BhagavadGita’s Pointers to Lay Aside Laziness

Laziness is a characteristic of being unwilling to do anything despite having the ability to do it. Sometimes, it can be due to fear of failure, lack of self-esteem, unsure about life’s purpose, or a symptom of physical / psychological illness.

Once the root cause of laziness is determined, one needs to take necessary steps to address it and get into performing one’s work.

Lord Krishna, in Srimad BhagavadGita explains why nobody can remain in an inactive state and why one needs to perform tasks as per one’s roles and responsibilities.

Now, let us delve into the article by our respected blogger Sri. RamaMurthy where he explains the Shlokas from BhagavadGita that explain the importance of doing one’s duties and how to stop being a sloth.

(NOTE: This blog post is part of a series; please refer to BhagavadGita, The Solution Provider to access the complete series.)

 • ಆಲಸ್ಯ ನಿವಾರಣೆಗೆ ಸೂಕ್ತವಾದ ಪರಿಹಾರವನ್ನು ಈ ಕೆಳಗಿನ ಶ್ಲೋಕಗಳಲ್ಲಿ ಕಾಣಬಹುದು:
  • ಅಧ್ಯಾಯ 3, ಕರ್ಮಯೋಗ, ಶ್ಲೋಕ 8, 20 (Shloka # 8 and 20 of Chapter 3 ‘Karma Yoga’)
  • ಅಧ್ಯಾಯ 6, ಆತ್ಮ ಸಂಯಮ ಯೋಗ, ಶ್ಲೋಕ 16 (Shloka # 16 of Chapter 6 ‘Atma Samyama Yoga’ or ‘Dhyana Yoga’)
  • ಅಧ್ಯಾಯ 18, ಮೋಕ್ಷ ಸನ್ಯಾಸ ಯೋಗ, ಶ್ಲೋಕ 39 (Shloka # 39 of Chapter 18 ‘Moksha Sanyasa Yoga’)

” ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ: “

 1. ಅಧ್ಯಾಯ 3, ಕರ್ಮಯೋಗ, ಶ್ಲೋಕ 8 ಮತ್ತು 20 (Shloka # 8 and 20 of Chapter 3 ‘Karma Yoga’)
  ಮೂರನೇ ಅಧ್ಯಾಯ – ಕರ್ಮ ಯೋಗ :
  ಕರ್ಮ ಪದದ ವಿಸ್ತಾರ ಬಹಳ ದೊಡ್ಡದು. ದಾರ್ಶನಿಕರೂ, ಪ್ರವಚನಕಾರರೂ ಬಹು ವಿಸ್ತಾರವಾದ ವಿವರಣೆ ಕೊಡ್ತಾ ಹೋಗ್ತಾರೆ. ಸಧ್ಯ ನಾವು ಇಷ್ಟು ತಿಳಿದಿರೋಣ. ಡಿ.ವಿ.ಜಿ. ಯವರು ಹೇಳುವಂತೆ ಲೌಕಿಕವಾಗಿ ನಾವು ದಿನ ನಿತ್ಯ ಮಾಡುವ, ಮಾಡಲೇ ಬೇಕಾದ , ಕೆಲಸ ಕಾರ್ಯ ಕಾಯಕ ಗಳೆಲ್ಲವೂ ಕರ್ಮವೇ.
  ಹಾಗೆ ನೋಡೋದಾದ್ರೆ, ಪ್ರವೃತ್ತಿ ಮಾರ್ಗಿಗಳಾದ ಗೃಹಸ್ತರಿಗೆ ಎಲ್ಲವೂ ಕರ್ತವ್ಯ ಕರ್ಮ. ಆದ್ರೆ ಅದು ಸಂಸ್ಕಾರರೂಪವಾದ, ಸಾಧ್ಯವಾದಷ್ಟೂ ನಿಷ್ಕಾಮ ಕರ್ಮವಾದರೆ ಒಳ್ಳೆಯದು ಅಂತ ಭಾವಿಸೋಣ.
  ಶಿವ ಮಾನಸ ಪೂಜೆಯಲ್ಲಿ ಶ್ರೀ ಶಂಕರರು ಹೇಳಿರುವಂತೆ . . . . ” ಯದ್ಯತ್ಕರ್ಮಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ “ – ನಾವು ಮಾಡುವ ಕೆಲಸ (ಕರ್ಮ) ಗಳೆಲ್ಲವೂ ಶಿವನ ಆರಾಧನೆ ಅನ್ನುವ ಮನೋಭಾವ ನಮ್ಮದಾಗಿಸಿಕೊಳ್ಳೋಣ.

