BhagavadGita’s Strategies for Coping with the Inevitable

One thing that is certain as soon as we are born is our ‘death’! Yes, death is an uncomfortable and a taboo topic, but is the bitter reality of life. The very thought of death scares us; we don’t want to talk about it.

It hits us when we encounter the demise of someone close to us; we understand that we will experience the same sooner or later. At the time of final rites, we are so much grief stricken and our intellect reminds us that everything that we are doing in this material world is so futile, everyone has to die one day, goads us to lead a humble life devoted to the Almighty. As time passes, we again get immersed in our world and sometimes we feel that we are invincible too. This is called ‘Smashana Vairagya’.

So, “how to stay grounded and deal with death” is the question. BhagavadGita helps us understand the meaning of a fruitful life and what really happens when one dies. Right knowledge about these topics removes / lessens the fear about eventualities of life.

Is it easy to follow these guidelines? May be or may be not. But with undeterred practice (Abhyasa) and detachment (Vairagya), it is possible.

The powerful Maha Mrityunjaya Mantra quoted below is also known as a Moksha Mantra, this prayer is believed to help promote longevity. This mantra is addressed to Lord Shiva and can help to prevent the ill-timed death of you or your loved ones.

ॐ त्र्यम्बकं यजामहे
सुगन्धिं पुष्टिवर्धनम् ।
उर्वारुकमिव बन्धनान्
मृत्योर्मुक्षीय मामृतात् ॥
Om Try-Ambakam Yajaamahe
Sugandhim Pusstti-Vardhanam
Urvaarukam-Iva Bandhanaan
Mrtyor-Mukssiiya Maa-[A]mrtaat ||

Now, let us read the following enlightening blog by respected Sri. RamaMurthy who has nicely explained BhagavadGita’s Shlokas / verses that deal with the topic of death of the physical body (that is a mere instrument for the soul) and eternity of the Soul.

(NOTE: This blog post is part of a series; please refer to BhagavadGita, The Solution Provider to access the complete series.)

Dealing with the Death of a Loved one

ಅಧ್ಯಾಯ – 2 ಸಾಂಖ್ಯಯೋಗಃ, ಶ್ಲೋ. 13, 20, 22,25, 27.

ಎಲ್ಲವೂ ಎರಡನೇ ಅಧ್ಯಾಯ ಸಾಂಖ್ಯಯೋಗದ ಶ್ಲೋಕಗಳು. ಇದು ೭೨ ಶ್ಲೋಕಗಳನ್ನೊಳಗೊಂಡ ದೊಡ್ಡ ಅಧ್ಯಾಯ. ಇದರಲ್ಲಿ ಆತ್ಮ ಅವಿನಾಶಿ, ಬ್ರಹ್ಮನಿಗೂ ಜೀವಜಗತ್ತಿಗೂ ಇರುವ ಸಂಬಂಧ, ಕರ್ಮಕ್ಕೂ ಜ್ಞಾನಕ್ಕೂ ಇರುವ ಬೆಸುಗೆ, ಸ್ಥಿತಪ್ರಜ್ಞತೆ ಈ ಎಲ್ಲ ವಿಷಯಗಳೂ ಹಾಸು ಹೊಕ್ಕಿವೆ.

ಇವತ್ತು ಈ ಶ್ಲೋಕಗಳ ಮೇಲೆ ಗಮನಹರಿಸ್ತಾ ಕೂತ್ಕೊಂಡಿದ್ದೆ. ಪಕ್ಕದ building ನವರು Music ಜೋರಾಗಿ ಹಾಕ್ಕೊಂಡಿದ್ರು,, ಕಿರಿಕಿರಿ ಅನ್ನಿಸ್ತಿತ್ತು ಅಂತ ಕಿಟಕಿ close ಮಾಡೋಣ ಅಂತ ಹೋದೆ. ಅಷ್ಟರಲ್ಲಿ ಕನಕದಾಸರ ಕೃತಿ ಯೊಂದು ಸುಶ್ರಾವ್ಯವಾಗಿ ಶುರುವಾಯ್ತು. – ಕಿಟಕಿ ಮುಚ್ಚದೇ ಬಂದು ಎಷ್ಟು ಅರ್ಥ ಗರ್ಭಿತವಾಗಿದೆ ಅಂತ ಪೂರಾ ಕೇಳ್ತಾ ಕೂತ್ಕೊಂಡೆ.

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೋ . . . . (ಆತ್ಮ ದೇಹದೊಳಗಿದೆಯೋ, ಆತ್ಮದೊಳಗೆ ದೇಹವಿದೆಯೋ. ).

ಇಲ್ಲಿ ‘ನೀ’ ಅನ್ನೋದನ್ನ ಆತ್ಮ ಅಂತ ಅರ್ಥೈಸಿಕೊಳ್ಳ ಬೇಕು. ಪೂರಹಾಡನ್ನ ಕೇಳ್ದಾಗ, ಕನಕದಾಸರು ‘ಈಶಾವಾಸ್ಯ ಉಪನಿಷದ್’ ಓದ್ಕೊಂಡಿದ್ರೇನೋ ಅನ್ನಿಸ್ತು.

