Existence of God (Author: RamaMurthy)

ದೇವರಿದ್ದಾನೆಯೇ? ಈ ಪಶ್ನೆ ಕೆಲವು ವರ್ಷಗಳ ಕೆಳಗೆ, ಕೆಲವು ವರ್ಷಗಳೇನು ಹತ್ತಾರು ವರ್ಷಗಳ ಕೆಳಗೆ ನಾವೆಲ್ಲಾ ಸ್ನೇಹಿತರು ಒಟ್ಟಿಗೆ ಸೇರಿದ್ದಾಗ ಉದ್ಭವಿಸಿದ್ದು. ಇಲ್ಲಿ ನಮ್ಮ ತಾಯಿಯವರು, ಚಿದಂಬರನ ತಾಯಿಯವರೂ (ಈಗ ಇಬ್ಬರೂ ದಿವಂಗತರಾಗಿದ್ದಾರೆ) ಭಾಗಿಯಾಗಿದ್ದರು. ನಾವೂ ಚಿದಂಬರ ಶಾಲಾ ಸಹಪಾಠಿ ಗಳು ಹೇಗೋ, ಹಾಗೇ ನಮ್ಮ ತಾಯಿಯವರು, ಚಿದಂಬರನ ತಾಯಿಯವರೂ ಶಾಲಾ ಸಹಪಾಠಿಗಳು ಆತ್ಮೀಯರು. ಹೀಗೇ, ಏನೇನೋ ಹರಟುತ್ತಿದ್ದಾಗ, ಪೂಜೆ, ಪುನಸ್ಕಾರಗಳ ಪ್ರಸ್ತಾವನೆ ಬಂದಾಗ ಈ ಪ್ರಶ್ನೆ ಬಂತು. ಪ್ರಶ್ನೆ ಎತ್ತಿದವನು ನಮ್ಮ ಚಿದಂಬರ. ನಮ್ಮ ತಾಯಿಯವರ … Continue reading Existence of God (Author: RamaMurthy)

Nobody is Perfect, Everybody has Issues (Author: RamaMurthy)

ಹಾಗೆಯೇ, ನಮ್ಮ ಅಮ್ಮ, ನಮ್ಮ ಸ್ನೇಹಿತ ಚಿದಂಬರನ ಮನೆಯಲ್ಲಿ, ಹರಟೆ ಹೊಡಿಯುವಾಗ, ಹೇಳ್ತಿದ್ದ ಮತ್ತೊಂದು ಗಾದೆ ಜ್ಞಾಪಕಕ್ಕೆ ಬರ್ತಿದೆ. 'ಎಲ್ಲಾರಮನೆ ದೋಸೇನೂ ತೂತೆ ', ಹಾಗೆಯೇ ಇದನ್ನ ಹೀಗೂ ಬಳಸ್ತಾರೆ. 'ಎಲ್ಲಾರಮನೆ ದೋಸೇನೂ ತೂತೆ ಆದ್ರೆ ನಮ್ಮನೆ ಕಾವ್ಲಿನೆ - ತೂತು '. ಅವರವರ ಮನೆಯ problem ಹಾಗೂ ಅದರ Intensity ಯ ಮೇಲೆ ನಿರ್ಧಾರವಾಗುತ್ತೆ. ಮೊದಲು ಅವರ ಸಂಭಾಷಣೆ ಕಡೆ ಗಮನ ಕೊಡೋಣ. ಯಾರ ಮನೇದೋ, ಅತ್ತೇ ಸೊಸೆ, ಅಪ್ಪ ಮಗನ ಮುನಿಸೋ, intercast marraiage … Continue reading Nobody is Perfect, Everybody has Issues (Author: RamaMurthy)

Will to Live

ಮೊನ್ನೆ ನನ್ನ ಮಗನಿಗೆ ಹಿಂದಿ ಪಾಠ ಹೇಳಿಕೊಡಬೇಕಾಗಿತ್ತು. ಅವನಿಗೆ ಹಿಂದಿ ಎಂದರೆ ತುಂಬಾ 'ಇಷ್ಟ' 😉 ಹಾಗಾಗಿ ನಾನು ಅವನ ಹಿಂದಿಪಾಠಗಳನ್ನು ಮೊದಲು ಓದಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ 'ಅನೌಖೀ ಕಲಾಕೃತಿ' (अनोखी कलाकृति) ಎಂಬ ಒಂದು ಗದ್ಯಪಾಠ ನನ್ನ ಮನಸ್ಸು ಮುಟ್ಟಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳೋಣ ಅನ್ನಿಸ್ತು... ಈ ಘಟನೆ ಹಿಮಾಚಲ ಪ್ರದೇಶದಲ್ಲಿರುವ ಒಂದು ಕಲಾಶಾಲೆಯಲ್ಲಿ ನಡೆದಿರುತ್ತದೆ. ಅಲ್ಲಿ ಅಭ್ಯಸಿಸುತ್ತಿರುವ ಇಬ್ಬರು ಗೆಳೆತಿಯರು, ಪ್ರೀತಿ ಹಾಗೂ ಮೈತ್ರಿ ಮತ್ತು ಒಬ್ಬ ವೃದ್ಧ ಕಲಾವಿದ ಈ ಕಥೆಯಲ್ಲಿ ಬರುವ … Continue reading Will to Live