ಈ ಅಧ್ಯಾಯದಲ್ಲಿ ಕರ್ಮ ಮಾರ್ಗ ಹಾಗೂ ಜ್ಞಾನ ಮಾರ್ಗ ಒಂದಕ್ಕೊಂದು ವಿರೋಧ ಮಾರ್ಗಗಳಲ್ಲ, ಒಂದಕ್ಕೊಂದು ಪೂರಕ. ಕರ್ಮ ಮಾರ್ಗದಿಂದ ಜ್ಞಾನ, ಅಂತ‌ ಹೇಳ್ತಾ ಕರ್ಮ ಮಾರ್ಗ ಹೇಗಿರಬೇಕು ಅಂತ ವಿವರಣೆ ಕೊಡ್ತಾ ಹೋಗುತ್ತೆ. ನಮ್ಮ ಮುಂದಿರುವ ಶ್ಲೋಕಕ್ಕೆ ಮುಂಚೆ, ಶ್ಲೋ. 5 , 6, 7 ರಲ್ಲಿ ಯಾವುದೊಂದೂ ಕರ್ಮ (ಲೌಕಿಕ) ಮಾಡದೇ ಯಾರೂ ಇರಲು ಸಾಧ್ಯವಿಲ್ಲ. ಯಾರು ಕರ್ಮೇಂದ್ರಿಯಗಳನ್ನು ನಿಗ್ರಹಿಸಿ ಆದರೆ ಮನಸ್ಸಿನೊಳಗೇ ಇಂದ್ರಿಯಾಸಕ್ತರಾಗಿರುತ್ತಾರೋ ಅವರು ಮಿಥ್ಯಾಚಾರಿ (ನಟನೆ ಮಾಡುವ ), ಯಾರು ಇಂದ್ರಿಯ ನಿಗ್ರಹದಿಂದ ಇಂದ್ರಿಯಾಸಕ್ತಿ ಇಲ್ಲದವನಾಗಿ, ಕರ್ಮ ಕಾಯಕಗಳನ್ನ ಮಾಡ್ತಾ ಹೋಗ್ತಾನೋ ಅವನು ಉತ್ತಮ ಅಂತ ಹೇಳಿ ಮುಂದಿನ ಶ್ಲೋಕದಲ್ಲಿ ನಿನಗೆ ವಿಹಿತವಾದ ಕರ್ಮವನ್ನು ಮಾಡು ಅಂತ ಹೇಳ್ತಾನೆ.
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ ।
ಶರೀರಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ।। 3.8।।

नियतं कुरु कर्म त्वं कर्म ज्यायो ह्यकर्मण: |
शरीरयात्रापि च ते न प्रसिद्ध्येदकर्मण: ||3.8||

niyataṁ kuru karma tvaṁ karma jyāyo hyakarmaṇaḥ |
śharīra-yātrāpi cha te na prasiddhyed akarmaṇaḥ ||3.8||

 • ಅರ್ಥ:- ನಿನಗೆ ಯಾವ ಕರ್ಮ ವಿಹಿತವಾಗಿದೆಯೋ (ಕರ್ತವ್ಯವಾಗಿದೆಯೋ) ಅದನ್ನು ಮಾಡು. ಕರ್ಮವನ್ನು ಮಾಡದೇ ಇರುವುದಕ್ಕಿಂತ ಇದು ಉತ್ತಮ. ಕರ್ಮವನ್ನು ಮಾಡದೇ ದೇಹದ ಪೋಷಣೆಯೂ ಆಗಲಾರದು.
  ಇಲ್ಲಿ ವಿಹಿತ ಕರ್ಮ ಅಂದ್ರೆ, ಸ್ವಧರ್ಮಕರ್ಮ – ಕ್ಷತ್ರಿಯ ಧರ್ಮ ಸಮ್ಮತವಾದ ಯುದ್ಧವನ್ನು ಮಾಡು ಎಂದು ಅರ್ಜುನನಿಗೆ ಸೂಚ್ಯವಾಗಿ ಹೇಳಿದೆ.

Meaning: Lord Krishna tells Arjuna, You should thus perform your prescribed Vedic duties, since action is superior to inaction. By ceasing activity, even your bodily maintenance will not be possible.

