BhagavadGita’s Solution for Confusion

Confusion is a symptom / state of emotion that makes one feel as if he / she cannot think clearly or not capable of taking decisions. (NOTE: This blog post is part of a series; please refer to BhagavadGita, The Solution Provider to access the complete series.)

Over-analysis / overthinking / self-doubt often lead to this state.

The following blog post goes over the Shlokas / verses of Bhagavad Gita that shed light on confusion and how to get over it.


ಶ್ಲೋಕ ಎರಡನೇ ಅಧ್ಯಾಯ – ಸಾಂಖ್ಯ ಯೋಗಕ್ಕೆ ಸಂಬಂಧ ಪಟ್ಟಿದ್ದು. ಸಾಂಖ್ಯ ಅಂದ್ರೆ ಜ್ಞಾನ. ಇದು ಎರಡನೇ ದೊಡ್ಡ ಅಧ್ಯಾಯ, 72ಶ್ಲೋಕಗಳಿವೆ.

ಅಧ್ಯಾಯ – ೨ ಶ್ಲೋ. ೭.
“ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾ ಧರ್ಮಸಮ್ಮೂಢಚೇತಾಃ ।

ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಮ್ ಪ್ರಪನ್ನಮ್ “

कार्पण्यदोषोपहतस्वभाव:
पृच्छामि त्वां धर्मसम्मूढचेता: |
यच्छ्रेय: स्यान्निश्चितं ब्रूहि तन्मे
शिष्यस्तेऽहं शाधि मां त्वां प्रपन्नम् || 2.7||

kārpaṇya-doṣhopahata-svabhāvaḥ
pṛichchhāmi tvāṁ dharma-sammūḍha-chetāḥ
yach-chhreyaḥ syānniśhchitaṁ brūhi tanme
śhiṣhyaste ’haṁ śhādhi māṁ tvāṁ prapannam || 2.7||

Confusion ಅನ್ನಿ ಗೊಂದಲ, ದ್ವಂಧ್ವ ಅನ್ನಿ, ಇದು ನಮ್ಮ ದಿನ ನಿತ್ಯದ ಪರಿಪಾಟಲು. ಸಣ್ಣಪುಟ್ಟ ಗೊಂದಲಗಳು ಬರ್ತಿರುತ್ತೆ ಹೋಗ್ತಿರುತ್ತೆ. ಕೆಲವೊಮ್ಮೆ ಯಾವ್ದೋ ಮುಖ್ಯ ಕೆಲಸ ಕಾರ್ಯಗಳ ವಿಷಯದ ಬಗ್ಗೆ ಬಂದಾಗ, ಒಂದು ನಿರ್ಧಾರ ತಗೋಬೇಕಾಗಿರುತ್ತೆ. ನಮ್ಮ ಮುಂದೆ ನಾಲ್ಕಾರು ಪರಿಹಾರ (solutions ), ದಾರಿ ಕಾಣಿಸ್ತಿರುತ್ತೆ. Confusion ಅನ್ನೋದು ಶುರು ಆಗುತ್ತೆ, ಮನದಲ್ಲಿ ದ್ವಂಧ್ವ ಶುರು ಆಗುತ್ತೆ. ಇದು ಸರಿನೋ ಅದು ಸರಿನೋ, ಎಲ್ಲವೂ ಸರಿ ಅನ್ನಿಸ್ತಿರುತ್ತೆ, ಆಯ್ಕೆ ಮಾತ್ರ ಗೊತ್ತಾಗಲ್ಲ. ಸ್ಪಷ್ಟತೆ, ಪರಿಹಾರ ಯಾವದರಲ್ಲು ಕಾಣಿಸ್ದ ಹಾಗೆ ಆಗ್ಬಿಡುತ್ತೆ. ಸಂದಿಗ್ಧ ಪರಿಸ್ಥಿತಿ,
ವಿವೇಚನೆಯಿಂದ ನಿರ್ಧಾರ ಮಾಡ ಬೇಕಾಗುತ್ತೆ. ಅರ್ಜುನನಿಗೂ ಆಗಿದ್ದು ಹೀಗೆ.

