One of our key co-bloggers, Sri. RamaMurthy who also happens to be my dear Uncle celebrated his birthday a few days back.

Penning down his thoughts (either about life / reminiscing / birthday resolution) has been a part of his birthday ritual, which I think is very nice as it kind of gives us an avenue for any course-correction.
Through reminiscing, we can reflect on the life we have lived so far, learn from our mistakes, and correct ourselves so that we don’t repeat those mistakes. It helps us to become a better version of ourself every passing year. We also get to remember the happy moments of our life, relive those fondly, and thank the people who touched our life and made a positive difference in our life.
Now to Sri RamaMurthy’s blog written on his birthday (this is our Mother tongue, Kannada)…
ಧನ್ಯವಾದಗಳು.
ಹೌದು, ಇವತ್ತು ನನ್ನ ಹುಟ್ಟು ಹಬ್ಬ. ಬಂಧು ಮಿತ್ರರ ಶುಭಾಶಯಗಳು, ಹಿರಿಯರ ಆಶೀರ್ವಾದ – ಮನಸ್ಸು ಪುಳಕಿತಗೊಂಡಿತು.
ಹಾಗೇ ಸ್ವಲ್ಪ ಹಿನ್ನೋಟ ನಡೆಸ್ತಿದ್ದೆ. ಹೋದವರ್ಷದ dairy ಏನು ಹೇಳತ್ತೆ ಅಂತ ಲೆಕ್ಕ ಹಾಕ್ತಾ ಇದ್ದೆ. ಎನೂ ಅಂಥಾ achievements /ಸಾಧನೆ ಕಾಣಿಸ್ಲಿಲ್ಲ. ಸಾಮಾನ್ಯ ಜೀವನ, ತೃಪ್ತಿದಾಯಕ ಜೀವನ ಅಷ್ಟೆಯೇ? ಅನ್ನಿಸ್ತು. ಪ್ರತಿ ದಿನ ಒನ್ನೊಂದು ಥರ – ವಿವಿಧ ಅಭಿರುಚಿಯ, ಮಧುರ, ಆಹ್ಲಾದಕರ ಕ್ಷಣಗಳು, ಯಾವುದೋ ಕೆಲಸ ಪೂರ್ಣಗೊಳಿಸಿ ಕಂಡ ಸಾಫಲ್ಯತೆ, ಅಹಿತಕರ, ಮನಸ್ತಾಪ ತರುವ ಘಟನೆಗಳು, ಅಪೂರ್ವ ಅನ್ನಬಹುದಾದ ಹಾಗೆಯೇ ನೀರಸ ಬೇಸರ ತ್ರಾಸದಾಯಕ ಸಮಯಗಳು, ಹೀಗೆ ಎಲ್ಲ ದಿನಗಳೂ ಬಂದು ಹೋದವಲ್ಲವೇ? ಅನ್ನಿಸ್ತು.
ಸುಮ್ನೇ, ಜೀವನ ಅಂದ್ರೆ ಏನು, ನನ್ನ ಜೀವನಯಾತ್ರೆ, ಆಗು ಹೋಗುಗಳು ಏನು ಅಂತಾ ಯೋಚನಾ ಲಹರಿ ಶುರುವಾಯ್ತು. ಸ್ಮರಣೀಯ ಕ್ಷಣಗಳು, ನೋವು ನಲಿವಿನ ಕ್ಷಣಗಳು – ಇವುಗಳ ದೊಡ್ಡ ಮೊತ್ತವೇ ಜೀವನ ಅಂತ ಮನಸ್ಸು ಹೇಳ್ತಿತ್ತು.
ನೋವಿನ ಕ್ಷಣಗಳು, ಮಾಡಿದ, ಕೆಲವು ಸಂದರ್ಭಗಳಲ್ಲಿ ಮಾಡಲೇ ಬೇಕಾದ, ಮಾಡಿಸಿದ ತಪ್ಪುಗಳು ನಮ್ಮ ಜೀವನವಿಡೀ ಎಷ್ಟು ಕಾಡುತ್ತವಲ್ವಾ ! ಸ್ಮರಣೀಯ ಕ್ಷಣಗಳು, ನಲಿವಿನ ಕ್ಷಣಗಳ ನೆನಪಾದರೋ ನಮ್ಮ ಜೀವನ ಸಂಜೆಯಲ್ಲಿ ಎಷ್ಟೊಂದು ಸುಖ, ನೆಮ್ಮದಿಯನ್ನು, ಆನಂದವನ್ನು ಕೊಡುತ್ತವೆ. ನಮ್ಮ ಜೀವನ ಯಾತ್ರೆಯಲ್ಲಿ ತಪ್ಪನ್ನೇ ಮಾಡದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಆಲ್ವಾ ಅನ್ನಿಸ್ತು. ಅದನ್ನು ಸಾಧಿಸಿಕೊಂಡವರು ಧನ್ಯರೇ ಸರಿ.