ಮುಂದಿನ ಶ್ಲೋಕ –
ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ ।
ಲೋಕಸಂಗ್ರಹಮೇವಾಪಿ ಸಂಪಶ್ಯನ್ಕರ್ತುಮರ್ಹಸಿ ||3.20||

कर्मणैव हि संसिद्धिमास्थिता जनकादय: |
लोकसंग्रहमेवापि सम्पश्यन्कर्तुमर्हसि || 3.20 ||

karmaṇaiva hi sansiddhim āsthitā janakādayaḥ |
loka-saṅgraham evāpi sampaśhyan kartum arhasi || 3.20 ||

ಅರ್ಥ:- ಕರ್ಮ ಮಾರ್ಗದಿಂದಲೇ ಜನಕ ಮೊದಲಾದವರು ತಮ್ಮ ಗುರಿಯನ್ನು ಸಿದ್ಧಿಸಿಕೊಂಡಿದ್ದಾರೆ. ಆದ್ದರಿಂದ, ಜನ ಸಾಮಾನ್ಯರ ದೃಷ್ಟಿಯಿಂದ, ಹೊಣೆಯನ್ನರಿತು ನಿನ್ನ ಕರ್ಮ (ಸ್ವಧರ್ಮಕರ್ಮ) ವನ್ನ ಮಾಡಲೇಬೇಕು. ಹಾಗೆ ಮಾಡ್ದೆಹೋದ್ರೆ ಏನಾಗುತ್ತೆ ಅಂತ ಮುಂದಿನ ಶ್ಲೋಕದಲ್ಲಿ ಹೇಳಿದೆ.
ಮುಂದಿನ ಶ್ಲೋಕ (21) ರಲ್ಲಿ ನೀನು (ಶ್ರೇಷ್ಠನಾದ, ಮುಂದಾಳಾದ ನೀನು) ಹೇಗೆ ನಡೆದರೆ ಹಾಗೆ ಜನ ಸಾಮಾನ್ಯರೂ ಅದನ್ನೇ ಅನುಸರಿಸುತ್ತಾರೆ ಅಂತ ವಿವೇಚನೆಯನ್ನೂ ಹೇಳ್ತಾನೆ. (ನೀನು ಕರ್ತವ್ಯ ವಿಮುಖನಾದರೆ ಜನ ಸಾಮಾನ್ಯರೂ ದಾರಿ ತಪ್ಪುತ್ತಾರೆ – ಯಥಾ ರಾಜ ತಥಾ ಪ್ರಜಾ ಅಂತಾರಲ್ಲ ಹಾಗೆ ).
ಇಲ್ಲಿ ಜನಕ ಮಹಾರಾಜನ ಪ್ರಸ್ತಾಪ ಬಹಳ ಸೂಕ್ತವಾಗಿದೆ ಅನ್ಸುತ್ತೆ. ಯಾಕಂದ್ರೆ ಇಲ್ಲಿ ಕೃಷ್ಣಪರಮಾತ್ಮ ಹೇಳಬೇಕಾಗಿರೋದು – ಅರ್ಜುನನಿಗೆ ನೀನು ನಿನ್ನ ಕರ್ಮವನ್ನು ಮಾಡು ಯಾವ ಪಾಪ ಲೇಪವೂ ಇಲ್ಲ ಅಂತ. ಜನಕಮಹಾರಾಜ ಮಹಾ ರಾಜರ್ಷಿ ಅಂತ ಹಲವಾರು ಕಡೆ ಉಲ್ಲೇಖಿತವಾಗಿದೆ. ಎಲ್ಲಾ ರಾಜವೈಭೋಗದೊಂದಿಗಿದ್ದರೂ ಅಹಂಕಾರ ರಹಿತನಾಗಿ, ವಿರಕ್ತನಾಗಿ, ಜ್ಞಾನ ಮಾರ್ಗ ಕಂಡುಕೊಂಡವನು. ( ಎಷ್ಟೋ ಋಷಿ ಮುನಿಗಳು ತಮ್ಮ ಶಿಷ್ಯರನ್ನು ಬ್ರಹ್ಮಜ್ಞಾನಾಪೇಕ್ಷಿಗಳನ್ನು ಜನಕನ ಹತ್ರ ಕಳಿಸ್ತಿದ್ರಂತೆ. ಶುಕಾಚಾರ್ಯರು ಕೂಡ ವೈರಾಗ್ಯದ ಬಗ್ಗೆ ತಿಳಿದು ಕೊಳ್ಳಲು ಜನಕನ ಹತ್ರ ಹೋಗಿದ್ರು ಅಂತ ಕೂಡ ಹೇಳ್ತಾರೆ ).
ಜನಕ ಯಾಜ್ಞವಲ್ಕ್ಯ ಸಂವಾದ, ಅಷ್ಟಾವಕ್ರ ಗೀತೆ ಇವೆಲ್ಲಾ ಇದನ್ನು ಸ್ಪಷ್ಟೀಕರಿಸುತ್ತವೆ. ಅವನಿಗೆ ಅಹಂಕಾರ ವಿರಲಿಲ್ಲ ಅನ್ನೋದಕ್ಕೆ ಅಷ್ಟಾವಕ್ರ ಗೀತೆಯೇ ಸಾಕ್ಷಿ ಅನ್ನುವಂತಿದೆ. ಅಷ್ಟಾವಕ್ರನ ಕಥೆ ಎಲ್ಲರಿಗೂ ಗೊತ್ತಿರುವುದೇ. ಮಹಾಭಾರತದ ವನ ಪರ್ವದಲ್ಲಿ ಬರುವ ಸುಂದರ ಕೆಥೆ.