ಶ್ಲೋಕದ ಕಡೆ ಗಮನ ಕೊಡೋಣ. ಇದನ್ನ ಅರ್ಥ ಮಾಡ್ಕೋಳೋಕೆ ಮುಂಚೆ ಹಿಂದಿನ ಒಂದೆರಡು ಶ್ಲೋಕಗಳನ್ನ ಗಮನಿಸಲೇ ಬೇಕಾಗುತ್ತೆ. ಓದಿ ನೋಡಿ, ತುಂಬಾ ಚೆನ್ನಾಗಿದೆ. ಸ್ವಲ್ಪದರಲ್ಲಿ ಅರ್ಜುನನ ಗೊಂದಲಕ್ಕೆ ಕಾರಣ ಹೇಳ್ಬೇಕು ಅಂದ್ರೆ –
ನೋಡಿ, ಭೀಷ್ಮರ ತೊಡೆಯ ಮೇಲೆ ಆಟ ವಾಡ್ತಾ ಬೆಳೆದಿದ್ದು, ಅಪ್ರತಿಮ ಬಿಲ್ಲುಗಾರನನ್ನಾಗಿಸಿದ ಗುರು ದ್ರೋಣಾಚಾರ್ಯರು, ಕೃಪಾಚಾರ್ಯರು ಎಲ್ಲರೂ ಕಣ್ಣಮುಂದೆ ಬಂದಿರಬೇಕು, ಈಗ ಎಲ್ಲರೂ ಯುದ್ಧಭೂಮಿಯಲ್ಲಿದಾರೆ. ಅಂದ್ರೆ ಎಂಥಾ ಕಲ್ಲು ಹೃದಯವೂ ಕರಗಿ ಹೋಗುತ್ತೆ ಅಲ್ವೇ? ಜೊತೆಗೆ 18 ಅಕ್ಷೋಹಿಣಿ ಸೈನ್ಯ (ಸುಮಾರು 20 ಲಕ್ಷ) ಸೈನಿಕರು – ಇವರ ಅಳಿವುಳಿವಿನ ಪ್ರಶ್ನೆ.
ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ . . . , ಗುರೂನಹತ್ವಾ ಹಿ ಮಹಾನುಭಾವಾನ್ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ (ಶ್ಲೋ. ೪, ೫). ಅಂತ ಅರ್ಜುನನಿಗೆ ಅನ್ಸಿದ್ರೆ ತಪ್ಪಾಗಲ್ಲ ಅನ್ಸುತ್ತೆ ಅಲ್ವ. ಭೀಷ್ಮರಾದರೋ ವಂಶದ ಮೂಲಪುರುಷ, ರಾಜರ್ಷಿ, ದ್ರೋಣಾಚಾರ್ಯರು ಮಹಾನ್ ಗುರುಗಳು . . . ಇವರನ್ನೆಲ್ಲಾ ಕೊಂದು ಸಿರಿತನವನ್ನು ಅನುಭವಿಸುವುದಕ್ಕಿಂತ ಭಿಕ್ಷೆ ಬೇಡಿ ಬದುಕುವುದೇ ಲೇಸು ಅಂತ ಅರ್ಜುನ ಹೇಳ್ತಾನೆ. ಎಂಥಾ ಸಂದಿಗ್ಧ ಪರಿಸ್ಥಿತಿ.
ಇಂಥಾ ಘೋರ ಯುದ್ಧ ಬೇಕೇ, ಇದು ಅರ್ಜುನನ ಮನಸ್ಥಿತಿ.

