BhagavadGita Motivates to Master Merciful Characteristic

Let us start this blog with a question: What is forgiveness? Psychologists define forgiveness as “A conscious, deliberate decision to release feelings of resentment or vengeance toward a person or group who has harmed you, regardless of whether they actually deserve your forgiveness.

If we take the time to either introspect or observe people around us, a majority of us seem to carry the burden of resentment / hatred / anger / victim feeling and such negative feelings either inside the mind or vent those sentiments occasionally.

Let us ask ourselves…

Does this type of behavior really help us heal those wounds caused by somebody’s hurtful behavior? In reality, there is no use at all. People who would have hurt us have forgotten about it / they continue with their hurtful nature / they might have made amends. Either way, harboring the hurt within us is causing more damage to our mind and body.

So, what can we do instead? Make a sincere attempt to let go; forgive those people who hurt you. Forgiveness doesn’t mean pardoning, condoning, excusing an offense or forgetting about it, but emptying our mind of the negative emotions associated with the hurt. This needs to happen organically within us with an intent of gaining emotional well-being and not necessarily triggered by any event (e.g., the person who has hurt you comes & apologizes to you). When we forgive, we get the ability to detach ourselves and yet remain compassionate and kind towards those hurtful people, which helps in maintaining relationships as many a times we get hurt by people in our close circles.

In Srimad Bhagavad Gita, Lord Sri Krishna highlights the importance of forgiveness and the characteristics that can help us inculcate positive traits. The great sage Patanjali, in his Yoga Sutras gives four pointers to keep our mind healthy, which in turn makes our body healthy too.

Let us delve into the thought provoking blog by our respected blogger, Sri. RamaMurthy; he has explained the meaning of Bhagavad Gita’s Shlokas / verses related to the topic of Forgiveness along with a relevant Kagga of Dr. D.V.Gundappa’s MankuTimmana Kagga.

(NOTE: This blog post is part of a series; please refer to BhagavadGita, The Solution Provider to access the complete series.)

” ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ: “

 • ಅಧ್ಯಾಯ 11, ವಿಶ್ವರೂಪದರ್ಶನ ಯೋಗ, ಶ್ಲೋಕ 44 (Shloka # 44 of Adhyaya 11, “VishwaRoopa Darshana Yoga”)
 • ಅಧ್ಯಾಯ 12, ಭಕ್ತಿಯೋಗ, ಶ್ಲೋಕ 13, 14 (Shloka # 13 & 14 of Adhyaaya 12, “Bhakti Yoga”)
 • ಅಧ್ಯಾಯ16, ದೈವಾಸುರ ಸಂಪದ್ವಿಭಾಗ ಯೋಗ, ಶ್ಲೋಕ 1, 2, 3 (Shloka # 1, 2, & 3 of Adhyaaya # 16, “DaivaAsura Sampadvibhaaga Yoga”)

i . ಅಧ್ಯಾಯ 11, ಶ್ಲೋಕ 44 (Shloka # 44 of Adhyaya 11, “VishwaRoopa Darshana Yoga”)
ಈ ಅಧ್ಯಾಯ ವನ್ನ ಓದ್ತಾ ಇದ್ದೆ. ಕೊನೆಯ ಶ್ಲೋಕಕ್ಕೆ ಬಂದಾಗ ಓಂ ತತ್ಸತ್ ಇತಿ . . . . ವಿಶ್ವರೂಪದರ್ಶನ ಯೋಗೋನಾಮ ಏಕಾದಶೋsಧ್ಯಾಯಃ ಅಂತ ಬಂದಾಗ “ಓಂ ತತ್ ಸತ್” ನ ಅರ್ಥ ಈ ಅಧ್ಯಾಯಕ್ಕೆ ಪೂರಕವಾಗಿದೆ ಅನ್ಸೋಕೆ ಶುರು ಆಯಿತು. (17ನೇ ಅಧ್ಯಾಯ ಶ್ರದ್ಧಾತ್ರಯ ಯೋಗ ಶ್ಲೋಕ 23 ರಿಂದ 27 ಇದರ ವಿವರಣೆ ಕೊಡುತ್ತೆ). ಅದನ್ನು ನೀವೂ ಗಮನಿಸಿರಬಹುದು. ಇದಕ್ಕೆ ಎಷ್ಟೊಂದು ಅರ್ಥ, ವ್ಯಾಖ್ಯಾನ, ವಿಮರ್ಷೆ ಗಳು ಬೇರೆಕಡೆ ವಿಸ್ತಾರವಾಗಿ ಸಿಗ್ತಾ ಹೋಗುತ್ತೆ. ನನಗೆ ಇಷ್ಟವಾದ ಒಬ್ಬ ವ್ಯಾಖ್ಯಾನಕಾರರ ಅರ್ಥ ವಿವರಣೆ ಸ್ವಲ್ಪ ನೋಡೋಣ:-

