BhagavadGita’s Guidance to Rein in Lust

In this blog, the pointers given by Lord Sri Krishna to rein in the lust are discussed.

Srimad Bhagavad Gita says, “Lust, Anger, and Greed are the three Gates to Hell.”

So, what is Lust? It can be defined as a strong feeling / emotion caused by the desire for an object when one already has the required amount of that object. Lust can be for wealth, power, status, any materialistic possessions, or sexuality.

Let us consider an example: Let us say, a person has a car that satisfies the commute needs of his / her family. He / She sees someone else driving a bigger car, may be of a allegedly a ‘branded car.’ If the mind isn’t reined in, he / she will start dreaming of getting a bigger / better car. This craving can have two outcomes:

Case A: Let us assume, he / she can buy that ‘new / better’ car. Will that person be satisfied if he / she buys that so-called dream car? No! Because by that time, there will another type of vehicle that could be more attractive or has more features!! Whether that type of car is needed or not, mind starts craving for it thus getting stuck in a whirlpool of desires! So, the outcome is, Greed!!

Case B: He / She can’t afford to buy that desired car, which leads to frustration and then Anger!

If he / she didn’t give into that craving realizing that he / she already has the necessary mode of transportation, it wouldn’t have led to greed / anger.

Yes, it is easier said than done. Different people have different attitudes and priorities in their life driven by:

  • Sankars / Vasanas they are born with, basically carried forward from the previous births
  • The family / environment they are born into
  • Peers / extended circle of people they interact with as they grow

Despite these factors, if one realizes the need to change for the better, one can definitely work towards becoming a contented person appreciating what one already has. Lord Sri Krishna has given us guidelines to achieve this goal. Let us delve into the following article by our respected blogger, Sri. RamaMurthy wherein the relevant Shlokas / Verses from Bhagavad Gita are explained along with suitable quotes from famous works like MankuTimmana Kagga of Dr. D.V.Gundappa, a famous literary person and philosopher.

(NOTE: This blog post is part of a series; please refer to BhagavadGita, The Solution Provider to access the complete series.)

ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ:

  1. ಅಧ್ಯಾಯ 3, ಕರ್ಮಯೋಗ, ಶ್ಲೋ. 37, 41, & 43 (Shloka # 37, 41, and 43 of Chapter 3, ‘Karma Yoga’)
  2. ಅಧ್ಯಾಯ 5, ಕರ್ಮಸಂನ್ಯಾಸಯೋಗ, ಶ್ಲೋ. 22 (Shloka # 22 of Chapter 5, ‘Karma Sanyasa Yoga’)
  3. ಅಧ್ಯಾಯ 16, ದೈವಾಸುರ ಸಂಪದ್ವಿಭಾಗ ಯೋಗ, ಶ್ಲೋ. 21 (Shloka # 21 of Chapter 16, ‘Daivasura Sampad Vibhaga Yoga’)

1. ಅಧ್ಯಾಯ 3, ಕರ್ಮಯೋಗ, ಶ್ಲೋ. 37, 41, & 43 (Shloka # 37, 41, and 43 of Chapter 3, ‘Karma Yoga’)
ಈ ಅಧ್ಯಾಯ ಕರ್ಮಯೋಗ ಓದುವಾಗೆಲ್ಲಾ ಈಶಾವಾಸ್ಯ ಉಪನಿಷದ್ ಮನಸ್ಸಿಗೆ ಬರ್ದಲೆ ಇರೋಲ್ಲ. ಸ್ವಲ್ಪ ಎರಡನೇ ಮಂತ್ರ ನೋಡೋಣ:-
ಕುರ್ವನ್ನೇವೇಹ ಕರ್ಮಾಣಿ
ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋsಸ್ತಿ
ನ ಕರ್ಮ ಲಿಪ್ಯತೇ ನರೇ ||

ಭಗವದ್ಗೀತೆಯ ಕರ್ಮಯೋಗದ ಸಾರವನ್ನು ಈ ಒಂದೇ ಶ್ಲೋಕದಲ್ಲಿ ಹೇಳಿದೆ ಅನ್ಸುತ್ತೆ. ಇಲ್ಲಿ, ಕರ್ಮಮಾರ್ಗದ ಶ್ರೇಷ್ಠತೆ ಯನ್ನು ಎತ್ತಿ ಹಿಡಿದಿದೆ. (ಭ. ಗೀ. ಆ. 5 ಶ್ಲೋ. 2 ರಲ್ಲು ಕರ್ಮದ ಶ್ರೇಷ್ಠತೆ ಯನ್ನು ಹೇಳಿದೆ). ಶ್ಲೋಕದ ಭಾವಾರ್ಥ:-
ಮಾಡಬೇಕಾದ ಕೆಲಸ (ಕರ್ಮ) ಗಳನ್ನು ಮಾಡಿಕೊಂಡೇ ಮನುಷ್ಯರು ನೂರು ಸಂವತ್ಸರಗಳ ಕಾಲ ಬದುಕಲಿಚ್ಚಿಸಬೇಕು. ಇದುವೇ ಸರಿಯಾದ ದಾರಿ. ಇದಕ್ಕಿಂತ ಬೇರೆಯಾದ ಮಾರ್ಗವಿಲ್ಲ. (ತನ್ನ ಭೋಗಕ್ಕಲ್ಲದೇ, ಈಶ್ವರ ಸೇವಾ ಬುದ್ಧಿಯಿಂದ ಬಾಳು ನಡೆಸುವುದೇ ಆದರೆ ) ಅಂಥವರಿಗೆ ಯಾವುದೇ ಕರ್ಮದ ದೋಷ ಅಂಟುವುದಿಲ್ಲ.

ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಕರ್ಮವನ್ನು ಮಾಡ್ತಾ , ಆಶಾವಾದಿಯಾಗಿ, ಪರೋಪಕಾರಿಯಾಗಿ (ತ್ಯಕ್ತೇನ) ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದು ನಿರಾಷಾ ಭಾವ ಯಾವತ್ತಿಗೂ ಬರಬಾರದು.

ಸಾಂಪ್ರದಾಯಿಕವಾಗಿ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ. ಆದರೆ ಸಂಸಾರಿಕರಿಗೆ- ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಕರ್ಮ ಪದಕ್ಕೆ ಅರ್ಥ ಮಾಡ್ಕೋಬೇಕು. (ಶ್ಲೋಕದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು ಅನ್ನುವ ಅರ್ಥ ನಾವು ಕಂಡ್ಕೊಬೇಕು ).

ಯಾರಿಗೆ ತಾನೇ ಧನಕನಕಾದಿ ಸಂಪತ್ತು, ಭೋಗ ಭಾಗ್ಯಗಳು, ಅಧಿಕಾರ ಬೇಡ – ಎಲ್ಲರೂ ಇದನ್ನೇ ಬಯಸುವುದು ತಾನೇ. ಆಸೆ ಪಡೋದು ತಪ್ಪಲ್ಲ, ಆದ್ರೆ, ಅದು ನಮ್ಮ ಮಿತಿಯನ್ನ ದಾಟಬಾರದು, ಸಿಗಲಾರದ್ದನ್ನ ಹೇಗಾದ್ರೂ ಪಡೆಯಬೇಕು ಅಂತ ಹೋಗ್ತೀವಲ್ಲ ಅದು ತಪ್ಪು, ಅದು ದುಃಖಕ್ಕೆ ಕಾರಣ ಅಂತ.
ನಾವು ಏನೆಲ್ಲಾ ಪಡೆದರೂ ಅದು ಈಶ್ವರಾನುಗ್ರಹ – ಈಶಾವಾಸ್ಯಮಿದಗಂಸರ್ವಂ . . ಮತ್ತು ತ್ಯಕ್ತೇನ ಭುಂಜೀಥಾ . . (ಮೊದಲನೇ ಶ್ಲೋಕ) ನಮ್ಮ ಮನದಲ್ಲಿರಬೇಕು. ಇದು ಭಗವದ್ಗೀತೆಯ ಕರ್ಮಯೋಗದ ಸಾರವೂ ಹೌದು.
ಕಗ್ಗವೊಂದು ಇದಕ್ಕೆ ಪೂರಕವಾಗಿದೆ – ಇದನ್ನ ಮೂರನೇ ಅಧ್ಯಾಯದ ಒಂದು ನೋಟ ಅಂತ ಹೇಳುವುದೂ ಇದೆ. ಇದನ್ನ ಆಮೇಲೆ ನೋಡೋಣ.


ಮೂರನೇ ಅಧ್ಯಾಯ ಹಾಗೂ ನಮ್ಮ ಮುಂದಿರುವ ಶ್ಲೋಕದ ಕಡೆ ಗಮನ ಹರಿಸೋಣ-
ಹಿಂದಿನ ಅಧ್ಯಾಯದಲ್ಲಿ, ಶ್ರೀ ಕೃಷ್ಣನು, ಕರ್ಮಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಅಂತ ಹೇಳಿದ್ದಾನೆ. ಅರ್ಜುನನಿಗೆ ಸಹಜವಾದ ಸಂದೇಹ – ಕರ್ಮ ಮಾರ್ಗಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಅಂತ ಹೇಳಿರುವಾಗ, ಈ ತಾಮಸಿಕ ಘನ ಘೋರ ಯುದ್ಧ ಬೇಕೇ? ಅರ್ಜುನನ ಈ ಪ್ರಶ್ನೆಯೊಂದಿಗೇ ಈ ಅಧ್ಯಾಯ ಶುರುವಾಗುತ್ತೆ.
ಕರ್ಮ ಮಾರ್ಗ ಜ್ಞಾನ ಮಾರ್ಗ ಒಂದಕ್ಕೊಂದು ವಿರೋಧ ಮಾರ್ಗಗಳಲ್ಲ, ಒಂದಕ್ಕೊಂದು ಪೂರಕ. ಕರ್ಮ ಮಾರ್ಗದಿಂದ ಜ್ಞಾನ, ಅಂತ‌ ಹೇಳ್ತಾ ಕರ್ಮ ಮಾರ್ಗ ಹೇಗಿರಬೇಕು ಅಂತ ವಿವರಣೆ ಕೊಡ್ತಾ ಹೋಗುತ್ತೆ ಈ ಅಧ್ಯಾಯ. ಕರ್ಮ ಮಾಡುವಾಗ ಮನಸ್ಸಿನ ವಿಕಾರಗಳನ್ನು ಬಿಡ ಬೇಕು. ಫಲಾಪೇಕ್ಷೆ ಬಿಡಬೇಕು. ಹಾಗೆಯೇ ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ . . . (ಶ್ಲೋ. 30) ಅಂತ ಹೇಳ್ತಾ, ನೀನು ಮಾಡುವ ಕರ್ಮಗಳನ್ನೆಲ್ಲಾ ನನಗೆ ಅರ್ಪಿಸಿ, ಮನಸ್ಸಿನ ವಿಕಾರಗಳನ್ನು ಬಿಟ್ಟು, ಮನಸ್ಸನ್ನು ನನ್ನಲ್ಲಿ ಅರ್ಪಿಸಿ, ಮಮಕಾರ ತೊರೆದು, ಯುದ್ಧ ಮಾಡು ಅಂತ ಒಪ್ಪಿಸ್ತಾ ಹೋಗ್ತಾನೆ.

