New Year, New Us (Hopefully A Better Version)

We have embarked on yet another year, 2021 with hopes for a better, healthier, happier, and safer world! (Check out Self-transformation Tools video on our YouTube Channel, Shevadhi).

The year 2020 proved to a challenging phase for everyone in the entire world due to the pandemic. Despite the difficulties and losses, it also made us realize the true value of many things, be it tangible possessions or intangible assets. It taught us many lessons too; how to persevere, how not to give up hope, reinvent ourselves, see light at the end of the tunnel, and how to find a purpose in life!!. Let us hope these lessons stay with us even after the things become normal again.

When things are going great, we tend to think we are invincible and we can do anything. We tend to neglect people (who may not match our ‘expectations’ / ‘standards’) around us and live inside the fortress of ego. Pretty much in everything we do, we are seeking the approval of / appreciation from others. Even when we are doing a charity work or volunteering for a good cause, we are secretly wishing for recognition / praise; it is not really ‘Karma Yoga’ then!!

Even worshiping God becomes a show! Bhakti or true devotion becomes secondary and pompous display takes the center stage, which defeats the very purpose of the worship.

The famous writer, poet, and critic from Kannada literary field, Dr. G. S. Shivarudrappa has summed up the aforementioned points very succinctly in his Kannada poem or BhavaGeethe, “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು…“. This is one of my favorites; I recorded this song in my voice for New Year; it is on the YouTube Channel, Shevadhi (means Treasure): ಎಲ್ಲೋ ಹುಡುಕಿದೆ ಇಲ್ಲದ ದೇವರ ಕನ್ನಡ ಭಾವಗೀತೆ | Ello Hudukide Kannada BhavaGeethe | Shevadhi.

My respected Uncle (ಚಿಕ್ಕಪ್ಪ) and blogger, Sri. RamaMurthy, when he listened to this song expressed his thoughts on this poem, leading a meaningful life, and his interaction with this famous poet’s son, Dr. G. S. Shivaprasad, who happens to be a pediatrician by profession while he was visiting UK. He has included a few Vachanas (short verses written in three-line metre) that are relevant to this topic) of Sarvajna, a famous Kannada poet and philosopher of 16th Century in his blog.

Let us delve into his thought-provoking article:
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು… ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ…

ಹಿರಿಯ ರಾಷ್ಟ್ರ ಕವಿ ಡಾ||ಜಿ. ಎಸ್ ಶಿವರುದ್ರಪ್ಪ ಅವರ ಈ ಸಾಲು ಸರ್ವ ಕಾಲಕ್ಕೂ ಸತ್ಯ. ಕವನದ ಎಲ್ಲಾ ಭಾಗಗಳೂ ತುಂಬಾ ಅರ್ಥಪೂರ್ಣ, ನಮ್ಮ ಭಾವಕ್ಕೆ ಅರ್ಥೈಸಿಕೊಳ್ಳುತ್ತಾ ಕೇಳುತ್ತಾ ಹೋಗಬಹುದಾದ ಸುಂದರಕವನ. 