ಓಂ ತತ್ ಸತ್
ಓಂ ಇದರಲ್ಲಿ ಆ ಉ ಮ ಎಂಬ 3 ಅಂಶ ಇದೆ ಅಂತ ಹೇಳ್ತ, ಓಂಕಾರ ವಿಶ್ವ (ವ್ಯಕ್ತ) ಮತ್ತು ವಿಶ್ವಾತೀತಗಳ (ಅವ್ಯಕ್ತ) ಹಾಗೂ ಯಾವುದು ಕಣ್ಣಿಗೆ ಕಾಣ್ಸುತ್ತೋ ಹಾಗೆಯೇ ಯಾವುದು ಕಾಣ್ಸಲ್ವೋ ಇವೆಲ್ಲದರ ಪ್ರತೀಕ ಹಾಗೂ ಪರಬ್ರಹ್ಮ ಅಂತ ಹೇಳ್ತಾರೆ.
ತತ್ – ಅದು, ಅಂದ್ರೆ ಯಾವುದು ತಾನೇ ತಾನಾಗಿ ತನ್ನಿಂದ ಬೇರೆಯಾಗಿ ಯಾವುದರ ಸಂಬಂಧವೂ ಇಲ್ಲದ ನಿರೂಪಾಧಿಕವಾದ ಬ್ರಹ್ಮ. (ಪರಬ್ರಹ್ಮ).
ಸತ್ – ಅಂದ್ರೆ, ಯಾವುದಕ್ಕೆ ಶಾಶ್ವತವಾದಂಥ ಅಸ್ತಿತ್ವವಿದೆಯೋ (ಯಾವಾಗಲೂ ಇರುವಂಥದ್ದು) ಅದು ಪರಬ್ರಹ್ಮ. ಇದು ಸತ್ಯ ಅಲ್ವೇ? ಸತ್ ಅಂದ್ರೆ ಸತ್ಯ, ಒಳ್ಳೆಯದು ಅನ್ನುವ ಅರ್ಥವೂ ಇದೆ.
ಇದೇ ಅಲ್ವೇ ಜಗನ್ಮೂಲವಾದ ಪರಬ್ರಹ್ಮ ಸ್ವರೂಪ. ಪುರುಷ ಸೂಕ್ತದಲ್ಲೂ ಇದರ ವಿವರಣೆ ದೊರೆಯುತ್ತೆ. ಪುರುಷ ಅಂದ್ರೆ ಬ್ರಹ್ಮ, ಸೂಕ್ತ ಅಂದ್ರೆ ಹೇಳಿಕೆ, ಹೇಳಿರುವುದು ಅಂತ ಅರ್ಥ ಮಾಡ್ಕೋಬಹುದು.
ವಿಜ್ಞಾನ ಹೇಳುತ್ತೆ – ಈ ಬೃಹದ್ವಿಶ್ವದಲ್ಲಿ 170 ಶತಕೋಟಿ ಯಿಂದ 200 ಶತಕೋಟಿ ಬ್ರಹ್ಮಾಂಡಗಳು ಇವೆ, ಇದರ ವ್ಯಾಸವು ಸುಮಾರು 1ಲಕ್ಷ ಜ್ಯೋತಿರ್ವರ್ಷಗಳು ಅಂತ . ಇದನ್ನೇ ಅಲ್ವೇ ಓಂತತ್ಸತ್ ಅಂತ ಸರಳ ವಾಗಿ (simple ಆಗಿ) ವಿಶ್ವಾತೀತ ಅಂತ ಹೇಳಿರುವುದು. ಇಂಥಾ “ವಿಶ್ವ ದರ್ಶನ ” ದ ಭಾಗ್ಯ ಅರ್ಜುನನದಾಗಿತ್ತು ಅಂದ್ರೆ ಅವನೇ ಭಾಗ್ಯವಂತ ಆಲ್ವಾ. ಇಂಥಾ ವಿಶ್ವರೂಪದರ್ಶನ ತೋರಿಸಿದ ಆ ಭಗವಂತನಿಗೆ ನಾವೂ ನಮಸ್ಕರಿಸೋಣ, “ಓಂ ತತ್ಸತ್” ಇದರ ಸ್ಮೃತಿ (ನೆನಪು) ಸದಾಕಾಲ ನಮ್ಮಲ್ಲಿಟ್ಟುಕೊಂಡು ನಮ್ಮ ದಿನನಿತ್ಯದ ಕಾಯಕದಲ್ಲಿ (ಕರ್ಮ) ನಿರ್ವಹಿಸೋಣ.

