Lord SriRama, Role Model for Humanity

On April 02, 2020, we celebrated SriRama Navami festival, which is the birthday of Lord SriRama.

As per our Hindu mythology, SriRama is the seventh Avathar or incarnation of Lord Vishnu and this was during Thretha Yuga. In one of my earlier blogs, I had written about the lessons we can learn from Lord SriRama and adopt those in our life.

SriRama is called the ‘Maryaada Purushotthama’ (the Ideal / Perfect Man). He is the personification of Composure, Compassion, Commitment, and Courage. His life can be viewed as a case-study of Challenge-Management.

Listen to the melodious and soulful Ram Bhajan by SooryaGayathri on YouTube.

On this auspicious occasion of SriRama Navami, Sri. RamaMurthy has written a nice article on the significance of this festival and the great epic Ramayana.

ಶ್ರೀರಾಮಚಂದ್ರಾಯ ನಮಃ ||

ನಿಮ್ಮೆಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು.

ಇಂದು, ರಾಮ ನವಮಿ ಶ್ರೀ ರಾಮನು ಹುಟ್ಟಿದ ದಿನ. ಹಿಂದೂ ಸಂಪ್ರದಾಯದಲ್ಲಿ ಶ್ರೀ ರಾಮನನ್ನು, ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ.

ವಾಲ್ಮೀಕಿ ವಿರಚಿತ ಆದಿ ಕಾವ್ಯ ರಾಮಾಯಣದಲ್ಲಿ 27,000 ಶ್ಲೋಕಗಳನ್ನೊಳಗೊಂಡ 7ಕಾಂಡಗಳಿವೆ.

ಶುದ್ಧಬ್ರಹ್ಮ ಪರಾತ್ಪರ ರಾಮ I ಕಾಲಾತ್ಮಕ ಪರಮೇಶ್ವರ ರಾಮ, ಶ್ರೀಮದಯೋಧ್ಯಾನಂದಕ ರಾಮ II (ಬಾಲ ಕಾಂಡ) . . . . ಆಗತ ಮುನಿಗಣ ಸಂಸ್ತುತ ರಾಮ I ವಿಶೃತದಶಕಂಠೋದ್ಭವ ರಾಮ II ರಘುಪತಿ ರಾಘವ ರಾಜಾರಾಮ . . . (ಉತ್ತರಕಾಂಡ)

ಎಲ್ಲರೂ ಕೇಳಿರಬಹುದಾದ ಸಂಕ್ಷಿಪ್ತ ರಾಮಾಯಣ / ರಾಮಕಥಾ ಸ್ತೋತ್ರ ಕಥಾ. ಇದು 7ಶ್ಲೋಕಗಳನ್ನು ಮಾತ್ರ ಹೊಂದಿದ್ದರೂ, ಏಳೂ ಕಾಂಡಗಳನ್ನೂ ನೆನಪಿಗೆ ತರುವಂತಹ ಸುಲಲಿತ, ಸುಂದರ ಶ್ಲೋಕಗಳು. [ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿoಧಾಕಾಂಡ, ಸುಂದರಕಾಂಡ, ಯುದ್ಧ ಕಾಂಡ, ಉತ್ತರಕಾಂಡ ].

ಹಿಂದೆಲ್ಲಾ ಇದನ್ನು ಮನೆ ಮಂದಿರಗಳಲ್ಲಿ ಸಾಮೂಹಿಕವಾಗಿಯೋ ಅಥವಾ ಪೂಜಾ ನಂತರ ಎಲ್ಲರೂ ಹೇಳಿಕೊಳ್ಳುತ್ತಿದ್ದೆವು. ಇನ್ನು, ನಮ್ಮ ಅಜ್ಜಿಯಂದಿರು, ಸಾಯಂಕಾಲ ದೇವರ ದೀಪ ಹಚ್ಚಿದ ನಂತರ ಇದನ್ನು ಹೇಳದೇ ಇರುತ್ತರಲಿಲ್ಲ. ಇದು ಈಗ, ಕೆಲವರ ಮನೆಯಲ್ಲಾದರೂ ಇರಬಹುದಾದ ಒಂದು ಶಿಷ್ಟ ನಡವಳಿಕೆ. ಹೆಚ್ಚಿನವರ ಮನೆಯಲ್ಲಿ ಮರೆತೇ ಹೋಗಿರಬಹುದು. ಇರಲಿ – ಶ್ರೀ ರಾಮನವಮಿಯ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೂಣ.