ನಮ್ಮ ನಡವಳಿಕೆ, ಧೋರಣೆಗಳು ಎಷ್ಟೊಂದು ಜನರಿಗೆ ನೋವನ್ನು ಕೊಟ್ಟಿರಬಹುದು – ಅಯ್ಯೋ, ಈಗ ನೆನಪಿಸಿಕೊಂಡ್ರೆ ಏನು ಪ್ರಯೋಜನ!!
ನಮ್ಮ ಶಂಕ್ರಯ್ಯ ಮೇಷ್ಟ್ರು, ನಾವು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಹೇಳ್ತಿದ್ದದ್ದು –
“ಲೆಕ್ಕ ತಪ್ಪು ಮಾಡ್ತೀರ ಪರ್ವಾಗಿಲ್ಲ, ತಿದ್ದಿಕೊಂಡು ಸರಿಯಾಗಿ ಮಾಡೋದನ್ನ ಕಲಿತುಕೊಳ್ಳಿ, ಮತ್ತೆ ತಪ್ಪಾಗದ ಹಾಗೆ ನೋಡ್ಕೊಳ್ಳಿ, ಜೀವನದಲ್ಲೂ ಅಷ್ಟೇ ತಪ್ಪಾಗುತ್ತೆ ತಿದ್ದಿ ಕೊಂಡು, ಮತ್ತೆ ತಪ್ಪಾಗದ ಹಾಗೆ ನಡೀ ಬೇಕು”. – ಆಗ ಏನೂ ಅರ್ಥವೇ ಆಗ್ತಿರಲಿಲ್ಲ. ಈಗ ನೆನಪುಗಳು ಕಾಡುತ್ತವೆ.
ನನ್ನ ಜೀವನಕ್ರಮ, ಬದುಕು ಅನ್ನಿ ಬದಲಿಸಿಕೊಳ್ಳ ಬಹುದಾಗಿತ್ತೇ ಅಂತ ಮನಸ್ಸು ಗುಣು ಗುಣಿಸ್ತಿತ್ತು. ಅದೇ ಮನಸ್ಸು ನಮ್ಮ ಜೀವನ ಬದುಕು ರೂಪಿಸಿಕೊಳ್ಳುವ ದಾರಿ ಎರಡು ಮಾತ್ರ ಅಲ್ಲವೇ?
ಬದುಕನ್ನು ಬಂದಹಾಗೆಯೇ ಸ್ವೀಕರಿಸುತ್ತಾ ತೃಪ್ತಿ ಕಂಡುಕೊಳ್ಳುವುದು ಅಥವಾ ಬದುಕನ್ನು ತಿದ್ದಿ ತೀಡಿ ಭವಿಷ್ಯವನ್ನು ರೂಪಿಸಿಕೊಳ್ಳುವುದು.
ತಮ್ಮ ಬದುಕು ಭವಿಷ್ಯವನ್ನು ರೂಪಿಸಿಕೊಂಡವರು ಧನ್ಯರೇ ಸರಿ. ನನಗಂತೂ ಅದು ಪೂರ್ಣ ಸಾಧ್ಯವಾಗಲೇ ಇಲ್ಲ. ಪ್ರಯತ್ನ ಪಟ್ಟಿದ್ದಂತೂ ನಿಜ. ಜೀವನದಲ್ಲಿ ಸವಾಲುಗಳದೆಷ್ಟು – ಕೆಲವು ಸಮಸ್ಯೆಗಳು ಸ್ಪರ್ಧಾತ್ಮಕವಾಗಿ ಕಂಡರೆ ಕೆಲವು ಅಡಚಣೆಗಳೋ ವಿಧ್ವಂಸಕಾರಕವೇನೋ ಅನ್ನಿಸುವಂತಿರುತ್ತದೆಯಲ್ಲವೇ?.
ಬಂದು ಹೋದ ಅನಿರೀಕ್ಷಿತ, ವಿಚಿತ್ರ ತಿರುವುಗಳು, ಎಡವಿದ್ದು, ಮುಗ್ಗರಿಸಿದ್ದೆಷ್ಟುಸಲವೋ, ಏನನ್ನೂ ಎದುರಿಸಬಲ್ಲೆ ಎಂದು ಬೀಗುತ್ತಿದ್ದ ನಾನು ಏನೂ ಇಲ್ಲದ ಅಸಹಾಯಕನಂತಾಗಿ ಸಮಚಿತ್ತತೆ ಕಳೆದುಕೊಂಡು ನನ್ನನ್ನು ನಾನೇ ದೂರಿಕೊಂಡಿದ್ದೆಷ್ಟುಸಲವೋ?!
ಯಾರೋ ಪುಣ್ಯಾತ್ಮರು ಹೇಳಿದಾರೆ – “Challenges should get our best performance. We need to master the art of enjoying challenges. ” challenges should get our best performance. ನನಗೆ ಇದು ಕೂಡಿಬರಲಿಲ್ಲವೇನೋ ಅನ್ನಿಸುತ್ತೆ. ಯುವ ಪೀಳಿಗೆ ಇದನ್ನ follow ಮಾಡ್ಬಹುದೇನೋ?.