ಆಗ, ಅರ್ಜುನ ಶ್ರೀ ಕೃಷ್ಣನಿಗೇ ಶರಣಾಗಿ (ಶ್ಲೋಕ ೭) : “ಕಾರ್ಪಣ್ಯದೋಷೋಪಹತಸ್ವಭಾವಃ . . . . ಮಾಂ ತ್ವಾಮ್ ಪ್ರಪನ್ನಮ್ ॥
ದೌರ್ಬಲ್ಯದ ದೋಷದಿಂದ ನನ್ನ ಸಹಜಕರ್ತವ್ಯಕ್ಕೆ ಮಂಕು ಕವಿದಂತಾಗಿದೆ, ಗೊಂದಲ (confusion ) ದಲ್ಲಿದ್ದೇನೆ. ಧರ್ಮದ ಬಗೆ ತಿಳಿಯುತ್ತಿಲ್ಲ. ನನಗೆ ಯಾವುದು ಶ್ರೇಯಸ್ಕರ ಹೇಳು. ನಾನು ನಿನ್ನ ಶಿಷ್ಯನಾಗಿ ಶರಣಾಗಿ ಕೇಳ್ತಿದೀನಿ” ಅಂತ ನಿವೇದಿಸಿಕೊಳ್ತಾನೆ
ಮುಂದಿನ ಶ್ಲೋಕವನ್ನೂ ಸ್ವಲ್ಪ ನೋಡೋಣ – ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್ . . . . . ಅವಾಪ್ಯ ಭೂಮಾವಸಪತ್ನಮೃದ್ಧಂ ರಾಜ್ಯಂ ಸುರಾಣಾಮಪಿ ಚಾSಧಿಪತ್ಯಮ್ ॥೮॥
ಈ ಶ್ಲೋಕವಂತೂ ನಮ್ಮ ಮನವನ್ನೇ ಕಲಕುವಂತಿದೆ. – ನನ್ನ ಇಂದ್ರಿಯಗಳನ್ನು ಕುಗ್ಗಿಸುತ್ತಿರುವ ನನ್ನ ಈ ದುಗುಡವನ್ನು ದೂರೀಕರಿಸಬಲ್ಲ ದಾರಿಯನ್ನೇ ಕಾಣದವನಾಗಿದ್ದೇನೆ. ಈ ಸಮೃದ್ಧವಾದ ಭೂಮಂಡಲದ ಒಡೆತನ ಸಿಕ್ಕರೂ, ದೇವಲೋಕದ ಅಧಿಪತ್ಯ ಸಿಕ್ಕರೂ – (ಬಂಧು ಬಾಂಧವರಾದಿಯಾಗಿ ಎಲ್ಲರನ್ನೂ ಕೊಂದು ) ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ” ಎನ್ನುತ್ತಾನೆ ಅರ್ಜುನ.
ಮನಸ್ಸಿನಲ್ಲಿ ಗೊಂದಲ Confusion ಶುರು ವಾಗ್ದಲೇ ಇರುತ್ತಾ.
ಶ್ರೀ ಕೃಷ್ಣನ ಉತ್ತರವಾದರೋ, ಸುಮಾರು ೪೨ ಶ್ಲೋಕಗಳಲ್ಲಿವೆ. ಅಲ್ದೇ ‘ಸ್ಥಿತಪ್ರಜ್ಞ’ ತೆಯ ಬಗ್ಗೆ ಕೊನೆಯ ೧೮ ಶ್ಲೋಕಗಳು.

ಉತ್ತರ ರೂಪವಾಗಿ, ಇಲ್ಲಿ ಯಾವುದೇ ಒಂದು ಶ್ಲೋಕವನ್ನು ಅರ್ಥೈಸಿಕೊಳ್ಳಲು ಆಗೋಲ್ಲ. ನಮ್ಮ ಸಮಸ್ಯೆಗೆ ಪೂರಕವಾಗಿ, ನಮಗೆ, ಯಾವುದೇ ತರಹದ ಗೊಂದಲ, ದ್ವಂಧ್ವ ಬಂದಲ್ಲಿ,, ಆ ಸಮಸ್ಯೆಗೆ ಪೂರಕವಾದ ಪರಿಹಾರ ಈ ಅಧ್ಯಾಯ ಓದಿದರೆ ಖಂಡಿತಾ ಸಿಗುತ್ತೆ ಎಲ್ಲರೂ ಅರ್ಥೈಸಿಕೊಳ್ಳುತ್ತಾ ಓದಲೇ ಬೇಕಾದ ಶ್ಲೋಕಗಳು.