ಹಿಂದಿನ ಶ್ಲೋಕ (36)ರಲ್ಲಿ ಅರ್ಜುನ ಕೇಳ್ತಾನೆ – “ಪಾಪ ಪುಣ್ಯದ ಅರಿವಿದ್ದೂ, ಮಾಡಬಾರದ ಕೆಲಸ ಎಂದು ತಿಳಿದಿದ್ದೂ, ಮನುಷ್ಯ ಕೆಲವೊಮ್ಮೆ ತಪ್ಪು ಮಾಡ್ತಾನೆ -ಇದು ಏಕೆ? ನಮಗೆ ಸರಿ-ತಪ್ಪಿನ ಅರಿವಿದ್ದೂ ಏಕೆ ತಪ್ಪನ್ನು ಮಾಡ್ತೀವಿ ? ಮಾಡಬಾರದು ಅನಿಸಿದ್ದನ್ನು ಮಾಡುವಂತೆ ಪ್ರೇರೇಪಿಸುವ ಶಕ್ತಿ ಯಾವುದು? ನಾವು ಬೇಡವೆಂದರೂ ನಮ್ಮ ಕೈಯಲ್ಲಿ ಮಾಡಿಸುವ ಆ ಶಕ್ತಿ ಯಾವುದು?” ಇದಕ್ಕೆ ಉತ್ತರವಾಗಿ ಮುಂದಿನ ಶ್ಲೋಕದಲ್ಲಿ ಶ್ರೀ ಕೃಷ್ಣ ಹೇಳ್ತಾನೆ –

ಶ್ರೀ ಭಗವಾನುವಾಚ
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ |
ಮಹಾಶನೋ ಮಹಾಪಾಪ್ಮಾ ವಿಧ್ಯೇನಮಿಹ ವೈರಿಣಮ್ ||3.37 ||

ಅರ್ಥ:- ಭಗವಂತ ಹೇಳಿದನು – ಅರ್ಜುನ, ರಜೋಗುಣದಿಂದ ಹುಟ್ಟಿದ, ನಂತರದಲ್ಲಿ ಕ್ರೋಧವಾಗಿ ಮಾರ್ಪಡುವ ಕಾಮವೇ ಇದಕ್ಕೆ ಕಾರಣ. ಇದು ಎಲ್ಲವನ್ನೂ ತಿಂದು ಹಾಕುವ ಈ ಜಗತ್ತಿನ ಪಾಪಪೂರಿತವಾದ ಶತ್ರು.

श्रीभगवानुवाच |
काम एष क्रोध एष रजोगुणसमुद्भव: ||
महाशनो महापाप्मा विद्ध्येनमिह वैरिणम् ||3.37||

śhrī bhagavān uvācha
kāma eṣha krodha eṣha rajo-guṇa-samudbhavaḥ |
mahāśhano mahā-pāpmā viddhyenam iha vairiṇam ||3.37||

Meaning: The Supreme Lord said: “It is lust alone, which is born of contact with the mode of passion, and later transformed into anger. Know this as the sinful, all-devouring enemy in the world.”