ಅಷ್ಟಾವಕ್ರ -ಉದ್ಧಾಲಕ ಮಹರ್ಷಿಯ ಮೊಮ್ಮಗ (ಮಗಳ ಮಗ), ತನ್ನ ಶಿಷ್ಯ ಹಾಗೂ ಅಳಿಯ ಕಹೋದನ ಮಗ. ಅಷ್ಟಾವಕ್ರನಾದರೋ, ಜನ್ಮತಃ ಮಹಾ ಜ್ಞಾನಿ. ಜನಕನ ಆಸ್ಥಾನದಲ್ಲಿದ್ದ ವಂಡಿ ಎಂಬ ಮಹಾ ಪಂಡಿತನ್ನ ಸೋಲಿಸಿ, ತಂದೆಯ ಬಿಡುಗಡೆಗೂ ಮತ್ತು ತನ್ನ ಅಷ್ಟಾವಕ್ರತೆಯನ್ನು ಹೋಗಲಾಡಿಸಿಕೊಂಡ ಅಂತೆಲ್ಲಾ ಕಥೆ ಬರುತ್ತೆ. . ನನಗೆ ಈ ಕಥೆ ಗಿಂತಲೂ ಮುಖ್ಯ ಅನ್ಸೋದು , ಅಷ್ಟಾವಕ್ರ ವಯಸ್ಸಿನಲ್ಲಿ ತುಂಬಾ ಚಿಕ್ಕವನಾದರೂ ಜನಕ ಮಹಾರಾಜ ತಾನೇ ಜ್ಞಾನಿಯಾದರೂ ಅಷ್ಟಾವಕ್ರನ ಶಿಷ್ಯನಾಗಿ ಗುರುತಿಸಿಕೊಳ್ಳುವುದು, ಕರ್ಮಜ್ಞಾನದ ವಿಷಯವಾಗಿ ಚರ್ಚಿಸುವುದು ಅವನ ಅಹಂಭಾವವಿಲ್ಲದಿರುವಿಕೆಯನ್ನು ಎತ್ತಿ ತೊರಿಯುತ್ತದೆ. ಇವರಿಬ್ಬರ ಚರ್ಚೆ (discussions) ಅಷ್ಟಾವಕ್ರಗೀತೆ ಎಂದೇ ಪ್ರಸಿದ್ಧಿ . ನನಗೆ ಇಷ್ಟವಾದ ಒಂದು ಶ್ಲೋಕವನ್ನ ಹೇಳೋಣ ಅನ್ನಿಸ್ತಿದೆ. ಇದು ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳಿಗೆ ಪೂರಕವಾಗಿಯೂ ಇದೆ. –
ತದಾ ಬಂಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ । ಕಿಂಚಿನ್ ಮುಂಚತಿ ಗೃಣ್ಹಾತಿ ಕಿಂಚಿದ್ ದೃಷ್ಯತಿ ಕುಪ್ಯತಿ” ।। 8-1 ನಮ್ಮಲ್ಲಿ ಎಲ್ಲೀ ವರೆಗೆ ಮನಸ್ಸಿನಲ್ಲಿ ಯಾವ್ದುಕ್ಕೋ ಆಸೆ, ಬಯಕೆ ಉಂಟಾದರೆ, (ಅದು ಸಿಗ್ದಲೇ ) ದುಃಖ ಉಂಟಾದ್ರೆ, ಏನನ್ನಾದ್ರೂ ನಮಗೇ ಬೇಕಾದ್ದನ್ನು ತ್ಯಾಗ ಮಾಡಬೇಕಾಗಿ ಬಂದ್ರೆ,(ಬೇಡವಾದದ್ದನ್ನ) ಸ್ವೀಕರಿಸಬೇಕಾಗಿ ಬಂದ್ರೆ, ಯಾವುದೋ ವಸ್ತು ನಮಗೆ ಮೆಚ್ಚಿಗೆ, ಸಂತೋಷ, ತೃಪ್ತಿ ಕೊಡುವಂಥದ್ದು ಸಿಗದೇ ಹೋದ್ರೆ, ಯಾವುದೋ ಕಾರಣದಿಂದ ಕೋಪ ಬರುವಂಥದ್ದು ಇತ್ಯಾದಿ ನಮ್ಮ ಮನಸ್ಸಿನಲ್ಲಿ ಸುಳಿಯುತ್ತಿರುತ್ತೋ ಅಲ್ಲೀ ವರೆಗೆ ಇವುಗಳು ನಮ್ಮನ್ನ ಬಂಧನದಲ್ಲಿಟ್ಟಿರುತ್ತವೆ. – ಅಂದ್ರೆ ಇವುಗಳ ಇತಿಮಿತಿ ನಮಗೆ ಗೊತ್ತಿರ ಬೇಕು ಅನ್ನೋದೇ ಆಗಿದೆ. ಈ ಅಷ್ಟಾವಕ್ರ ಗೀತೆ ಯಾಕೋ ಭಗವದ್ಗೀತೆಯಷ್ಟು ಪ್ರಚಲಿತದಲ್ಲಿಲ್ಲ ಅನ್ಸುತ್ತೆ.
ಮಹಾಭಾರತದ ವನ ಪರ್ವದಲ್ಲಿ ಬರುವ ಕಥೆಗಳೆಲ್ಲವೂ (ಲೋಮಸ ಮಹರ್ಷಿ ಹೇಳುವ ಕಥೆಗಳು) ತುಂಬಾ ಚೆನ್ನಾಗಿದೆ. ಇಲ್ಲಿ ಬರುವ ‘ಯಕ್ಷಪ್ರಶ್ನೆ’ ಯಲ್ಲಿ ಒಂದು ಪ್ರಶ್ನೆ ಚತುರ್ವಿಧ ಪುರುಷಾರ್ಥಗಳಾದ ‘ಧರ್ಮಾರ್ಥಕಾಮಮೋಕ್ಷ’ ಗಳ ಸಮನ್ವಯತೆ ಹೇಗೆ ಸಾಧಿಸಬಹುದು ಅನ್ನೋದು ಇದನ್ನು ಬೇರೆ ಯಾವುದಾದರೂಸಂದರ್ಭ ದಲ್ಲಿ ನೋಡೋಣ. ಮಹಾಭಾರತ ಪೂರಾ ಓದಲಾಗದಿದ್ರೂ ಈ ವನ ಪರ್ವ ವನ್ನ ಓದಲೇ ಬೇಕಾದದ್ದು ಅಂತ ನನಗೆ ಅನ್ಸುತ್ತೆ.