ಶ್ಲೋಕ 44.
ಈ ಅಧ್ಯಾಯದ ಮುಖ್ಯ ಭಾಗ ವಿಶ್ವರೂಪ ದರ್ಶನ. ಅರ್ಜುನ ವಿಶ್ವರೂಪದ ಪ್ರತ್ಯಕ್ಷ ದರ್ಶನವನ್ನು ಕೇಳ್ತಾನೆ. ಶ್ರೀ ಕೃಷ್ಣಪರಮಾತ್ಮ ವಿಶೇಷವಾದ ನಯನ ತೇಜಸ್ಸನ್ನು ಅನುಗ್ರಹಿಸಿ ತನ್ನ ಪರಮಾದ್ಭುತ ವಿಶ್ವರೂಪವನ್ನು ತೋರಿಸ್ತಾನೆ. ಶ್ರೀ ಕೃಷ್ಣನ ಉಪದೇಶ, ತತ್ವದರ್ಶನವಾಗದಿದ್ದ ಅರ್ಜುನನಿಗೆ ಪ್ರತ್ಯಕ್ಷ ದರ್ಶನದಿಂದ ಆಗುತ್ತೆ, ಭಗವದ್ಮಹಿಮೆ ಗೊತ್ತಾಗುತ್ತೆ. ಇದು ಈ ಅಧ್ಯಾಯದ ಪೀಠಿಕೆ. ಹೆಚ್ಚಿನ ವಿವರಣೆ ಹಿಂದೆ ನೋಡಿದ್ದಾಗಿದೆ.
ಈಗ, ನಮ್ಮ ಮುಂದಿರುವ ಶ್ಲೋಕ ಅರ್ಥ ಮಾಡ್ಕೋ ಬೇಕು ಅಂದ್ರೆ ಸ್ವಲ್ಪ ಹಿನ್ನೋಟ ಬೇಕಾಗುತ್ತೆ. ಅರ್ಜುನನಿಗೆ ವಿಶ್ವರೂಪ ದರ್ಶನ ನೋಡ್ದಾಗ ಅವನ ಅನುಭವವನ್ನು ಮುಂದೆ, ಸಂಜಯನು ಧೃತರಾಷ್ಟ್ರನಿಗೆ ವಿವರಿಸುವಮೂಲಕ, ಅರ್ಜುನನು ಏನೇನನ್ನು ನೋಡಲು ಸಾಧ್ಯವಾಯಿತು ಎಂಬ ವಿವರಣೆ ನಮಗೆ ಸಿಗ್ತಾ ಹೋಗುತ್ತೆ. ಪರಮಾತ್ಮನ ಆಗಿನ ತೇಜಸ್ಸು, ಸಹಸ್ರ ಸಹಸ್ರ ಸೂರ್ಯರು ಒಟ್ಟಿಗೆ ಉದಯಿಸಿದರೆ ಉದ್ಭವಿಸಬಹುದಾದಂಥ ಪ್ರಭೆ ಅಲ್ಲಿತ್ತು ಅಂತ ಸಂಜಯ ವಿವರಿಸ್ತಾ ಮುಂದುವರೆದು – ಇದೆಲ್ಲವನ್ನೂ ಒಮ್ಮೆಲೇ ನೋಡಿದ ಅರ್ಜುನ ದಿಗ್ಭ್ರಾಂತನಾಗಿ, ಭಯ ಭೀತನಾಗಿ ಕೈಮುಗಿದು ಶಿರಸಾ ನಮಸ್ಕರಿಸ್ತಾ ಭಗವಂತನ ಪ್ರಾರ್ಥನೆ ಮಾಡತೊಡಗಿದ ಅಂತ ಹೇಳ್ತಾನೆ. ಇಲ್ಲಿಂದ ಮುಂದೆ ಅರ್ಜುನ – ಪಶ್ಯಾಮಿ ದೇವಾಂಸ್ತವ ದೇವ ದೇಹೇ . . . ಅಂತ ಅವನ ಅನುಭವವೇದ್ಯವಾದದ್ದನ್ನೆಲ್ಲಾ ಹೇಳ್ತಾ, ಕೊನೆಯಲ್ಲಿ, ನಿನ್ನ ಪ್ರಜ್ವಲವೂ, ಭಯಂಕರವೂ, ಮೃತ್ಯುಸ್ವರೂಪವೂ ಆದ ರೂಪವನ್ನು ಮೋಡಿ ದಿಗ್ಭ್ರಮೆಯಾಗಿದೆ, ನನ್ನ ಸಮತೋಲನವನ್ನ ಕಳೆದುಕೊಳ್ತಿದ್ದೇನೆ. ನೀನು ಯಾರು ಎಂಬುದೇ ನನಗೆ ಅರ್ಥವಾಗ್ತಾ ಇಲ್ಲ. ಆದ್ದರಿಂದ ನಿನ್ನನ್ನು ತಿಳಿಯ ಬಯಸುತ್ತೇನೆ ದಯಮಾಡಿ ತಿಳಿಸು ಅಂತ ಕೇಳ್ದಾಗ ಭಗವಂತನು, ನಾನು ಕಾಲ ರೂಪಿ, ಕ್ಷಯಕಾರಕ. ಪಾಂಡವರಾದ ನಿಮ್ಮನ್ನು ಬಿಟ್ಟು ಎಲ್ಲರನ್ನೂ ನಿರ್ಮೂಲ ಮಾಡಲು ಬಂದವನು, ಸೃಷ್ಟಿಸ್ಥಿತಿ ಕಾರಕನು ನಾನು ಅಂತ ಹೇಳ್ತಾ, ನನ್ನ ವ್ಯವಸ್ಥೆಯಲ್ಲಿ ಅವರೆಲ್ಲರೂ ಈಗಾಗಲೇ ಹತರಾಗಿದ್ದಾರೆ, ನೀನು ನಿಮಿತ್ತ ಮಾತ್ರ ಅಂತ ಹೇಳ್ತಾನೆ. ಇದನ್ನೆಲ್ಲಾ ನೋಡಿ,, ಕೇಳಿ ಭಯಭೀತನಾಗಿ
ಅರ್ಜುನ ಹೇಳ್ತಾನೆ, – “ಅನಂತ ಪರಾಕ್ರಮಶಾಲಿಯಾದ ನೀನು ಇಡೀ ಜಗತ್ತನ್ನು ವ್ಯಾಪಿಸಿಕೊಂಡಿರುವೆ. ನೀನೇ ಸರ್ವಸ್ವರೂಪಿಯಾಗಿರುವೆ.
ನಿನಗೆ ಎಲ್ಲಾ ಕಡೆಗಳಿಂದಲೂ ನಮಸ್ಕಾರ ಅಂತ ಹೇಳ್ತಾ , ಮಿತ್ರನೆಂಬುದಾಗಿ ಭಾವಿಸಿಕೊಂಡು ನಿನ್ನ ಈ ಪ್ರಭಾವವನ್ನು ತಿಳಿದುಕೊಳ್ಳದೆ ನನ್ನಿಂದ ಪ್ರೇಮದಿಂದಲೋ, ಅಥವಾ ಪ್ರಮಾದದಿಂದಲೋ
ಬಾಯಿ ತಪ್ಪಿನಿಂದ – ಹೇ ಕೃಷ್ಣ, , ಹೇ ಯಾದವಾ, ಹೇ ಮಿತ್ರ ಈ ರೀತಿ ಏನೇನನ್ನಾದರೂ ಒರಟಾಗಿ ಹೇಳಿದ್ದರೆ, ಮತ್ತು ಏನನ್ನಾದರೂ ವಿನೋದಕ್ಕಾಗಿ, ವಿಹಾರಕಾಲದಲ್ಲಿ ,
ಮಲಗುವಾಗ, ಕುಳಿತುಕೊಳ್ಳುವಾಗ, ಊಟದ ಸಮಯದಲ್ಲಿ , ಒಬ್ಬನೇ ಇರುವಾಗ ಅಥವಾ ಸ್ನೇಹಿತರೊಂದಿಗಿದ್ದಾಗ ಅಪಮಾನಿಸಲ್ಪಟ್ಟಿದ್ದರೆ, ಆ ಅಪರಾಧಗಳಿಗಾಗಿ
ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ” – ಅಂತ ಹೇಳ್ತಾ ಹೋಗ್ತಾನೆ.
ನಮ್ಮ ಮುಂದಿರುವ ಶ್ಲೋಕ ಅರ್ಜುನನ ಕ್ಷಮಯಾಚನ-
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ |
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ” || 11.44 ||

ಅರ್ಥ: ಆದ್ದರಿಂದ ಹೇ ಪ್ರಭೋ, ಪೂಜ್ಯನಾದ ನಿನಗೆ ದೀರ್ಘದಂಡ ನಮಸ್ಕಾರ ಮಾಡಿ ಬೇಡಿಕೊಳ್ಳುತ್ತಿದ್ದೇನೆ – ತಂದೆ ಮಗನನ್ನು,ಮಿತ್ರನು ಮಿತ್ರನನ್ನು, ಪ್ರಿಯನು ಪ್ರಿಯಳನ್ನು ಮನ್ನಿಸುವಂತೆ ನನ್ನನ್ನು ಮನ್ನಿಸು.