ಮುಂದೆ, ಇಂದ್ರಿಯಗಳು, ಮನಸ್ಸು, ಬುದ್ಧಿ, ಕಾಮ ಕ್ರೋಧಾದಿಗಳ ವಾಸಸ್ಥಾನ ಅಂತ ಹೇಳಿದೆ. . ಮನಸ್ಸು ‘ಅದು ನನ್ನದಾಗಬೇಕು, ನನ್ನದೇ ಆಗಬೇಕು (Possessiveness)‘ ಎಂದು ಯೋಚಿಸುಕ್ಕೆ ಶುರು ಮಾಡುತ್ತೆ,. ಇದರ ನಿಗ್ರಹ ಹೇಗೆ? ಅದಕ್ಕೆ ಉತ್ತರವಾಗಿ ಮುಂದಿನ ಶ್ಲೋಕ –
ತಸ್ಮಾತ್ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ |
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನ ನಾಶನಮ್ ||3.41||

ಅರ್ಥ:- ಆದ್ರಿಂದ, ಎಲೈ ಅರ್ಜುನ ! ನೀನು ಮೊದಲು ಇಂದ್ರಿಯಗಳನ್ನು ವಶಮಾಡಿಕೊಂಡು ಜ್ಞಾನ ಮತ್ತು ವಿಜ್ಞಾನಗಳನ್ನು ನಾಶಮಾಡುವ ಈ ಕಾಮರೂಪೀ ಪಾಪಿಯನ್ನು ಖಂಡಿತವಾಗಿಯೂ ನಾಶಮಾಡು.
ನಮ್ಮ ಇಂದ್ರಿಯಗಳು ಸೃಷ್ಟಿಯ ಇತರ ವಸ್ತುಗಳಿಗಿಂತ ಶ್ರೇಷ್ಠವಾದವುಗಳು, ಅವುಗಳಿಗಿಂತಲೂ ಶ್ರೇಷ್ಠವಾದದ್ದು ನಮ್ಮ ಮನಸ್ಸು, ಮನಸ್ಸಿಗಿಂತಲೂ ಶ್ರೇಷ್ಠವಾದದ್ದು ವಿವೇಕ, ಇವೆಲ್ಲಕ್ಕಿಂತ ಶ್ರೇಷ್ಠವಾದದ್ದು ಆತ್ಮಜ್ಞಾನ. .ಇಂದ್ರಿಯಗನ್ನು ನಾವು ಮೊದಲ ಹಂತದಲ್ಲೇ ನಿಯಂತ್ರಿಸಬೇಕು. ಈ ಶತ್ರುವಿನ ಮೊದಲ ಪ್ರವೇಶ ದ್ವಾರವಾದ ಇಂದ್ರಿಯದಲ್ಲೇ ಅದರ ನಿಯಂತ್ರಣ ಮಾಡಬೇಕು.

तस्मात्त्वमिन्द्रियाण्यादौ नियम्य भरतर्षभ |
पाप्मानं प्रजहि ह्येनं ज्ञानविज्ञाननाशनम् ||3.41||

tasmāt tvam indriyāṇyādau niyamya bharatarṣhabha |
pāpmānaṁ prajahi hyenaṁ jñāna-vijñāna-nāśhanam ||3.41||

Meaning: In this verse, Lord Sri Krishna tells how to curb the lust: “Therefore, O best of the Bharatas, in the very beginning bring the senses under control and slay this enemy called desire, which is the embodiment of sin and destroys knowledge and realization.

ಆದರೆ ಹೇಗೆ? ಇದಕ್ಕೆ ಯಾರು ಸಹಾಯ ಮಾಡುತ್ತಾರೆ ? ಮುಂದೆ ಹೇಳ್ತಾನೆ –

ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ |
ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಮ್ ||3.43|
|
ಭಾವಾರ್ಥ:- ಈ ಪ್ರಕಾರ ಬುದ್ಧಿಗಿಂತ ಹೆಚ್ಚಿನದು ಅರ್ಥಾತ್ ಸೂಕ್ಷ್ಮ ಹಾಗೂ ಎಲ್ಲಾ ರೀತಿಯಿಂದಲೂ ಬಲಾಢ್ಯ ಮತ್ತು ಶ್ರೇಷ್ಠವಾದುದು ನಿನ್ನ ಆತ್ಮವೆಂದು ತಿಳಿದುಕೊಂಡು ಬುದ್ಧಿಯ ಮೂಲಕ ಮನಸ್ಸನ್ನು ವಶಮಾಡಿಕೊಂಡು ಎಲೈ ಮಹಾಬಾಹುವೇ ! ನಿನ್ನ ಶಕ್ತಿಯನ್ನು ಅರಿತುಕೊಂಡು ಈ ದುರ್ಜಯವಾದ ಕಾಮರೂಪೀ ಶತ್ರುವನ್ನು ನಾಶಮಾಡು.

एवं बुद्धे: परं बुद्ध्वा संस्तभ्यात्मानमात्मना |
जहि शत्रुं महाबाहो कामरूपं दुरासदम् ||3.43||

evaṁ buddheḥ paraṁ buddhvā sanstabhyātmānam ātmanā |
jahi śhatruṁ mahā-bāho kāma-rūpaṁ durāsadam ||3.43||

Meaning: Lord Sri Krishna says, “Thus knowing the soul to be superior to the material intellect, O mighty armed Arjun, subdue the Self (senses, mind, and intellect) by the Self (strength of the soul), and kill this formidable enemy called lust.” The gist of this shloka is: Each of us has a Soul, which is a part of the Divine energy. When it forgets that very fact, it wanders around craving for worldly possessions. If and once the Soul wakes up to its higher nature and decides to take the righteous path, it can exercise the intellect in the proper direction. The intellect will then govern the mind and the senses and one’s life will move in the direction of eternal welfare. In this way, the higher self (soul) must be used to control the lower self (senses, mind, and, intellect).