ಜೀವನದಲ್ಲಿ ಪ್ರತಿಯೊಬ್ಬರು ಬಯಸುವುದು ನೆಮ್ಮದಿ, ಸಂತೋಷವನ್ನು. ನಮ್ಮಲ್ಲೇ ನಾವು  ಕಂಡುಕೊಳ್ಳ ಬಹುದಾದ  ನೆಮ್ಮದಿ, ಸಂತೋಷವನ್ನು ಇನ್ನೆಲ್ಲೋ ಹುಡುಕುವ ಪ್ರಯತ್ನ ಮಾಡ್ತೀವಿ .  ಇತರರನ್ನ ನಮ್ಮೊಂದಿಗೆ  ಹೋಲಿಸ್ಕೊಂಡು  ನಮ್ಮಲ್ಲೇ ಇರುವ ಅಮೂಲ್ಯ ವಸ್ತುವಿನ, ವ್ಯಕ್ತಿಗತ ಮೌಲ್ಯವನ್ನ ನಿರ್ಲಕ್ಷಿಸುತ್ತಾ ಹೋಗ್ತಿವಿ .  ನಾವು ಆಂತರಿಕವಾಗಿ ಸಂತೃಪ್ತತೆ ಕಂಡುಕೊಂಡರೆ ಜೀವನಲ್ಲಿ ನೆಮ್ಮದಿ ಕಾಣಬಹುದು. ಆದರೆ ನಾವು ಹೊರಜಗತ್ತಿಗಾಗಿ ಬದುಕುತ್ತಾ , ಅದರಿಂದ ನಮ್ಮ ಜೀವನದ ಸಂತೃಪ್ತತೆ ಹುಡುಕ ಹೊರಟರೆ ಎಂದಿಗೂ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಯಾವೆಲ್ಲಾ ವಿಷಯಗಳ ಹೋಲಿಕೆಯಿಂದ ಜೀವನದಲ್ಲಿ ಬೇಸರ ಅನುಭವಿಸತೀವಿ, ಏನೆಲ್ಲಾ ವಿಷಯಗಳಿಂದ ನೆಮ್ಮದಿಯನ್ನು ಹಾಳುಮಾಡ್ಕೊಳ್ತೀವಿ ಆಲ್ವಾ, ಅದರಿಂದ ಹೊರಬರುವುದೇ ಇಲ್ಲ. ನಾವು ಮಾಡೋದು ಹೀಗೇ ಅಲ್ವಾ.ಅನ್ಸುತ್ತೆ. ಕವನದ ಎಲ್ಲಾ ಭಾಗಗಳೂ ತುಂಬಾ ಅರ್ಥಪೂರ್ಣ.

GSS ಹೇಳೋದು ಇದೇ ಅಲ್ವಾ? “ನಾವು ಗುಡಿ ಗೋಪುರಗಳಲ್ಲೇ ದೇವರನ್ನ ಹುಡುಕ್ತಾ ಹೋಗ್ತಿವಿ. ಆದ್ರೆ ಅವನು ಇಲ್ಲೇ ನಮ್ಮ ಹೃದಯದಲ್ಲೆ ನೆಲೆಸಿದ್ದಾನೆ...” ಅನ್ನೋ ಭಾವ ನಮ್ಮದಾಗಬೇಕು ಎಂದೆನ್ನುವ ಅವರು ದೇವರನ್ನು ನಿರಾಕರಿಸದೆ ಜೀವನದ ಹುಡುಕಾಟದಲ್ಲಿ, ಜನ ಸಾಮಾನ್ಯರಲ್ಲಿ ಕಂಡವರು. ಸಾಮಾಜಿಕ ತುಮುಲಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸಿದವರು ಮತ್ತು ನಿಸರ್ಗೋಪಾಸಕರಾಗಿದ್ದವರು.  
ಅವರ ಮಗ Dr . ಶಿವಪ್ರಸಾದ್ G S, ವೈದ್ಯರು (ಮಕ್ಕಳ ತಜ್ಞರು), UK (Chesterfield) ನಲ್ಲಿ ನಿವೃತ್ತಿ ನಂತರವೂ ಅಲ್ಲೇ ನೆಲಸಿರುತ್ತಾರೆ. ಪ್ರವೃತ್ತಿಯಲ್ಲಿ ಕನ್ನಡ ಬರಹಗಾರರು. UK ಕನ್ನಡ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರೂ, ಕಾರ್ಯದರ್ಶಿಗಳೂ ಆಗಿದ್ದಾರೆ.  ನಾವು UK ಗೆ ಹೋದಾಗೆಲ್ಲಾ ಅವರನ್ನ ಭೇಟಿ ಆಗ್ತಾನೆ ಇದ್ವಿ. ಇತ್ತೀಚಿಗೆ ಹೋಗಿದ್ದಾಗ ಅವರೊಡನೆ ತುಂಬಾಹೊತ್ತು ಮಾತಾಡ್ತಿದ್ವಿ. ಅವರ ಕವನ ಸಂಕಲನ “ಇಂಗ್ಲೆಂಡಿನಲ್ಲಿ ಕನ್ನಡಿಗ” ನನ್ನಲ್ಲಿದೆ.  