ಹಿಂದೆ, ಎಂದರೆ ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ‘ಕಾಪಿ ರೈಟ್ ‘- ಅಂತ ಅಕ್ಷರ ತಿದ್ದಿಕೊಳ್ಳಲು, ಗುಂಡಾಗಿಸಿಕೊಳ್ಳಲು ಬರೆಯಲು ಹೇಳುತ್ತಿದ್ದರು. ಆಗಿನ ಕಾಪಿ ಪುಸ್ತಕದಲ್ಲಿ ಮೇಲಿನ ಸಂಕ್ಷಿಪ್ತ ರಾಮಾಯಣದ ಪೂರ್ಣ ಪಾಠ ವಿರುತ್ತಿತ್ತು. ಕಾಗುಣಿತದ ಹೆಚ್ಚಿನ ಅಕ್ಷರಗಳನ್ನು ಇದು ಒಳಗೊಂಡಿರುವುದೂ ಒಂದು ವಿಶೇಷ.

ನಮ್ಮ ಭಾಸ್ಕರ ಹೇಳುವಂತೆ limited edition ಗಳಾದ ನಾವುಗಳು, ಅಂದರೆ, 1940 – 50 ರ ಆಜುಬಾಜಿನವರು ಏನಿದ್ದೀವಿ, ಅವರಿಗೆಲ್ಲಾ, ಇದು ಗೊತ್ತಿರಬಹುದು.

ಅಲ್ಲದೇ, 2ನೇ ತರಗತಿಯ ಮೊದಲ ಪಾಠ – ಇದು ರಾಮ ದೇವರ ಗುಡಿ ಎಂಬುದಾಗಿತ್ತು. ಅಲ್ಲದೇ ವಾರಕ್ಕೆ 2 period ನೀತಿ ಪಾಠ / moral ಇರ್ತಿತ್ತು. ಆಗೆಲ್ಲಾ ನೀತಿಕಥೆಗಳನ್ನೂ, ಅಲ್ಲದೇ ಸಂದರ್ಭಾನುಸಾರ ರಾಮನವಮಿ, ಶಿವರಾತ್ರಿ ಸಮಯಗಳಲ್ಲಿ ಪೂರಕ ಕಥೆಗಳನ್ನೂ ಹೇಳುತ್ತಿದ್ದರು. ನಮ್ಮ ಶಂಕ್ರಯ್ಯ ಮೇಷ್ಟ್ರು – ಶುದ್ಧಬ್ರಹ್ಮ ಪರಾತ್ಪರ ರಾಮ . . . . ಸುಶ್ರಾವ್ಯವಾಗಿ ಹೇಳುತ್ತಿದ್ದ ರಲ್ಲದೆ, ನಮಗೂ ಕಲಿಸಿದ್ದರು.

ಈಗೆಲ್ಲಾ ಶಾಲಾ ಪಠ್ಯಗಳಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಇವನ್ನೆಲ್ಲಾ ಸೇರಿಸುವಂತೆಯೂ ಇಲ್ಲ. ಹೇಳಿಕೊಡುವಂತೆಯೂ ಇಲ್ಲ. ಕೋಮುವಾದ ಅಡ್ಡ ಬರುತ್ತದೆಯಂತೆ. ಈಗ, ಶ್ರೀರಾಮನ ಆದರ್ಶವೂ ಬೇಡವಾಗಿದೆಯೋ ಏನೋ ಅನ್ನಿಸುತ್ತದೆ. ಹೀಗಿರುವಾಗ ನಾವು ರಾಮ ರಾಜ್ಯ ನೋಡಲು ಸಾಧ್ಯವೇ? ಕನಸು ಕಾಣಬಹುದಷ್ಟೆ? ಮನೆಯಲ್ಲಿ ಇನ್ನು ನಾವು ಮಕ್ಕಳಿಗೆ ಹೇಳಿಕೊಟ್ಟರೆ ಉಂಟು ಇಲ್ದೇ ಇದ್ರೆ ಇಲ್ಲ. ರಾಮಾಯಣ, ಮಹಾಭಾರತ, ಭಗವದ್ಗೀತೆ ಇವೆಲ್ಲಾ ಬೇಕಾದವರು ಬೇಕಾದಾಗ ಅಷ್ಟೋ ಇಷ್ಟೋ ಅಂತರ್ಜಾಲದಲ್ಲಿ ನೋಡಿಕೊಳ್ಳಬೇಕು ಅನ್ನುವಂತಾಗಿದೆ. ಯಾಕೋ ನನಗೆ ಹೀಗೆ ಅನ್ನಿಸುತ್ತಿ ರುತ್ತದೆ. ಹೀಗಾಗ ಬಾರದು ಅನ್ನಿಸುತ್ತಲೂ ಇರುತ್ತದೆ.
ಆದರ್ಶಗಳೆಲ್ಲ ಮೈವೆತ್ತಂತಿದ್ದ ಶ್ರೀರಾಮ ಸಾರ್ವಕಾಲಿಕ ಆರಾಧ್ಯಮೂರ್ತಿ. ಮನುಷ್ಯ ಹೇಗೆ ಬಾಳಬೇಕು ಎಂಬುದಕ್ಕೆ ರಾಮ ಆದರ್ಶ. ರಾಮನಿಗೆ ಕಷ್ಟವನ್ನು ಸಹಿಸುವ ಗುಣ / ಕಷ್ಟ ಸಹಿಷ್ಣುತೆ ಕ್ಷಮಾ ಗುಣ, ಅಪಾರವಾಗಿತ್ತು. ಎಂಥ ಸಂದಿಗ್ಧ ಸ್ಥಿತಿಯಲ್ಲಿ ಕೂಡ ಅವನು ನೋವನ್ನು ನುಂಗಿಕೊಂಡು ತಾಳ್ಮೆ ವಹಿಸುತ್ತಾನೆ. ಇದು ನಮಗೆ ಸ್ಫೂರ್ತಿ.