ಇದನ್ನ ಈಶಾವಾಸ್ಯಉಪನಿಷದ್ ತುಂಬಾ ಚೆನ್ನಾಗಿ ವಿವರಿಸುತ್ತೆ. ಇದನ್ನ ಯಾವಾಗಲಾದ್ರೂ ಪೂರಾ ವಿವರಣೆಯೊಂದಿಗೆ ನೋಡುವ ಪ್ರಯತ್ನ ಮಾಡೋಣ. ಒಂದು ಶ್ಲೋಕ ನನಗೆ ಇಷ್ಟವಾದದ್ದು ಮತ್ತು ಈ ಹಾಡಿಗೆ ಪೂರಕವಾದ್ದು ಅನ್ಕೊಂಡು ನಾನು ಓದ್ಕೊಂಡಂತೆ, ಅರ್ಥೈಸಿಕೊಂಡಂತೆ ಹೇಳೋಣ ಅನ್ನಿಸ್ತಿದೆ. ಕೆಲವು ವ್ಯಾಖ್ಯಾನಕಾರರು ಒಂದೊಂದು ಶ್ಲೋಕಕ್ಕೆ ಒಂದೊಂದ ಪುಸ್ತಕವನ್ನೇ ಬರ್ದಿದಾರೆ.

ಯಸ್ತು ಸರ್ವಾಣಿ ಭೂತಾನ್ಯಾತ್ಮನೇವಾನುಪಶ್ಯತಿ |
ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ||೬|| (ಈಶಾವಾಸ್ಯ ಉಪನಿಷದ್)

ಯಾವನ ದೃಷ್ಟಿಗೆ ಸರ್ವ ಭೂತಗಳಲ್ಲಿಯೂ (ಜೀವಿಗಳಲ್ಲಿಯೂ) ಆತ್ಮನೇ ಕಂಡುಬರುತ್ತಾನೋ, ಅಂತಹ ಏಕತ್ವವನ್ನು ನಿರಂತರವೂ ಕಾಣುವ ಜ್ಞಾನಿಯಾದವನಿಗೆ ಮೋಹವೆಲ್ಲಿಯದು, ಶೋಕ ಎಲ್ಲಿಯದು?.

ಮೊದಲಿಗೆ ನಾವು, ಎಲ್ಲರಲ್ಲೂ ಪರಮಾತ್ಮನ ಅಂಶರೂಪಿಯಾದ ಪರಬ್ರಹ್ಮಸ್ವರೂಪಿಯನ್ನು ಕಾಣುತ್ತ, ಆಧ್ಯಾತ್ಮಿಕತೆಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಪರಬ್ರಹ್ಮತತ್ವದಲ್ಲಿಯೇ ನಾವೆಲ್ಲರೂ ಇದ್ದೇವೆ ಎಂಬುದರ ಅರಿವಿನ ಜ್ಞಾನವನ್ನು ಹೊಂದಬೇಕಾಗುತ್ತೆ.

ನಮ್ಮ ಶ್ಲೋಕಗಳ ಕಡೆ ಗಮನ ಕೊಡೋಣ –
ಹೀಗೊಂದು statistics study, ಎಲ್ಲಿ ಅಂತ ಜ್ಞಾಪಕಕ್ಕೆ ಬರ್ತಿಲ್ಲ.
ಅಧ್ಯಯನ ಮನುಷ್ಯರ ಅಪೇಕ್ಷೆ (ಆಸೆ ) ಏನಿರುತ್ತೆ ಹೇಗಿರುತ್ತೆ ಅನ್ನೋದರ ಬಗ್ಗೆ.

ಹೆಚ್ಚಿನವರು ದೀರ್ಘಾಯುಷ್ಯ ಮತ್ತು ಜೀವನದಲ್ಲಿ ಆನಂದ ಕಂಡ್ಕೊಳೋದರ ಬಗ್ಗೆಯೇ ಒಲವು ಆಗಿರುತ್ತೆ. ಕೆಲವರು ಮಾತ್ರ ನನ್ನ ದೇಹಾರೋಗ್ಯ ಹಾಗೂ ಮನೋಸ್ವಾಸ್ಥ್ಯ ಎರಡು ಚೆನ್ನಾಗಿರೋತನ್ಕಾ ನನ್ನ ಆಯಸ್ಸು ಇದ್ರೆ ಸಾಕು ಅಂತ ಹೇಳ್ತಾರಂತೆ. ಅಂದ್ರೆ, ಯಾರೂ ಮೃತ್ಯುವನ್ನು ಬಯಸುವುದೂ ಇಲ್ಲ, ಭಯವೂ, ದುಃಖವೂ ಕೂಡ.