Ajaathashatru (Author: RamaMurthy)

ಶುಭೋದಯ . . . ಇವತ್ತು ಮತ್ತೀಕೆರೆ JP Parkನಲ್ಲಿ walk ಮಾಡ್ತಾ ಇದ್ದೆ. ನನ್ನ ಮುಂದೆ ಕೆಲವು ಹೆಂಗಸರು ಹೋಗ್ತಾ ಇದ್ರು. ನಾನು ಮುಂದೆ pass ಆದೆ. ಅವರ ಮಾತುಕಥೆ ಕಿವಿ ಮೇಲೆ ಬೀಳ್ತಿತ್ತು. ಒಬ್ಬ ಹೆಂಗಸು, ಯಾರಮೇಲೋ ದ್ವೇಷ ಕಾರ್ತಿದ್ರು. ಮಾತೂ ಜೋರಾಗಿಯೇ ಇತ್ತು. ಅವರ ಜೊತೆಯಲ್ಲಿದ್ದ ವಯಸ್ಸಾದ ಹೆಂಗಸಿನ (ಅಜ್ಜಿ ಅನ್ಬಹುದು) ಸಮಝೂಯಿಶಿ ನಡೀತಿತ್ತು. ನೋಡವ್ವಾ, ದಾಯ್ವೂದಿಗಳು ಅಂದ್ರೆ, ಇದ್ಧಿದೇಯ. ನೀ ಸುಮ್ಕಿರಮೀ. ಅವ್ರು ಯಾನಾರ ಅನ್ಕಳ್ಳಿ. ಆವ್ರದ್ದು ಆವ್ರಿಗೆ. ನಿಂದ್ಯೇನೂ ಕಿತ್ಕಾಳಾಕಿಲ್ಲ.ನೀ … Continue reading Ajaathashatru (Author: RamaMurthy)

Being Non-Judgmental

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ । ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।। ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು । ಒರಟು ಕೆಲಸವೊ ಬದುಕು ಮಂಕುತಿಮ್ಮ ।। "This is not right, that is not correct": Saying thus, spread not thorns on your bed. So what if something is not perfect? Life is but a rough job. –Mankuthimma

Needle Vs. Scissors (Author: RamaMurthy)

ಯಾಕೋ, ಹಾಗೆಯೇ ಕನ್ನಡದ ಗಾದೆಗಳನ್ನೂ ಮರೀತಿದೀವ ಅನ್ನಿಸ್ತಿದೆ. ನಮ್ಮ ತಾಯಿಯವರು, ತುಂಬಾ ಗಾದೆಗಳನ್ನು ಬಳಸ್ತಾ ಇದ್ರು. ಆಮೇಲಾಮೇಲೆ ಯಾಕೋ ಅವರೂ ಕಮ್ಮಿ ಮಾಡಿದ್ರು. ನಾನು ಸಣ್ಣವನಿದ್ದಾಗ, ಅವರು ಒಂದು ಅಪರೂಪದ ಗಾದೆ ಬಳಿಸ್ತಿದ್ರು. ಹೆಚ್ಚಿನವರು ಅದನ್ನ ಬಳಿಸಿದ್ದು ಅಷ್ಟಾಗಿ ನಾನು ಕೇಳಿಲ್ಲ. ಯಾಕೋ, ಹಾಗೆಯೇ ಕನ್ನಡದ ಗಾದೆಗಳನ್ನೂ ಮರೀತಿದೀವ ಅನ್ನಿಸ್ತಿದೆ. ನಮ್ಮ ತಾಯಿಯವರು, ತುಂಬಾ ಗಾದೆಗಳನ್ನು ಬಳಸ್ತಾ ಇದ್ರು. ಆಮೇಲಾಮೇಲೆ ಯಾಕೋ ಅವರೂ ಕಮ್ಮಿ ಮಾಡಿದ್ರು. ನಾನು ಸಣ್ಣವನಿದ್ದಾಗ, ಅವರು ಒಂದು ಅಪರೂಪದ ಗಾದೆ ಬಳಿಸ್ತಿದ್ರು. ಹೆಚ್ಚಿನವರು … Continue reading Needle Vs. Scissors (Author: RamaMurthy)