Meaning: Lord Sri Krishna tells Arjuna,By performing their prescribed duties, King Janak and others attained perfection. You should also perform your work to set an example for the good of the world. Whatever actions great persons perform, common people follow. Whatever standards they set, all the world pursues.

2. ಅಧ್ಯಾಯ 6, ಶ್ಲೋಕ 16 (Shloka # 16 of Chapter 6 ‘Atma Samyama Yoga’ or ‘Dhyana Yoga’)

ನಾತ್ಯಶ್ನತಸ್ತು ಯೋಗೋಽಸ್ತಿ ನ ಚೈಕಾಂತಮನಶ್ನತಃ ।
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ।। 6.16।।

नात्यश्नतस्तु योगोऽस्ति न चैकान्तमनश्नत: |
न चाति स्वप्नशीलस्य जाग्रतो नैव चार्जुन || 6.16||

nātyaśhnatastu yogo ’sti na chaikāntam anaśhnataḥ |
na chāti-svapna-śhīlasya jāgrato naiva chārjuna || 6.16 ||


“ಅರ್ಜುನ – ಅತಿ ಹೆಚ್ಚಾಗಿ ತಿನ್ನುವುದೂ ಅತೀ ಸ್ವಲ್ಪ ತಿನ್ನುವುದೂ, ಅತಿ ಹೆಚ್ಚು ನಿದ್ದೆ ಮಾಡುವುದೂ ಅತೀ ಸ್ವಲ್ಪ ನಿದ್ದೆ ಮಾಡುವುದೂ ಯೋಗಿಯ ಲಕ್ಷಣವಲ್ಲ.”