ಹಾಗೇ ನನಗೆ ಈ ಕವನಕ್ಕೆ ಪೂರಕವೆನ್ನಿಸುವ ಕೆಲವು ಸರ್ವಜ್ಞನ ವಚನಗಳು ನೆನಪಾಯ್ತು:

ಸಣ್ಣನೆಯ ಮಳಲೊಳಗೆ | ನುಣ್ಣನೆಯ ಶಿಲೆಯೊಳಗೆ|
ಬಣ್ಣಿಸಿ ಬರೆದ ಪಟದೊಳಗೆಯಿರುವಾತ|
ತನ್ನೊಳಗೆ ಇರನೇ ಸರ್ವಜ್ಞ||

ಅರ್ಥ: ಮರಳಿನ ಕಣದಲ್ಲಿಯೂ, ದೊಡ್ಡ ಶಿಲೆಯಲ್ಲಿಯೂ, ಮನೆಯಲ್ಲಿರುವ ಚಿತ್ರಪಟದಲ್ಲಿಯೂ ದೇವರು ಇದ್ದಾನೆಂದ ಮೇಲೆ, ನಮ್ಮ ದೇಹದಲ್ಲಿ ಅವನು ಇರೋದಿಲ್ಲವೇ? ಅಂತ ಸರ್ವಜ್ಞ ಕೇಳುತ್ತಿದ್ದಾನೆ. ಎಷ್ಟು ಚೆನ್ನಾಗೂ ಹೇಳಿದ್ದಾನೆ ಅಲ್ವಾ!!

ವಾರಣಾಸಿಗೆ ಹೋಗುವ| ಕಾರಣವೇನಯ್ಯಾ|
ಕಾರಣ ಪುರುಷನೊಳಗಿರಲು ಅಲಿವುದಕೆ|
ಕಾರಣ ಹೇಳು ಸರ್ವಜ್ಞ||

ಅರ್ಥ: ಕಾರಣ ಪುರುಷ ಅಂದರೆ ಆ ಪರಮಾತ್ಮನು ನಮ್ಮೊಳಗೇ ಇರುವಾಗ, ನಾವು ಅವನ ದರ್ಶನಕ್ಕೆ ಕಾಶಿಗೆ ಹೋಗುವೆ ಕಾರಣವಾದರೂ ಏನಿದೆ? ಅಂತ ಸರ್ವಜ್ಞ ಕೇಳ್ತಾನೆ.  ಅಂದರೆ ದೇವರು ನಮ್ಮೊಳಗೆ ಇದ್ದಾನೆ. ಅಂದ ಮೇಲೆ ದೇವಸ್ಥಾನಗಳಿಗೆ ಹೋಗುವ ಕಾರಣವೇನಿದೆ ಎಂಬುದು ಅವನ ಪ್ರಶ್ನೆ.
ಇದೇ ಅರ್ಥ ಬರುವ ಮತ್ತೊಂದು ವಚನ:

ಮನದಲ್ಲಿ ನೆನೆವಂಗೆ| ಮನೆಯೇನು ಮಠವೇನು?
ಮನದಲ್ಲಿ ನೆನೆಯದಿರುವವನು|ದೇಗುಲದ
ಕೊನೆಯಲ್ಲಿದ್ದೇನು ಸರ್ವಜ್ಞ||

ಅರ್ಥ: ದೇವರನ್ನು ಧ್ಯನಮಾಡಬೇಕಾದರೆ ನಾವು ಗುಡಿಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲೂ ನೆನೆಯಬಹುದು. ದೇವರನ್ನು ಮನಸ್ಸಿನಿಂದ ಧ್ಯಾನಿಸದೇ ಇರುವವನು ದೇಗುಲದಲ್ಲಿದ್ದೇನು ಪ್ರಯೋಜನ? ಒಟ್ಟಾರೆ ದೇವರನ್ನು ಧ್ಯಾನಿಸ ಬೇಕಾದರೆ ನಮಗೆ ಬೇಕಿರೋದು ದೇವಸ್ಥಾನ, ಮಠ ಮಂದಿರವಲ್ಲ ನಮ್ಮ ಮನಸ್ಸು ಅಷ್ಟೆ. ಸರ್ವಜ್ಞನ ವಿಶ್ಲೇಷಣೆ ಚೆನ್ನಾಗಿದೆ ಅಲ್ವಾ?!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s