तस्मात्प्रणम्य प्रणिधाय कायं
प्रसादये त्वामहमीशमीड्यम् |
पितेव पुत्रस्य सखेव सख्यु:
प्रिय: प्रियायार्हसि देव सोढुम् || 11.44||

tasmāt praṇamya praṇidhāya kāyaṁ
prasādaye tvām aham īśham īḍyam |
piteva putrasya sakheva sakhyuḥ
priyaḥ priyāyārhasi deva soḍhum ||11.44||

Meaning: In this Shloka, Arjuna is pleading Lord Krishna for forgiveness (when Arjuna witnesses the Almighty form of Lord Krishna, Vishwa Roopa, he realizes who Krishna really is; whom he treated as his friend, his relative up until that point). He requests Lord Krishna, “O adorable Lord, bowing deeply and prostrating before you, I implore you for your grace. As a father tolerates his son, a friend forgives his friend, and a lover pardons the beloved, please forgive me for my offences.” He also requests Krishna to resume his normal form as His Vishwa Roopa is quite frightening. Krishna obliges his friend, now a devotee / student too, Arjuna’s request and shows him his normal human form and directs him to perform his duty as per his Dharma and dedicate the outcome / Phala to Him.

ಕ್ಷಮಾಪಣೆಯೇನೋ ಕೇಳಿದ್ದಾಯ್ತು, ಆದ್ರೆ ಅವನಿಗೆ ಒಂದುಕಡೆ ಆನಂದ ಹಾಗೆಯೇ ಭಯ ಎರಡೂ ಆಗಿ, ಪ್ರಸನ್ನನಾಗಿ ನಿನ್ನ ಮೊದಲಿನ ಮೂಲ ರೂಪವನ್ನೇ ತೋರಿಸು ಅಂತ ಕೇಳ್ಕೊಳ್ತಾನೆ. ಶ್ರೀಕೃಷ್ಣ ಶಂಖಚಕ್ರಗಧಾಹಸ್ತ ಕಿರೀಟಧಾರಿಯಾದ ತನ್ನ ಸೌಮ್ಯರೂಪವನ್ನ ತೋರಿಸ್ತಾನೆ. ಅರ್ಜುನನಿಗೆ ಈಗ ವಿಶ್ವರೂಪದರ್ಶನದಿಂದ ಮನಸ್ಸಿನ ವ್ಯಥೆ ಕಳೆದು, ಭಯ, ಸಂದೇಹಗಳು ಕಳೆದು ನಿಶ್ಚಯತ್ವವನ್ನು ಕಂಡ ಆನಂದ ಉಂಟಾಗುತ್ತೆ.
ಕೊನೆಯ ಶ್ಲೋಕ ದಲ್ಲಿ ಭಗವಂತ ಹೇಳ್ತಾನೆ – ಯಾರು ನನ್ನಲ್ಲಿ (ಭಗವಂತನಲ್ಲಿ) ಭಕ್ತಿಯುಳ್ಳವರಾಗಿ, ಶರಣಾಗಿ ಎಲ್ಲ ಜೀವಿಗಳನ್ನೂ ಪ್ರೀತಿಸುವವರು ನನ್ನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

Arjuna apologizing to Lord Krishna

ii. ಅಧ್ಯಾಯ12, ಭಕ್ತಿಯೋಗ, ಶ್ಲೋಕ 13, 14 (Shloka # 13 & 14 of Adhyaaya 12, “Bhakti Yoga”)
ಭಕ್ತಿಯೋಗದಲ್ಲಿ ನಮಗೆ ಕಂಡುಬರೋದು – ಇಂದ್ರಿಯಶುದ್ಧಿ ಹೇಗೆ ಮಾಡ್ಕೋಬೇಕು, ಪರಮಾತ್ಮನನ್ನ ಸಾಕಾರರೂಪದಲ್ಲಿ ಅಥವಾ ನಿರಾಕಾರರೂಪದಲ್ಲಿ ಹೇಗೆ ನಮ್ಮ ಧ್ಯಾನ ಪೂಜಾದಿಗಳನ್ನ ಸಲ್ಲಿಸಬಹುದು, ಹೇಗೆ ಸಿದ್ಧಿಸಿಕೊಳ್ಳಬಹುದು ಹಾಗೂ ನಮ್ಮ ಭಕ್ತಿ ಅನ್ನಿ ಪೂಜೆ ಅನ್ನಿ ಯಾವರೀತಿ ಮಾಡ್ದಾಗ ಭಗವದ್ಕೃಪೆಗೆ ಪಾತ್ರರಾಗಬಹುದು ಅನ್ನುವ ವಿಚಾರ, ವಿವರಣೆ ಇದೆ. ಇದು 20 ಶ್ಲೋಕಗಳನ್ನೊಳಗೊಂಡ ಚಿಕ್ಕ ಆಧ್ಯಾಯ.