Meaning: Lord Sri Krishna says, “O Arjun, those who eat too much or eat too little, sleep too much or too little, cannot attain success in Yog.

ನಾವು ಧ್ಯಾನ, ಪೂಜೆ ಅಂತ ಕುತ್ಕೊಳೋಕೆ ಮುಂಚೆ ನಮ್ಮ ಮನಸ್ಸು ಶಾಂತಿಯಿಂದಿರಬೇಕು. ಮನಸ್ಸು ಶಾಂತಿ ಯಿಂದಿರಬೇಕು ಅಂದ್ರೆ ದೇಹವೂ ಸುಸ್ಥಿತಿಯಲ್ಲಿರಬೇಕು, ಶಾಂತಿಯಿಂದಿರಬೇಕು. ಅದಕ್ಕೇ ಧ್ಯಾನಸಾಧನೆಯಲ್ಲಿ, ಆಹಾರ ವಿಹಾರಗಳು ಹೇಗಿರಬೇಕು ಅಂತ ಇಲ್ಲಿ ಹೇಳಿದೆ. ಯೋಗಿಗೆ, ಧ್ಯಾನಾಕ್ತನಾದವನು ಉಪವಾಸ ಇರಬಾರ್ದು, ಹಾಗಂತ ಅತಿಯಾಗಿ ತಿಂದ್ರೆ ಆಲಸ್ಯ ತೂಕಡಿಕೆ, ಶೌಚ ಇತ್ಯಾದಿ, ನಿದ್ದೆಗೆಟ್ರೆ ತೂಕಡಿಕೆ ಹೀಗೆ ಇವೆಲ್ಲ ಪ್ರತಿಕೂಲಗಳು. ಇವೆಲ್ಲವೂ ಯುಕ್ತ ಪ್ರಮಾಣದಲ್ಲಿ ಹಿತ ಮಿತವಾಗಿ ಮನಃಸ್ವಾಸ್ಥ್ಯಕ್ಕೆ ಅನುಕೂಲ ವಾಗಿರಬೇಕು ಅನ್ನುವ ಅಭಿಪ್ರಾಯ.
ಉಪನಿಷದ್ಗಳಲ್ಲಿ ಯಾವಾಗಲೂ ಅಧ್ಯಯನಕ್ಕೆ ಕುತ್ಕೊಳೋಕ್ಕೆ ಮುಂಚೆ ಶಾಂತಿಮಂತ್ರ ಪಠಣ ಕಡ್ಡಾಯವಾಗಿರುತ್ತೆ. ಪ್ರತಿಯೊಂದು ವೇದಭಾಗದ ಉಪನಿಷದ್ಗಳಿಗೂ ಬೇರೆ ಬೇರೆಯೇ ಆದ ಶಾಂತಿ ಮಂತ್ರಗಳಿವೆ. ಎಲ್ಲ ಶಾಂತಿ ಮಂತ್ರಗಳೂ ಓಂ . . ನಿಂದ ಶುರುವಾಗಿ ಓಂ ಶಾಂತಿಃ ಶಾಂತಿಃ ಶಾಂತಿಃ ಅಂತ ಮುಕ್ತಾಯವಾಗುವುದನ್ನು ಕಾಣಬಹುದು. ಯಾಕೆ ಮೂರುಸಲ ಹೇಳ್ಬೇಕು ಅನ್ನೋದಕ್ಕೆ ವಿವರಣೆ ಚೆನ್ನಾಗಿದೆ. ಉಪನಿಷದ್ ಅಂತ ಅಲ್ಲ, ದೇವರ ಮನೆಯಲ್ಲಿ ಪೂಜೆ, ಪುನಸ್ಕಾರ ಅಂತ ನಾವು ದೇವರ ಮುಂದೆ ಕೂತ್ಗೊoಡಾಗಲೇ ಎಲ್ಲಿಲ್ಲದ ಯೋಚನಗಳು, disturbance ಶುರು ಆಗುತ್ತೆ. ಇದನ್ನ ಮೂರು ವಿಧದ ಅಡಚಣೆಗಳಾಗಿ ಪರಿಗಣಿಸಿ, ಈ ವಿಘ್ನ ಗಳಿಂದ ನಮ್ಮ ಮನಸ್ಸನ್ನು ದೂರವಿಡು ಅಂತ ಭಗವಂತನನ್ನು ಪ್ರಾರ್ಥಿಸುವುದೇ ಈ ಶಾಂತಿ ಮಂತ್ರದ ಗೂಢಾರ್ಥ ಆಗಿದೆ. ನಮಗೊದಗಬಹುದಾದ ಮೂರು ಅಡಚಣೆಗಳು 1. ಆಧ್ಯಾತ್ಮಿಕ ಪ್ರತಿಬಂಧ – (ನಮ್ಮ ಏಕಾಗ್ರತೆಗೆ ತೊಂದರೆ ಆಗೋ ಅಂಥದ್ದು). 2. ಆದಿಭೌತಿಕ (ಹೊರಗಡೆಯ ವಾತಾವರಣದಿಂದ ಆಗಬಹುದಾದ ತೊಂದರೆ. ಮಳೆ, ಗುಡುಗು, ಯಾವುದೋ Lorry, Bus ಇತ್ಯಾದಿಗಳ ಶಬ್ದ. TV, Radio ಇತ್ಯಾದಿನೂ ಆಗಬಹುದು). 3. ಆದಿ ದೈವಿಕ ಪ್ರತಿಬಂಧ: – (ನೈಸರ್ಗಿಕವಾಗಿ ಬರುವಂಥದ್ದು. ಕೆಮ್ಮು, ಸೀನು, ಕಾಲು ಹಿಡ್ಕೊಳೋದು, ಜೊಂವ್ ಹಿಡ್ಕೊಳೋದು ಇತ್ಯಾದಿ).
ನಮ್ಮ ಧ್ಯಾನ ಪೂಜೆಗಳಲ್ಲಿ ಈ ತರಹದ ತೊಂದರೆಗಳು, ಪ್ರತಿಕೂಲಗಳು ಬಾರದಿರಲಿ, ನಿರ್ವಿಘ್ನವಾಗಿ ನೆರವೇರಲಿ ಅಂತ ಪ್ರಾರ್ಥನಾ ಮೂಲಕ ದೇವ್ರನ್ನ ಬೇಡ್ಕೊ ಬೇಕು ಅಂತ ಹೇಳ್ತಾರೆ. ಉಪನಿಷದ್ಗಳಲ್ಲಿ ಬರುವ ಎಲ್ಲಾಶಾಂತಿ ಮಂತ್ರಗಳನ್ನ ಇನ್ನೊಮ್ಮೆ ನೋಡೋಣ. ಅದನ್ನ ಪ್ರತಿದಿನ ನಾವು ಪೂಜೆ ಪುನಸ್ಕಾರಕ್ಕೆ ಮುನ್ನ ಯಾವುದಾದರೂ ಒಂದನ್ನ ಹೇಳಿಕೊಳ್ಳುವ ಅಭ್ಯಾಸ ಮಾಡಿಕೊಳ್ಳೋಣ.