CONFUSION .
ಅಧ್ಯಾಯ – ೩ ಶ್ಲೋ. ೨.

“ವ್ಯಾಮಿಶ್ರೇಣ್ಯೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ । ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಹಮಾಪ್ನುಯಾಮ್” ॥೩.೨॥

व्यामिश्रेणेव वाक्येन बुद्धिं मोहयसीव मे |
तदेकं वद निश्चित्य येन श्रेयोऽहमाप्नुयाम् || 3.2||

vyāmiśhreṇeva vākyena buddhiṁ mohayasīva me
tad ekaṁ vada niśhchitya yena śhreyo ’ham āpnuyām || 3.2||

ಈ ಶ್ಲೋಕಾನ ಅರ್ಥ ಮಾಡ್ಕೋಬೇಕಾದ್ರೆ, ಮೊದಲನೇ ಶ್ಲೋಕಾನಾ ಗಮನಿಸ್ಲೇ ಬೇಕಾಗುತ್ತೆ. ಇಲ್ದೆ ಇದ್ರೆ ಅರ್ಜುನನ ದ್ವಂಧ್ವ (confusion ) ಯಾಕಾಯ್ತು ಅನ್ನೋದು ಗೊತ್ತಾಗೋದೇ ಇಲ್ಲ. ಹಾಗೆಯೇ ಎರಡನೇ ಅಧ್ಯಾಯಾನ ಜ್ಞಾಪಿಸಕೊಳ್ಲೇ ಬೇಕಾಗುತ್ತೆ. ಅದರಲ್ಲಿ, ಶ್ರೀ ಕೃಷ್ಣ, ಜ್ಞಾನದ ಬಗ್ಗೆ, ಜ್ಞಾನ ಮಾರ್ಗದ ಬಗ್ಗೆ ಹೇಳಿ, ಕರ್ಮ ಮಾರ್ಗಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಅಂತೆಲ್ಲಾ ಹೇಳಿದಾನೆ. ಹಾಗೆಯೇ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಅಂತಾನೂ ಹೇಳ್ತಿರ್ತಾನೆ.
ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಯಾಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ ಯುದ್ಧ?. – ಇದು ಅವನ ಸಮಸ್ಯೆಯೂ, ಗೊಂದಲವೂ ಹೌದು, ಅವನ ಈ ದ್ವಂಧ್ವ ಸರಿನೇ ಅಲ್ವ.

ಮೂರನೇ ಅಧ್ಯಾಯ ಶುರು ಆಗೋದೇ ಅರ್ಜುನನ ಈ ಪ್ರಶ್ನೆಯೊಂದಿಗೆ, – ಜ್ಯಾಯಸೀ ಚೇತ್ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ । ತತ್ ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ॥೧॥ – ಅಂತ ಹೇಳ್ತಾ, ತನ್ನ ಗೊಂದಲವನ್ನು ತಿಳಿಸ್ತಾ, ನಿನ್ನ ಅಭಿಪ್ರಾಯ ನನಗೆ ಗ್ರಹಿಸಲಾಗ್ತಾ ಇಲ್ಲ, ನಾನು ಯಾವ ದಾರಿಯಲ್ಲಿ ನಡೆಯಬೇಕೆಂಬ ನಿಶ್ಚಿತ ದಾರಿಯನ್ನು ನೀನೇ ನಿರ್ಧರಿಸಿ ಹೇಳು ಅಂತ ಕೇಳಿಕೊಳ್ತಾನೆ.

(ವ್ಯಾಮಿಶ್ರೇಣ’ ಅಂದ್ರೆ ವಿರೋಧಾಭಾಸ(Contradicting/ Confusing ಅಂತ ).