ಹಿಂದಿನ ಅಧ್ಯಾಯದಲ್ಲಿ , ಅರ್ಜುನ “ವಿಶ್ವರೂಪದರ್ಶನ” ನೋಡಿಯಾಗಿದೆ. ಆದ್ರೂ ಅವ್ನಿಗೆ ಮತ್ತೊಂದು ಅನುಮಾನ ಹಾಗೂ ಪ್ರಶ್ಣೆ. ಈ ಅಧ್ಯಾಯದ ಮೊದಲನೇ ಶ್ಲೋಕವೇ ಇದು. ಏವಂ ಸತತ ಯುಕ್ತಾ ಯೇ . . . . ಹೀಗೆ ಸತತಯುಕ್ತರಾಗಿ – ಸಾಕಾರ ಸಗುಣಾತ್ಮಕ ರೂಪ (ಮೂರ್ತಿ ಪೂಜೆ) ಅಥವಾ ನಿರಾಕಾರ ನಿರ್ಗುಣಾತ್ಮಕ ಸ್ವರೂಪದಿಂದ ಪೂಜಿಸುವುದು ಇದರಲ್ಲಿ ಯಾವುದು ಶ್ರೇಷ್ಠ ಎಂಬುದೇ ಆಗಿದೆ. ನೋಡಿ ಹಿಂದಿನ ಅಧ್ಯಾಯಗಳಲ್ಲಿ (2ನೇ ಅಧ್ಯಾಯದಿಂದ 9ನೇ ಅಧ್ಯಾಯ) ನಿರ್ಗುಣರೂಪವನ್ನ ಪ್ರಸ್ತಾಪಿಸಿ, 10ನೇ ಅಧ್ಯಾಯದಲ್ಲಿ ಸಗುಣಾತ್ಮಕ ವಿಭೂತಿರೂಪ ಹೇಳಿ, 11 ನೇ ಅಧ್ಯಾಯದಲ್ಲಿ ವಿಶ್ವರೂಪ ತೋರಿಸಿಯಾಗಿದೆ ಆದ್ರೂ ಅವನ ಪ್ರಶ್ನೆ ಸಹಜವಾಗಿದೆ ಅನ್ಸುತ್ತೆ. . ಶ್ರೀಕೃಷ್ಣನ ಉತ್ತರ ನೋಡೋಣ – ಮಯ್ಯಾವೇಶ್ಯ ಯೇ ಮಾಮ್ . . . ಯಾರು ನನ್ನಲ್ಲೇ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿ, ಪೂರ್ಣ ಶ್ರದ್ಧೆಯಿಂದ ಸಗುಣ ರೂಪವನ್ನು ಪೂಜಿಸುವರೋ ಅವರೂ ಶ್ರೇಷ್ಠರೇ. (6ನೇ ಶ್ಲೋಕದಿಂದ 12ನೇ ಶ್ಲೋಕದವರೆಗೂ ಇದರ ವಿವರಣೆ ಹೇಳಿದೆ).
3, 4 ಮತ್ತು 5 ನೇ ಶ್ಲೋಕಗಳಲ್ಲಿ ನಿರ್ಗುಣಾತ್ಮಕ ಸ್ವರೂಪದ ಪೂಜೆ, ಧ್ಯಾನವೂ ಶ್ರೇಷ್ಠ ಅಂತ ಹೇಳಿ ಇದಕ್ಕೆ ಇಂದ್ರಿಯ ನಿಗ್ರಹ, ಸಮ ಚಿತ್ತತೆ ಎಲ್ಲವೂ ಬೇಕು, ಇದು ಉಪಾಸಕರಿಗೆ ಸ್ವಲ್ಪ ಕಷ್ಟ ಸಾಧ್ಯ ಅಂತ ಹೇಳಿದೆ.

ಸ್ವಲ್ಪ ಸಗುಣಾರಾಧನೆ ಬಗ್ಗೆ ಏನು ಹೇಳಿದೆ ನೋಡೋಣ. (6ನೇ ಶ್ಲೋಕದಿಂದ 12ನೇ ಶ್ಲೋಕ) .
ಯಾರು ನನ್ನಲ್ಲಿ ಅನನ್ಯ ಭಕ್ತಿಯುಳ್ಲವರಾಗಿ, ತಮ್ಮೆಲ್ಲ ಕೆಲಸವನ್ನು ಭಗವದರ್ಪಣ ಭಾವದಿಂದ ಮಾಡುವರೋ ಮತ್ತು ನನ್ನಲ್ಲಿ ಶ್ರದ್ಧೆ, ಹಾಗೆಯೆ ಮನಸ್ಸು ಬುದ್ಧಿ ಯನ್ನು ಸ್ಥಿರವಾಗಿಟ್ಟುಕೊಳ್ಳುವರೋ ಅವರಿಗೆ ಸಾಕ್ಷಾತ್ಕಾರ ಸಾಧ್ಯ. ಇದನ್ನು ನಿರಂತರ ಅಭ್ಯಾದಿಂದ ಸಾಧಿಸಬಹುದು. ಅಭ್ಯಾಸ ಯೋಗವೂ ಸಾಧ್ಯವಾಗದಿದ್ದರೆ, ಮಾಡುವ ಕೆಲಸಗಳನ್ನೆಲ್ಲಾ ಭಗವದರ್ಪಣಾಭಾವದಿಂದ ಮಾಡು. ಅದೂ ಸಾಧ್ಯವಾಗದಿದ್ದಲ್ಲಿ ಕರ್ಮಫಲತ್ಯಾಗ ಭಾವದಿಂದ ಕರ್ಮಗಳನ್ನು ಮಾಡು. 12ನೇ ಶ್ಲೋಕದಲ್ಲಂತೂ ಒನ್ನೊಂದೇ ಮೆಟ್ಟಲು ಮೆಟ್ಟಲಾಗಿ ಮೇಲೇರುವಂತೆ ಹೇಗೆ ಸಾಧನೆ ಮಾಡಬಹುದೆಂಬ ವಿವರಣೆಯೇ ಇದೆ. ಇದು ಹೇಗೆಂದರೆ, ಅಭ್ಯಾಸಯೋಗಕ್ಕಿಂತ ಜ್ಞಾನ ಶ್ರೇಷ್ಠ, ಜ್ಞಾನಕ್ಕಿಂತ ಧ್ಯಾನ, ಧ್ಯಾನಕ್ಕಿಂತ ಕರ್ಮಫಲತ್ಯಾಗ ಶ್ರೇಷ್ಠ. ಏಕೆಂದರೆ ತ್ಯಾಗದಿಂದ ಶಾಂತಿ ಸಿಗುತ್ತದೆ ಅಂತ ಹೇಳಿದೆ. ಹೀಗೆ ಹಂತಹಂತವಾಗಿ ಮೇಲೇರುವ ಪ್ರಯತ್ನ ನಮ್ಮದಾಗಬೇಕು
ನಮ್ಮ ಮುಂದಿರುವ ಶ್ಲೋಕ –
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ |
ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ || 12.13||