ಮನಸ್ಸು ಮತ್ತೆ ಇನ್ನೇನನ್ನೋ ಹೇಳಕ್ಕೆ ಶುರು ಮಾಡ್ತು – ಭೂತಕಾಲ, ಭವಿಷ್ಯದ್ಗಾಲಗಳನ್ನ ಮರೆತು ಬಿಡು. ಬರೀ ವರ್ತಮಾನದಲ್ಲಿ ಜೀವಿಸುವುದನ್ನ ಕಲಿ. ಆಗಿದ್ದು ಆಗಿ ಹೋಯ್ತು. ಭವಿಷ್ಯ ಯಾರಿಗೂ ಗೊತ್ತಿಲ್ಲ ಅಲ್ವೇ? – ಅಂತ ಗೊಣಗ್ತಿತ್ತು.
ಮತ್ತೆ, ಅದೇ ಮನಸ್ಸು ಅದು ಹೇಗೆ ಸಾಧ್ಯ ? ಭೂತ ಕಾಲದಲ್ಲಿ ಜೀವಿಸಿದ್ವಿ, ವರ್ತಮಾನದಲ್ಲಿದ್ದೇವೆ, ಭವಿಷ್ಯದಲ್ಲೂ ಇರಬಹುದು. ನೋವು ನಲಿವಿನ, ತಪ್ಪು ನೆಪ್ಪುಗಳೆಲ್ಲವೂ ನಾವು ಮಾಡಿದ್ದೇ ಅಲ್ಲವೇ?. ಅವು, ನಮ್ಮನ್ನು ಬಿಟ್ಟು ಹೋಗುವುದುಂಟೇ ?. ನೋವಿನ, ಕಷ್ಟಗಳ, ಮಾಡಿದ ತಪ್ಪುಗಳನ್ನೆಲ್ಲಾ ಮರೆತು, ನಲಿವಿನ, ಸುಖದ ಕ್ಷಣಗಳ ನೆನಪಲ್ಲೇ ಜಿವಿಸಲು ಸಾಧ್ಯವೇ ಅಂತ ಕೇಳಕ್ಕೆ ಶುರು ಮಾಡ್ತು. ಉತ್ತರ ಯಾರಲ್ಲಿದೆ.
ಹಿಂದೆ ಮಾಡಿರ ಬಹುದಾದ, ಮಾಡಲೇ ಬೇಕಾಗಿ ಬಂದ, ಮಾಡಿಸಲ್ಪಟ್ಟ ಎಲ್ಲ ತಪ್ಪುಗಳನ್ನೂ, ಈಗಲಾದರೂ, ತಿದ್ದಿಕೊಂಡು ಮುನ್ನಡೆಯುವುದರಲ್ಲಿ ಜಾಣ್ಮೆಯಿದೆ ಅಂತ ಅದೇ ಮನಸ್ಸು ಸಮಾಧಾನ ಬೇರೆ ಹೇಳಕ್ಕೆ ಶುರು ಮಾಡ್ತು. ಹೌದಲ್ವೇ ಅನ್ನಿಸ್ತು. ಹಾಗೇ ನನ್ನ ಮಾಮೂಲಿ slogan ಜ್ಞಾಪಕಕ್ಕೆ ಬಂದು ಮನಸ್ಸಿನಲ್ಲಿ ಹಾದು ಹೋಯ್ತು – ” ಹಿಂದಿಂದಕ್ಕೆ ಹೋಗಲಾಗದು, ಕಳೆದು ಹೋದ ದಿನಗಳು ಮರಳಿ ಬರಲಾರವು. ಮುಂದಿನ ದಿನಗಳನ್ನು ಜೋಪಾನ ಮಾಡೋಣ. ಚೆನ್ನಾಗಿ ಬಾಳಲು ಕಲಿಯೋಣ. ಮುನ್ನಡೆಯೋಣ”.
ಹಾಗೆಯೇ Richard Carlson ನ ಕೆಲವು Quotes ಜ್ಞಾಪಿಸಿಕೊಳ್ತಾ ಶುಭಕೋರಿದ, ಎಲ್ಲರಿಗೂ ಅಭಿನಂದಿಸುತ್ತೇನೆ.
Happiness ! It is something that all of us want, but that few of us ever achieve”. ( – many never achieve)
Happiness is characterized by feelings of gratitude, inner peace, satisfaction and affection for ourselves and others.
Contentment is the foundation to a fulfilling life. . . . without contentment, life can be BATTLEGROUND ,
. . . . our minds are very powerful tools that can work FOR US or AGAINST US at any given moment.
ರಾಮಮೂರ್ತಿ,
ಭದ್ರಾವತಿ.