ನಮ್ಮ ಪಂಚೇಂದ್ರಿಯಗಳು ಮಾಡುವ ಕೆಲಸಗಳ ಕಡೆ ಗಮನ ಹರಿಸಿದರೆ ಅವುಗಳ ಶ್ರೇಷ್ಠತೆಯ ಅರಿವು ನಮಗೆ ಗೊತ್ತಾಗುತ್ತೆ.. ಇವುಗಳು ಕ್ರಿಯಾತ್ಮಕ ವಾಗಿದ್ರೆ ಮಾತ್ರ ನಾವು ಏನನ್ನಾದ್ರೂ ಮಾಡಲು ಸಾಧಿಸಲು ಸಾಧ್ಯ. ಹಾಗೆಯೇ, ಮನಸ್ಸುಅವುಗಳಿಗಿಂತಲೂ ಶ್ರೇಷ್ಠ, ಏಕೆಂದರೆ ಈ ಪಂಚೇಂದ್ರಿಯಗಳನ್ನ ಮನಸ್ಸಿ ನಿಂದ ನಿಗ್ರಹ ಮಾಡಬಹುದಾಗಿರುತ್ತದೆ. ಆದರೆ ಅವುಗಳನ್ನು ನಿಗ್ರಹಿಸುವ ಮನಸ್ಸಿಗೆ ತಪ್ಪು ಒಪ್ಪಿನ ಅರಿವಿರುವುದಿಲ್ಲ. ಯಾವುದು ತಪ್ಪು, ಯಾವುದು ಸರಿ ಎಂದು ವಿವೇಚಿಸಿ ಮನಸ್ಸಿಗೆ ದಾರಿ ತೋರಲು ಪ್ರಯತ್ನಿಸುವುದು ವಿವೇಕ. ಆದ್ದರಿಂದ ವಿವೇಕ ಮನಸ್ಸಿಗಿಂತಲೂ ಶ್ರೇಷ್ಠವಾದದ್ದು. ಕೊನೆಗೆ ವಿವೇಕ ಕೆಲಸ ಮಾಡಲು ಅದಕ್ಕೆ ಆತ್ಮ ಜ್ಞಾನದ ಅವಶ್ಯಕತೆ ಇದೆ. ಆದ್ದರಿಂದ ಆತ್ಮಜ್ಞಾನ ಶ್ರೇಷ್ಠವಾದದ್ದು. ಹೀಗೆ ಇಂದ್ರಿಯ-ಮನಸ್ಸು-ಬುದ್ಧಿಗೆ ನಿಲುಕದ ಆ ಪರತತ್ವವನ್ನು ತಿಳಿದು, ಮನೋನಿಗ್ರಹವನ್ನು ಹೊಂದುವ ಪ್ರಯತ್ನ ನಮ್ಮದಾಗಬೇಕು.