ಶ್ರೀ ಕೃಷ್ಣನ ಉತ್ತರ – ಕರ್ಮ ಮಾರ್ಗ ಜ್ಞಾನ ಮಾರ್ಗ ಒಂದಕ್ಕೊಂದು ವಿರೋಧ ಮಾರ್ಗಗಳಲ್ಲ, ಒಂದಕ್ಕೊಂದು ಪೂರಕ. ಕರ್ಮ ಮಾರ್ಗದಿಂದ ಜ್ಞಾನ, ಅಂತ‌ ಹೇಳ್ತಾ ಕರ್ಮ ಮಾರ್ಗ ಹೇಗಿರಬೇಕು ಅಂತ ವಿವರಣೆ ಕೊಡ್ತಾ ಹೋಗ್ತಾನೆ. ಹಾಗೆಯೇ ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ . . . . ಅಂತ ಹೇಳ್ತಾ, ನೀನು ಮಾಡುವ ಕರ್ಮಗಳನ್ನೆಲ್ಲಾ ನನಗೆ ಅರ್ಪಿಸಿ, ಮನಸ್ಸಿನ ವಿಕಾರಗಳನ್ನು ಬಿಟ್ಟು, ಮನಸ್ಸನ್ನು ನನ್ನಲ್ಲಿ ಅರ್ಪಿಸಿ, ಮಮಕಾರ ತೊರೆದು, ಛಳಿಬಿಟ್ಟು ಯುದ್ಧ ಮಾಡು ಅಂತ ಒಪ್ಪಿಸ್ತಾ ಹೋಗ್ತಾನೆ.

ಈ ತರಹದ ಸಮಸ್ಯೆ ಗೊಂದಲ ನಮ್ಮಲ್ಲು ಬರಬಹುದಾದದ್ದು, ಪರಿಹಾರ ಈ ಅಧ್ಯಾಯ ಪೂರಾ ಓದ್ಬೇಕು, ಅರ್ಥ ಮಾಡ್ಕೋ ಬೇಕು. ಈ ಅಧ್ಯಾಯದ ಸಂಕ್ಷಿಪ್ತ ಸಾರಾಂಶ – “ನಾವು ಏನನ್ನು ಮಾಡಿದರೂ ತಿಳಿದು, ಜ್ಞಾನಪೂರ್ವಕವಾಗಿ ಮಾಡಿದ ಯಾವುದೇ ಕೆಲಸ ಸಫಲವಾಗುತ್ತೆ. .ಇಲ್ದಿದ್ರೆ ಅದು ವ್ಯರ್ಥ”. ಮಾಡುವ ಕೆಲಸ ಏತಕ್ಕಾಗಿ ಮಾಡುತ್ತಿದ್ದೇವೆ, ಮಾಡುವುದರ ಫಲವೇನು, ಮಾಡುವುದು ಹೇಗೆ-ಎನ್ನುವುದು ಗೊತ್ತಿರಬೇಕು, ಅದು ಜ್ಞಾನ.


ಅಧ್ಯಾಯ – ೧೮,ಶ್ಲೋ. ೬೧. 18ನೇ ಅಧ್ಯಾಯ – ಎಲ್ಲಾ ಅಧ್ಯಾಯಗಳ ಸಾರ ರೂಪ ಅಂತಲೇ ಹೇಳ್ತಾರೆ. *ಆವಾಗೀವಾಗ ಓದ್ತಿದ್ರೆ ಮನಸ್ಸಿಗೆ ಪ್ರಸನ್ನತೆ ಕೊಡುತ್ತೆ.

ಈಶ್ವರಃ ಸರ್ವಭೂತಾನಾಂ ಹೃದ್ದೇಶೇSರ್ಜುನ ತಿಷ್ಠತಿ । ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ “॥೧೮.೬೧॥

ईश्वर: सर्वभूतानां हृद्देशेऽर्जुन तिष्ठति |
भ्रामयन्सर्वभूतानि यन्त्रारूढानि मायया || 18.61||

īśhvaraḥ sarva-bhūtānāṁ hṛid-deśhe ‘rjuna tiṣhṭhati
bhrāmayan sarva-bhūtāni yantrārūḍhāni māyayā || 18.61||

ನಾವು ಯಾವಾಗ್ಲೂ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಯೋಚಿಸ್ತಿರ್ತೀವಿ. ಆದ್ರೆ, ಅದು ಒನ್ನೊಂದ್ಸಲ ಹಾಗೆ ಆಗೋದೇ ಇಲ್ಲ. ಬೇಜಾರೂ ಆಗ್ಬಹುದು – ಆಗ ನಮಗೆ ಅನ್ಸೋದು, ಏನೋ ಒಂದು – ಭಗವಂತನ ಇಚ್ಚೆ ಅನ್ಕೋತೀವಿ.