ಮಹಾಭಾರತದ ವನಪರ್ವದಲ್ಲಿ ಬರುವ ‘ಯಕ್ಷಪ್ರಶ್ನೆ’ ಯನ್ನ ಜ್ಞಾಪಿಸಿಕೊಳ್ಳಿ. ಯಕ್ಷ ಪ್ರಶ್ನಿಸ್ತಾನೆ – ನಿಜವಾದ ಆಶ್ಚರ್ಯ ಯಾವುದು?. ಧರ್ಮ ರಾಯನ ಉತ್ತರ ‘ಪ್ರತಿ ದಿನ ಜನ ಸಾವು ನೋವನ್ನು ನೋಡ್ತಲೇ ಇರ್ತಾರೆ, ದಿನ ನಿತ್ಯದ ಸಾವು ನೋವನ್ನು ನೋಡ್ತಿದ್ರೂ ಉಳಿದವರು ತಾವು ಶಾಶ್ವತರು ಅಂತ ತಿಳ್ಕೊಳ್ತಾ ರಲ್ಲ’ – ಅದು ಆಶ್ಚರ್ಯ ಅಂತ ಹೇಳ್ತಾನೆ. ಯಕ್ಷನಿಗೆ ಸರಿ ಅನ್ಸುತ್ತೆ. ಕಥೆ ಎಲ್ರಿಗೂ ಗೊತ್ತಿರೋದೇ. ಅವನ ಉತ್ತರವೇನೋ ಸರಿ. ಆದ್ರೆ, – ಸಾವು ಬರುವ ತನಕ ಎಲ್ಲರೂ ಶಾಶ್ವತರೆ ಅಲ್ವೇ ಅಂತ ಭಾವಿಸ್ಕೊತಾ ಈಶಾವಾಸ್ಯ ಉಪನಿಷದ್ ಹೇಳುವಂತೆ “ಕುರ್ವನ್ನೇವೇಹ ಕರ್ಮಾಣಿ ಜಿಜೀವಿಶೇತ್ ಶತಂ ಸಮಾ:” – ದುಡಿಯುತ್ತಲೇ (ಕರ್ಮ ಮಾಡುತ್ತಲೇ) ನೂರು ವರ್ಷಗಳ ಕಾಲ ಬದುಕಿ ಬಾಳುವುದನ್ನು ಬಯಸಬೇಕು. ಅಲ್ವಾ?

ಮಾನವರಾದ ನಮಗೆ, ಯಾರದೇ ಸಾವಿನ ಬಗ್ಗೆ ದುಃಖ ಪಡಬಾರದು ಅಂದ್ರೆ ಅದೂ ನಮ್ಮ ಪ್ರೀತಿ ಪಾತ್ರರೂ, ಹತ್ತಿರದ ಸಂಬಂಧಿಕರ ವಿಷಯದಲ್ಲಿ ಸಾಧ್ಯವಾಗದ್ದು. ಆದ್ರೆ, ದುಃಖಿಸ್ಕೊಂಡು ಕೂತ್ರೆ, ಸಂಸಾರ ಚಕ್ರ ನಡೀಬೇಕಲ್ಲ. ನಮ್ಮ ದುಃಖವನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಲು, ಸಾಂತ್ವನ ಹೇಳುವ ಆಧ್ಯಾತ್ಮಿಕ ಚಿಂತನೆಗಳು, ಕೊಡುಗೆಗಳು ಅಪಾರ ವಾದದ್ದು. ಭಗವದ್ಗೀತೆಯ ಮೇಲಿನ ಎಲ್ಲಾ ಶ್ಲೋಕಗಳೂ ಪೂರಕ. ಒಂದೊಂದಾಗಿ ನೋಡ್ತಾ ಹೋಗೋಣ.

 1. ದೇಹಿನೋSಸ್ಮಿನ್ಯಥಾ ದೇಹೇ ಕೌಮಾರಂ ಯೌವನಂ ಜರಾ । ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ ॥13॥

देहिनोऽस्मिन्यथा देहे कौमारं यौवनं जरा |
तथा देहान्तरप्राप्तिर्धीरस्तत्र न मुह्यति || 13||

dehino ’smin yathā dehe kaumāraṁ yauvanaṁ jarā
tathā dehāntara-prāptir dhīras tatra na muhyati

ಭಾವಾರ್ಥ: ನಮ್ಮ ದೇಹವು ಹೇಗೆ ಬಾಲ್ಯ, ಯೌವನ, ಮುಪ್ಪಿನಕಡೆ ಸಾಗುತ್ತದೋ ಹಾಗೆಯೇ ಆತ್ಮವು ದೇಹಾಂತ್ಯವನ್ನು ಹೊಂದಿದಾಗ ಮತ್ತೊಂದು ದೇಹಕ್ಕೆ ಸಾಗುತ್ತದೆ. ಇದರಿಂದ ಮನೋನಿಗ್ರಹವುಳ್ಳವರು, ವಿಚಲಿತರಾಗುವುದಿಲ್ಲ, ದುಃಖ ಪಡುವುದಿಲ್ಲ. (Just as the embodied soul continuously passes from childhood to youth to old age, similarly, at the time of death, the soul passes into another body. The wise are not deluded by this.)


 1. ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾಯಂ ಭೂತ್ವಾ ಭವಿತಾ ವಾ ನ ಭೂಯಃ ।
  ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥20॥ . . . . ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುವ ಬುದ್ದಿ ಮಾತಿದು. ಹೇಳ್ತಾನೆ – ಈ ಆತ್ಮನಿಗೆ ಹುಟ್ಟು ಮತ್ತು ಸಾವು ಇಲ್ಲ ಮತ್ತು ಶರೀರ ನಾಶವಾದರೂ ಆತ್ಮನು ಅವಿನಾಶಿ

न जायते म्रियते वा कदाचि
नायं भूत्वा भविता वा न भूय: |
अजो नित्य: शाश्वतोऽयं पुराणो
न हन्यते हन्यमाने शरीरे || 2.20||

na jāyate mriyate vā kadāchin
nāyaṁ bhūtvā bhavitā vā na bhūyaḥ
ajo nityaḥ śhāśhvato ’yaṁ purāṇo
na hanyate hanyamāne śharīre || 2.20||