2. ಅಧ್ಯಾಯ 5, ಕರ್ಮಸಂನ್ಯಾಸಯೋಗ, ಶ್ಲೋ. 22 (Shloka # 22 of Chapter 5, ‘Karma Sanyasa Yoga’)
ಅರ್ಜುನನ ದ್ವಂದ್ವ ಬಿಟ್ಟಿಲ್ಲ, ಮೂರನೇ ಅಧ್ಯಾಯದಲ್ಲಿ ಕರ್ಮದ ಬಗ್ಗೆ ಹೇಳಿ ಈ ಐದನೇ ಅಧ್ಯಾಯದಲ್ಲಿ ಕರ್ಮ ಸಂನ್ಯಾಸದ ಬಗ್ಗೆ ಹೇಳ್ತಿದೆ. ಇದು ಸ್ವಲ್ಪ ಗೊಂದಲವೂ ಕೂಡ, ಅರ್ಜುನನ ಪ್ರಶ್ನೆಯೂ ಇದು – ನೀನು ಕರ್ಮ ತ್ಯಾಗ ಮಾಡಬೇಕು ಅಂತೀಯ, ಮತ್ತೆ ಭಕ್ತಿ ಪೂರ್ವಕ ಕರ್ಮವನ್ನು ಮಾಡಬೇಕೆಂದೂ ಹೇಳ್ತಿಯ. ಇವೆರಡರಲ್ಲಿ ಯಾವುದು ಹೆಚ್ಚು ಶ್ರೇಯಸ್ಕರ ನೀನೇ ಹೇಳಬೇಕು. ಇದು ಮೊದಲನೆಯ ಶ್ಲೋಕವೂ ಕೂಡ. ಇದಕ್ಕೆ ಉತ್ತರವಾಗಿ ಎರಡನೆಯ ಶ್ಲೋಕದಲ್ಲಿಯೇ ಶ್ರೀ ಕೃಷ್ಣ ಉತ್ತರ ಹೇಳಿದ್ದಾನೆ – ಇವೆರಡೂ ಶ್ರೇಷ್ಠವೇ. ಆದಾಗ್ಯೂ ಕರ್ಮಸಂನ್ಯಾಸ ಕ್ಕಿಂತ ಕರ್ಮಯೋಗವೇ ಶ್ರೇಷ್ಠ. ಆದರೆ, ಇದು ಸಂನ್ಯಾಸಯೋಗಕ್ಕೆ ಪೂರ್ವಸಿದ್ಧತೆ. ಕರ್ಮ ಸಂನ್ಯಾಸವೆಂದರೆ ಕರ್ಮತ್ಯಾಗವಲ್ಲ. ರಾಗದ್ವೇಷ ಮುಕ್ತನೂ, ಮನೋವಿಕಾರವಿಲ್ಲದವನೂ ಹಾಗೆಯೇ ಕರ್ಮಗಳನ್ನು ಮಾಡುತ್ತಾ ಸಮಸ್ತ ಜೀವಿಗಳಿಗೂ ಹಿತವನ್ನೇ ಬಯಯುತ್ತಾ ಬ್ರಹ್ಮಾರ್ಪಣಾಭಾವದಿಂದ ಕಾಯಕ ಕರ್ಮಗಳನ್ನು ಮಾಡುವುದು ಕರ್ಮ ಸಂನ್ಯಾಸ . ಈ ಅಧ್ಯಾಯದ 10ನೇ ಶ್ಲೋಕದಲ್ಲಿ ಬ್ರಹ್ಮಣ್ಯಾಧಾಯ . . . ಅಂತ ಹೇಳಿದೆ ಅಂದ್ರೆ ಬ್ರಹ್ಮನಿಗೆ ಒಪ್ಪಿಸಿ – ಬ್ರಹ್ಮಾರ್ಪಣ ಭಾವದಿಂದ ನಾವು ಕಾಯಕ ಕರ್ಮಗಳನ್ನು ಮಾಡಬೇಕು ಅನ್ನುವುದೇ ಆಗಿದೆ. ನಮ್ಮ ಕಾಯಕ ಕರ್ಮಗಳನ್ನು ಬಹಿರಂಗವಾಗಿ ಮಾಡ್ತಾ ಅಂತರಂಗದಲ್ಲಿ ಸಂನ್ಯಸನ ಕಂಡ್ಕೋಬೇಕು, ಭಗವತ್ಸೇವಾ ಭಾವದಿಂದ ಮಾಡಬೇಕು.
ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ |
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ||5.22||

ಅರ್ಥ:- ಈ ಇಂದ್ರಿಯ ಮತ್ತು ವಿಷಯಗಳಿಂದ ಉಂಟಾಗುವ ಭೋಗಗಳೆಲ್ಲವೂ ವಿಷಯಾಸಕ್ತರಿಗೆ ಸುಖರೂಪಿಯಾಗಿ ಕಂಡುಬಂದರೂ ಅವು ದುಃಖಕ್ಕೆ ಕಾರಣವಾಗಿವೆ ಮತ್ತು ಅನಿತ್ಯವಾಗಿವೆ. ಅದ್ದರಿಂದ ಅರ್ಜುನನೇ! ಬುದ್ಧಿವಂತ ವಿವೇಕೀ ಪುರುಷರು ಅವುಗಳಲ್ಲಿ ರಮಿಸುವುದಿಲ್ಲ.

ये हि संस्पर्शजा भोगा दु:खयोनय एव ते |
आद्यन्तवन्त: कौन्तेय न तेषु रमते बुध: ||5.22||

ye hi sansparśha-jā bhogā duḥkha-yonaya eva te |
ādyantavantaḥ kaunteya na teṣhu ramate budhaḥ ||5.22||

Meaning: Lord Sri Krishna highlights the temporary nature of the satisfaction / pleasure derived out of worldly possessions / achievements.The pleasures that arise from contact with the sense objects, though appearing as enjoyable to worldly-minded people, are verily a source of misery. O son of Kunti, such pleasures have a beginning and an end, and so the wise do not delight in them.”  For example, an alcoholic enjoys the pleasure of drinking alcohol at night, but the next morning, the hangover gives him a splitting headache.  However, the bliss of God is eternal, and once attained, it remains forever.


ಹಿಂದಿನ ಶ್ಲೋಕಗಳಲ್ಲಿ ಆಧ್ಯಾತ್ಮಿಕವಾಗಿ ಸಮದೃಷ್ಟಿ ಬಗ್ಗೆ ಹೇಳಿ, ಅದಕ್ಕೆ ಪೂರಕವಾಗಿ ಸುಖ ಬಂದಾಗ ಹಿಗ್ಗಬಾರದು; ದುಃಖ ಬಂದಾಗ ಕುಗ್ಗಬಾರದು ಎಂಬ ವ್ಯಾಖ್ಯಾನವಿದೆ.