(ಈ ರೀತಿ ಶಾಂತಿಯನ್ನು ಪಡೆದವನು) ಎಲ್ಲಾ ಪ್ರಾಣಿಗಳಲ್ಲಿಯೂ ದ್ವೇಷ ಭಾವವಿಲ್ಲದವನು, ಸ್ವಾರ್ಥವಿಲ್ಲದ ಪ್ರೇಮಿ ಮತ್ತು ನಿಃಸ್ವಾರ್ಥ ದಯಾಪರನೂ ಜೊತೆಗೆ
ಮಮಕಾರವಿಲ್ಲದವನು, ಅಹಂಕಾರವಿಲ್ಲದವನು, ಸುಖ ದುಃಖಾದಿಗಳಲ್ಲಿ ಸಮಾನವಾಗಿರುವವನು ಮತ್ತು ಕ್ಷಮಾಶೀಲನೂ ಆಗಿದ್ದಾನೆಯೋ
ಅರ್ಥಾತ್ ಅಪರಾಧ ಮಾಡುವವನಿಗೂ ಸಹ ಅಭಯ ಕೊಡುವವನು

ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |
ಮಯ್ಯರ್ಪಿತಮನೋಬುದ್ಧಿಃ ಯೋ ಮದ್ಭಕ್ತಃ ಸ ಮೇ ಪ್ರಿಯಃ ||12.14||

ಯಾವ ಯೋಗಿಯು ಯಾವಾಗಲೂ ಸಂತುಷ್ಟನೋ, ಮನಸ್ಸು ಮತ್ತು ಇಂದ್ರಿಯಗಳ ಸಹಿತ ಶರೀರವನ್ನು ವಶದಲ್ಲಿಟ್ಟುಕೊಂಡಿರುವನೋ, ನನ್ನಲ್ಲಿ ಮನಸ್ಸು – ಬುದ್ಧಿಗಳನ್ನು
ಅರ್ಪಿಸಲ್ಪಟ್ಟ ದೃಢನಿಶ್ಚಯವುಳ್ಳ ಆ ನನ್ನ ಭಕ್ತ ನನಗೆ ಬಹು ಪ್ರಿಯನು.
ಈ 13ನೇ ಶ್ಲೋಕದಿಂದ ಕೊನೆಯ 20ನೇ ಶ್ಲೋಕದವರೆಗೂ (8 ಶ್ಲೋಕಗಳು) ಭಗವಂತ ತನ್ನ ಭಕ್ತರಲ್ಲಿರಬೇಕಾದ 36 ಗುಣಗಳನ್ನು ಹೇಳ್ತಾನೆ. ತುಂಬಾ ಚೆನ್ನಾಗಿದೆ,
ಮನನಯೋಗ್ಯವೂ ಕೂಡ. ಇಲ್ಲಿ ಕೆಲವನ್ನಷ್ಟೇ ನಾನು ಹೇಳ್ತಿದೀನಿ ಉಳಿದದ್ದನ್ನ ಓದಿ ತಿಳಿದುಕೊಳ್ಳುವ ಪ್ರಯತ್ನ ನಿಮ್ಮದಾಗಲಿ. ಎಲ್ಲ ಜೀವಿಗಳನ್ನೂ ಸಮಾನವಾಗಿ ಕಾಣ್ತಾ
ದ್ವೇಶ ವಿಲ್ಲದೆ ಇರುವುದು, ಎಲ್ಲರಲ್ಲೂ ಸ್ನೇಹಭಾವ, ದಯೆ, ನಿರ್ಮಮ, ನಿರಹಂಕಾರ, ಕ್ಷಮಾಗುಣ, ಧೃಡ ನಿಶ್ಚಯ (ಮಾಡುವ ಕಾಯಕ ಕರ್ಮಗಳಲ್ಲಿ),
ಕೋಪ ತಾಪ ಗಳಿಲ್ಲದಿರುವುದು , ಅನಪೇಕ್ಷೆ, ,ಶುಚಿತ್ವ, ಲಕ್ಷ್ಯ, ಖಿನ್ನಮನಸ್ಕನಾಗದಿರುವುದು ಇತ್ಯಾದಿ.
ಈ ಗುಣಗಳಲ್ಲಿ ಹಲ ಕೆಲವು ನಮ್ಮಲ್ಲಿರಬಹುದಾದರೆ, ಕೆಲವನ್ನಾದರೂ ನಮ್ಮದಾಗಿಸಿಕೊಳ್ಳಬಹುದಾದರೆ, ಆ ಭಗವಂತನ ಕೃಪೆಗೆ ಪಾತ್ರರಾಗಬಹುದು. ಇನ್ನು, ಸಾಕಾರ ಸಗುಣಾತ್ಮಕ ರೂಪ (ಮೂರ್ತಿ ಪೂಜೆ) ಅಥವಾ ನಿರಾಕಾರ ನಿರ್ಗುಣಾತ್ಮಕ ಸ್ವರೂಪದಿಂದ ಪೂಜಿಸುವುದು ಅವರವರ ಅಂತಃಶಕ್ತಿ, ಯುಕ್ತಾಯುಕ್ತತೆ, ಶಕ್ತಿ ,ಸಾಮರ್ಥ್ಯ ಅರ್ಹತೆಯಾಗುತ್ತೆ.