ಭಾವಾರ್ಥ: ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಇದು ಹಿಂದೆ ಹುಟ್ಟಿದ್ದು ಅಲ್ಲ, ಈಗ ಹುಟ್ಟಿದ್ದು ಅಲ್ಲ. ಮುಂದೆ ಹುಟ್ಟುವಂಥದ್ದೂ ಅಲ್ಲ. ಅದು ಜನ್ಮರಹಿತ, ನಿತ್ಯ, ಶಾಶ್ವತ ಹಾಗೂ (ಪುರಾಣ) ಪುರಾತನವಾದದ್ದು. ಅದನ್ನುಯಾರೂ (ಹನ್ಯತೇ) ಕೊಲ್ಲಲಾರರು. ಇದನ್ನೇ ಉಪನಿಷದ್ಗಳೂ ಹೇಳಿವೆ. ಈ ಜೀವ ಸ್ವರೂಪತಃ ಎಂದೂ ಹುಟ್ಟುವುದಿಲ್ಲ ಮತ್ತು ಎಂದೂ ನಾಶವಾಗುವುದಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಇದನ್ನ ತಿಳಿದು ನಾವು ಹೆಚ್ಚಿನ ದುಃಖ ಪಡಬೇಕಾಗಿಲ್ಲ ಅನ್ನುವ ಸಾಂತ್ವನದ ಮಾತಿದು. (The soul is neither born, nor does it ever die; nor having once existed, does it ever cease to be. The soul is without birth, eternal, immortal, and ageless. It is not destroyed when the body is destroyed.)


 1. ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ । ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ॥22॥

वासांसि जीर्णानि यथा विहाय
नवानि गृह्णाति नरोऽपराणि |
तथा शरीराणि विहाय जीर्णा
न्यन्यानि संयाति नवानि देही || 2.22||

vāsānsi jīrṇāni yathā vihāya
navāni gṛihṇāti naro ’parāṇi
tathā śharīrāṇi vihāya jīrṇānya
nyāni sanyāti navāni dehī || 2.22||

ಭಾವಾರ್ಥ: ಮನುಷ್ಯನು ಹೇಗೆ ಹಳೆಯ ಬಟ್ಟೆಗಳನ್ನು ಬಿಟ್ಟು, ಹೊಸ ಬಟ್ಟೆಯನ್ನು ಧರಿಸುತ್ತಾನೋ ಹಾಗೆಯೇ, ನಮ್ಮ ದೇಹವು ಜೀರ್ಣಾವಸ್ಥೆಯನ್ನು ತಲುಪಿದಾಗ, ಆತ್ಮ ಸಹ ಹೊಸ ದೇಹವನ್ನು ಸ್ವೀಕರಿಸುತ್ತದೆ. ಆದ್ದರಿಂದ ಭೌತಿಕವಾಗಿ ಹುಟ್ಟು- ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದು ಇಲ್ಲ ಹಾಗೂ ಹೊಸ ಶರೀರದಿಂದ ಅದರ ಮೂಲಸ್ವಭಾವ, ಗುಣ ಬದಲಾಗುವುದಿಲ್ಲ. (As a person sheds worn-out garments and wears new ones, likewise, at the time of death, the soul casts off its worn-out body and enters a new one. )

ಇದರಲ್ಲಿ ನಾವು ಕಾಣಬೇಕಾಗಿರೋದು, ಈ ದೇಹ ಪ್ರತೀಕ್ಷಣವೂ ಪರಿವರ್ತನೆಯನ್ನು ಹೊಂದುತ್ತಿರುತ್ತೆ, ನಮಗೇ ಗೊತ್ತಿಲ್ಲದಂತೆ ಕ್ಷೀಣಿಸ್ತಾ, ಜರ್ಜರಿತವಾಗ್ತಾ ಹೋಗುತ್ತೆ. ನಮಗೆ ಗೊತ್ತಿರೋದು ನಮ್ಮ ಈಗಿನ ಅಸ್ತಿತ್ವ ಮಾತ್ರ. ಆದ್ರೆ, ನಮ್ಮ ಜರ್ಜರಿತ ದೇಹದಲ್ಲಿ (ಸಾವು, ಅಪಘಾತ ಇತ್ಯಾದಿ) ಯಾವಾಗಲೂ ಕ್ರಿಯಾತ್ಮಕ ವಾಗಿರುವ ಪರಬ್ರಹ್ಮಸ್ವರೂಪಿ ಆತ್ಮಕ್ಕೆ ಅಲ್ಲಿ ಅಸ್ತಿತ್ವ ಇಲ್ದೇ ಹೋಗುತ್ತೆ ಮತ್ತು ಬೇರೊಂದು ದೇಹವನ್ನು ಸೇರಬೇಕಾಗುತ್ತೆ. ಜೀವ ಅನಾದಿ ಹಾಗೂ ನಿತ್ಯ; ಅದಕ್ಕೆಂದೂ ಸಾವಿಲ್ಲ ಅನ್ನೋದನ್ನ ಮನಗಾಣಬೇಕು, ತಿಳ್ಕೋಬೇಕು. ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಮ್ | – ಜ್ಙಾಪಿಸ್ಕೊಬಹುದಲ್ವೆ?.
ಆತ್ಮ ಸಾಕ್ಷಾತ್ಕಾರವಾದ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವ-ಇಚ್ಛೆಯಂತೆ ದೇಹ ಬದಲಿಸುವ ಅಂದರೆ ಸಾವನ್ನ ತಂದು ಕೊಳ್ಳುವ ಸ್ವಾತಂತ್ರ್ಯಇಲ್ಲ.