ನಾವು ಯಾವಾಗಲೂ “ನನಗೇ ಯಾಕೆ ಇಷ್ಟು ಕಷ್ಟ’ ಎಂದು ಕೊರಗುತ್ತೇವೆ. ಆದರೆ, ರಾಮನ ಈ ಗುಣವನ್ನು ಪಾಲಿಸಿದರೆ, ಎಷ್ಟೋ ಸಮಸ್ಯೆ
ಗಳು ಇಲ್ಲವಾಗುತ್ತವೆ. ಬದುಕನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳುವುದಕ್ಕೆ ರಾಮನ ಬದುಕು ಮಹಾ ಪ್ರೇರಣೆ. ರಾಮ ನವಮಿಯ

ಈ ಸಂದರ್ಭದಲ್ಲಿ, ಶ್ರೀ ರಾಮನ ಆದರ್ಶ, ಗುಣ, ಸ್ಫೂರ್ತಿಯನ್ನು ಸ್ಮರಿಸುತ್ತಾ ನಮ್ಮ ಬದುಕನ್ನೂ ಸಕಾರಾತ್ಮಕವಾಗಿ ಪರಿವರ್ತಿಸಿ ಕೊಳ್ಳುವುದಕ್ಕೆ ಪ್ರಯತ್ನ ಪಟ್ಟರೆ ಶ್ರೀ ರಾಮ ನವಮಿ ಆಚರಣೆ ಸಾರ್ಥಕವಲ್ಲವೇ?.

ರಾಮಾಯಣ ಮಹಾಕಾವ್ಯವನ್ನು ನೀಡಿದ, ಕವಿ ಕೋಗಿಲೆ ವಾಲ್ಮೀಕಿಗೂ ಒಂದು ನಮನ ಸಲ್ಲಿ ಸೋಣ –

“ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್ | ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||”

ಹಾಗೆಯೇ ಈಸಂದರ್ಭದಲ್ಲಿ – ಆಪತ್ನಿವಾರಕನೂ, ಸರ್ವಸಂಪದವನ್ನೂ ಕೊಡತಕ್ಕವನೂ,ಲೋಕಾಭಿರಾಮನೂ ಆದ ಶ್ರೀರಾಮನಿಗೆ ಪುನಃ ಪುನಃ ನಮಸ್ಕರಿಸುತ್ತಾ ಎಲ್ಲರಿಗೂ ಶುಭವನ್ನು ಕೋರೋಣ.

ಆಪದಾದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಭೂಯೋ ಭೂಯೋ ನಮಾಮ್ಯಹಮ್ ||

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ ಸೀತಾಪತಿಂ ರಘುಕುಲಾನ್ವಯ ರತ್ನದೀಪಂ |
ಆಜಾನುಬಾಹುಮರವಿಂದ ದಳಾಯತಾಕ್ಷo ರಾಮಂ ನಿಶಾಚರವಿನಾಶಕರಂ ನಮಾಮಿ ||

ಶ್ರೀರಾಮಚಂದ್ರಾಯ ನಮಃ II

ರತ್ನಾ, ರಾಮಮೂರ್ತಿ,

-==ooOoo==-

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s