 1. ಅಧ್ಯಾಯ 18, ಮೋಕ್ಷ ಸನ್ಯಾಸ ಯೋಗ, ಶ್ಲೋಕ 39 (Shloka # 39 of Chapter 18 ‘Moksha Sanyasa Yoga’)
  ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ।
  ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಂ।। 18.39।।

यदग्रे चानुबन्धे च सुखं मोहनमात्मन: |
निद्रालस्यप्रमादोत्थं तत्तामसमुदाहृतम् || 18.39||

yad agre chānubandhe cha sukhaṁ mohanam ātmanaḥ |
nidrālasya-pramādotthaṁ tat tāmasam udāhṛitam || 18.39||

ಅರ್ಥ: ಯಾವುದು ಆರಂಭದಲ್ಲೂ ಅಂತ್ಯದಲ್ಲೂ ಮನಸ್ಸಿನಲ್ಲಿ ಭ್ರಮೆಯಲ್ಲಿರಿಸುವ – ನಿದ್ರೆ, ಸೋಮಾರಿತನ ಮತ್ತು ಅಸಡ್ಡೆ/ಮಾಯೆಯಿಂದ ಉಂಟಾಗುವ ಸುಖ ತಾಮಸ ವಾದದ್ದು.
ಯಾವ ಸುಖವು ನಿದ್ದೆ, ಸೋಮಾರಿತನ, ಮೈಗಳ್ಳತನದಿಂದ ಪೂರಿತವಾಗಿದ್ರೆ ಅದು ತಾಮಸಗುಣದ ಪ್ರತೀಕ.