 1. ಅವ್ಯಕ್ತೋSಯಮಚಿಂತ್ಯೋSಯಮವಿಕಾರ್ಯೋSಯಮುಚ್ಯತೇ ।
  ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ॥2.25॥

अव्यक्तोऽयमचिन्त्योऽयमविकार्योऽयमुच्यते |
तस्मादेवं विदित्वैनं नानुशोचितुमर्हसि || 2.25||

avyakto ’yam achintyo ’yam avikāryo ’yam uchyate
tasmādevaṁ viditvainaṁ nānuśhochitum arhasi || 2.25||

ಭಾವಾರ್ಥ: ಆತ್ಮ ಕಣ್ಣಿಗೆ ಕಾಣಿಸದ, ಗ್ರಹಿಸಲು ಸಾಧ್ಯವಾಗದ ಅದು ಎಂದೂ ವಿಕಾರ ಹೊಂದುವುದಿಲ್ಲ ಎಂದು ಹೇಳಲಾಗಿದೆ. ಇದನ್ನು ತಿಳಿದು ದುಃಖ ಪಡಬಾರದು ಎಂಬುದು ಶ್ರೀ ಕೃಷ್ಣನ ಸಾಂತ್ವನದ ಮಾತು. (The soul is spoken of as invisible, inconceivable, and unchangeable. Knowing this, you should not grieve for the body.)

ಆತ್ಮ ಕಣ್ಣಿಗೆ ಕಾಣಿಸದ , ಚಿಂತನೆಗೆ ನಿಲುಕದ ಇಂದ್ರಿಯಾತೀತ, ಇತ್ಯಾದಿ ವೇದ ಉಪನಿಷದ್ಗಳು ಹೇಳಿವೆ. ಪರಮಾತ್ಮನ ಅಂಶವಾದ ಜೀವಾತ್ಮ ನಮ್ಮ ಭೌತಿಕ ಶರೀರದಲ್ಲಿದ್ದರೂ ಕೂಡಾ ಅವ್ಯಕ್ತ, ನಮ್ಮ ಚಿಂತನೆಗೆ ನಿಲುಕದ್ದು. ನಾನು ಯಾರು? ಎಲ್ಲಿಂದ ಬಂದೆ ? ನಾನೇನು? ಎನ್ನುವುದೇ ನಮಗೆ ಗೊತ್ತಿಲ್ಲ.
ಕ‌ಸ್ರ್ವಂ ಕೋಹಂ ಕುತ‌ ಆಯಾತ:
ಕಾ ಮೇ ಜ‌ನ‌ನೀ ಕೋಮೇ ಮಾತ: I
(ಭ‌ಜ‌ಗೋವಿಂದ‌ಮ್)
ಹೀಗಿರುವಾಗ ಜೀವಸ್ವರೂಪ ಎಂದೂ ಬದಲಾಗದಿದ್ದರೂ ಕೂಡಾ, ಅದು ನಮ್ಮ ಚಿಂತನೆಗೆ ನಿಲುಕುವುದಿಲ್ಲ.


 1. ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ ।
  ತಸ್ಮಾದಪರಿಹಾರ್ಯೇSರ್ಥೇ ನ ತ್ವಂ ಶೋಚಿತುಮರ್ಹಸಿ ॥2.27॥

जातस्य हि ध्रुवो मृत्युर्ध्रुवं जन्म मृतस्य च |
तस्मादपरिहार्येऽर्थे न त्वं शोचितुमर्हसि || 2.27||

jātasya hi dhruvo mṛityur dhruvaṁ janma mṛitasya cha
tasmād aparihārye ’rthe na tvaṁ śhochitum arhasi || 2.27||

ಭಾವಾರ್ಥ: ಹುಟ್ಟು ಸಾವು ಅನ್ನೋದು ನಿಶ್ಚಿತ,. ಆದ್ದರಿಂದ ನಿನ್ನಕರ್ತವ್ಯ ನಿರ್ವಹಣೆಯಲ್ಲಿ ದುಃಖಿಸುವುದು ಸರಿಯಲ್ಲ. – ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದ ಮಾತಿದು. (Death is certain for one who has been born, and rebirth is inevitable for one who has died. Therefore, you should not lament over the inevitable.)

ಹುಟ್ಟು-ಸಾವು, ಸುಖ-ದುಃಖ, ಇವು ಜೀವನದಲ್ಲಿ ಅನಿವಾರ್ಯ. ಇದನ್ನು ಎಲ್ಲರೂ ಮನಗಾಣಬೇಕು. ಇದು ಯಾವಾಗ ಯಾರಿಗೆ ಬರುತ್ತೆ ಅನ್ನೋದು ಯಾರಿಗೂ ಗೊತ್ತಿರುವುವುದಿಲ್ಲ.