ಅದನ್ನೇ, ಶ್ರೀ ಕೃಷ್ಣ ಹೇಳ್ತಾನೆ –
ಈಶ್ವರಃ ಸರ್ವಭೂತಾನಾಂ . . . . ಯಂತ್ರಾರೂಢಾನಿ ಮಾಯಯಾ॥೧೮.೬೧॥
ಅರ್ಜುನಾ, ಎಲ್ಲಾ ಜೀವಿಗಳಲ್ಲಿ ಸರ್ವಶಕ್ತನಾದ ಈಶ್ವರ ನೆಲೆಸಿದ್ದಾನೆ – ಸುತ್ತುವ ಜಗದ್ ಯಂತ್ರದಲ್ಲಿ (giantwheel ನಲ್ಲಿ ಕೂತಂತೆ ಭಾವಿಸಿಕೊಳ್ಳಿ) ಕೂತ ಎಲ್ಲಾ ಜೀವಿಗಳನ್ನೂ ಪ್ರಕೃತಿಯ ಮಾಯೆಯಿಂದ [ತನ್ನ ಇಚ್ಛೆಯಿಂದ] ತಿರುಗಿಸುತ್ತಾ, ನಿಯಂತ್ರಿಸ್ತಾನೆ.
( ನಾವು ಒಮ್ಮೆ giant-wheel ನಲ್ಲಿ ಕೂತ್ವಿ ಅಂದ್ರೆ, ಯಾವುದೇ control ನಮಗೆ ಇರಲ್ಲ. giant-wheel ಜಗತ್ತು, operator ಪರಮಾತ್ಮ – ಅವ್ನು ಹತ್ತು ಅಂದಾಗ ಹತ್ಬೇಕು, ಇಳೀ ಅಂದಾಗ ಇಳೀ ಬೇಕು).,

ಅರ್ಜುನನ ದ್ವಂಧ್ವ, ಗೊಂದಲಕ್ಕೆ ಉತ್ತರ ರೂಪವಾಗಿ ಭಗವಂತ, ಹೇಳಿದ ಈ ಶ್ಲೋಕ ನಮ್ಗೂ ಅನ್ವಯವಾಗುತ್ತೆ ಆಲ್ವಾ.

ನಾವು ಮಾಡುವ ಯಾವುದೇ ಕಾರ್ಯ ಸಿದ್ಧಿಗೆ ಐದು ಕಾರಣರೂಪ ಈ ಅಧ್ಯಾಯದಲ್ಲಿ ಹೇಳಿದೆ. ೧. ಅಧಿಷ್ಠಾನ (ನಮ್ಮ ಶರೀರವೇ ಮಾಡುವ ಸ್ಥಳ), ೨. ಕರ್ತಾ ( ಮಾಡುವವನು – ನಮ್ಮೊಳಗಿನ ಆತ್ಮ), ೩. ಕಾರಣಗಳು (ನಮ್ಮ ಇಂದ್ರಿಯಗಳು) ೪. ಚೇಷ್ಟಾ (ವಿಧಾನ, ರೂಪ ರೇಷೆಗಳು, ಉಪಕರಣಗಳು), ೫. ದೈವಂ (ಭಗವಂತನ ಅನುಗ್ರಹ, ಅದೃಷ್ಟ ಅನ್ನಬಹುದು).