अद्वेष्टा सर्वभूतानां मैत्र: करुण एव च |
निर्ममो निरहङ्कार: समदु:खसुख: क्षमी || 12.13||
सन्तुष्ट: सततं योगी यतात्मा दृढनिश्चय: |
मय्यर्पितमनोबुद्धिर्यो मद्भक्त: स मे प्रिय: || 12.14||

adveṣhṭā sarva-bhūtānāṁ maitraḥ karuṇa eva cha |
nirmamo nirahankāraḥ sama-duḥkha-sukhaḥ kṣhamī || 12.13||

santuṣhṭaḥ satataṁ yogī yatātmā dṛiḍha-niśhchayaḥ |
mayy arpita-mano-buddhir yo mad-bhaktaḥ sa me priyaḥ || 12.14||

Meaning: In these Shlokas (and in Chapter 12 “Bhakti Yoga”), Lord Sri Krishna explains that unalloyed devotion is the best form of worship. He enumerates the qualities of His dear devotees. Forgiving nature is one of the qualities that He mentions!

 • Free from malice toward all living beings
 • Ever forgiving
 • Friendly and compassionate
 • Free from attachment to possessions and egotism
 • Equipoised in happiness and distress
 • Ever contented
 • Steadily united with Me in devotion
 • Self-controlled
 • Firm in conviction
 • Dedicated to Me in mind and intellect

iii. ಅಧ್ಯಾಯ16, ಶ್ಲೋಕ 1, 2, 3 (Shloka # 1, 2, & 3 of Adhyaaya # 16, “DaivaAsura Sampadvibhaaga Yoga”)
ಇಲ್ಲಿ ಈ ಅಧ್ಯಾಯದಲ್ಲಿ, ಶ್ರೀಕೃಷ್ಣ ಪರಮಾತ್ಮ ‘ದೈವೀ ಸ್ವಭಾವ’ ಮತ್ತು ‘ಅಸುರೀ’ ಸ್ವಭಾವಗಳ ಲಕ್ಷಣಗಳನ್ನ ಹೇಳ್ತಾ ನಮ್ಮಲ್ಲಿರಬಹುದಾದ ಸದ್ಗುಣಗಳನ್ನ ದೈವೀ ಗುಣ ಸಂಪತ್ತು, ದುರ್ಗುಣಗಳನ್ನ ಆಸುರೀ ಸಂಪತ್ತು ಅಂತ ವಿಶ್ಲೇಷಿಸಿ ಹೇಳ್ತಾ ಹೋಗ್ತಾನೆ. ಎಲ್ಲರೂ ಅರ್ಥೈಸಿಕೊಳ್ತಾ ಓದಲೇ ಬೇಕಾದ ಅಧ್ಯಾಯ ಅನ್ಸುತ್ತೆ.

ಶ್ರೀಭಗವಾನುವಾಚ
ಅಭಯಂ ಸತ್ತ್ವಸಂಶುದ್ಧಿರ್ಜ್ಞಾನಯೋಗವ್ಯವಸ್ಥಿತಿಃ |
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ||16.1||
ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಮ್ |
ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಮ್ ಹ್ರೀರಚಾಪಲಮ್ ||16.2||
ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋ ನಾತಿಮಾನಿತಾ |
ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ ||16.3|

 1. “ಅಭಯ, ಅಂತಃಕರಣದ ಶುದ್ಧಿ, ತತ್ತ್ವಜ್ಞಾನಕ್ಕಾಗಿ ಯೋಗಮಾರ್ಗದಲ್ಲಿ ಸ್ಥಿತವಾಗಿರುವುದು, ದಾನ ಮಾಡುವುದು, ಮನಸ್ಸಿನ ನಿಯಂತ್ರಣ (ಆತ್ಮ ಸಂಯಮ – ದಮ) , ಯಜ್ಞಗಳ ಆಚರಣೆ, ವೇದಾಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು , ತಪಸ್ಸು, ಸರಳತೆ”…
 2. …ಅಹಿಂಸೆ, ಸತ್ಯತೆ, ಕೋಪವಿಲ್ಲದಿರುವಿಕೆ, ತ್ಯಾಗಭಾವನೆ, ಶಾಂತಿ, ತಪ್ಪು ಹುಡುಕುವುದರಲ್ಲಿ ವಿಮುಖತೆ, ಎಲ್ಲಾ ಜೀವಿಗಳಲ್ಲೂ ದಯೆ, ದುರಾಸೆಯಿಲ್ಲದಿರುವಿಕೆ, ಮೃದು ಸ್ವಭಾವ, ನಮ್ರತೆ, ದೃಢಸಂಕಲ್ಪ ,…
 3. …ತೇಜಸ್ಸು, ಕ್ಷಮೆ, ಸ್ಥೈರ್ಯ, ಶುಚಿತ್ವ, ದ್ವೇಷ-ಅಸೂಯೆಗಳಿಲ್ಲದಿರುವುದು, ಗೌರವ-ಮಾನ್ಯತೆಗಳ ನಿರೀಕ್ಷೆಯಿಲ್ಲದಿರುವುದು – ಭರತವಂಶಜನೇ! ಈ ಎಲ್ಲಾ ಗುಣಗಳು ದೈವೀಸಂಪನ್ನನಲ್ಲಿ ಇರುತ್ತವೆ

ನಾಲ್ಕನೇ ಶ್ಲೋಕದಲ್ಲಿ ಅಸುರೀ ಗುಣಗಳನ್ನ ಹೇಳಿದೆ:-
ದಮ್ಭೋದರ್ಪೋಭಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ |
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಂ || 16.4||

ಅಹಂಕಾರ, ದರ್ಪ, ಅಭಿಮಾನ, ಕೋಪ, ಕ್ರೌರ್ಯ ಮತ್ತು ಅಜ್ಞಾನ – ಪಾರ್ಥ! ಈ ಗುಣಗಳು ರಾಕ್ಷಸೀ ಸ್ವಭಾವದಲ್ಲಿ ಹುಟ್ಟಿದವನಿಗೆ ಇರುತ್ತವೆ.