ಸಂತರೂ, ಜ್ಞಾನಿಗಳ ಸಾಂತ್ವನದ ಮಾತುಗಳನ್ನ ಸಾಕಷ್ಟು ಕಾಣಬಹುದು.
ಕಾಣದ ಕೈಗಳು ಆಡಿಸುವ ಗೊಂಬೆಯಾಟವಯ್ಯಾ , ಕಾಣದ ಕೈಗಳು ನೆಡೆಸುವ ಆ ದೇವಲೋಕದ ಲೀಲೆ. ಎಲ್ಲರೂ ಒಂದು ದಿನ ಅವರವರ ಪಾತ್ರ ಮುಗಿದಮೇಲೆ ಆ ಪಾತ್ರದಿಂದ ನಿರ್ಗಮಿಸಲೇ ಬೇಕು ಅಂತ ಒಬ್ಬರು ಹೇಳಿದರೆ, ಡಿ.ವಿ.ಜಿ. ಯವರು ಕಗ್ಗದಲ್ಲಿ ಋತುಗಳ ಚಕ್ರಕ್ಕೆ ಹೋಲಿಸಿ, ಮೃತರಾದವರು ಮಣ್ಣಾದ ಮೇಲೆ ಹೊಸ ಹೊಸ ಪಲ್ಲವಗಳಿಗೆ ಎಡೆಮಾಡಿ ಕೊಡುತ್ತಾ ಮತ್ತೆ ಮತ್ತೆ ಹೊಸ ಜೀವ ಉದಯಿಸುವುದು. ಇದು ನಿರಂತರವಾಗಿ ನಡೆಯುವ ಕೃಷಿಯೇ ಈ ಪ್ರಕೃತಿ ಎಂದಿದ್ದಾರೆ.
ಮುಕುಂದಮಾಲಾ ಸ್ತೋತ್ರದಲ್ಲಿ ಕೂಡ ಇದರ ಪ್ರಸ್ತಾಪವಿದೆ.

ಸ್ವಲ್ಪ ಸರಳವಾಗಿ ‘ಮೃತ್ಯು’ ಅನ್ನುವುದರ ಅರ್ಥ ಮಾಡ್ಕೊಳೋಣ. ಇಲ್ಲಿ, ಮೃತ್ಯು ಅಥವಾ ಸಾವು ಅಂದ್ರೆ ‘ಎಲ್ಲಕ್ಕೂ’ ಒಂದು ಶಾಶ್ವತ ಅಂತ್ಯ ಅಂತ ಅನ್ಕೋತೀವಿ. ಸ್ವಲ್ಪ ಯೋಚಿಸಿ ನೋಡಿ, ಒಬ್ಬ ವ್ಯಕ್ತಿ ಮೃತ್ಯುವಶನಾದರೆ, ಆವನು ‘ಹೋದ’ ಎನ್ನುತ್ತೇವೆ. ವ್ಯಕ್ತಿಯ ದೇಹ ನಮ್ಮ ಮುಂದೆ ಇದ್ದಾಗ್ಯೂ ‘ ಹೋದ’ ಎನ್ನುತ್ತೇವೆ. ಆದರೆ ಹೋದದ್ದು ಏನು? ಆ ವ್ಯಕ್ತಿಯ ದೇಹವನ್ನು ಧಾರಣೆ ಮಾಡಿದ್ದ ‘ಚೇತನ’. ಅದು ‘ಸದ್’ ವಸ್ತು. ಹಾಗಾಗಿ ಅದು ದೇಹವನ್ನು ಬಿಟ್ಟು ಹೊರಟಾಗ ‘ಸತ್ತು ಹೋದ’ – ಎಂದರೆ ‘ಅವನಲ್ಲಿದ್ದ ‘ಸತ್ ‘ ವಸ್ತು ದೇಹವನ್ನು ತೊರೆದು ಹೊರಟು ಹೋಯಿತು’ ಎಂಬ ಅರ್ಥ ಅಲ್ವೇ. . ಮೃತ್ಯುವು ಬಂದು ಈ ಸತ್ ವಸ್ತುವನ್ನು ಇಲ್ಲಿಂದ ದೂರ ಬೇರೆಲ್ಲಿಗೋ ಕೊಂಡು ಹೋಗುತ್ತದೆ ಮತ್ತು ಹುಟ್ಟು ಹಾಕುತ್ತದೆ ಆಲ್ವಾ.

ಮತ್ತೊಮ್ಮೆಮೋಹಮುದ್ಗರ (ಭಜಗೋವಿಂದಮ್ ) ಜ್ಞಾಪಿಸಿಕೊಳ್ಳೋಣ –

ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ ಕೃಪಯಾsಪಾರೇ ಪಾಹಿ ಮುರಾರೇ ||21||


(ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆಕೊನೆಯೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು).

(Being born again, dying again, and again lying in the mother’s womb; this samsara is extremely difficult to cross over. Save me, O destroyer of Mura, through your infinite compassion.)