ಇದನ್ನು ಮಾಡಲು ಮೂರು ಪ್ರೇರಣೆಗಳು – ಜ್ಞಾನ (ಮಾಡಬೇಕೆಂಬ ಅರಿವು ), ಙ್ಞೇಯಂ (ಅರಿತು ಮಾಡುವಂತಹದ್ದ್ದು), ಜ್ಞಾತಾ (ಜ್ಞಾನದ ಸ್ವರೂಪ) . ಮತ್ತೆ ಇವುಗಳ ತ್ರಿವಿಧ ರೂಪುರೇಷೆಗಳ ವಿವರಣೆ ಹೀಗೆ ಮುಂದುವರೆಯುತ್ತೆ. ಈ ಅಧ್ಯಾಯ ಪೂರಾ ಓದ್ತಾ ಹೋಗ್ಬೇಕು ಅಷ್ಟೇ.

ಮುಖ್ಯವಾಗಿ, ಭಗವದ್ಪ್ರೇರಣೆ, ಭಗವಂತನ ಅನುಗ್ರಹ ಇರಬೇಕೆಂಬುದು ಆಧ್ಯಾತ್ಮಿಕ ನಿಲುವು. ಆ ಭಗವಂತ ಎಲ್ಲರೊಳಗಿದ್ದು ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ ಅಂತಾ ಭಾವಿಸ್ತಾ, ನಾವು ಮಾಡುವ ಎಲ್ಲ ಕೆಲಸವೂ ಭಗವಂತನ ಇಚ್ಛೆಯಂತೆ ನಡೆಯುತ್ತೆ, ಫಲ ಭಗವಂತನ ಅನುಗ್ರಹ ಅನ್ನುವ ನಂಬಿಕೆ ನಮ್ಮಲ್ಲಿದ್ರೆ, ನಮ್ಮದಾಗಿಸಿಕೊಂಡ್ರೆ ನಾವು ಮಾಡುವ ಯಾವುದೇ ಕೆಲಸದಲ್ಲಿ ಮನಸ್ಸಿನ ಗೊಂದಲ, ದ್ವಂಧ್ವ ದೂರವಾಗಬಹುದು ಹಾಗೆಯೇ ಫಲ ಸಿಗಲೀ, ಸಿಗ್ದೆ ಇರ್ಲಿ, ಮನಸ್ಸಿಗೆ ಸಮಾಧಾನ ತಂದ್ಕೋಬಹುದು, ದುಃಖ ವಾಗೋಲ್ಲ.

ಮಂಕುತಿಮ್ಮನ ಕಗ್ಗವೊಂದನ್ನ ನೋಡೋಣ. – ಇದನ್ನ ಮೂರನೇ ಅಧ್ಯಾಯದ ಒಂದು ನೋಟ ಅಂತ ಹೇಳುವುದೂ ಇದೆ.

ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ । ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ।।
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ । ವರಗಳೀ ನಾಲ್ಕೆ ವರ – ಮಂಕುತಿಮ್ಮ ।।714 ।।

ನಮ್ಮ ಆಸೆಗಳ ಮಿತಿಯನ್ನು ಅರಿಯುವುದು, ಅತೀ ಉತ್ಸಾಹದ ಸುಖಾನುಭವವಿಲ್ಲದಿರುವುದು, ಲೋಕದಲ್ಲಿ ನಾವು ಮಾಡುವ ಕೆಲಸಕ್ಕೆ ಅತಿಯಾಗಿ ಅಂಟಿಕೊಳ್ಳದೆ ಒಂದು ವಿರಕ್ತ ಭಾವದಿಂದಿರುವುದು, ಮತ್ತು ಜೀವನದ ಪ್ರತೀ ಅನುಭವವನ್ನೂ ಪರೀಕ್ಷಿಸುತ ಅದರಲ್ಲಿನ ಸ‌ತ್ಯ‌ವ‌ನ್ನೇ ಕಂಡುಕೊಂಡು, ಅದರ ಸತ್ವವನ್ನು ಹಿಡಿದುಕೊಳ್ಳುವ ಬುದ್ಧಿಮ‌ತಿ ಆ ಪರಮಾತ್ಮ ನಮಗೆ ಕರುಣಿಸಿದ 4 ಶ್ರೇಷ್ಠ ವರಗಳು ಅಂತ DVG ಹೇಳ್ತಾರೆ.

One thought on “BhagavadGita’s Solution for Confusion

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s