ಈ ಅಧ್ಯಾಯದ ಮುಂದಿನ 23ನೇ ಶ್ಲೋಕಗಳವರೆಗೂ ಅಸುರೀ ಗುಣವರ್ಣನೆಯೇ ಇದೆ. ನಾವು ಸದ್ಗುಣಗಳನ್ನು ವೃದ್ಧಿಸಿಕೊಳ್ಳುತ್ತಾ, ಅಸುರೀ ಗುಣಗಳನ್ನ ನಿಗ್ರಹಿಸಿಕೊಳ್ಳುತ್ತಾ ಹೋಗಬೇಕು ಅನ್ನೋದು ಮುಖ್ಯ.

ಕೊನೆಯಶ್ಲೋಕದಲ್ಲಿ ಯಾವುದು ಮಾಡತಕ್ಕದ್ದು, ಮಾಡಬಾರಾದ್ದು ಎಂಬುದರ ತೀರ್ಮಾನಕ್ಕೆ ಶಾಸ್ತ್ರ, ಶಾಸ್ತ್ರವಿಧಿ ಆಧಾರ ಅಂತ ಹೇಳುವುದರೊಂದಿಗೆ ಈ ಅಧ್ಯಾಯ ಮುಗಿಯುತ್ತೆ.

श्रीभगवानुवाच |
अभयं सत्त्वसंशुद्धिर्ज्ञानयोगव्यवस्थिति: |
दानं दमश्च यज्ञश्च स्वाध्यायस्तप आर्जवम् ||16. 1||
अहिंसा सत्यमक्रोधस्त्याग: शान्तिरपैशुनम् |
दया भूतेष्वलोलुप्त्वं मार्दवं ह्रीरचापलम् || 16.2||
तेज: क्षमा धृति: शौचमद्रोहोनातिमानिता |
भवन्ति सम्पदं दैवीमभिजातस्य भारत || 16.3||

śhrī-bhagavān uvācha
abhayaṁ sattva-sanśhuddhir jñāna-yoga-vyavasthitiḥ |
dānaṁ damaśh cha yajñaśh cha svādhyāyas tapa ārjavam ||16. 1||
ahinsā satyam akrodhas tyāgaḥ śhāntir apaiśhunam |
dayā bhūteṣhv aloluptvaṁ mārdavaṁ hrīr achāpalam || 16.2||
tejaḥ kṣhamā dhṛitiḥ śhaucham adroho nāti-mānitā |
bhavanti sampadaṁ daivīm abhijātasya bhārata || 16.3||

Meaning: We all have a good and not so good side to us. Sri Krishna goads and guides us realize our nature and to strive every minute to maintain / develop good qualities while getting rid of bad ones. In these three Shlokas, Lord Sri Krishna lists out characteristics of Divine nature: These are the saintly virtues of those endowed with a divine nature:

 • fearlessness,
 • purity of mind,
 • steadfastness in spiritual knowledge,
 • charity,
 • control of the senses,
 • performance of sacrifice,
 • study of the sacred books,
 • austerity,
 • straightforwardness,
 • non-violence,
 • truthfulness,
 • absence of anger,
 • renunciation,
 • peacefulness,
 • restraint from fault-finding,
 • compassion toward all living beings,
 • absence of covetousness,
 • gentleness,
 • modesty,
 • lack of fickleness
 • vigor,
 • forgiveness,
 • fortitude,
 • cleanliness,
 • bearing enmity toward none,
 • and absence of vanity.

ಓಂ ತತ್ಸತ್

” ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ: “

ಎಷ್ಟೊಂದು ಪೂರಕ ಕಗ್ಗಗಳು ಕಾಣಿಸುತ್ತಾ ಹೋಗುತ್ತೆ – ಒಂದನ್ನಾದರೂ ಇಲ್ಲಿ ನೋಡೋಣ. –

ಸನ್ನಿಹಿತ ಮನುಜನಲಿ ದೈವಪಾಶವವೆರಡು । ಪುಣ್ಯ ಪಾಪದ ಮಿಶ್ರವವನ ಸ್ವಭಾವ ॥
ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು । ಮಣ್ಣೊಳುರುಳುವುದೊಮ್ಮೆ- ಮಂಕುತಿಮ್ಮ॥286॥

(ಪೂರ್ವ ವಾಸನೆಗಳನ್ನು ಹೊತ್ತು ತಂದಿರುವ ಮನುಷ್ಯನ ಗುಣಗಳಲ್ಲಿ ) ದೈವೀಗುಣಗಳು ಮತ್ತು ಅಸುರೀ ಗುಣಗಳು ಮಿಶ್ರಿತವಾಗಿವೆ. ಅವನ ಮನೋಭಾವ ಆಕಾಶದ ಕಡೆ
ನೋಡಿ ತಾನೂ ಮೇಲೆ ಮೇಲೆ ಉನ್ನತ ಸ್ಥಾನ, ಉನ್ನತಿಯನ್ನು ಪಡ್ಕೋಬೇಕು ಆಂದು ಕೊಳ್ತಾನೆ ಹಾಗೇ ಯಾವ್ದೋ ಆಸುರೀ ಗುಣ ಪ್ರಭಾವ ಅವ್ನನ್ನ ಕೆಳಗೆ (ಮಣ್ಣಿಗೆ) ಬೀಳಿಸಿಬಿಡುತ್ತೆ.
ತುಂಬಾ ಅರ್ಥಗರ್ಭಿತವಾಗಿದೆ, ಅರ್ಥೈಸಿಕೊಳ್ತಾ ಹೋಗಬೇಕಷ್ಟೇ .

One thought on “BhagavadGita Motivates to Master Merciful Characteristic

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s