ನಂದೊಂದು ಮಾತು – ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಅಂತ ಹೇಳ್ತಾರೆ. ಹೌದು, ಇದನ್ನು ನಾವು ಕೊನೆಯತನಕ ಚೆನ್ನಾಗಿ ಕಾಪಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವೂ ಕೂಡ. ಸಾವನ್ನು ಮೀರಿ ನಿಲ್ಲುವುದು ಯಾರಿಂದಲೂ ಸಾಧ್ಯವಿಲ್ಲ. ಕಠೋಪನಿಷದ್ನಲ್ಲಿ ನಚಿಕೇತನಿಗೆ ಯಮಧರ್ಮರಾಯನೇ ಹೇಳಿದ ಒಂದು ಸತ್ಯವನ್ನು ಸಾಮಾನ್ಯವಾಗಿ ಉದಾಹರಿಸುತ್ತಾರೆ. ನಚಿಕೇತನಿಗೂ ಈ ಪ್ರಶ್ನೆ ಕಾಡಿದೆ. ಸಾವನ್ನು ಗೆಲ್ಲಬಹುದೇ?- ಯಮನನ್ನ ಪ್ರಶ್ನಿಸ್ತಾನೆ. ಯಮನ ಉತ್ತರ ಎಷ್ಟು ಸಮಂಜಸವಾಗಿದೆ ನೋಡಿ. ಸಾವನ್ನು ಗೆಲ್ಲಬಹುದು, ಆದರೆ ಈ ದೇಹದ ಪ್ರಕೃತಿ ಕ್ಷಣಕ್ಷಣವೂ ಸವೆಯುತ್ತಾ ಹೋಗುವುದಾಗಿದೆ. ಆದ್ರಿಂದ ಈ ದೇಹ ಮಾತ್ರದಿಂದ ಸಾಧ್ಯವಿಲ್ಲ. ಹೌದಲ್ವಾ ನಮ್ಮದೇಹ ಶಕ್ತಿ ಕುಂದಿದ ಮೇಲೆ, ಪರಾವಲಂಬಿಗಳಾಗ್ತೀವಲ್ವಾ – ಅದಕ್ಕೇ ಅಲ್ವೇ ನಮ್ಮ ಪ್ರಾರ್ಥನೆಯಲ್ಲಿ ಆಯಸ್ಸೊಂದನ್ನೇ ಕೇಳೋಲ್ಲ, ‘ಆಯುರಾರೋಗ್ಯ . . . ‘ ವನ್ನು ಕೊಡು ಅಂತ ಕೇಳ್ಕೊಳೋದು.

ವ್ಯಾಖ್ಯಾನಕಾರರು ಹೇಳುವಂತೆ, ಇದನ್ನು ಇನ್ನೊಂದು ದಾರಿಯ ಮೂಲಕ ಸಾಧಿಸಬಹುದು. ಸಾವಿನಲ್ಲಿ ಸೋತರೂ, ಸಾಧನೆಯಿಂದ ಚಿರಂಜೀವಿಗಳಾಗೋದು, ಗೆಲ್ಲುವುದು. ಶಂಕರಾಚಾರ್ಯರಾಗಲೀ, ವಿವೇಕಾನಂದರೇ ಆಗಲಿ ತಮ್ಮ ಸಾಧನೆಯಿಂದ ಗುರುತಿಸಲ್ಪಡುವ ಚಿರಂಜೀವಿಗಳೇ ಅಲ್ಲವೇ? ಎಷ್ಟೊಂದು ಉದಾಹರಣೆಗಳು ನಮಗೆ ಸಿಗುವುತ್ತವೆ ಅಲ್ವಾ! ಈ ತರಹ ಎಲ್ಲರೂ ದೊಡ್ಡ ಸಾಧನೆ ಮಾಡಲು ಸಾಧ್ಯವಾಗದೇ ಇರಬಹುದು. ಸಣ್ಣ ಪುಟ್ಟ ಸಾಧನೆಯನ್ನಾದರೂ ಮಾಡುವ ಪ್ರಯತ್ನ ನಮ್ಮದಾಗಬಹುದು, ಪ್ರಯತ್ನ ಪಡೋಣ ಅಲ್ವಾ. ಹುಟ್ಟೂ ನಮ್ಮನ್ನು ಕೇಳಿ ಬರೋಲ್ಲ, ಸಾವೂ ನಮ್ಮನ್ನ ಕೇಳಿ ಬರೋಲ್ಲ ಇವೆರಡರ ನಡುವೆ ನಮ್ಮ ಬದುಕನ್ನ ಕಂಡ್ಕೊಳ್ತೇವೆ ಅಲ್ವೇ. ನಾವು, ಭಗವಂತನ ಕೃಪೆಯಿಂದ ಮಾನವರಾಗಿ ಹುಟ್ಟಿದ್ದೇವೆ. ನಮ್ಮ ಬದುಕು ಹೇಗಿರಬೇಕು – ಮೊದಲನೆಯದಾಗಿ, ನಮ್ಮ ಬದುಕಿಗೊಂದು ದಾರಿ, ಕಾಯಕ. ಎರಡನೆಯದಾಗಿ ನಮ್ಮ ಕಾಯಕದಲ್ಲೇ ಅಥವಾ ಇನ್ಯಾವುದಾದರಲ್ಲಾದ್ರೂ ಏನಾದರು ಸಾಧನೆ ಮಾಡುವ ಪ್ರಯತ್ನ, ಮೂರನೆಯದಾಗಿ ಯಾವುದರಲ್ಲಾದರೂ ಯಶಸ್ಸು ಗಳಿಸುವುದು (Survival, Achievements, Excel). ಇದನ್ನ ನಮ್ಮ ಧ್ಯೇಯವಾಗಿರಿಸಿಕೊಳ್ಳಬಹುದು ಅನ್ಸುತ್ತೆ. ಹಾಗೆಯೇ ಮಗುವಾಗಿ ನಿಷ್ಕಳಂಕ, ನಿರ್ಮಲ ಮನಸ್ಸಿನಿಂದ ಹೇಗೆ ಬಂದೆವೋ ಹಾಗೆಯೇ ಬಾಳಿನ ಕೊನೆಯ ಹಂತದಲ್ಲೂ ಮಗುವಿನ ಹಾಗೆಯೇ ನಿರ್ಮಲ, ನಿಷ್ಕಳಂಕ ಮನಸ್ಸಿಂದ ಕೂಡಿದವರಾಗಿ ಸಾವಿನಲ್ಲೂ ಘನತೆಯನ್ನು ಕಂಡುಕೊಂಡರೆ ಅದೂ ಒಂದು ಸಾಧನೆಯೇ ಸರಿ.

