯಾರಿ ಶುರು ಮಾಡ್ಕೊಂಡೆ.

ಅವತ್ತು, ತೋಚ್ದಷ್ಟು ಬರ್ದಿಟ್ಟದ್ದನ್ನ, ಇವತ್ತು post ಮಾಡ್ತಿದೀನಿ.

ಇಷ್ಟು ಮಾತ್ರ ಹೇಳಬಹುದು – ಇದೊಂದು ಎಲ್ಲರೂ ಓದಬಹುದಾದ ಒಳ್ಳೆಯ ಪುಸ್ತಕ.

  • YOU CAN BE HAPPY ‍- no matter what: Five Principles for keeping life in Perspective by Richard Carlson, PhD.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s