ನಾವು ನಮ್ಮ ಇಂದ್ರಿಯಗಳನ್ನು ಕರ್ಮ ಮಾಡದಿರುವಂತೆನಿಗ್ರಹಿಸಬೇಕಾಗಿಲ್ಲ, ನಾವು ಮಾಡುವ ಕೆಲಸಗಳಿಗೆ ನಮ್ಮ ಇಂದ್ರಿಯಗಳನ್ನು ಉಪಯೋಗಿಸಿದರೂ ಮನಸ್ಸಿನಲ್ಲಿ ನಮ್ಮ ಇಂದ್ರಿಯಗಳು ತಪ್ಪು ಮಾಡದಂತೆ ನಿಗ್ರಹಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಮಾತು ಎಲ್ಲ ಇಂದ್ರಿಯಗಳಿಗೂ ಅನ್ವಯವಾಗುತ್ತದೆ. ನಾವು ಕರ್ಮಯೋಗದ ಮಾರ್ಗದಲ್ಲಿ ನಡೆಯಬೇಕಾದರೆ ಇಂದ್ರಿಯ ನಿಗ್ರಹ ಅತ್ಯಗತ್ಯ ಅನ್ನೋದನ್ನ ನಾವು ಮನಗಾಣಬೇಕು.

3. ಅಧ್ಯಾಯ 16, ದೈವಾಸುರ ಸಂಪದ್ವಿಭಾಗ ಯೋಗ, ಶ್ಲೋ. 21 (Shloka # 21 of Chapter 16, ‘Daivasura Sampad Vibhaga Yoga’)

ಈ ಅಧ್ಯಾಯದಲ್ಲಿ, ಮಾನವರು ದೈವಾಂಶ, ಅಸುರಾಂಶಗಳ ಸಂಭೂತರು ಹಾಗೆಯೆ ಅವರಲ್ಲಿ ಅಭಿವ್ಯಕ್ತವಾಗಿರುವ ತ್ರಿಗುಣಗಳ ಪ್ರಭಾವ ಹಾಗೂ ಇದರ ಪ್ರಮಾಣದ ಮೇಲೆ, ದೈವತ್ವ ಅಥವಾ ಆಸುರತ್ವ ಪ್ರಭಾವ ನಮ್ಮದಾಗಿರುತ್ತೆ ಎಂಬುದರ ವಿವರಣೆ ಇದೆ. ನಾವು ದೈವೀ ಗುಣಗಳನ್ನು ವೃದ್ಧಿಸಿಕೊಳ್ಳುತ್ತಾ, ಅಸುರೀ ಗುಣಗಳನ್ನ ನಿಗ್ರಹಿಸಿಕೊಳ್ಳುತ್ತಾ ಹೋಗಬೇಕು ಅನ್ನುವುದು ಈ ಅಧ್ಯಾಯದ ಸಾರಾಂಶ ಅನ್ನಬಹುದು.

ಮುಂದೆ ಶ್ರೀಕೃಷ್ಣ ಪರಮಾತ್ಮ ‘ದೈವೀ ಸ್ವಭಾವ’ ಮತ್ತು ‘ಅಸುರೀ’ ಸ್ವಭಾವಗಳ ಲಕ್ಷಣಗಳನ್ನ ಹೇಳ್ತಾ 26 ಸದ್ಗುಣಗಳ ವಿಶ್ಲೇಷಣೆ, 6 ಅಸುರೀ ಗುಣಗಳ ವಿಶ್ಲೇಷಣೆ ಮಾಡ್ತಾ, ವಿವರಿಸ್ತಾ ದೈವೀಸ್ವಭಾವ’ ಮತ್ತು ‘ಆಸುರೀಸ್ವಭಾವ’ ಹಾಗೂ ಅದರ ಗುಣಲಕ್ಷಣಗಳನ್ನು ಸ್ಪಷ್ಟಪಡಿಸಿದ್ದಾನೆ. ದೈವೀಸ್ವಭಾವ ಇದು ಜ್ಞಾನ ಸಾಧನ. ಆಸುರೀಸ್ವಭಾವ ಜ್ಞಾನ ವಿರೋಧಿ. ಈ ಎರಡೂ ಸ್ವಭಾವಗಳು ಸಹಜವಾಗಿ ಎಲ್ಲರಲ್ಲೂ ಇದೆ. ಇದರ ಪ್ರಮಾಣ ಮಾತ್ರ ಬೇರೆ ಬೇರೆ, ಹಾಗೆಯೇ ಇದರ ಪ್ರಮಾಣದ ಮೇಲೆ, ದೈವೀಗುಣ ಅಥವಾ ಅಸುರೀಗುಣ ನಮ್ಮದಾಗಿರುತ್ತೆ. ಈ ಅಧ್ಯಾಯದ 5ನೇ ಶ್ಲೋಕದಲ್ಲಿಯೇ – ದ್ವೌ ಭೂತಸರ್ಗೌ ಲೋಕೇಽಸ್ಮಿಂದೈವ ಆಸುರ ಏವ ಚ ।
ದೈವೀಗುಣ ಮೋಕ್ಷದಾಯಕ, ಅಸುರೀ ಗುಣ ಬಂಧನ ಕಾರಕ . . . ಅಂತ ಹೇಳಿದೆ.
ನಮ್ಮ ಮುಂದಿರುವ ಶ್ಲೋಕವನ್ನು ನೋಡೋಣ –
ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ
ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ತ್ರಯಂ ತ್ಯಜೇತ್ ।। 16.21 ।।