Meaning: Lord Sri Krishna says, “That happiness which covers the nature of the self from beginning to end, and which is derived from sleep, indolence, and negligence, is said to be in the mode of ignorance. This type of Tamasic happiness is of the lowest kind and is foolishness from beginning to end. So, one should strive to distance oneself from such modes of ignorance.

ಅಧ್ಯಾಯ 14 ಗುಣತ್ರಯ ವಿಭಾಗಯೋಗ, ಬಂದಾಗ ಇದರ ವಿಶ್ಲೇಷಣೆ ನೋಡೇ ಇರುತ್ತೀರಿ. ಹೆಚ್ಚಿನ ವಿವರಣೆ ಅನಗತ್ಯ ಅನ್ಸುತ್ತೆ.

ಹದಿನೆಂಟನೇ ಅಧ್ಯಾಯಕ್ಕೆ ಬಂದಾಗಲೆಲ್ಲಾ ಕಠೋಪನಿಷದ್ನಲ್ಲಿ ಬರುವ ಈ ಶ್ಲೋಕದಕಡೆ ನನ್ನ ಗಮನ ಹೋಗ್ತಿರುತ್ತೆ. ಇದನ್ನ ಭಗವದ್ಗೀತೆಯ ಜೊತೆ ಸಮನ್ವಯಗೊಳೀಕೊಳ್ಳಲೂ ಬಹುದು.
ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ಚ
ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ
ಇಂದ್ರಿಯಾಣಿ ಹಯಾನಾಹುರ್ವಿಷಯಾಂಸ್ತೇಷು ಗೋಚರಾನ್
ಆತ್ಮೇಂದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ “
ಕ್ಷರಾಕ್ಷರ ರೂಪವಾದ ನಮ್ಮ ದೇಹವೇ ಒಂದು ರಥ. ರಥ ಅಂದ್ಮೇಲೆ ಕುದ್ರೆಗಳು ಬೇಡವೇ ?. ಒಂದಲ್ಲ ಐದು ಕುದ್ರೆಗಳು ಈ ರಥಕ್ಕೆ . ಈ ಐದು ಕುದ್ರೆಗಳು ಪಂಚೇಂದ್ರಿಯಗಳು. ಈ ಕುದ್ರೆಗಳಿಗೆ ಮೇವು ಪಂಚ ಕರ್ಮೇಂದ್ರಿಯಗಳ ಮೂಲಕ. ಇಷ್ಟಾಯ್ತು, ಸಾರಥಿ ಇಲ್ದೆ ಇದ್ರೆ ಈ ಕು ದ್ರೆಗಳು ಹೆಂಗೆ ಬೆಕೋಹಂಗೆ (ಈ ಪಂಚೇಂದ್ರಿಯಗಳೂ, ಕರ್ಮೇಂದ್ರಿಯಗಳು ಆಡಿಸುವಂತೆ) ಓಡ್ಹೋಗ್ಬಹುದಲ್ವಾ, ಹಾಗಾದ್ರೆ ಸಾರಥಿ ಯಾರು?. – ಸಾರಥಿ ನಮ್ಮ ‘ಧೀ ಶಕ್ತಿ’ ಬುದ್ಧಿಮತೆ, ವಿವೇಕ ಅನ್ಕೊಳಿ. ಅಂದ್ರೆ ಕಡಿವಾಣ ನಮ್ಮ ಕೈಯಲ್ಲೇ ಇದೆ ಅಂತಾಯ್ತು. ಭಗವದ್ಭಕ್ತಿಯಿಂದ, ಆ ಪರಮಾತ್ಮ ಅನುಗ್ರಹಿಸಿದ ಈ ರಥವನ್ನು ಮನೋಭಿಮಾನಿಯಾದ ಈಶ್ವರಾನುಗ್ರಹದಿಂದ ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ದೇ ಅಂತ ಆಯ್ತಲ್ವಾ?. ಸರಿ ದಾರಿಯಲ್ಲಿ ನಡೆಸಿಕೊಂಡು ಹೋಗೋಣ.
ಹದಿನೆಂಟನೇ ಅಧ್ಯಾಯದ ಫಲಶೃತಿ –
“ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ” || 18.78 ||

Wherever there is Shree Krishna, the Lord of all Yog, and wherever there is Arjun, the supreme archer, there will also certainly be unending opulence, victory, prosperity, and righteousness.


” ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ: ”

- - = oOo = - -

One thought on “BhagavadGita’s Pointers to Lay Aside Laziness

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s