ಮತ್ತೊಮ್ಮೆ, ಈ ಎಲ್ಲಾ ಶ್ಲೋಕಗಳ ಸಾರಾಂಶ ಹೇಳೋದಾದ್ರೆ – ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗೂ ಸಾವಿನ ಮೂಲಕ ಅವ್ಯಕ್ತವಾಗುತ್ತದೆ. ಹುಟ್ಟು-ಸಾವನ್ನು ಮೀರಿ ನಿಲ್ಲುವುದು ಎಂದೂ ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ಸಾವಿನ ಬಗ್ಗೆ ದುಃಖ ಪಡುವುದೇ ಬೇಡ ಅಂತಲ್ಲ, ಆತಂಕ ಬೇಡ. ಸಾವು ಬರುವ ತನಕ ಎಲ್ಲರೂ ಶಾಶ್ವತರೆ ಅಲ್ವೇ ಅಂತ ಭಾವಿಸ್ಕೊತಾ ಈಶಾವಾಸ್ಯ ಉಪನಿಷದ್ ಹೇಳುವಂತೆ “ಕುರ್ವನ್ನೇವೇಹ ಕರ್ಮಾಣಿ ಜಿಜೀವಿಶೇತ್ ಶತಂ ಸಮಾ:” – ದುಡಿಯುತ್ತಲೇ (ಕರ್ಮ ಮಾಡುತ್ತಲೇ) ನೂರು ವರ್ಷಗಳ ಕಾಲ ಬದುಕಲು ಬಯಸೋಣ. ಇದನ್ನು ಅರ್ಥ ಮಾಡ್ಕೋತಾ ನಗು ನಗ್ತಾ ಬಾಳಲು ಕಲಿಯ ಬೇಕು ಅಲ್ವಾ…

BhagavadGita

ಈ ಎಲ್ಲಾ ಶ್ಲೋಕಗಳಿಗೂ ಪೂರಕವಾದ ಎಷ್ಟೊಂದು ‘ಕಗ್ಗ’ ಗಳಿವೆ! ಅಷ್ಟಲ್ದೇ ‘ಮಂಕುತಿಮ್ಮನ ಕಗ್ಗ’ ವನ್ನು ಕನ್ನಡದ ಭಗವದ್ಗೀತೆ ಅಂತಾರೆಯೇ? ಒಂದರಡು ಕಗ್ಗಗಳನ್ನ ನೋಡೋಣ ಅನ್ನಿಸ್ತಿದೆ.

೧. ಋತುಚಕ್ರ ತಿರುಗುವದು ಕಾಲನೆದೆ ಮರುಗುವದು | ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವದು ||
ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವದು ಜೀವ | ಸತತ ಕೃಷಿಯೋ ಪ್ರಕೃತಿ-ಮಂಕುತಿಮ್ಮ || 140 ||

ಇದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ ಅನ್ಕೋತೀನಿ.

೨. ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ । ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ।।
ಸಾತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? । ಸತ್ರ ಹೊಸದಿಹುದು – ಮಂಕುತಿಮ್ಮ ।।೮೩೪।।

ಸಾವಿನ ಭಯವೇಕೆ? ಈ ಸಾವು ಎಂಬುದು ನಮ್ಮನ್ನು ಹೊಸ-ಹೊಸ ಪ್ರದೇಶಗಳನ್ನು (ಬೇರೆಲ್ಲೋ ಹುಟ್ಟಿದಾಗ) ತೋರಿಸುವ, ನಮ್ಮ ಮಿತ್ರ. ಹೊಸ ಸ್ಥಳದಲ್ಲಿ ಹೊಸ ಚಿತ್ರವಿರುತ್ತದೆ. ಈ ಜನ್ಮದಲ್ಲಿ ಸಾತ್ವಿಕನಾಗಿ ಬಾಳಿದವನಿಗೆ, ಮುಂದಿನ ಬಾಳು ಇನ್ನಷ್ಟು ಸುಂದರವಾಗಿರುತ್ತದೆಂಬ ಭಾವದಿಂದ, ಮೃತ್ಯುವಿನ ಭಯವಿರಬೇಕಾಗಿಲ್ಲ. ಅಲ್ಲಿ ಎಲ್ಲವೂ ಹೊಸದಾಗಿರುತ್ತದೆ ಅಂತ ಹೇಳಿದ್ದಾರೆ.

ಈ ಕಗ್ಗಗಳನ್ನ ವಿವರಣಾತ್ಮಕವಾಗಿ ಅರ್ಥೈಸಿಕೊಳ್ತಾ ಹೋದ್ರೆ, ಈ ಎಲ್ಲಾ ಶ್ಲೋಕಗಳು ಅರ್ಥಪೂರ್ಣವಾಗಿ ಹಾದು ಹೋಗುತ್ತವೆ.

- - = o o ೦ o o = - -

2 thoughts on “BhagavadGita’s Strategies for Coping with the Inevitable

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s