ಅರ್ಥ:- ನರಕಕ್ಕೆ ಕಾಮ, ಕ್ರೋಧ, ಲೋಭಗಳೆಂಬ ಮೂರುವಿಧವಾದ ದ್ವಾರಗಳಿವೆ. ವಿವೇಕಿಯಾದವನು ಆತ್ಮದ ಅವನತಿಗೆ ಕಾರಣವಾದ ಇವುಗಳನ್ನು ತ್ಯಜಿಸ ಬೇಕು.
ಉಪನಿಷದ್ಗಳು ಹೇಳುವಂತೆ ದೈವೀಗುಣ ಸಂಪನ್ನರಾಗಿ ಉತ್ತಮ ಗತಿಯನ್ನೋ, ಮಿಶ್ರ ಭಾಗದಿಂದ (ದೈವೀ ಗುಣ-ಅಸುರೀಗುಣ) ಮತ್ತೆ ಮನುಷ್ಯ ಲೋಕವನ್ನೋ, ಅಥವಾ ಅಸುರೀಭಾವಪೂರಿತರಾಗಿ ನರಕವನ್ನೋ ಹೊಂದುವ ಸ್ವಾತಂತ್ರ್ಯವನ್ನ ನಮಗೆ ಭಗವಂತ ಕೊಟ್ಟಿದ್ದಾನೆ. ಆಯ್ಕೆ ನಮ್ಮದು.

त्रिविधं नरकस्येदं द्वारं नाशनमात्मन: |
काम: क्रोधस्तथा लोभस्तस्मादेतत्त्रयं त्यजेत् || 16.21||

tri-vidhaṁ narakasyedaṁ dvāraṁ nāśhanam ātmanaḥ |
kāmaḥ krodhas tathā lobhas tasmād etat trayaṁ tyajet || 16.21||

Meaning: Lord Sri Krishna says,There are three gates leading to the hell of self-destruction for the soul—lust, anger, and greed. Therefore, all should abandon these three.” Those desirous of welfare should learn to dread these three and carefully avoid their presence in their own personality.

ಡಿ.ವಿ.ಜಿ. ಯವರು ಉದಾಹರಿಸಿರುವ Plato ವಿನ ಈ ಅಧ್ಯಾಯಕ್ಕೆ ಪೂರಕವಾದ quote ಚೆನ್ನಾಗಿದೆ. ಅದನ್ನ ಇಲ್ಲಿ ಹೇಳೋಣ ಅನ್ನಿಸ್ತಿದೆ.
In the human soul, there is a better and also a worse principle and when the better has the worse under control, then a man is said to be MASTER OF HIMSELF and (which is the term of praise) but when owing to evil education or association, the better principle, which is also the smaller, is overwhelmed by the greater mass of the worse – in this case he is blamed and called the SLAVE OF SOUL AND UNPRINCIPLED“. – THE REPUBLIC, BOOK IV. ( ಸಮಯ ಸಿಕ್ಕಾಗಈ BOOK ಓದ ಬೇಕು)

ಕಗ್ಗವೊಂದು ಮೂರನೇ ಅಧ್ಯಾಯಕ್ಕೆ ಪೂರಕವಾಗಿದೆ – ಇದನ್ನ ಈ ಅಧ್ಯಾಯದ ಒಂದು ನೋಟ ಅಂತ ಹೇಳುವುದೂ ಇದೆ. .
ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ । ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ।।
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ । ವರಗಳೀ ನಾಲ್ಕೆ ವರ – ಮಂಕುತಿಮ್ಮ ।।714 ।।

(ನಮ್ಮ i. ಆಸೆಗಳ ಮಿತಿಯನ್ನು ಅರಿಯುವುದು, ii. ಅತೀ ಉತ್ಸಾಹದ ಸುಖಾನುಭವವಿಲ್ಲದಿರುವುದು, iii ಲೋಕದಲ್ಲಿ ನಾವು ಮಾಡುವ ಕೆಲಸಕ್ಕೆ ಅತಿಯಾಗಿ ಅಂಟಿಕೊಳ್ಳದೆ ಒಂದು ವಿರಕ್ತ ಭಾವದಿಂದಿರುವುದು, ಮತ್ತು iv . ಜೀವನದ ಪ್ರತೀ ಅನುಭವವನ್ನೂ ಪರೀಕ್ಷಿಸುತ ಅದರಲ್ಲಿನ ಸ‌ತ್ಯ‌ವ‌ನ್ನೇ ಕಂಡುಕೊಂಡು, ಅದರ ಸತ್ವವನ್ನು ಹಿಡಿದುಕೊಳ್ಳುವ ಬುದ್ಧಿಮ‌ತಿ ಆ ಪರಮಾತ್ಮ ನಮಗೆ ಕರುಣಿಸಿದ 4 ಶ್ರೇಷ್ಠ ವರಗಳು ಅಂತ ಹೇಳಿದ್ದಾರೆ – ಮಾನ್ಯ ಡಿ.ವಿ.ಜಿ. ಯವರು ).

ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ:

– – = oOo = – –

One thought on “BhagavadGita’s Guidance to Rein in Lust

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s